ಶಿಕ್ಷಕರ ಮಾಹಿತಿಗಾಗಿ ವಿಶೇಷ ಸುದ್ದಿ
DIKSHA ಆ್ಯಪ್ ಮೂಲಕ ಆನ್‌ಲೈನ್ ಕೋರ್ಸ್‌ಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಶಿಕ್ಷಕರು ಅನುಸರಿಸಬೇಕಾದ ನೋಂದಣಿ ಮತ್ತು ಲಾಗಿನ್ ಪ್ರಕ್ರಿಯೆಯ ಕುರಿತು ಮಾಹಿತಿ.
ಶಿಕ್ಷಣ ಇಲಾಖೆಯ DIKSHA ವೇದಿಕೆಯ ಮೂಲಕ ಲಭ್ಯವಿರುವ ಆನ್‌ಲೈನ್ ಕೋರ್ಸ್‌ಗಳಲ್ಲಿ ಭಾಗವಹಿಸಲು ಬಯಸುವ ಶಿಕ್ಷಕರು ಮೊದಲು ತಮ್ಮ ಮೊಬೈಲ್‌ನಲ್ಲಿ ಅಗತ್ಯವಿರುವ ಎರಡು ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು, ಹಂತ ಹಂತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಹಂತ ಹಂತದ ಕಾರ್ಯವಿಧಾನ
1. ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ
Google Play Store ತೆರೆಯಿರಿ. ಕೆಳಗಿನ ಎರಡು ಆ್ಯಪ್‌ಗಳನ್ನು ಸರ್ಚ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.
- DIKSHA – School Education App
- DIKSHA Courses App
2. ಹಳೆಯ ಬಳಕೆದಾರರ ಆಯ್ಕೆ
- ಹಳೆ ಬಳಕೆದಾರರು (Existing User) ಆಯ್ಕೆ ಮಾಡಿಕೊಳ್ಳಿ.
- Login ಆಯ್ಕೆ ಮಾಡಿರಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಿ.
3. ಪಾಸ್ವರ್ಡ್ ಮರುಹೊಂದಿಸುವಿಕೆ
- Forget Password ಆಯ್ಕೆ ಮಾಡಿರಿ.
- ಮತ್ತೊಮ್ಮೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಿ.
- ಮೊಬೈಲ್‌ಗೆ ಬಂದ OTP ನಮೂದಿಸಿರಿ.
- ಹೊಸ Password ರಚಿಸಿ Reset ಮಾಡಿಕೊಳ್ಳಿ.
- Back to Application ಆಯ್ಕೆ ಮಾಡಿರಿ.
4. ಲಾಗಿನ್ ಪ್ರಕ್ರಿಯೆ
– ಮೊಬೈಲ್ ಸಂಖ್ಯೆ ಮತ್ತು ಹೊಸ Password ಬಳಸಿ Login ಆಗಿರಿ.
5. ಪ್ರೊಫೈಲ್ ಅಪ್‌ಡೇಟ್ ಮಾಡುವುದು
ಲಾಗಿನ್ ಆದ ನಂತರ Profile Update ಮಾಡಿಕೊಳ್ಳಿ.
- NAME: ಹೆಸರನ್ನು ಕಡ್ಡಾಯವಾಗಿ ಇಂಗ್ಲಿಷ್‌ನ CAPITAL LETTERS ನಲ್ಲಿ ನಮೂದಿಸಬೇಕು. ಯಾವುದೇ ಗ್ಯಾಪ್ ಅಥವಾ ಡಾಟ್ ಹಾಕಬಾರದು. Initial ಅನ್ನು ಕೊನೆಯ ಅಕ್ಷರದ ಕಾಲಂನಲ್ಲಿ ನಮೂದಿಸಬೇಕು.
- Gender: ಲಿಂಗವನ್ನು ಆಯ್ಕೆ ಮಾಡಿರಿ.
- Date of Birth: ಜನ್ಮ ದಿನಾಂಕ ನಮೂದಿಸಿರಿ.
- Select Role: ನಿಮ್ಮ ಪಾತ್ರವನ್ನು ಆಯ್ಕೆ ಮಾಡಿರಿ.
- ಎಲ್ಲ ವಿವರಗಳನ್ನು ನಮೂದಿಸಿದ ನಂತರ Save and Update ಮಾಡಿರಿ.
6. ಆನ್‌ಲೈನ್ ಕೋರ್ಸ್ ಆಯ್ಕೆ ಮತ್ತು ನೋಂದಣಿ
- COURSES ಆಯ್ಕೆ ಮಾಡಿರಿ.
- Explore Course ತೆರೆಯಿರಿ.
- ಅಗತ್ಯವಿರುವ Course Name ನಮೂದಿಸಿ Search ಮಾಡಿರಿ.
- ಸಂಬಂಧಪಟ್ಟ ಕೋರ್ಸ್ ಆಯ್ಕೆ ಮಾಡಿರಿ.
- Nomination ಮೂಲಕ ನೋಂದಣಿ ಮಾಡಿಕೊಳ್ಳಿ.
- ನಂತರ Course ಮುಂದುವರಿಸಿ ಪೂರ್ಣಗೊಳಿಸಿರಿ.
ಶಿಕ್ಷಕರಿಗೆ ಪ್ರಮುಖ ಸೂಚನೆ
DIKSHA ಆನ್‌ಲೈನ್ ಕೋರ್ಸ್‌ಗಳಲ್ಲಿ ಭಾಗವಹಿಸುವ ಶಿಕ್ಷಕರು ಮೇಲಿನ ಹಂತಗಳನ್ನು ಕ್ರಮವಾಗಿ ಅನುಸರಿಸಿ ತಮ್ಮ ಲಾಗಿನ್ ಮತ್ತು ಪ್ರೊಫೈಲ್ ವಿವರಗಳನ್ನು ಸರಿಯಾಗಿ ಅಪ್‌ಡೇಟ್ ಮಾಡಿಕೊಳ್ಳಬೇಕು. ಕೋರ್ಸ್ ಆಯ್ಕೆ ಮಾಡಿದ ನಂತರ Nomination ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಲಿಕೆಯನ್ನು ಮುಂದುವರಿಸಬೇಕು.
ಶಿಕ್ಷಕ ಮಿತ್ರರು ಈ ಮಾಹಿತಿಯನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿ.
