ಸೇತುಬಂಧ ಕಾರ್ಯಕ್ರಮದ ಅನುಷ್ಟಾನಾತ್ಮಕ ಕ್ರಮಗಳು

IMG 20230524 WA0583
  • 02 ಮತ್ತು 03ನೇ ತರಗತಿಗೆ 40 ದಿನಗಳ ಸೇತುಬಂಧ ಸಹಿತ ಆಯಾಯ ತರಗತಿಯ ಆರಂಭಿಕ ಕಲಿಕೆಯನ್ನುನಿರಂತರವಾಗಿ ಅನುಷ್ಟಾನಗೊಳಿಸುವುದು ಕಡ್ಡಾಯವಾಗಿರುತ್ತದೆ.
  • ಕನ್ನಡ ಮಾಧ್ಯಮದ 02ನೇ ತರಗತಿಯ ನಲಿಕಲಿ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಗುಣಿತಾಕ್ಷರ ಮತ್ತು ಒತ್ತಕ್ಷರಗಳಎಫ್.ಎ-01ರ ಕಲಿಕೆಯನ್ನು ಆರಂಭಿಸುವುದು ಕಡ್ಡಾಯವಾಗಿರುತ್ತದೆ. ಜುಲೈ ಅಂತ್ಯದಲ್ಲಿ ನಡೆಸಲಾಗುವಮೌಲ್ಯಾಂಕನದ ಒಟ್ಟು ಕಲಿಕಾಂಶವು ಗುಣಿತಾಕ್ಷರ ಮತ್ತು ಕೆಲವು ಒತ್ತಕ್ಷರಗಳ ಕಲಿಕೆಯನ್ನು ಒಳಗೊಂಡಿರಬೇಕು. ಈಬದಲಾವಣೆಗೆ ಕಾರಣ, ಒಂದನೇ ತರಗತಿಗೆ ಗುಣಿತಾಕ್ಷರ ಹಾಗೂ ಒತ್ತಕ್ಷರ ಸಹಿತ ಕಲಿಕೆಯನ್ನು ಹೊಸಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ. ಆದರೆ, ಎರಡನೇ ತರಗತಿಗೆ ದಾಖಲಾಗುವ ಮಕ್ಕಳು ನಲಿಕಲಿ ಪದ್ಧತಿಯಂತೆಕೆಲವು ಗುಣಿತಾಕ್ಷರ ಮತ್ತು ಒತ್ತಕ್ಷರಗಳನ್ನು ಸದರಿ ತರಗತಿಯಲ್ಲಿ ಕಲಿಯಬೇಕಿದ್ದು, ಈ ಮಾರ್ಪಾಡು ಅತ್ಯಗತ್ಯವಾಗಿದೆ.
  • 9, ಇತರೆ ಮಾಧ್ಯಮಗಳ ಕಲಿನಲಿ ತರಗತಿಗಳಲ್ಲಿ ಆಯುಕ್ತರ ಹಂತದಿಂದ ಹೊರಡಿಸಲಾದ ಶೈಕ್ಷಣಿಕಮಾರ್ಗದರ್ಶಿಯ ಅಂಶಗಳಂತೆ ಸೇತು ಬಂಧ ಸಹಿತ ಆರಂಭಿಕ ಕಲಿಕೆಯನ್ನು ಅನುಷ್ಠಾನಕ್ಕೆ ಕ್ರಮವಹಿಸುವುದು.
  • ಜುಲೈ ಮಾಹೆಯ ಅಂತ್ಯಕ್ಕೆ ಎಲ್ಲಾ ಮಾಧ್ಯಮದ ತರಗತಿಗಳಲ್ಲಿ ಎಫ್.ಎ. 01ರ ಮೌಲ್ಯಾಂಕನದ ಅನುಷ್ಠಾನಕ್ಕೆಕಡ್ಡಾಯವಾಗಿರುತ್ತದೆ. (ಅನುಬಂಧ – 01, 02, 03ರ ದಾಖಲೆಗಳನ್ನು ಅವಲೋಕಿಸಿ)
    Useful for teachers2023
    Sharing Is Caring:

    Leave a Comment