2024-25ನೇ ಸ2024-25ನೇ ಸಾಲಿನಲ್ಲಿ ನಲಿ ಕಲಿ ತರಗತಿ ನಿರ್ವಹಣೆಯ ಕುರಿತ ಮಾಹಿತಿ ಇಲ್ಲಿದೆ

ನಲಿಕಲಿ ಸಂಭಾವ್ಯ ಪ್ರಶ್ನೆಗಳು.

WhatsApp Group Join Now
Telegram Group Join Now

1) 80 ನಿಮಿಷಗಳ ಕಾಲ ತರಗತಿ ನಿರ್ವಹಣೆಯ ಸಮಯದ ವಿಂಗಡಣೆ ಹೇಗೆ ?

 • 10-ನಿಮಿಷ ಸಾಮೂಹಿಕ ಚಟುವಟಿಕೆ, 10 ನಿಮಿಷ ಸಾಮಗ್ರಿ ತೆಗೆದುಕೊಳ್ಳಲು, 10 ನಿಮಿಷ ಮಾರ್ಗದರ್ಶನ ನೀಡಲು, 40 ನಿಮಿಷ ಕಲಿಕಾ ಪ್ರಕ್ರಿಯೆಗೆ, ಕೊನೆಯ 10 ನಿಮಿಷ ಕಲಿಕೆಯ ದೃಡೀಕರಣ, ದಿನಚರಿ ನಿರ್ವಹಣೆಗೆ

2) ಹವಾಮಾನ ನಕ್ಷೆ ನಿರ್ವಹಣೆ ಬಗ್ಗೆ ಯಾವುದೇ ತರಗತಿಯಲ್ಲಿ ಮಾಹಿತಿ ಇಲ್ಲ ಇದರ ಬಗ್ಗೆ ನಿರ್ವಹಣೆ ಹೇಗೆ.

 • ಈ ಹಿಂದಿನಂತೆಯೇ ಎರಡನೇ ತರಗತಿ ಮಕ್ಕಳು ಪ್ರತಿದಿನ ಗುರುತು ಹಾಕುವುದು.

3) ವಿದ್ಯಾಪ್ರವೇಶ ನಿರ್ವಹಣೆಗೆ ದಿನಚರಿ ಬರೆಯಬೇಕಾ ?
-ಹೌದು. ಸಂಕ್ಷಿಪ್ತವಾಗಿ ಯಾವ ದಿನದ ಚಟುವಟಿಕೆಯನ್ನು ಯಾವ ದಿನಾಂಕ ನಿರ್ವಹಿಸಲಾಯಿತು ಎಂದು
ದಾಖಲಿಸಬೇಕು.

4) 2 ಮತ್ತು 3 ನೇ ತರಗತಿ ಸೇತುಬಂಧ ಸಹಿತ ಆರಂಭಿಕ ಕಲಿಕೆ ಇದ್ದು ಶಿಕ್ಷಕರ ದಿನಚರಿಯಲ್ಲಿ ಸೇತುಬಂಧ ದಿಂದಲೇ ಬರೆಯಬೇಕಾ.?
-ಹೌದು. ಪ್ರಗತಿ ನೋಟ ಇರುವುದರಿಂದ ಅದರಲ್ಲಿನ ಮಾಹಿತಿಯನ್ನೇ ಈ ಹಿಂದಿನಂತೆಯೇ ಬರೆಯಬೇಕು.

5) ಶಿಕ್ಷಕರ ದಿನಚರಿಯಲ್ಲಿ ಮೆಟ್ಟಿಲು ಸಂಖ್ಯೆ ಬರೆಯಬೇಕಾ ಇಲ್ಲ ಪುಟ್ಟ ಸಂಖ್ಯೆ ಬರೆಯಬೇಕಾ ?

 • ಮೆಟ್ಟಿಲು ಸಂಖ್ಯೆ

6) ವಿದ್ಯಾಪ್ರವೇಶ ಒಂದೇ ತರಗತಿಗೆ ಇರುವುದರಿಂದ ವಿದ್ಯಾಪ್ರವೇಶ ಚಟುವಟಿಕೆ ಆಗುವರೆಗೆ ಇನ್ನೊಂದು ತರಗತಿಯಲ್ಲಿ
ಬೇರೆ ಶಿಕ್ಷಕರು ನಿರ್ವಹಣೆ ಮಾಡಬಹುದಾ?
-ಇಲ್ಲ. ಮೂರೂ ತರಗತಿಗಳ ಕಲಿಕಾ ಪ್ರಕ್ರಿಯೆ ಒಟ್ಟಿಗೆ ನಡೆಯುಬೇಕು.

7) 2ನೇ ಮತ್ತು 3ನೇ ತರಗತಿ ಸೇತುಬಂಧ ಚಟುವಟಿಕೆ ಆಗುವವರೆಗೆ ಒಬ್ಬರೇ ಶಿಕ್ಷಕರು ನಿರ್ವಹಣೆ ಮಾಡಬಹುದಾ ?
_ ಇಲ್ಲ.ಮೂರೂ ತರಗತಿಗಳ ಕಲಿಕಾ ಪ್ರಕ್ರಿಯೆ ಒಟ್ಟಿಗೆ ನಡೆಯುಬೇಕು

8) ಒಂದನೇ ತರಗತಿಗೆ ENK ಸೇತುಬಂಧ ಹೇಗೆ ?

 • ಸುತ್ತೋಲೆಯಲ್ಲಿ ನೀಡಿದ ಮಾಹಿತಿ ಆಧರಿಸಿ ನಡೆಸಬೇಕು

9) ನಲಿಕಲಿಯ ಪ್ರಗತಿ ನೋಟ,ಹವಾಮಾನ ಕಲಿಕಾ ಏಣಿ,ಗುಂಪು ತಟ್ಟೆ ಸರಬರಾಜು ಆಗಬಹುದೇ ?

 • ಪ್ರಗತಿ ನೋಟ, ಹವಾಮಾನ, ಗುಂಪುತಟ್ಟೆ ಸರಬರಾಜು ಆಗುತ್ತವೆ. ಕಲಿಕಾಏಣಿ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಇದೆ.

10) ಕಲಿಕಾ ಚಪ್ಪರ ಪಪೇಟ್ ನಿರ್ವಹಣೆ ಹೇಗೆ ?

 • ಈ ಹಿಂದಿ ಸಾಲಿನಂತೆಯೇ

11) ತರಗತಿಯಲ್ಲಿ ಶಿಕ್ಷಕರ ಸಂಖ್ಯೆ ಇದ್ದರೆ 3 ನೇ ತರಗತಿ ಪ್ರತ್ಯೇಕ ಮಾಡಬಹುದಾ?

 • ಅವಕಾಶ ಇಲ್ಲ

12) ಮೂರು ತರಗತಿಯ ಸಾಮೂಹಿಕ ನಿರ್ವಹಣೆ ಮಾಡುವ ಸಂದರ್ಭದಲ್ಲಿ 2 ನೇ ತರಗತಿಯ 7 ಕಾರ್ಡ್ 9 ಕಲಿಕಾಂಶ 1 ನೇ ಗುಂಪು ತಟ್ಟೆಗೆ ಬರುತ್ತದೆ, ಆಗ ಮೂರು ತರಗತಿಗಳ ನಿರ್ವಹಣೆ ಹೇಗೆ.

 • ಪ್ರಾರಂಭದಲ್ಲಿ ಸಾಮೂಹಿಕ ಚಟುವಟಿಕೆಗೆ ಎಲ್ಲ ಮಕ್ಕಳನ್ನೂ ಒಟ್ಟಿಗೆ ಸೇರಿಸಿಕೊಂಡೇ ಚಟುವಟಿಕೆ ನಡೆಸಬೇಕು.

13) 3 ನೇ ತರಗತಿ ಗಣಿತ ಅಭ್ಯಾಸ ಮತ್ತು ಪುನರ್ಬಲನದಲ್ಲಿರುವ ಚಟುವಟಿಕೆಗೆ ಶಿಕ್ಷಕರ ಸಹಾಯಕ್ಕಾಗಿ ಹೆಚ್ಚು ಸಮಯ ಬೇಕಾಗುತ್ತದೆ, ಇಲ್ಲದಿದ್ದರೆ ಮಗು ಅರ್ಥೈಸಿ ಅಭ್ಯಾಸ ಮಾಡುವುದು ತುಂಬಾ ಕಷ್ಟ .ಇದರ ಬಗ್ಗೆ ಸರಳೀಕರಣ ತಿಳಿಸಿ.

 • ಕಲಿಕಾ ಚಟುವಟಿಕೆ ಹಂತದಲ್ಲಿಯೇ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಆಗ ಅಭ್ಯಾಸ ಸುಲಭ ಆಗುತ್ತದೆ.

14) BK ಬಗ್ಗೆ ಎಲ್ಲಾ ತರಗತಿಯ ಮಾಹೆವಾರು ಪಟ್ಟಿಯಲ್ಲಿ ಗೊಂದಲ ಆಗುತ್ತಿದೆ ಇದರ ಬಗ್ಗೆ ಮಾಹಿತಿ

 • ಶಾಲಾ ಹಂತದಲ್ಲಿ ಸೂಕ್ತ ಬದಲಾವಣೆಗೆ ಅವಕಾಶ ಇದೆ.

15) 2 ನೇ ಮತ್ತು 3 ನೇ ತರಗತಿಗೆ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆ ಮಾಡಬೇಕಾ.

 • ಅವಶ್ಯಕತೆ ಇದೆ. ಸೇತುಬಂಧ ಚಟುವಟಿಕೆಯಲ್ಲಿಯೇ ಅವುಗಳು ಅಂತರ್ಗತ

16) FA ಮತ್ತು SA ಲಿಖಿತವಾಗಿ ಮಾಡಬೇಕಾ, ಹಾಗಾದರೆ ಪ್ರಶ್ನೆಪತ್ರಿಕೆ ಹೇಗೆ ಸಿದ್ದ ಮಾಡಬೇಕು.?

 • ಸುತ್ತೋಲೆಯಲ್ಲಿ ವಿವರ ನೀಡಲಾಗಿದೆ.

17) EK ವಾರ್ಷಿಕ ಪಠ್ಯ ಹಂಚಿಕೆ ನೀಡಲಾಗುವುದೇ

 • ಹೌದು

18) ವಿದ್ಯಾ ಪ್ರವೇಶದ ಅವಧಿಯಲ್ಲೇ ಒಂದು ತರಗತಿಗೆ ಒಳಾಂಗಣ ಮತ್ತೊಂದು ತರಗತಿಗೆ ಹೊರಾಂಗಣ ಚಟುವಟಿಕೆ ಇದ್ದಾಗ ನಿರ್ವಹಣೆ ಹೇಗೆ?

 • ಅಂತಹ ಚಟುವಟಿಕೆಗಳ ಸಂಖ್ಯೆ ಬಹಳ ಕಡಿಮೆ. ಆಗ ಎಲ್ಲರನ್ನೂ ಹೊರಾಂಗಣಕ್ಕೆ ಕರೆದೊಯ್ಯಬಹುದು

19) ಸೇತುಬಂಧ ಮುಗಿದ ನಂತರ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ವಿವರವನ್ನು SAP ನಲ್ಲಿ ನಮೂದಿಸಬೇಕೇ

– ಅವಶ್ಯಕತೆ ಇಲ್ಲ. ನಿರಂತರ ಚಟುವಟಿಕೆಗಳು ಇಲ್ಲಿ ಇವೆ. ಕಲಿಯದಿದ್ದರೆ ಮುಂದೆ ಹೋಗಲ್ಲ.

20) EMI P ನಲ್ಲಿ ವಿದ್ಯಾಪ್ರವೇಶಕ್ಕೆ ಚಟುವಟಿಕೆ ಹಾಳೆಗಳ ನಿರ್ವಹಣೆ ಹೇಗೆ

 • ವಿದ್ಯಾಪ್ರವೇಶ ವಿಷಯವಾರು ನಡೆಯುವುದಿಲ್ಲ.

21) 3 ನೇ ತರಗತಿಯ ಪ್ರಗತಿನೋಟದಲ್ಲಿ ಪುಟಸಂಖ್ಯೆ ಮತ್ತು ಮೆಟ್ಟಿಲು ಸಂಖ್ಯೆ ಎಂದು ನೀಡಿದೆ ಇದರ ಅರ್ಥವೇನು

 • ಪುಟ ಸಂಖ್ಯೆ ಎಂದರೆ ನಲಿಕಲಿ ಅ.ಸ.ಪ.ಪುಸ್ತಕದಲ್ಲಿನ ಪುಟ ಸಂಖ್ಯೆ. ಮೆಟ್ಟಿಲು ಸಂಖ್ಯೆ ಎಂದರೆ ನಿರಂತರವಾಗಿ ಚಟುವಟಿಕೆಗಲಿಗೆ ನೀಡಿದ ಸಂಖ್ಯೆ

22) ಸೇತುಬಂಧದ ಯಾವ ಯಾವ ಚಟುವಟಿಕೆಗಳ ಹಾಳೆಗಳನ್ನು ಕೃತಿ ಸಂಪುಟಕ್ಕೆ ಹಾಕುವುದು

 • ಯಾವುದೇ ಕ್ರಾಫ್ಟ್ ಹಾಳೆ, ಪ್ರತಿಬಿಂಬ, ಮೌಲ್ಯಮಾಪನ ಹಾಳೆಗಳು

23) ಶಾಲೆಯಲ್ಲಿ ಯಾವ ಯಾವ ದಾಖಲೆಗಳನ್ನು ಮುದ್ರಣ ಮಾಡಿಸಿಕೊಳ್ಳಬೇಕು.

 • ಪ್ರಗತಿ ನೋಟ, ದಿನಚರಿ, ಕೃತಿ ಸಂಪುಟ, ಹವಾಮಾನ ನಕ್ಷೆ, ಶಿಕ್ಷಕರ ಪ್ರಗತಿ ದಾಖಲೆ, ಕ್ರೋಡೀಕೃತ ಪ್ರಗತಿ ದಾಖಲೆ
  ಇವುಗಳು ಮಾತ್ರ ಸಾಕು. ಹಿಂದಿನ ಸಾಲಿನಂತೆಯೇ.

ಅ) ನಲಿಕಲಿ ಘಟಕಗಳಲ್ಲಿ ಅನುಷ್ಟಾನಗೊಳಿಸಬೇಕಿರುವ ಅಗತ್ಯ ಕ್ರಮಗಳು:

 1. ನಲಿಕಲಿ ಘಟಕಗಳಲ್ಲಿ 01ನೇ ತರಗತಿಯ ಮಕ್ಕಳಿಗೆ ಜೂನ್ 01 ರಿಂದ ಜುಲೈ 19 ರವರೆಗೆ ಒಟ್ಟು 40 ದಿನಗಳ ವಿದ್ಯಾಪ್ರವೇಶ/ಶಾಲಾ ಸಿದ್ಧತಾ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸುವುದು. (ಇತರೆ
  ಮಾಧ್ಯಮಗಳ ಕಲಿನಲಿ ತರಗತಿಗಳಿಗೂ ಈ ನಿಯಮ ಅನ್ವಯವಾಗುವುದು)
 2. ವಿದ್ಯಾಪ್ರವೇಶ ಭಾಗವಾಗಿ 40 ದಿನಗಳ ಪರಿಷ್ಕೃತ ಚಟುವಟಿಕೆಗಳನ್ನು ಸಿದ್ಧಪಡಿಸಿದ್ದು, ಡಿ.ಎಸ್‌.ಇ.ಆರ್.ಟಿ
  ವೆಬ್‌ಸೈಟ್‌ನಲ್ಲಿ (https://dsert.karnataka.gov.in) ಪ್ರಕಟಿಸಲಾಗುವುದು ಹಾಗೂ ಎಲ್ಲಾ ಡಯಟ್‌ಗಳಿಗೂ
  ಸದರಿ ಚಟುವಟಿಕೆಗಳ ಸಾಫ್ಟ್ ಪ್ರತಿಯನ್ನು ಇ-ಮೇಲ್ ಮಾಡಲಾಗುವುದು.
 3. ವಿದ್ಯಾವಿಕಾಸ ಯೋಜನೆಯ ಮೂಲಕ ಉಚಿತ ವಿತರಣೆಯ ಅಡಿಯಲ್ಲಿ ಒದಗಿಸಲಾಗುತ್ತಿರುವ ನಲಿಕಲಿ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿಯೂ ‘ವಿ.ಪ್ರ’ ಎಂಬ ಶೀರ್ಷಿಕೆಯಡಿಯಲ್ಲಿ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ಸೇರ್ಪಡೆಗೊಳಿಸಿದ್ದು, ತರಗತಿಗಳಲ್ಲಿ ಇವುಗಳ ನಿರ್ವಹಣೆ ಕಡ್ಡಾಯವಾಗಿರುತ್ತದೆ.
 4. ಯಾವುದೇ ವಿದ್ಯಾರ್ಥಿಯು ನಿಗದಿತ 40 ದಿನಗಳಿಗಿಂತ ಮೊದಲು ವಿದ್ಯಾ ಪ್ರವೇಶ ಕಾರ್ಯಕ್ರಮದ
  ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದಲ್ಲಿ, ಅಂತಹ ವಿದ್ಯಾರ್ಥಿಗೆ ಪ್ರಸಕ್ತ ಸಾಲಿನ ಕಲಿಕಾ ಫಲ/ಕಲಿಕಾಂಶಗಳ
  ಕಲಿಕೆಗೆ ಅವಕಾಶವನ್ನು ಒದಗಿಸುವುದು. ವಿದ್ಯಾ ಪ್ರವೇಶ ಕಾರ್ಯಕ್ರಮದ ಅಂತ್ಯಕ್ಕೆ ಪ್ರತೀ ವಿದ್ಯಾರ್ಥಿವಾರು
  ಮೌಲ್ಯಮಾಪನ ದಾಖಲೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಕೃತಿ ಸಂಪುಟದಲ್ಲಿ ಅವುಗಳನ್ನು
  ದಾಖಲುಗೊಳಿಸುವುದು.
 5. ನಲಿಕಲಿ ಘಟಕಗಳಲ್ಲಿ 02 ಮತ್ತು 03ನೇ ತರಗತಿಯ ಮಕ್ಕಳಿಗೆ ಜೂನ್ 01 ರಿಂದ ಜೂನ್ 30 ರವರೆಗೆ ಸೇತುಬಂಧ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸುವುದು. ಮಕ್ಕಳ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ‘ಸೇ.ಬಂ’ ಎಂಬ ಶೀರ್ಷಿಕಯಡಿಯಲ್ಲಿ ಕಲಿಕಾ ಚಟುವಟಿಕೆಗಳನ್ನು ಅಳವಡಿಸಲಾಗಿದ್ದು,
  ಸುಗಮಕಾರರಿಗೆ ನೀಡಿರುವ ಸೂಚನೆ ಅನುಸಾರ ಸದರಿ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ವಹಣೆಗೆ
  ಒಳಪಡಿಸುವುದು.
 6. ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನಲ್ಲಿ ನಲಿಕಲಿ ಅಭ್ಯಾಸ ಸಹಿತ ಪಠ್ಯಪುಸ್ತಕಗಳನ್ನು ಭಾಗ-01 ಮತ್ತು
  ಭಾಗ-02ರಂತೆ ವಿಭಜಿಸಲಾಗಿರುತ್ತದೆ. ಭಾಗ-01ರಲ್ಲಿ 01 ರಿಂದ 04 ಮೈಲುಗಲ್ಲುಗಳ ಚಟುವಟಿಕೆಗಳನ್ನು
  ಪರಿವಿಡಿ ಸಹಿತ ಹಾಗೂ ಭಾಗ-02ರಲ್ಲಿ 05 ರಿಂದ 10 ಮೈಲುಗಲ್ಲುಗಳ ಚಟುವಟಿಕೆಗಳನ್ನು ಪರಿವಿಡಿ ಸಹಿತ
  ಜೋಡಿಸಲಾಗಿದ್ದು, ಇದಕ್ಕನುಗುಣವಾಗಿ ಕಲಿಕಾ ಏಣಿ ಮತ್ತು ಪ್ರಗತಿನೋಟವನ್ನು ಸಿದ್ಧಪಡಿಸಲಾಗಿದೆ.

ಸುಗಮಕಾರರು ಇದರಂತೆ ತರಗತಿ ಕಲಿಕಾ ಪ್ರಕ್ರಿಯೆಯನ್ನು ನಿರ್ವಹಿಸುವುದು.

 1. ಬರವಣಿಗೆ – ಅಭ್ಯಾಸ – ಸ್ವಯಂ ಮೌಲ್ಯಮಾಪನಕ್ಕೆ ವಿಫುಲವಾದ ಅವಕಾಶಗಳನ್ನು ಕಲ್ಪಿಸಿದ್ದು, ನಿರ್ವಹಣೆಯ
  ನಂತರದಲ್ಲಿ ಸುಗಮಕಾರರು ಅವುಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಮಕ್ಕಳು ಮಾಡಿರುವ ತಪ್ಪುಗಳನ್ನು
  ತಿದ್ದಿ, ಸೂಕ್ತ ಹಿಮ್ಮಾಹಿತಿಯನ್ನು ಅಂದಂದೇ ನೀಡಿ, ಮಗುವಿನ ಕಲಿಕೆಯ ನಿರಂತರ ಬೆಳವಣಿಗೆಗೆ
  ಮುಂದಾಗುವಂತೆ ತಿಳಿಸಲಾಗಿದೆ.
 2. ನಲಿಕಲಿ ತರಗತಿಗಳಲ್ಲಿ ಎಲ್ಲಾ ವಿಷಯಗಳಿಗೂ ಸೇರಿದಂತೆ ಸಾಮೂಹಿಕ ಗುಂಪಿನ ಜೊತೆಗೆ 1.ಕಲಿಕಾಂಶದ
  ಗುಂಪು 2. ಅಭ್ಯಾಸ/ಬಳಕೆಯ ಗುಂಪು ಮತ್ತು 3. ಮೌಲ್ಯಮಾಪನದ ಗುಂಪುಗಳ ಬಳಕೆಗೆ ಅವಕಾಶ ಕಲ್ಪಿಸಿದೆ.
  ಪ್ರತೀ ಅವಧಿಯು ಈ ಹಿಂದಿನಂತೆ 80 ನಿಮಿಷಗಳ ಅವಧಿಯನ್ನು ಒಳಗೊಂಡಿರುತ್ತದೆ.
 3. ನಿಮಣ್ ಭಾರತ್‌ ವತಿಯಿಂದ 2026-27ನೇ ಸಾಲಿನಲ್ಲಿ 03ನೇ ತರಗತಿಯ ಮಕ್ಕಳಿಗೆ ಅನುಷ್ಠಾನಿಸಲಾಗುವ
  ಕೇಂದ್ರ ಆಧಾರಿತ ಸಾರ್ವತ್ರಿಕ ಮೌಲ್ಯಾಂಕನ/ಅಧ್ಯಯನ ಕ್ರಮವು ಪ್ರಮುಖವಾಗಿ ಕಲಿಕಾ ಫಲಗಳನ್ನು
  ಕೇಂದ್ರೀಕರಿಸುವುದರಿಂದ ಸುಗಮಕಾರರು ಈಗಿನಿಂದಲೇ ಅವುಗಳನ್ನು ಅರ್ಥೈಸಿಕೊಳ್ಳಲು ಸೂಕ್ತ ತರಗತಿ
  ಕಲಿಕಾ ಪ್ರಕ್ರಿಯೆಯನ್ನು ಯೋಜಿಸಲು ಪ್ರಾವೀಣ್ಯತೆಯನ್ನು ಹೊಂದುವುದು.
 4. ಪ್ರತೀ ಶನಿವಾರದ ಕಲಿಕಾ ಅವಕಾಶದ ಅವಧಿಗೆ 03 ಗಂಟೆಗಳು, ಉಳಿದ ವಾರದ ದಿನಗಳಿಗೆ ದಿನವೊಂದಕ್ಕೆ
  05 ಗಂಟೆಗಳು ಮಕ್ಕಳ ಕಲಿಕೆಗಾಗಿ ಬಳಕೆಯಾಗುವಂತೆ ಅಗತ್ಯ ಕ್ರಮವಹಿಸುವುದು.

ಇಂಗ್ಲಿಷ್ ನಲಿಕಲಿ (ENK) ಕಾರ್ಯಕ್ರಮ ಅನುಷ್ಟಾನಕ್ಕೆ ಸಂಬಂಧಿಸಿದ ಕ್ರಮಗಳು:

 1. ನಲಿಕಲಿ ಘಟಕಗಳಲ್ಲಿ ದ್ವಿತೀಯ ಭಾಷೆ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಇ.ಎನ್.ಕೆ ಲೆವೆಲ್ 01,
  ಲೆವೆಲ್-02 ಮತ್ತು ಲೆವೆಲ್ -03ರ ಪಠ್ಯಕ್ರಮಗಳ ಅನುಷ್ಠಾನ ಕಡ್ಡಾಯವಾಗಿರುತ್ತದೆ.
 2. 01ನೇ ತರಗತಿಯಲ್ಲಿ 40 ದಿನಗಳ ವಿದ್ಯಾ ಪ್ರವೇಶದ ನಂತರ ಇ.ಎನ್.ಕೆ ಲೆವೆಲ್-01ರ ಅನುಷ್ಠಾನಕ್ಕೆ ಕಲಿಕಾ
  ಏಣಿಯಂತೆ (Ladder) ಅಗತ್ಯ ಕ್ರಮವಹಿಸುವುದು.
 3. 02 ಮತ್ತು 03ನೇ ತರಗತಿಯಲ್ಲಿ 30 ದಿನಗಳ ಸೇತು ಬಂಧ ಸಹಿತ ಆರಂಭಿಕ ಕಲಿಕೆಯು ಸಾಗಬೇಕಿದ್ದು,
  ಅನುಬಂಧದಂತೆ ಪರಿಷ್ಕೃತ ಸೇತು ಬಂಧ ಚಟುವಟಿಕೆಗಳ ಅನುಷ್ಠಾನಕ್ಕೆ ಕ್ರಮವಹಿಸುವುದು.
 4. ಸೇತು ಬಂಧ ಪಠ್ಯಕ್ರಮವು ಶೇ.20ರಷ್ಟು Listening & Speaking (L&S) ಮತ್ತು ಶೇ.80ರಷ್ಟು Reading &
  Writing (R&W) ಮೇಲೆ ಕೇಂದ್ರಿಕೃತವಾಗಿರುತ್ತದೆ.
 1. Sight words ಅಭ್ಯಾಸಗಳ ಜೊತೆಗೆ ಕ್ರಿಯಾತ್ಮಕ ವ್ಯಾಕರಣ ಮತ್ತು ಶಬ್ದಕೋಶವನ್ನು ಅಭಿವೃದ್ಧಿಪಡಿಸುವ
  ಸಲುವಾಗಿ ಭಾಷಾ ಆಟಗಳು-ಸಂಭಾಷಣೆಯ ವೃತ್ತ (Language Games & Conversation Circles) ಗಳನ್ನು L&S ನ ಭಾಗವಾಗಿ ಆಯ್ಕೆಮಾಡಿಕೊಳ್ಳಲಾಗಿರುತ್ತದೆ
 2. ‘I spy’ and ‘Passing the Parcel’, ‘fire in the mountain’, ‘Simon Says’, 03
  ಹಂತದಲ್ಲಿ
  ಬಳಸುವುದು. ಸೂಕ್ತವಾಗಿದ್ದು, ವ್ಯಾಕರಣ ಪರಿಕಲ್ಪನೆಗಳ ಸಲುವಾಗಿ ಇವುಗಳಿಗೆ
  ಪ್ರಾಮುಖ್ಯತೆಯನ್ನು ನೀಡಲಾಗಿದೆ.
 3. Conversation Circles
  Possessive pronouns, tenses, singular and plural, use of apostrophe,
  use of we, they, their and our’ ನಂತಹ ಪ್ರಶ್ನೆಗಳಿಗೆ ಮಕ್ಕಳು ಮೌಖಿಕವಾಗಿ ಉತ್ತರಿಸಲು ಹಾಗೂ ಈ ಬಗ್ಗೆ
  ಹೆಚ್ಚು ಅಭ್ಯಾಸ ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿದೆ. (ಅವಧಿಗಳ ನಿರ್ವಹಣೆ:Begin with 30 min of
  R&W 2. Followed by 20 min of L&S 3. End with 30 min of R&W)
 4. ಒಂದನೇ
  ತರಗತಿಯ ವಿದ್ಯಾರ್ಥಿಗಳು ವಿದ್ಯಾ ಪ್ರವೇಶ ಚಟುವಟಿಕೆಗಳನ್ನು ಪೂರ್ಣಗೊಳಿಸಲು
  ನಿರ್ದೇಶನವನ್ನು ನೀಡಿ, 02 ಮತ್ತು 03ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಮೇಲಿನ ಅವಧಿಯಂತೆ ಜೊತ
  ಜೊತೆಯಾಗಿ ಸೇತುಬಂಧ ಚಟುವಟಿಕೆಗಳನ್ನು ಆರಂಭಿಸುವುದು. ಗ್ರಹಿಸಲು ಕಷ್ಟಕರವಾದ
  ಪರಿಕಲ್ಪನೆ/ವಿಷಯಗಳಿಗೆ ವಿಶೇಷ ಗಮನವನ್ನು ನೀಡುವುದು.
 5. ಬರವಣಿಗೆಯ ಅಭ್ಯಾಸ/ನಿಯೋಜಿತ ಕೆಲಸಗಳಿಗೆ ಮಕ್ಕಳು 04 ಗೆರೆಗಳ ನೋಟ್ ಬುಕ್ ಬಳಸುವಂತೆ
  ಶಿಕ್ಷಕರು ಮಾರ್ಗದರ್ಶನವನ್ನು ನೀಡುವುದು. ಅಭ್ಯಾಸಗಳ ದೃಢೀಕರಣಕ್ಕಾಗಿ ನಿಯಮಿತವಾದ ನಿಯೋಜಿತ
  ಕೆಲಸಗಳು ಅತ್ಯಗತ್ಯವಿದ್ದು, ಸೂಕ್ತ ಮಾರ್ಗದರ್ಶನವನ್ನು ಒದಗಿಸುವುದು.
 6. 02 ಮತ್ತು 03ನೇ ತರಗತಿಯಲ್ಲಿ ಸೇತು ಬಂಧ ಸಹಿತ ಆರಂಭಿಕ ಕಲಿಕೆಗೆ ಸಿದ್ಧಪಡಿಸಲಾದ 40+05
  ದಿನಗಳ ಮಾದರಿಯನ್ನು ಅನುಸರಿಸಿ, ಎಫ್.ಎ-01ರ ಮೌಲ್ಯಾಂಕನಕ್ಕೆ ಕ್ರಮವಹಿಸುವುದು. ಈ ಹಂತದಲ್ಲಿ
  “Let us Do’ and ‘I Can Do’ ಮೌಲ್ಯಮಾಪನ ಕಾರ್ಡ್‌ಗಳನ್ನು ಬಳಸಬಹುದಾಗಿದ್ದು, ಇವುಗಳ ಜೊತೆಗೆ
  ಮಕ್ಕಳ spelling ability ಪರೀಕ್ಷಿಸಲು dictation of words ನೀಡುವುದನ್ನು ಮೌಲ್ಯಾಂಕನದಲ್ಲಿ
  ಅಳವಡಿಸಿಕೊಳ್ಳಬಹುದಾಗಿದೆ.
 7. 2.5.6
  ಲೆವೆಲ್-03ರ ಪಠ್ಯಕ್ರಮ ಕುರಿತು ಶರಗತಿ ಕಲಿಕಾ ಪ್ರಕ್ರಿಯೆಯನ್ನು ಅರ್ಥೈಸಲು
  ವೀಡಿಯೋಗಳನ್ನು ಸಿದ್ಧಪಡಿಸಿ, ಡಿ.ಎಸ್.ಇ.ಆರ್.ಟಿ ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗುವುದು.
  ಈಗಾಗಲೇ ದೀಕ್ಷಾ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗಿರುವ ಇ.ಎನ್.ಕೆ ವೀಡಿಯೋ ಸಾಮಗ್ರಿಗಳನ್ನು
  ಅವಲೋಕಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ.

ಇ) ನಲಿಕಲಿ ಘಟಕಗಳ ಮೌಲ್ಯಾಂಕನ ಅನುಷ್ಟಾನಕ್ಕೆ ಮಾರ್ಗದರ್ಶಿತ ಸೂಚನೆಗಳು:

 1. ಪ್ರತೀ ಅಭ್ಯಾಸ ಸಹಿತ ನಲಿಕಲಿ ಪಠ್ಯಪುಸ್ತಕಗಳ ಕೊನೆಯಲ್ಲಿ ವಿಷಯವಾರು ಕಲಿಕೆಯ ಫಲಗಳನ್ನು
  ನೀಡಲಾಗಿದೆ. ಸದರಿ ಕಲಿಕಾ ಫಲಗಳನ್ನು 04 FA & 02 SA ಮೌಲ್ಯಾಂಕನಕ್ಕೆ ಅನುಗುಣವಾಗಿ
  ವರ್ಗೀಕರಿಸಿದ್ದು, ಸುಗಮಕಾರರು ಅವುಗಳನ್ನು ಅವಲೋಕಿಸಿ ಮೌಲ್ಯಾಂಕನ ಪ್ರಕ್ರಿಯೆಯಲ್ಲಿ
  ತೊಡಗಿಕೊಳ್ಳುವುದು.
 2. ಪ್ರತೀ ಮೌಲ್ಯಾಂಕನದ ಅಂತ್ಯಕ್ಕೆ ನಲಿಕಲಿ ತರಗತಿಗಳಿಗೆ ನೀಡಲಾಗಿರುವ ಮಾಹೆವಾರು ಕಲಿಕಾ ಏಣಿ
  ವಿವರಗಳನ್ನು ಕಡ್ಡಾಯವಾಗಿ ಪರಿಗಣಿಸುವುದು.(ಆಯುಕ್ತರ ಕಚೇರಿಯಿಂದ ಹೊರಡಿಸುವ ಶೈಕ್ಷಣಿಕ
  ಮಾರ್ಗದರ್ಶಿಯಲ್ಲಿ ಮಾಹೆವಾರು ಚಟುವಟಿಕೆಗಳನ್ನು ನೀಡಿದ್ದು ಅವಲೋಕಿಸಬಹುದಾಗಿದೆ.)
 3. ನಲಿಕಲಿ ಘಟಕಗಳಲ್ಲಿ ಕಲಿಕಾ ಫಲ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆಯನ್ನು ಆಧರಿಸಿ ಅಥವಾ ಶಿಕ್ಷಕರೇ
  ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯನ್ನು ರಚಿಸಿಕೊಳ್ಳುವ ಮೂಲಕ ಪ್ರತೀ ಹಂತದ ಮೌಲ್ಯಾಂಕನಕ್ಕೆ ಅಗತ್ಯ
  ಕ್ರಮವಹಿಸುವುದು.
 4. ಎಲ್ಲಾ ಮಕ್ಕಳ ಕಲಿಕೆಯ ವೇಗವನ್ನು ಗಮನದಲ್ಲಿರಿಸಿ, ಮೌಲ್ಯಾಂಕನ ಮಾಹೆಯ ಅಂತ್ಯಕ್ಕೆ ನಿಗದಿಪಡಿಸಿದ
  ಒಟ್ಟು ಕಲಿಕಾ ಫಲಗಳಲ್ಲಿ ಶೇ.80ರಷ್ಟು ಕಲಿಕಾ ಫಲವನ್ನು ಪರಿಗಣನೆಗೆ ತೆಗೆದುಕೊಂಡು ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವುದು.
 5. ಮುಂದಿನ ಮೌಲ್ಯಾಂಕನದಲ್ಲಿ ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವಾಗ ಈ ಹಿಂದೆ ಕೈಬಿಡಲಾದ
  ಶೇ.20ರಷ್ಟು ಕಲಿಕಾ ಫಲವನ್ನು ಆದ್ಯತೆಯಲ್ಲಿ ಪರಿಗಣಿಸಿ, ಒಟ್ಟು ಶೇ.80ರಷ್ಟು ಕಲಿಕಾ ಫಲಗಳಿಗೆ ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವುದು.

27.ಎಸ್.ಎ-01ಕ್ಕೆ ಶೇ.80ರಷ್ಟು ಕಲಿಕಾ ಫಲವನ್ನು ಪರಿಗಣಿಸಿ, ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸಿದರೆ,
ಎಸ್.ಎ-02ಕ್ಕೆ ಶೇ.100ರಷ್ಟು ಕಲಿಕಾ ಫಲಗಳಿಗೆ ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವುದು.

28.ನಿಗದಿಪಡಿಸಿದ ಒಟ್ಟು ಕಲಿಕೆಯ ಫಲಗಳಿಗೆ ವಿದ್ಯಾರ್ಥಿಯು ಗಳಿಸಿದ ಕಲಿಕಾ ಫಲಗಳನ್ನು ಆಧರಿಸಿ
ಅಂಕವನ್ನು ಶ್ರೇಣಿಗೆ ಪರಿವರ್ತಿಸುವುದು. ಅಂಕ ಮತ್ತು ಶ್ರೇಣಿ ಆಧಾರಿತ ಅಗತ್ಯ ದಾಖಲೆ/ಪ್ರಗತಿ ವಹಿಗಳ
ನಿರ್ವಹಣೆಗೆ ಅಗತ್ಯ ಕ್ರಮವಹಿಸುವುದು.

29.ಒಟ್ಟು ಕಲಿಕಾ ಫಲಗಳನ್ನು ಸಾಧಿಸಲು ಸಾಧ್ಯವಾಗದ/ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರಕ ಹಿಮ್ಮಾಹಿತಿ
ನೀಡಿ, ಪ್ರತ್ಯೇಕ ಮಾರ್ಗದರ್ಶನದೊಂದಿಗೆ ಕಲಿಕಾ ಪ್ರಕ್ರಿಯೆಯಲ್ಲಿ ಮುಂದುವರೆಯುವಂತೆ ಮತ್ತು ನಿಗದಿತ
ಕಲಿಕೆಯ ಗುರಿಯ ಕಡೆಗೆ ಆ ವಿದ್ಯಾರ್ಥಿ ಸಾಗುವಂತೆ ಪ್ರೇರೇಪಿಸುವುದು.

ಈ) ನಲಿಕಲಿ ಘಟಕಗಳ ಮೇಲುಸ್ತುವಾರಿ ಹಾಗೂ ಅನುಪಾಲನೆಯ ಜವಾಬ್ದಾರಿಗಳು:

30. ಜಿಲ್ಲಾ ಹಂತದಲ್ಲಿ ಉಪನಿರ್ದೇಕರು ಆಡಳಿತ ಮತ್ತು ಉಪನಿರ್ದೇಶಕರು ಅಭಿವೃದ್ಧಿ ಇವರು ತಮ್ಮ
ಅಧ್ಯಕ್ಷತೆಯೊಂದಿಗೆ ಡಿ.ವೈ.ಪಿ.ಸಿ., ಎ.ಪಿ.ಸಿ., ಡಯಟ್‌ನ ನಲಿಕಲಿ ನೋಡಲ್ ಅಧಿಕಾರಿ, ಡಯಟ್‌ನ ಎಲ್ಲಾ
ಉಪನ್ಯಾಸಕರು, ಎಲ್ಲಾ ಬ್ಲಾಕ್‌ಗಳ ಬಿ.ಇ.ಓ ಮತ್ತು ಬಿ.ಆರ್.ಸಿ ಇವರನ್ನು ಆಹ್ವಾನಿಸಿ, ಸದರಿ ಸುತ್ತೋಲೆಯ
ಅನುಷ್ಠಾನಾತ್ಮಕ ಕ್ರಮಗಳ ಬಗ್ಗೆ ಚರ್ಚಿಸುವುದು ಮತ್ತು ಅನುಪಾಲನೆಗೆ ಸೂಕ್ತ ಜವಾಬ್ದಾರಿಯನ್ನು
ನಿಗದಿಪಡಿಸುವುದು.

31. ಶಾಲೆಗಳಿಗೆ ಭೇಟಿ ನೀಡುವ ಯಾವುದೇ ಅಧಿಕಾರಿಗಳಾಗಲಿ, ಕ್ಷೇತ್ರ ಕ್ಲಸ್ಟರ್ ಹಂತದ ಸಂಪನ್ಮೂಲ
ವ್ಯಕ್ತಿಗಳಾಗಲಿ, ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿನ ಚಟುವಟಿಕೆಗಳ ಹಾಳೆಗಳನ್ನು ಮಕ್ಕಳು ನಿರ್ವಹಿಸಿರುವ
ಬಗ್ಗೆ ಖುದ್ದು ಪರಿಶೀಲಿಸಿ, ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಎಲ್ಲಾ ಹಂತದ ಅಧಿಕಾರಿಗಳು ನಿಯಮಿತವಾಗಿ ಶಾಲಾ ಭೇಟಿಗಳನ್ನು ಕೈಗೊಳ್ಳುವ ಮೂಲಕ ಸಮರ್ಥ
ಮೇಲುಸ್ತುವಾರಿ ಮತ್ತು ಮಾರ್ಗದರ್ಶನದೊಂದಿಗೆ ಪ್ರಾಥಮಿಕ ತರಗತಿಯ ಮಕ್ಕಳ ಕಲಿಕೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಸದರಿ ಸುತ್ತೋಲೆಯಲ್ಲಿ ಪ್ರಸ್ತಾಪಿಸಲಾಗಿರುವ ಮೇಲ್ವಿಚಾರಣೆ ಹಾಗೂ ಅನುಪಾಲನೆಯ ಕ್ರಮಗಳನ್ನು ನಲಿಕಲಿ ಘಟಕಗಳಲ್ಲಿ ಅನುಷ್ಟಾನಗೊಳಿಸಲು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ಆದೇಶಿಸಿ, ನಿರ್ದೇಶಿಸಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment