---Advertisement---

10ನೇ ತರಗತಿಯ ತರಗತಿ ಪ್ರಕ್ರಿಯೆ ಹಾಗೂ ಮೌಲ್ಯಾಂಕನ ಪ್ರಕ್ರಿಯೆಯಲ್ಲಿ ಪ್ರಶ್ನಕೋಠಿಯನ್ನು ಬಳಸಿಕೊಳ್ಳುವ ಬಗ್ಗೆ You tube live ಕಾರ್ಯಕ್ರಮವನ್ನು ಆಯೋಜಿಸಿರುವ ಕುರಿತು

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ 2025- 26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು ತರಗತಿ ಪ್ರಕ್ರಿಯೆ ಹಾಗೂ ಮೌಲ್ಯಾಂಕನಗಳಲ್ಲಿ ನಿರಂತರವಾಗಿ ಅಳವಡಿಸುವ ಸಂಬಂಧ ಇಲಾಖೆ ನಿರ್ದೇಶನದಂತೆ LBA ಪ್ರಶ್ನಕೋಠಿಯನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಲಾಗಿದ್ದು DSERT ವೆಬ್ಸೈಟ್ನಲ್ಲಿ ಅಳವಡಿಸಲಾಗಿದೆ.
ಮುಂದುವರೆದು ಸದರಿ ಪ್ರಶ್ನೆ ಕೋಠಿಯನ್ನು ತರಗತಿ ಪ್ರಕ್ರಿಯೆ ಹಾಗೂ ಮೌಲ್ಯಾಂಕನಗಳಲ್ಲಿ ನಿರಂತರವಾಗಿ ಬಳಸುವ ಸಂಬಂಧ ಮಾರ್ಗದರ್ಶನ ನೀಡಲು ಹಾಗೂ ಚರ್ಚಿಸಲು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೇತೃತ್ವದಲ್ಲಿ ದಿನಾಂಕ 9.07.2025ರಂದು ಸಂಜೆ 4.00 ರಿಂದ 6.00 ಗಂಟೆಯವರೆಗೆ ಯೂಟ್ಯೂಬ್ ಲೈವ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ಕಚೇರಿಯ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವುದು ಹಾಗು ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಈ ಲಿಂಕ್ ಬಳಸಿ ಕಡ್ಡಾಯವಾಗಿ ಭಾಗವಹಿಸುವಂತೆ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ರವರು ಸೂಚಿಸುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment