ಫಿಟ್ ಇಂಡಿಯಾ ರಸಪ್ರಶ್ನೆ 2023: ಗೆಲ್ಲಿರಿ 3.25 ಕೋಟಿ ಮೌಲ್ಯದ ನಗದು ಬಹುಮಾನ
ರಾಷ್ಟ್ರೀಯ ಚಾಂಪಿಯನ್:
ರೂ 25,00,000 (ಶಾಲೆಗಳಿಗೆ ನಗದು ಬಹುಮಾನ) ಮತ್ತು ರೂ. 2,50,000 (ವಿದ್ಯಾರ್ಥಿಗಳಿಗೆ ನಗದು ಬಹುಮಾನ)
ರಾಜ್ಯ ಚಾಂಪಿಯನ್:
ರೂ 2,50,000 (ಶಾಲೆಗಳಿಗೆ ನಗದು ಬಹುಮಾನ) ಮತ್ತು ರೂ. 25,000 (ವಿದ್ಯಾರ್ಥಿಗಳಿಗೆ ನಗದು ಬಹುಮಾನ)
ನೋಂದಣಿಗಳು: 4-09-2023 ರಿಂದ 5-10- 2023
ಪೂರ್ವಭಾವಿ ಪರೀಕ್ಷೆ : 1-11-2023 ರಿಂದ 8-11-2023*ರಾಜ್ಯ ಸುತ್ತು: 1 -12- 2023 ರಿಂದ 25 -12-2023
ರಾಷ್ಟ್ರೀಯ ಸುತ್ತು:ಜನವರಿ 2023
ಪರೀಕ್ಷೆಯ ವಿಧಾನ: ಇಂಟರ್ನೆಟ್ ಆಧಾರಿತ ಪರೀಕ್ಷೆ (ಆನ್‌ಲೈನ್ ಪರೀಕ್ಷೆ). ಅಭ್ಯರ್ಥಿಗಳು ತಮ್ಮ ಸ್ಥಳದಿಂದ Android ಮೊಬೈಲ್ ಫೋನ್‌ಗಳಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಅವರು ಯಾವುದೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಬೇಕಾಗಿಲ್ಲ.
ಪರೀಕ್ಷೆಯ ಮಾದರಿ: ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುವ ವಸ್ತುನಿಷ್ಠ ಪ್ರಕಾರ
ಅರ್ಹತೆ: ಭಾರತದ ಯಾವುದೇ ಶಾಲೆಯಲ್ಲಿ 1-12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದು
ಯಾರು ಅರ್ಜಿ ಸಲ್ಲಿಸಬಹುದು:
ಯಾವುದೇ ಶಾಲೆ (ಯಾವುದೇ ಬೋರ್ಡ್/ಸಿಬಿಎಸ್‌ಇ ಅಡಿಯಲ್ಲಿ) ತಮ್ಮ ವಿದ್ಯಾರ್ಥಿಗಳನ್ನು ರಸಪ್ರಶ್ನೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಬಹುದು ಮತ್ತು ನಾಮನಿರ್ದೇಶನ ಮಾಡಬಹುದು. ವೈಯಕ್ತಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ. ಆಯಾ ಶಾಲೆಯಿಂದ ಅವರನ್ನು ನಾಮನಿರ್ದೇಶನ ಮಾಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ: ಅರ್ಜಿಗಳನ್ನು ಶಾಲೆಗಳು, ಆನ್‌ಲೈನ್‌ನಲ್ಲಿ ಮಾತ್ರ, ಸಲ್ಲಿಸಬಹುದು ನೋಂದಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಭೇಟಿ ಮಾಡಿ
ಕೇಂದ್ರ ಸರ್ಕಾರದ Fit India Mission ಯುವಜನ ಮತ್ತು ಕ್ರೀಡಾ ಮಂತ್ರಾಲಯದ Fit India ರಸಪ್ರಶ್ನೆ 2023 ಕಾರ್ಯಕ್ರಮವನ್ನು ದಿನಾಂಕ:29.08.2023 ರಂದು ರಾಷ್ಟ್ರೀಯ ಕ್ರೀಡಾದಿನಚಾರಣೆ ಅಂಗವಾಗಿ ಮಾನ್ಯ ಯುವಜನ ಮತ್ತು ಕ್ರೀಡಾ ಮಂತ್ರಿಗಳು ಉದ್ಘಾಟಿಸಿರುತ್ತಾರೆ.ಸದರಿ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲು ಮತ್ತು ವಿದ್ಯಾರ್ಥಿಗಳನ್ನು ನಾಮನಿರ್ದೇಶನ ಮಾಡಿನೋಂದಾಯಿಸಲು ದಿನಾಂಕ: 04.09.2023 ರಿಂದ 05.10.2023 ರವರೆಗೆ ಅವಕಾಶ ಕಲ್ಪಿಸಲಾಗಿದೆ.
2023ನೇ ಸಾಲಿನಲ್ಲಿ ಶಾಲೆಗಳಿಂದ ಕನಿಷ್ಟ 02 ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿವಿದ್ಯಾರ್ಥಿಗೆ ರೂ.100/-ಗಳ ಶುಲ್ಕವನ್ನು ನೀಡಿ Fig India website (www.fitindia.gov.inyaನೊಂದಾಯಿಸಿಕೊಳ್ಳಬೇಕು. ಸದರಿ ಕಾರ್ಯಕ್ರಮವನ್ನು ಕ್ರಮವಾಗಿ ಶಾಲಾ ಮಟ್ಟ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಪೂರ್ವಭಾವಿ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟ ಸೇರಿದಂತೆ 04 ವಿವಿಧ ಹಂತಗಳಲ್ಲಿ ನಡೆಸಲಾಗುವುದು.ರಸಪ್ರಶ್ನೆ ಕಾರ್ಯಕ್ರಮದ ಸಂಪೂರ್ಣ ವಿವರಗಳುಳ್ಳ ಸುತ್ತೋಲೆಯನ್ನು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳು ಮತ್ತು ವಿದ್ಯಾರ್ಥಿಗಳು, Fit India ರಸಪ್ರಶ್ನೆಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಕಾರ್ಯಕ್ರಮವನ್ನುಯಶಸ್ವಿಗೊಳಿಸುವಂತೆ ಕ್ರಮವಹಿಸಲು ತಿಳಿಸಿದೆ. ಈ ಕಾರ್ಯಕ್ರಮದ ಆಯೋಜನೆ ಬಗ್ಗೆ ವರದಿ ಮತ್ತುಛಾಯಾಚಿತ್ರಗಳನ್ನು ಉಪನಿರ್ದೇಶಕರು (ಆಡಳಿತ) ಇವರು ಕ್ರೋಢೀಕರಿಸಿ ದೃಢೀಕರಣದೊಂದಿಗೆ ರಾಜ್ಯ ಕಛೇರಿಗೆ ನೀಡುವುದು
ವಿದ್ಯಾರ್ಥಿಗಳನ್ನು ನಾಮ ನಿರ್ದೇಶನ ಮಾಡಿನೋಂದಾಯಿಸಲು ದಿನಾಂಕ: 04.09.2023 ರಿಂದ 05.10.2023 ರವರೆಗೆ ಅವಕಾಶ ಕಲ್ಪಿಸಲಾಗಿದೆ.
FIQ STEPBY STEP REGISTRATION