ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ- ಇದರ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಎಲ್ಲಾ ತಾಲೂಕು ಘಟಕಗಳ ವತಿಯಿಂದ ಗುರುಸೇವೆಯ ಮೊದಲ ಕಾರ್ಯಕ್ರಮವಾಗಿ ಎರಿಯರ್ಸ್ ಬಾಕಿ ಇರುವ ಶಿಕ್ಷಕರ ಮಾಹಿತಿ ಸಂಗ್ರಹಿಸಿ, ಬಾಕಿ ಇರುವ ಎರಿಯರ್ಸ್ ಪಡೆದುಕೊಳ್ಳುವ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಿಯರ್ಸ್ ಬಾಕಿ ಇರುವ ಶಿಕ್ಷಕರು ಸರಿಯಾದ ಮಾಹಿತಿ ನೀಡಿ ಸಹಕರಿಸಲು ವಿನಂತಿ. ಸೂಚನೆಗಳು: ಈ ಫಾರ್ಮ್‌ನಲ್ಲಿ ತಮ್ಮ ವಿವರಗಳನ್ನು ತುಂಬಿ ಕಳುಹಿಸಿ. ಜತೆಗೆ ತಮ್ಮ ವಲಯದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿಯನ್ನು ಸಿದ್ಧಪಡಿಸಿ, ಅದರ ಪೊಟೊವನ್ನು ಸ್ಕ್ಯಾನ್ ಮಾಡಿ, ಇದೇ ಪಾರ್ಮ್ನ ಕೊನೆಗೆ ಅಪ್ಲೋಡ್ ಮಾಡಿ. ತಾವು ಸಿದ್ಧಪಡಿಸಿರುವ ಮನವಿ ಮತ್ತು ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ತಾಲೂಕು ಅಥವಾ ಕ್ಲಸ್ಟರ್ ಪ್ರತಿನಿಧಿಗಳು ತಮ್ಮಿಂದ ಅದನ್ನು ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಗೆ ನೀಡುವ ವ್ಯವಸ್ಥೆ ಮಾಡುತ್ತಾರೆ. ಮಾಹಿತಿಯನ್ನು ಕನ್ನಡದಲ್ಲಿಯೇ ತುಂಬಿ. ಪೂರಕ ದಾಖಲೆಗಳು ಇದ್ದಲ್ಲಿ ಅದನ್ನು ಸೇರಿಸಿ ಮಾಹಿತಿಗಾಗಿ ಮತ್ತು ತಾಂತ್ರಿಕ ಸಹಕಾರಕ್ಕೆ ತಮ್ಮ ವಲಯ ಶಿಕ್ಷಕರ ಸಂಘದ ಪ್ರತಿನಿಧಿಗಳನ್ನು ಸಂಪರ್ಕಿಸಿ. ಮಾಹಿತಿಯನ್ನು ದಿನಾಂಕ 27-02-2021 ರ ಒಳಗಾಗಿ ನೀಡುವಂತೆ ಈ ಮೂಲಕ ನೀಡುವಂತೆ ಈ ಮೂಲಕ ವಿನಂತಿಸಿದೆ.
Arrears ಬಾಕಿ ಇರುವ ಶಿಕ್ಷಕರು ಇಲ್ಲಿ ಕ್ಲಿಕ್ ಮಾಡಿ