Step 1
ನೀಡಿರುವ ಲಿಂಕ್ ಬಳಸಿ ವೆಬ್ಸೈಟ್ ಗೆ ಭೇಟಿ ನೀಡಬೇಕು. Teacher ಎಂಬ option ಮೇಲೆ ಕ್ಲಿಕ್ ಮಾಡಬೇಕು. User name ಇದ್ದಲ್ಲಿ KGID ನಂಬರ್ ಎಂಟ್ರಿ ಮಾಡಬೇಕು. ನಂತರ send OTP ಮೇಲೆ click ಮಾಡಬೇಕು.

step 2
ಇಲಾಖೆಗೆ ನೀಡಿದ ನಿಮ್ಮ ನಂಬರ್ ನಂಬರ್ ಗೆ OTP ಬರ್ತದೆ. OTP ಯನ್ನು ತುಂಬಿಸಿ verify OTP ಮೇಲೆ click ಮಾಡಿ. ನಿಮ್ಮ ಹೆಸರನ್ನು ಒಳಗೊಂಡ ಹೊಸ ಪೇಜ್ ತೆರೆದುಕೊಳ್ಳುತ್ತದೆ.
Step 3
ಮೇಲೆ ಇರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. ಮೂರು option ಕಾಣುತ್ತದೆ. Teacher , Lesson plan ಹಾಗೂ assessment ಎಂಬ option ಕಾಣಿಸುತ್ತದೆ. Teacher ಎಂಬಲ್ಲಿ click ಮಾಡಿದಾಗ ನಿಮ್ಮ ವೈಯಕ್ತಿಕ ಮಾಹಿತಿ ಸಿಗುತ್ತದೆ. Lesson plan ಮೇಲೆ click ಮಾಡಿದಾಗ calendar ಕಾಣಿಸುತ್ತದೆ. Calendar ನಲ್ಲಿ ದಿನಾಂಕದ ಮೇಲೆ ಕ್ಲಿಕ್ ಮಾಡಿ ಪ್ರತಿದಿನ ಯಾವ activities ಮಾಡುತ್ತೀರಿ ಎಂದು ನಮೂದಿಸಬಹುದು. Save ಕೊಡಬೇಕು.
Step 4
LBA ಅಂಕಗಳನ್ನು ನಮೂದಿಸಲು LBA ಮೇಲೆ click ಮಾಡಿ. ನೀಡಿರುವ ಮಾಹಿತಿ ತುಂಬಿಸಬೇಕು. ತರಗತಿ ವಿಷಯ ದಿನಾಂಕ ಇತ್ಯಾದಿ. ನಂತರ search click ಮಾಡಬೇಕು. ಮಕ್ಕಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ಒಂದು page ನಲ್ಲಿ 10 ಮಕ್ಕಳು ಕಾಣಿಸುತ್ತಾರೆ. Next page ಮೇಲೆ click ಮಾಡಿದಾಗ ಉಳಿದ ಮಕ್ಕಳ ಪಟ್ಟಿ ಕಾಣಿಸುತ್ತದೆ. ನಿಮ್ಮ test 25 ಅಂಕಗಳಿಗೆ ಮಾಡಬೇಕು. 25 ರಲ್ಲಿ ಎಷ್ಟು ಅಂಕ ಎಂದು ನಮೂದಿಸಬೇಕು. ಗ್ರೇಡ್ ಅದರಲ್ಲಿ ನಮೂದಾಗುತ್ತದೆ. ಎಲ್ಲರ ಅಂಕ ನಮೂದಿಸಿದ ನಂತರ Save ಕೊಟ್ಟರೆ ಅಂಕ ಎಂಟ್ರಿ ಆಗುತ್ತದೆ.





