ಮೌಲ್ಯಾಂಕನ ನಿರ್ವಹಣೆಗೆ ವಹಿಸಬೇಕಾದ ಕ್ರಮಗಳು

IMG 20230524 WA0583
  • ನಲಿಕಲಿ, ಕಲಿನಲಿ ಹಾಗೂ Bilingual ತರಗತಿಗಳಲ್ಲಿ ಆಯುಕ್ತರ ಹಂತದಿಂದ ಹೊರಡಿಸಲಾದ ಶೈಕ್ಷಣಿಕ
    ಮಾರ್ಗದರ್ಶಿಯಲ್ಲಿನ ನಿರ್ದೇಶಿತ ಮಾಹಗಳಲ್ಲಿಯೇ 04 FA ಹಾಗೂ 02 SA ಮೌಲ್ಯಾಂಕನ ಅನುಷ್ಠಾನಕ್ಕೆ
    ಅಗತ್ಯ ಕ್ರಮವಹಿಸುವುದು.
  • ನಲಿಕಲಿ ತರಗತಿಗಳಲ್ಲಿ ಕಲಿಕಾ ಏಣಿ ಮತ್ತು ಪ್ರಗತಿ ನೋಟದಲ್ಲಿ ನಿಗದಿಪಡಿಸಿರುವ ಮಾಹವಾರು ಮೈಲುಗಲ್ಲುವಾರು ಚಟುವಟಿಕೆಗಳನ್ನು ಮೌಲ್ಯಾಂಕನಕ್ಕೆ ಒಳಪಡಿಸುವುದು.
  • ಕಲಿನಲಿ ಹಾಗೂ Bilingual ತರಗತಿಗಳಲ್ಲಿ ಮಾಹೆವಾರು ನಿಗದಿಪಡಿಸಿದ ಪಠ್ಯಾಂಶಗಳ ಮೌಲ್ಯಾಂಕನಕ್ಕೆ ಅಗತ್ಯಕ್ರಮವಹಿಸುವುದು. ಆದರೆ, Bilingual ತರಗತಿ ಮಕ್ಕಳ ಮೌಲ್ಯಾಂಕನಕ್ಕಾಗಿ Assessment Indicators(ಮೌಲ್ಯಾಂಕನ ಸೂಚಕಗಳು) ಅನ್ನು ರಾಜ್ಯ ಹಂತದಿಂದಲೇ ಪ್ರಕಟಗೊಳಿಸಲಾಗುವುದು.ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗಿರುವ ಇ.ಎನ್.ಕೆ ವೀಡಿಯೋ ಸಾಮಗ್ರಿಗಳನ್ನು ಅವಲೋಕಿಸಲುಶಿಕ್ಷಕರಿಗೆ ಸೂಚಿಸಲಾಗಿದೆ. (ಅನುಬಂಧ 04 ಅನ್ನು ಅವಲೋಕಿಸಿ)
  • ನಲಿಕಲಿ ತರಗತಿಗಳಿಗೆ ಎಫ್.ಎ-01ರ ಅನುಷ್ಠಾನಕ್ಕಾಗಿ ಕಲಿಕೆಯ ಫಲಗಳನ್ನು ಆಧರಿಸಿ, ರಾಜ್ಯ ಹಂತದಿಂದಲೇ
    ಪ್ರಶ್ನೆ ಪತ್ರಿಕೆಯ ಮಾದರಿಯೊಂದನ್ನು ಸಿದ್ಧಪಡಿಸಿ, ಜುಲೈ ಮಾಹೆಯ ಕೊನೆಯ ವಾರದೊಳಗೆ
    ಡಿ.ಎಸ್.ಇ.ಆರ್.ಟಿ.ಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ಮಾದರಿಯಂತೆ ಶಿಕ್ಷಕರು ತಮ್ಮ ಹಂತದಲ್ಲಿ
    ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿಕೊಳ್ಳಬಹುದು ಅಥವಾ ಮಾದರಿಯನ್ನೇ ಮೌಲ್ಯಾಂಕನಕ್ಕೆ ಬಳಸಬಹುದು. (ಈ) ಮೌಲ್ಯಾಂಕನ ಅನುಷ್ಟಾನಕ್ಕೆ ಮಾರ್ಗದರ್ಶಿತ ಸೂಚನೆಗಳು:
    ಕ್ರಸಂ ಮೌಲ್ಯಾಂಕನದ ‘ . ವಿವರಗಳು

ರೂಪಕಾತ್ಮಕ ಮೌಲ್ಯಾಂಕನ (ಎಫ್.ಎ-01)
ರೂಪಕಾತ್ಮಕ ಮೌಲ್ಯಾಂಕನ (ಎಫ್.ಎ-12)
ಸಂಕಲನಾತ್ಮಕ ಮೌಲ್ಯಾಂಕನ (ಎಸ್.ಎ-01)
ರೂಪಕಾತ್ಮಕ ಮೌಲ್ಯಾಂಕನ (ಎಫ್.ಎ-03)
06
ರೂಪಕಾತ್ಮಕ ಮೌಲ್ಯಾಂಕನ (ಎಫ್.ಎ-04)
ಸಂಕಲನಾತ್ಮಕ ಮೌಲ್ಯಾಂಕನ (ಎಸ್.ಎ-02)

ಅನುಷ್ಟಾನದ ದಿನಾಂಕಗಳು

1 . 18.07.23 ರಿಂದ 20.07.23

  1. 06,09.23 ರಿಂದ 07.09.23
  2. 29,09,23 ರಿಂದ 07.10.23

4. 26.12.23 ರಿಂದ 28.12.23

  1. 04.02.24 ರಿಂದ 06.02.24
  2. 15,03.24 ರಿಂದ 30,03,24

ನಲಿಕಲಿ ತರಗತಿಗಳಲ್ಲಿ ಮಾಹವಾರು
ಕಲಿಕಾ ಏಣಿ ಆಧರಿಸಿ, ಕಲಿನಲಿ
ತರಗತಿಗಳಲ್ಲಿ ಮಾಹವಾರು ಪಾಠಪಂಚಿಕೆಯನ್ನು ಆಧರಿಸಿ,
ಮೌಲ್ಯಾಂಕನಕ್ಕೆ ಕಲಿಕಾಂಶಗಳನ್ನು
ನಿರ್ಧರಿಸಿಕೊಳ್ಳುವುದು

ನಲಿಕಲಿ ತರಗತಿಗಳ ಪ್ರಶ್ನೆ ಪತ್ರಿಕೆ ರಚನೆ ಅಥವಾ ಮೌಲ್ಯಮಾಪನ ಸೂಚಕಗಳ ಅಳವಡಿಕೆಗೆ ಕ್ರಮಗಳು

1.ಪ್ರತೀ ಮೌಲ್ಯಾಂಕನದ ಅಂತ್ಯಕ್ಕೆ ನಲಿಕಲಿ ತರಗತಿಗಳಲ್ಲಿ ಮಾಹೆವಾರು ಕಲಿಕಾ ಏಣಿ ಮತ್ತು ಕಲಿನಲಿ ತರಗತಿಗಳಲ್ಲಿ
ಮಾಹವಾರು ಪಾಠ ಹಂಚಿಕೆಯ ವಿವರಗಳನ್ನು ಕಡ್ಡಾಯವಾಗಿ ಪರಿಗಣಿಸುವುದು.

  1. ನಲಿಕಲಿ ಘಟಕಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಆಧರಿಸಿ, ಅಥವಾ ಶಿಕ್ಷಕರೇ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯನ್ನು
    ರಚಿಸಿಕೊಳ್ಳುವ ಮೂಲಕ ಪ್ರತೀ ಹಂತದ ಮೌಲ್ಯಾಂಕನಕ್ಕೆ ಕ್ರಮವಹಿಸುವುದು.

3.ಎಲ್ಲಾ ಮಕ್ಕಳ ಕಲಿಕೆಯ ವೇಗವನ್ನು ಗಮನದಲ್ಲಿರಿಸಿ, ಮೌಲ್ಯಾಂಕನ ಮಾಹೆಯ ಅಂತ್ಯಕ್ಕೆ ನಿಗದಿಪಡಿಸಿದ ಒಟ್ಟು
ಕಲಿಕಾಂಶಗಳಲ್ಲಿ ಶೇ.80ರಷ್ಟು ಕಲಿಕಾಂಶವನ್ನು ಪರಿಗಣನೆಗೆ ತೆಗೆದುಕೊಂಡು ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವುದು.

4.ಮುಂದಿನ ಮೌಲ್ಯಾಂಕನದಲ್ಲಿ ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವಾಗ ಈ ಹಿಂದೆ ಕೈಬಿಡಲಾದ ಶೇ.20ರಷ್ಟು
04 ಕಲಿಕಾಂಶವನ್ನು ಆದ್ಯತೆಯಲ್ಲಿ ಪರಿಗಣಿಸಿ, ಒಟ್ಟು ಶೇ.80ರಷ್ಟು ಕಲಿಕಾಂಶಕ್ಕೆ ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವುದು.

  1. ಎಸ್.ಎ-01ಕ್ಕೆ ಶೇ.80ರಷ್ಟು ಕಲಿಕಾಂಶವನ್ನು ಪರಿಗಣಿಸಿ, ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸಿದರೆ, ಎಸ್.ಎ-02ಕ್ಕೆ
    ಶೇ.100ರಷ್ಟು ಕಲಿಕಾಂಶವನ್ನು ಪರಿಗಣಿಸಿ, ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸುವುದು.

6.ವಿದ್ಯಾರ್ಥಿ ಗಳಿಸಿದ ಅಂಕವನ್ನು ಶ್ರೇಣಿಗೆ ಪರಿವರ್ತಿಸುವುದು. ಆಯಾಯ ಹಂತಕ್ಕೆ ಅಂಕ ಮತ್ತು ಶ್ರೇಣಿ ಆಧಾರಿತ ಅಗತ್ಯ
ದಾಖಲೆ/ಪ್ರಗತಿ ವಹಿಗಳ ನಿರ್ವಹಣೆಗೆ ಕ್ರಮವಹಿಸುವುದು ವಿದ್ಯಾರ್ಥಿವಾರು ಪ್ರಗತಿವಹಿಯನ್ನು ನಿರ್ವಹಿಸುವುದು.

ಸೂಚನೆ: ಒಟ್ಟು ಕಲಿಕಾಂಶಗಳನ್ನು ಸಾಧಿಸಲು ಸಾಧ್ಯವಾಗದ ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರಕ ಹಿಮ್ಮಾಹಿತಿ ನೀಡಿ, ಪ್ರತ್ಯೇಕ
ಮಾರ್ಗದರ್ಶನದೊಂದಿಗೆ ಕಲಿಕಾ ಪ್ರಕ್ರಿಯೆಯಲ್ಲಿ ಮುಂದುವರೆಯುವಂತೆ ಶಿಕ್ಷಕರು ಕ್ರಮವಹಿಸುವುದು. ನಿಗದಿತ ಕಲಿಕೆಯ
ಗುರಿಯ ಕಡೆಗೆ ಪ್ರಗತಿಯನ್ನು ಅವಲೋಕಿಸಿ, ವಿದ್ಯಾರ್ಥಿವಾರು ದಾಖಲಿಸುವುದು.

Useful for teachers2023
Sharing Is Caring:

Leave a Comment