6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ರಸ ಪ್ರಶ್ನೆ ಸ್ಪರ್ಧೆ

CIET, NCERT ವತಿಯಿಂದ ‘Know our Constitution
Online Quiz ಅನ್ನು Diksha ಪೋರ್ಟಲ್‌ನಲ್ಲಿ ಪ್ರಾರಂಭಿಸಲಾಗಿದೆ .6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಕ್ವಿಝ್ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು,
ಇದರಿಂದ ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನದ ರಚನೆಯ ಇತಿಹಾಸ ಮತ್ತು ಅದರಲ್ಲಿ ಭಾಗವಹಿಸಿರುವ ಗಣ್ಯ
ವ್ಯಕ್ತಿಗಳ ಬಗ್ಗೆ ಅರಿವು ಮೂಡಿಸಲು,ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ರಾಜ್ಯ
ನೀತಿಯ ನಿರ್ದೇಶಕ ತತ್ವಗಳ ಬಗ್ಗೆ ತಿಳಿಯಲು ಅವಕಾಶವಾಗುತ್ತದೆ.

ಈ ರಸಪ್ರಶ್ನೆಯು ನಮ್ಮ ಮುಂದಿನ ಪೀಳಿಗೆಯನ್ನು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿರಲು ಮತ್ತು
ಪ್ರಜಾಸತ್ತಾತ್ಮಕ ತತ್ವಗಳನ್ನು ಪೋಷಿಸಲು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಸಂವಿಧಾನ ದಿನದ ಮಹತ್ವವನ್ನು
ಅರ್ಥಮಾಡಿಕೊಳ್ಳಲು ಹಾಗೂ ಸಂಬಂಧಿಸಿದ ಅನೇಕ ಚಟುವಟಿಕೆಗಳಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಲು
ವಿದ್ಯಾರ್ಥಿಗಳನ್ನು ಉತ್ತೇಜಿಸಲು ಈ ಕ್ವಿಜ್‌ ಅವಕಾಶ ನೀಡುತ್ತದೆ.

ಕ್ವಿಜ್ ನಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳು
ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ
ಮತ್ತು ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳು ಮೆರಿಟ್
ಪ್ರಮಾಣಪತ್ರವನ್ನು ಸಹ ಪಡೆಯುತ್ತಾರೆ.

ಸದರಿ ಆನ್‌ಲೈನ್ Quizನಲ್ಲಿ ಭಾಗವಹಿಸಲು ದಿನಾಂಕ:31-12-2022
ರಂದು ಕೊನೆಯ ದಿನಾಂಕವಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಸರ್ಕಾರಿ, ಅನುದಾನಿತ
ಮತ್ತು ಅನುದಾನ ರಹಿತ ಶಾಲೆಗಳ 6 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವಂತೆ ಸೂಚನೆ ನೀಡಿರುತ್ತಾರೆ

IMG 20221222 WA0018
ಕ್ವಿಜ್ ಗೆ ನೊಂದಾಯಿಸಲು ಲಿಂಕ್


https://diksha.gov.in

ಆಂಗ್ಲ ಭಾಷೆಯಲ್ಲಿ ಕ್ವಿಜ್ https://bit.ly/ConstitutionQuiz_EN
ಹಿಂದಿ ಭಾಷೆಯಲ್ಲಿ ಕ್ವಿಜ್https://bit.ly/ConstitutionQuiz_HI
Sharing Is Caring:

Leave a Comment