S.A.S ಕಲಿಕಾ ಸಾಧನ ಸಮೀಕ್ಷೆಗೆ (5 ಮತ್ತು 8ನೇ ತರಗತಿ ಮೌಲ್ಯಾಂಕನ) ಸಂಬಂಧಿಸಿದಂತೆ ಇಂದು ನೆಡೆದ ರೇಡಿಯೋ ಸಂವಾದ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಗೋಪಾಲಕೃಷ್ಣ ರವರು ನೀಡಿದ ಮಾಹಿತಿ

5 ಹಾಗು 08 ನೇ ತರಗತಿ ಮೌಲ್ಯಾಂಕನ ಶ್ರೀ ಎಚ್ ಎನ್ ಗೋಪಾಲಕೃಷ್ಣ ನಿರ್ದೇಶಕರುಕರ್ನಾಟಕ ರಾಜ್ಯ ಮೌಲ್ಯಾಂಕನ ಮಂಡಳಿ ಐದು ಮತ್ತು ಎಂಟನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದಂತೆ ಸಂವಾದ ಕಾರ್ಯಕ್ರಮದ ಅಂಶಗಳು

1) ಇದು ಪಬ್ಲಿಕ್ ಪರೀಕ್ಷೆಯಲ್ಲ, ಇದೊಂದು ಮೌಲ್ಯಾಂಕನ ಪರೀಕ್ಷೆಯಾಗಿದೆ.

2) 5 ಮತ್ತು 8ನೇ ತರಗತಿಯ ಮಕ್ಕಳಿಗೆ ಒಂದು ಹಂತದ ಕಲಿಕೆಯ ಪರೀಕ್ಷೆ.

3) ಇದೊಂದು ಸಾಧನವಾಗಿದೆ.

4) ಈ ಪರೀಕ್ಷೆಯು ಎರಡನೇ ಸೆಮಿಸ್ಟರ್ ಗೆ ಸಂಬಂಧಿಸಿದೆ.

5) ನವಂಬರ್ ದಿಂದ ಮಾರ್ಚ್ ವರೆಗಿನ ಕಲಿಕಾಂಶಕ್ಕೆ ಸಂಬಂಧಿಸಿದ ಪರೀಕ್ಷೆ ಇರುತ್ತದೆ.

6) ರಾಜ್ಯ ಪಠ್ಯಕ್ರಮಕ್ಕೆ ಅನುಗುಣವಾಗಿ ಇಡೀ ರಾಜ್ಯಾದ್ಯಂತ ಒಂದೇ ರೀತಿಯ ಪ್ರಶ್ನೆ ಪತ್ರಿಕೆ ಇರುತ್ತದೆ.

7) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ.

8)SATS ನಂಬರ್ ವಿದ್ಯಾರ್ಥಿಯ ರಜಿಸ್ಟರ್ ನಂಬರ್ ಆಗಿರುತ್ತದೆ.

9) ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಣೆ ಮಾಡಲಾಗುವುದು.

10) 5ನೇ ವರ್ಗದ 57933 ಶಾಲೆಗಳಿಗೆ ಹಾಗೂ 8 ನೇ ವರ್ಗದ 24400 ಶಾಲೆಗಳಿಗೆ ಈ ಪರೀಕ್ಷೆ ನಡೆಸಲಾಗುವದು.

11) ಕಲಿಕಾಂಶ ಆಧಾರದ ಮೇಲೆ ಪ್ರಶ್ನೆ ಪತ್ರಿಕೆ ರಚನೆ ಆಗಿರುತ್ತದೆ.

12) ಎರಡು – ಮೂರು ದಿನಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗುವುದು.

13) ಮಾರ್ಚ್ 9 ರಿಂದ 18ರವರೆಗೆ ಈ ಪರೀಕ್ಷೆ ನಡೆಸಲಾಗುವುದು.

14) ಐದನೇ ವರ್ಗದ ಉತ್ತರ ಪತ್ರಿಕೆಗಳು ಆಯಾ ತಾಲೂಕಿನಲ್ಲಿ ಮೌಲ್ಯಮಾಪನ ಮಾಡಲಾಗುವುದು

15) 8ನೇ ವರ್ಗದ ಉತ್ತರ ಪತ್ರಿಕೆಗಳು ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ವರ್ಗಾಯಿಸಿ ಮೌಲ್ಯಮಾಪನ ಮಾಡಲಾಗುವುದು.

16)SATS ನಲ್ಲಿ ಫಲಿತಾಂಶವನ್ನು ನಮೂದಿಸುವುದು.

17) ಪ್ರಶ್ನೆ ಪತ್ರಿಕೆ ಸಹಿತ ಉತ್ತರ ಪತ್ರಿಕೆಯನ್ನು ಒದಗಿಸಲಾಗುವುದು.

18) ಪ್ರಶ್ನೆ ಪತ್ರಿಕೆಯು ಐವತ್ತು ಅಂಕಗಳಿಗೆ ನಿಗದಿಪಡಿಸಲಾಗಿದೆ.

19) ಅದರಲ್ಲಿ 10 ಅಂಕಗಳು ಮೌಖಿಕ ಪ್ರಶ್ನೆಗಳಿಗೆ ಸಂಬಂಧಿಸಿರುತ್ತದೆ.ಹಾಗೂ 40 ಅಂಕಗಳು ಲಿಖಿತ ಪ್ರಶ್ನೆಗಳಿಗೆ ಸಂಬಂಧಿಸಿರುತ್ತದೆ.

20) 40 ಅಂಕಗಳ ಲಿಖಿತ ಪ್ರಶ್ನೆಗಳಲ್ಲಿ 50% (20 ಅಂಕ )ಪ್ರಶ್ನೆಗಳು ಬಹು ಆಯ್ಕೆ ಪ್ರಶ್ನೆಗಳಿದ್ದರೆ, 50% (20ಅಂಕ)ಪ್ರಶ್ನೆಗಳು ವಿವರಣೆ ಪ್ರಶ್ನೆ ಇರುತ್ತವೆ.

21) ಇದೊಂದು ಕಲಿಕಾ ಸಂತಸದ ಪರೀಕ್ಷೆಯಾಗಿದೆ.

22) ಮುಂದೆ ಬರುವ ಪಬ್ಲಿಕ್ ಪರೀಕ್ಷೆಗಳಿಗೆ ಮೌಲ್ಯಾಂಕನ ಪರೀಕ್ಷೆಯು ಒಂದು ಅನುಭವವನ್ನು ಕೊಡುತ್ತದೆ

23) ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಪರೀಕ್ಷೆಗೆ ತಯಾರಿ ಅನಿವಾರ್ಯ.

24) ಗ್ರೇಡನ್ನು ನಮೂದಿಸುತ್ತದೆ.

25) ಕರೋನ ನಂತರ ಕಲಿಕೆಯ ಯನ್ನು ತಿಳಿಯುವ ಸಾಧನವಾಗಿದೆ

26) 40 ಅಂಕಗಳಿಗೆ ಸಮಯ 2 ಗಂಟೆ ನಿಗಧಿಪಡಿಸಲಾಗಿದೆ.

Sharing Is Caring:

Leave a Comment