ಕ್ಲಸ್ಟರ್ ಹಂತದ ಸಮಾಲೋಚನ ಸಭೆ ನಡೆಸುವ ಕುರಿತು

WhatsApp Group Join Now
Telegram Group Join Now

ಸಮಾಲೋಚನಾ ಸಭೆ 2023-24 ರ ಕುರಿತು ಮಾಹಿತಿ ಇಲ್ಲಿದೆ

2022-23 ನೇ ಸಾಲಿನಲ್ಲಿ ಕಲಿಕಾ ಚೇತರಿಕೆಗೆ ಸಂಬಂಧಿಸಿದಂತೆ ಕಲಿಕಾಫಲ ಆಧಾರಿತ
ಚಟುವಟಿಕೆ ಆಧಾರಿತ ಹಾಗೂ ನಾವಿವ್ಯಯುತ ಬೋಧನೆಗೆ ಪ್ರೋತ್ಸಾಹ ನೀಡಲು, ಕಲಿಕಾ ಚೇತರಿಕೆ
ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿರುವ ಸಂದರ್ಭದಲ್ಲಿ ಕಂಡುಬರುವ ಸಮಸ್ಯೆಗಳನ್ನು
ಬಗೆಹರಿಸಲು ಹಾಗೂ ಕಲಿಕಾ ಚೇತರಿಕ ಕಾರ್ಯಕ್ರಮವು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ
ಖಾತ್ರಿ ಪಡಿಸಿಕೊಳ್ಳಲು ಅಕ್ಟೋಬರ್ 2022 ರಿಂದ ಫೆಬ್ರವರಿ 2023 ರವರೆಗೆ ಒಟ್ಟು 05 ಕ್ಲಸ್ಟರ್ ಸಭೆಯನ್ನು
ನಡೆಸಲಾಯಿತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಸಹ ಸಿ.ಆರ್.ಪಿ. ಗಳ ನೇತೃತ್ವದಲ್ಲಿ ಎಲ್ಲಾ
ಶಿಕ್ಷಕರನ್ನು ಒಳಗೊಂಡಂತೆ ಕ್ಲಸ್ಟರ್ ಸಭೆಗಳನ್ನು ನಡೆಸಲಾಗುತ್ತಿತ್ತು.

2023-24 ನೇ ಸಾಲಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಫಲ ಆಧಾರಿತ
ಚಟುವಟಿಕೆ ಆಧಾರಿತ ಅನ್ವಯಿಕ, ವೈಚಾರಿಕ, ವಿಮರ್ಶಾತ್ಮಕವಾಗಿ ಯೋಚಿಸುವಂತೆ
ಕಲಿಕೆಯಾಗಬೇಕಾಗಿರುವುದರಿಂದ ಹಾಗೂ ಶಿಕ್ಷಕರಿಗೆ ನಿರಂತರ ಶೈಕ್ಷಣಿಕ ಅಭಿವೃದ್ಧಿಗೆ ವೇದಿಕೆ
ಕಲ್ಪಿಸಿಕೊಡಬೇಕಾಗಿರುವುದರಿಂದ ಕ್ಲಸ್ಟರ್ ಮಟ್ಟದಲ್ಲಿ ನಲಿಕಲಿ ಶಿಕ್ಷಕರು, ಭಾಷಾ ಶಿಕ್ಷಕರು ಮತ್ತು
ಕೋರ್ ವಿಷಯ ಶಿಕ್ಷಕರುಗಳಿಗೆ ಪ್ರತ್ಯೇಕವಾಗಿ ಸಮಾಲೋಚನಾ ಸಭೆಗಳನ್ನು
ತೀರ್ಮಾನಿಸಲಾಗಿದೆ. ಈ ಸಮಾಲೋಚನಾ ಸಭೆಗಳಲ್ಲಿ ಶಿಕ್ಷಕರು ಆಯಾ ವಿಷಯದಲ್ಲಿ ತಮ್ಮ ವಿಷಯ
ನಡೆಸಲು
ಬೋಧನೆಯ ಕ್ಲಿಷ್ಟಾಂಶಗಳನ್ನು ಗುರುತಿಸಿಕೊಂಡು ಸಂದೇಹಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ
ಕಲಿಕಾ ಫಲಗಳ ಕುರಿತು ಸ್ಪಷ್ಟನೆ, ಆ ಕಲಿಕಾ ಫಲಗಳನ್ನು ಪಡೆಯಲು ಬಳಸುವ ಕಾರ್ಯತಂತ್ರ,
ಅನುಭವಾತ್ಮಕ ಕಲಿಕೆಗೆ ಬೇಕಾದ ಸಂಪನ್ಮೂಲ, ಕೌಶಲ ಇತ್ಯಾದಿಗಳನ್ನು ಪಡೆದು ಕೊಳ್ಳಬೇಕಿದೆ.


ಅದಕ್ಕಾಗಿ ಸಂಬಂಧಿತರು ಈ ಕೆಳಕಂಡಂತೆ ಕ್ರಮ ವಹಿಸುವುದು.

  1. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕ್ಲಸ್ಟರ್ ಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸುವುದು.
  2. ನಲಿಕಲಿ ಶಿಕ್ಷಕರು, 04 ರಿಂದ 08 ನೇ ತರಗತಿಗೆ ಬೋಧಿಸುವ ಭಾಷಾ ಶಿಕ್ಷಕರು ಮತ್ತು ಕೋರ್
    ವಿಷಯ ಶಿಕ್ಷಕರುಗಳಿಗೆ ಪ್ರತ್ಯೇಕ ಸಮಾಲೋಚನಾ ಸಭೆ ನಡೆಸುವುದು
  3. ಸೆಪ್ಟೆಂಬರ್ 2023 ರಿಂದ ಫೆಬ್ರವರಿ 2024 ರವರೆಗೆ ಒಟ್ಟು 05 ಸಮಾಲೋಚನಾ ಸಭೆ ನಡೆಸುವುದು.
  4. ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಮಾರ್ಗದರ್ಶಕರಾಗಿ ನೇಮಿಸಿಕೊಂಡು ಅವರಿಗೆ
    ಸಮಾಲೋಚನಾ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಪೂರ್ವಭಾವಿಯಾಗಿ ಪ್ರತಿ
    ಬುಧವಾರ ಅಥವಾ ಗುರುವಾರ ತರಬೇತಿ ನೀಡಿ ಸಿದ್ಧಗೊಳಿಸುವ ಬಗ್ಗೆ ಉಪನಿರ್ದೇಶಕರು
    (ಅಭಿವೃದ್ಧಿ) ರವರು ಕ್ರಮವಹಿಸುವುದು.
  5. ಶಿಕ್ಷಕರಿಗೆ ಪ್ರತಿ ಶನಿವಾರ ಯಾವ ಕ್ಲಿಷ್ಟಾಂಶಗಳ ಬಗ್ಗೆ ಸಮಾಲೋಚನಾ ಸಭೆಯಲ್ಲಿ
    ಚರ್ಚಿಸಲಾಗುವುದು ಎಂಬುದನ್ನು ಮೊದಲೇ ತಿಳಿಸುವುದು.
  6. ಶಿಕ್ಷಕರು ಸಮಾಲೋಚನಾ ಸಭೆಯಲ್ಲಿ ಚರ್ಚಿತವಾಗುವ ವಿಷಯದಲ್ಲಿ ತಮಗಿರುವ
    ಕ್ಲಿಷ್ಟಾಂಶಗಳನ್ನು ಗುರುತಿಸಿಕೊಂಡು ಬಂದು ಸಂದೇಹ ಪರಿಹರಿಸಿಕೊಳ್ಳುವುದು.

7, ಸರ್ಕಾರಿ ಪ್ರೌಢಶಾಲೆಗಳಿಗೆ ಈ ಹಿಂದಿನ ವರ್ಷಗಳಂತೆ ತಾಲೂಕು ಹಂತದಲ್ಲಿ ಕ್ಷೇತ್ರ
ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ತಿಂಗಳಿಗೊಂದರಂತೆ
ಸೆಪ್ಟೆಂಬರ್ 2023 ರಿಂದ ಫೆಬ್ರವರಿ 2024 ರವರೆಗೆ ವಿಷಯವಾರು 05 ಸಮಾಲೋಚನಾ
ಸಭೆಗಳನ್ನು ನಡೆಸುವುದು.

  1. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎಲ್ಲಾ ಕ್ಲಸ್ಟರ್ ಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ
    ಶಿಕ್ಷಕರುಗಳಿಗೆ ಸಮಾಲೋಚನಾ ಸಭೆ ವ್ಯವಸ್ಥಿತವಾಗಿ ನಡೆಯುತ್ತಿರುವುದರ ಬಗ್ಗೆ ಮಾಸಿಕ
    ವರದಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿದ ನಮೂನೆಯಲ್ಲಿ ಉಪನಿರ್ದೇಶಕರು
    (ಅಭಿವೃದ್ಧಿ)ರವರು ರಾಜ್ಯ ಕಛೇರಿಗೆ ನೀಡುವುದು.
IMG 20230913 WA0105
IMG 20230607 WA0065

WhatsApp Group Join Now
Telegram Group Join Now
Sharing Is Caring:

Leave a Comment