- LBA ಪ್ರಶ್ನಕೋಠಿಯನ್ನು DSERT ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
https://dsert.karnataka.gov.in/—->ಸೇವೆಗಳು ಮತ್ತು ಯೋಜನೆಗಳು—–>ಪಾಠ ಆಧಾರಿತ ಮೌಲ್ಯಾಂಕನ ಸಾಮಾಗ್ರಿ—>https://dsert.karnataka.gov.in/info-2/Lesson+Based+Assesment+material/kn - ಈಗಾಗಲೇ ಮುಗಿದಿರುವ ಪಾಠಗಳಿಗೆ ಅಂಕಗಳನ್ನು LBA ಅಂಕಗಳನ್ನು SATS ನಲ್ಲಿ ನಮೂದಿಸಬೇಕೇ?
ಹೌದು - ತೃತೀಯ ಭಾಷೆಗೆ LBA ಸಿದ್ದಪಡಿಸಲಾಗಿದೆಯೇ ?
ಹಿಂದಿ ತೃತೀಯ ಭಾಷೆಗೆ ಸಿದ್ದಪಡಿಸಲಾಗಿದೆ. - Bilingual ತರಗತಿಗಳಿಗೆ LBA ಅನ್ವಯಿಸುತ್ತಿದೆಯೇ ?ಹೌದು .ಒಂದರಿಂದ ಮೂರನೇ ತರಗತಿಯವರೆಗೆ ಈಗಾಗಲೇ ಸಿದ್ಧಪಡಿಸಲಾಗಿದೆ ನಾಲ್ಕರಿಂದ ಏಳನೇ ತರಗತಿಯವರೆಗೆ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
- ಪಠ್ಯಧಾರಿತ ಮೌಲ್ಯಂಕನಕ್ಕೆ ಎಲ್ಲಾ ಪ್ರಶ್ನೆಗಳನ್ನು LBA ಪ್ರಶ್ನಾಕೋಠಿಯಿಂದ ಕೇಳಬೇಕೆ?
ಹೌದು ಕಲಿಕಾ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ನಿರಂತರವಾಗಿ ಈ ಪ್ರಶ್ನಾಕೋಠಿಯಲ್ಲಿನ ಪ್ರಶ್ನೆಗಳು ಬಳಕೆ ಆಗಬೇಕು. ಉದ್ದಿಷ್ಟವಾರು ಮತ್ತು ಪ್ರಶ್ನೆಗಳ ಕಠಿಣತೆಯ ಮಟ್ಟಕ್ಕನುಗುಣವಾಗಿ LBA ಯಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಪ್ರಶ್ನೆಪತ್ರಿಕೆಯನ್ನು ತಾವೇ ರಚಿಸಬೇಕು. - FLN ಮಕ್ಕಳಿಗೆ LBA ಮಾಡುವುದು ಹೇಗೆ?
ಎರಡನ್ನು ಹೊಂದಾಣಿಕೆ ಮಾಡಿಕೊಂಡು ಇತರ ಮಕ್ಕಳಿಗೆ ಮಾಡುವಂತೆ ಮಾಡುವುದು. ಅವರುಗಳಿಸಿದ ಅಂಕವನ್ನು SATS ನಲ್ಲಿ ನಮೂದಿಸುವುದು. - ಉರ್ದು ಮಾಧ್ಯಮಕ್ಕೆ LBA ಪ್ರಶ್ನಾಕೋಠಿಯನ್ನು ಒದಗಿಸುವಂತೆ ಕೋರಿದೆ
ರಚನೆ ಮತ್ತು ಭಾಷಾಂತರ ಪ್ರಕ್ರಿಯೆ ನಡೆಯುತ್ತಿತ್ತು ಆದಷ್ಟು ಬೇಗ ಲಭ್ಯ ಗೊಳಿಸಲಾಗುವುದು. - ಪ್ರತಿ ಪಾಠ ,ಬ್ಲೂ ಪ್ರಿಂಟ್ ಪ್ರಕಾರ ಪ್ರಶ್ನೆ ಪತ್ರಿಕೆ ತಯಾರು ಮಾಡಬೇಕು
ಎಲ್ಲಾ ರೀತಿಯ ಪ್ರಶ್ನೆಗಳನ್ನು ಒಳಗೊಂಡಂತೆ ಪ್ರಶ್ನೆ ಪತ್ರಿಕೆ ರಚಿಸಬೇಕು.
*1ರಿಂದ 5ನೇ ತರಗತಿಯ ವರೆಗೆ 10 ಲಿಖಿತ ಮತ್ತು 5 ಮೌಖಿಕ,
- 6 ರಿಂದ 10ನೇ ತರಗತಿಯವರೆಗೆ 20 ಲಿಖಿತ ,
*ಮರುಸಿಂಚನ ಕಾರ್ಯಕ್ರಮ ಅನ್ವಯಿಸುವ ಜಿಲ್ಲೆಗಳು ಎಲ್ ಬಿಎ ಇಂದ 15 ಅಂಕಗಳ ಪ್ರಶ್ನೆಗಳು ಮತ್ತು ಮರುಸಿಂಚನದಿಂದ 5 ಅಂಕಗಳ ಪ್ರಶ್ನೆಗಳು ಒಟ್ಟು 20 ಅಂಕಗಳಿಗೆ ಪ್ರಶ್ನ ಪತ್ರಿಕೆ ಸಿದ್ಧಪಡಿಸುವುದು. - ಈ ಕಾರ್ಯಕ್ರಮ ಅನ್ವಯಿಸದ ಜಿಲ್ಲೆಗಳು 20 ಅಂಕಗಳಿಗೆ ಪ್ರಶ್ನೆಗಳನ್ನು LBAಯಿಂದ ಪರಿಗಣಿಸುವುದು.
- ರೂಪನಾತ್ಮಕ ಮೌಲ್ಯಾಂಕನ ಮತ್ತು ಸಂಕಲನಾತ್ಮಕ ಮೌಲ್ಯಾಂಕನಗಳನ್ನು ಮಾಡುವ ಅವಶ್ಯಕತೆ ಇದೆಯೇ?
ಹೌದು.
FA ಮತ್ತು SA ಗಳನ್ನು ಮಾಡುವುದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹಿಂದಿನ ವರ್ಷಗಳಿದ್ದಂತೆ ಮಾಡುವುದು ಹಾಗೂ ಇಲಾಖೆಯಿಂದ ನೀಡಿರುವ ಮೌಲ್ಯಾಂಕನ ಸುತ್ತೋಲೆಯಂತೆ ಕ್ರಮವಹಿಸುವುದು . (ಸಂಖ್ಯೆ E. 29933/DSERT/EVG/1-10 ಮೌಲ್ಯಾಂಕನ /2025-26 ದಿನಾಂಕ 17.07.2025) - LbA ಅಂಕಗಳನ್ನು ಎಸ್‌ಎಸ್‌ಎಲ್‌ಸಿ ಆಂತರಿಕ ಮೌಲ್ಯಾಂಕನ ಕ್ಕೆ ಪರಿಗಣಿಸಲಾಗುತ್ತದೆಯೇ?
ಇಲ್ಲ. ಉಳಿದಂತೆ ಹಿಂದಿನ ಸಾಲಿನಂತೆಯೇ ಮುಂದುವರಿಯುತ್ತದೆ.
11 . LBA ಮಾಡುವಾಗ ಗೈರು ಹಾಜರಿ ಅಥವಾ ನಿರಂತರ ಗೈರುಹಾಜರಿ ಆದರೆ ಮಕ್ಕಳ ಡೇಟಾ ಎಂಟ್ರಿ ಮಾಡುವುದು ಹೇಗೆ?
ಗೈರು ಹಾಜರಾದ ಮಕ್ಕಳಿಗೆ AB ಎಂದು ನಮೂದಿಸುವುದು.
- LBA ಖಾಸಗಿ ಶಾಲೆಗೆ ಇದೆಯಾ?
LBA ಕರ್ನಾಟಕ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯಿಸುತ್ತದೆ. - ಎಲ್ಲಾ ತರಗತಿಗಳ ಎಲ್ಲಾ ಹಂತದ ಮೌಲ್ಯಾಂಕನಗಳಿಗೆ ಎಲ್ ಬಿಎ ಪ್ರಶ್ನಾಕೋಠಿಯ ಪ್ರಶ್ನೆಗಳನ್ನು ಪರಿಗಣಿಸಬೇಕೇ ?ಹೌದು
- LBA ಮತ್ತು ಲೆಸನ್ ಪ್ಲಾನ್ sats ತಂತ್ರಾಂಶ ದಲ್ಲಿ ದಾಖಲಿಸುವುದು ಶಿಕ್ಷಕರಿಗೆ ಹೊರೆಯಲ್ಲವೇ?
ಹೊರೆಯಲ್ಲ. ಈ ಹಿಂದೆಯೂ ಘಟಕ ಪರೀಕ್ಷೆಗಳನ್ನು ನಿರ್ವಹಿಸಿ ಪ್ರತ್ಯೇಕ ಪುಸ್ತಕಗಳಲ್ಲಿ ನಿರ್ವಹಿಸಲಾಗುತ್ತಿತ್ತು. ಈಗ ಅದನ್ನೇ sats ತಂತ್ರಾಂಶದಲ್ಲಿ ನಮೂದಿಸಿದರೆ ಸಾಕು. ಅದನ್ನೇ ಪ್ರಿಂಟ್ ತೆಗೆದು ಇಟ್ಟುಕೊಳ್ಳಬಹುದು. ಇದು ಟೀಚರ್ ಫ್ರೆಂಡ್ಲಿಯಾಗಿದ್ದು, ದಾಖಲಿಸಿದ ಎಲ್ ಬಿಎ ಅಂಕಗಳಿಗನುಗುಣವಾಗಿ ಹಲವಾರು ರೀತಿಯ ವಿಶ್ಲೇಷಣೆ ವರದಿಯನ್ನು ಪಡೆದು ಮಕ್ಕಳ ಕಲಿಕೆ ಸಾಧಿಸಲು ಕಾರ್ಯತಂತ್ರ ಗಳನ್ನು ರೂಪಿಸಬಹುದು ಹಾಗೂ ಬರವಣಿಗೆ ಕೆಲಸ ಕಡಿಮೆಯಾಗಿ ಕಲಿಕೆಯನ್ನು ಅನುಕೂಲಿಸಲು ಹೆಚ್ಚಿನ ಸಮಯ ಲಭ್ಯವಾಗುತ್ತದೆ. - SATS ನಲ್ಲಿ LBA ಅಂಕಗಳನ್ನು ವಿಭಾಗವಾರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆಯೇ?
ಹೌದು - ಪಾಠ ಆಧಾರಿತ ಮೌಲ್ಯಂಕನವನ್ನು 25 ಅಂಕಗಳಿಗೆ ಬದಲಾಗಿ 10 ಅಂಕಗಳಿಗೆ ಲಿಖಿತ ಮತ್ತು 10 ಅಂಕಗಳಿಗೆ ಮೌಕಿಕ ಒಟ್ಟು 20 ಅಂಕಗಳಿಗೆ ಮಾಡಲು ಅವಕಾಶವಿದೆಯೇ
*1ರಿಂದ 5ನೇ ತರಗತಿಯ ವರೆಗೆ 10 ಲಿಖಿತ ಮತ್ತು 5 ಮೌಖಿಕ,
- 6 ರಿಂದ 10ನೇ ತರಗತಿಯವರೆಗೆ 20 ಲಿಖಿತ ,
*ಮರುಸಿಂಚನ ಕಾರ್ಯಕ್ರಮ ಅನ್ವಯಿಸುವ ಜಿಲ್ಲೆಗಳು ಎಲ್ ಬಿಎ ಇಂದ 15 ಅಂಕಗಳ ಪ್ರಶ್ನೆಗಳು ಮತ್ತು ಮರುಸಿಂಚನದಿಂದ 5 ಅಂಕಗಳ ಪ್ರಶ್ನೆಗಳು ಒಟ್ಟು 20 ಅಂಕಗಳಿಗೆ ಪ್ರಶ್ನ ಪತ್ರಿಕೆ ಸಿದ್ಧಪಡಿಸುವುದು. - ಈ ಕಾರ್ಯಕ್ರಮ ಅನ್ವಯಿಸದ ಜಿಲ್ಲೆಗಳು 20 ಅಂಕಗಳಿಗೆ ಪ್ರಶ್ನೆಗಳನ್ನು LBAಯಿಂದ ಪರಿಗಣಿಸುವುದು.
- ಎಲ್ ಬಿ ಎ ಪ್ರಶ್ನೆ ಪತ್ರಿಕೆ ಯಾವಾಗ ನೀಡುತ್ತೀರಿ ?
DSERT ವೆಬ್ಸೈಟ್ನಲ್ಲಿ ಲಭ್ಯವಿದೆ - ಭಾಷೆಯಲ್ಲಿ ಪ್ರತಿಯೊಂದು ಪಾಠ ಮತ್ತು ಒಂದು ಪದ್ಯವನ್ನು ಸೇರಿಸಿ ಪರಿಗಣಿಸಬಹುದೇ ?
ಇಲ್ಲ
19 ಎಲ್ಲಾ ತರಗತಿಗಳ ಸಮಾಜ ವಿಜ್ಞಾನ ವಿಷಯಗಳಲ್ಲಿ ಪಾಟಗಳ ಸಂಖ್ಯೆ ಹೆಚ್ಚಾಗಿದ್ದು ಎರಡು ಅಥವಾ ಮೂರು ಪಾಠಗಳನ್ನು ಸೇರಿಸಿ LBA ಮಾಡಬಹುದೇ?
ಇಲ್ಲ
SATS issues
SATS ತಂತ್ರಾಂಶದಲ್ಲಿ ಲಾಗಿನ್ ಆಗಲು ಓಟಿಪಿ ಎಂಟ್ರಿ ಮಾಡಲು ಆಗುತ್ತಿಲ್ಲ.
EEDS ಮತ್ತು SATS ನಲ್ಲಿ ಮಾಹಿತಿ update ಆಗಿದ್ದಲ್ಲಿ entry ಮಾಡಬಹುದು.
LBA ಅಂತ ದಾಖಲಿಸಲು ಅನುದಾನಿತ ಶಿಕ್ಷಕರಿಗೆ SATS Login ID ಯಾವುದು
HRMS ಸಂಖ್ಯೆಯು login ID ಆಗಿರುತ್ತದೆ.
Lesson plan ಮತ್ತು LBA ದಾಖಲಿಸಲು ಮೊಬೈಲ್ ನಲ್ಲಿ ಅವಕಾಶವಿದೆಯೇ?
ಅವಕಾಶವಿದೆ.
ವಿದ್ಯಾರ್ಥಿಗಳ ಪೂರ್ಣ ಹೆಸರು LBA ನಲ್ಲಿ ಬರುತ್ತಿಲ್ಲ.
ಕ್ರಮವಹಿಸಲಾಗಿದೆ.