ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

WhatsApp Group Join Now
Telegram Group Join Now

ಗುರುಭ್ಯೋ ನಮಃ

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20230131 WA0012 min

ಶ್ರೀ ಜನಾರ್ಧನ ಗೌಡ ಟಿ
ದೈಹಿಕ ಶಿಕ್ಷಣ ಶಿಕ್ಷಕರು
ಸ.ಉ.ಪ್ರಾ ಶಾಲೆ ನೆಲ್ಯಾಡಿ.
ಕಡಬ ತಾಲೂಕು

ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ತೋಟ ಮನೆಯಲ್ಲಿ ಶ್ರೀ ಸಾಂತಪ್ಪ ಗೌಡ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಪಾಲಡ್ಕದಲ್ಲಿ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಬಳ್ಳಮಂಜದಲ್ಲಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ವಿದ್ಯಾಲಯ ಬೆಳ್ತಂಗಡಿಯಲ್ಲಿ ಪಡೆದು, ದೈಹಿಕ ಶಿಕ್ಷಣ ತರಬೇತಿಯನ್ನು ಪ್ರತಿಷ್ಠಿತ ತರಬೇತಿ ವಿದ್ಯಾ ಸಂಸ್ಥೆಯಾದ ಬೆಂಗಳೂರಿನ Y M C A ಕಾಲೇಜಿನಲ್ಲಿ ಪೂರೈಸಿ, 1985 ರಲ್ಲಿ ಸುಳ್ಯ ತಾಲೂಕಿನ ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಪ್ರಾರಂಭಿಸಿ ಅಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 1990 ರಲ್ಲಿ ಪುತ್ತೂರು ತಾಲೂಕಿನ ನೆಲ್ಯಾಡಿ ಶಾಲೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿದ ಇವರು ಸ್ಕೌಟ್ ವಿಭಾಗದಲ್ಲಿ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯನ್ನು ಪಡೆದು ಶಾಲೆಯಲ್ಲಿ ಸ್ಕೌಟ್ ಘಟಕವನ್ನು ಆರಂಭಿಸಿ ಸ್ಕೌಟ್ ವಿದ್ಯಾರ್ಥಿಗಳನ್ನು ರಾಜ್ಯ ಪುರಸ್ಕಾರ , ರಾಷ್ಟ್ರಪತಿ ಪುರಸ್ಕಾರ ಪಡೆದ
ಸ್ಕೌಟ್ ಗಳಾಗಿ ತಯಾರುಗೊಳಿಸಿರುತ್ತಾರೆ. ಇವರ ಗರಡಿಯಲ್ಲಿ ಪಳಗಿದ ಕ್ರೀಡಾಪಟುಗಳು ಜಿಲ್ಲೆ,ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇವರ ಸೇವೆಗಾಗಿ 2001-2002ನೇ ಸಾಲಿನಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ 2005 ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230131 WA0011 min

ಶ್ರೀಮತಿ ಸಾವಿತ್ರಿ ಪಿ ಎನ್
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಕ್ಕಪಟ್ಟಣ 03
ಮಂಗಳೂರು ಉತ್ತರ

ಇವರು ದಿನಾಂಕ 10.08.1988 ರಲ್ಲಿ ಸೇವೆಗೆ ಸೇರಿ ಸ.ಹಿ.ಪ್ರಾ.ಶಾಲೆ ಬನ್ನೂರು ಹಾಗೂ ಸ.ಹಿ.ಪ್ರಾ.ಶಾಲೆ ಕೆಳಗೂರು ಮೂಡಿಗೆರೆ ಹಾಗೂ ಸ.ಹಿ.ಪ್ರಾ.ಶಾಲೆ ಗಾಂಧಿನಗರ ಮಂಗಳೂರು ಉತ್ತರ ವಲಯ ಹಾಗೂ ಸ.ಹಿ.ಪ್ರಾ.ಶಾಲೆ ಗೋವಿಂದೂರು ಬೆಳ್ತಂಗಡಿ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಬೊಕ್ಕಪಟ್ಟಣ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230131 091739 min

ಶ್ರೀಮತಿ ಸರೋಫಿ ಜ್ಯೂಲಿಯೆಟ್ ಡಿಸೋಜಾ
ಸ.ಹಿ.ಪ್ರಾ.ಶಾಲೆ ಉಲ್ಲಂಜೆ
ಮಂಗಳೂರು ಉತ್ತರ

ದಿನಾಂಕ 26.07.1993 ರಲ್ಲಿ ಸೇವೆಗೆ ಸೇರಿದ ಇವರು ಸ.ಹಿ.ಪ್ರಾ.ಶಾಲೆ ಮುಚ್ಚೂರು ಹಾಗೂ ಸ.ಹಿ.ಪ್ರಾ.ಶಾಲೆ ಉಲ್ಲಂಜೆ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20230131 WA0010 min

ಶ್ರೀಮತಿ ಉದಯ ಕುಮಾರಿ ಎಂ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಪುತ್ತೂರು ತಾಲೂಕು ದ.ಕ‌ ಜಿಲ್ಲೆ

ತಂದೆ: ಶ್ರೀ ಎಂ ಶಂಕರನಾರಾಯಣ
ತಾಯಿ: ಶ್ರೀಮತಿ ಲಕ್ಷ್ಮೀ
ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪೆರ್ನಾಜೆ ಸರ್ಕಾರಿ ಶಾಲೆಯಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಸರ್ವೋದಯ ಶಿಕ್ಷಕರ ತರಬೇತಿ ಕೇಂದ್ರ ವಿರಾಜಪೇಟೆ ಇಲ್ಲಿ ಪಡೆದರು. 16-08-1998ರಂದು ಸ.ಹಿ.ಪ್ರಾ.ಶಾಲೆ ಮುರ ಪುತ್ತೂರು ತಾಲೂಕಿನಲ್ಲಿ ಸಹಶಿಕ್ಷಕಿಯಾಗಿ ಶಿಕ್ಷಣ ಇಲಾಖೆಗೆ ಸೇರಿದರು.ಅಲ್ಲಿಂದ ವರ್ಗಾವಣೆ ಹೊಂದಿ ಸ.ಹಿ.ಪ್ರಾ.ಶಾಲೆ ಕಬಕಕ್ಕೆ ಬಂದರು. ಅಲ್ಲಿಂದ ರಾಗಿಕುಮೇರಿ ಶಾಲೆಗೆ ತದನಂತರ ವರ್ಗಾವಣೆ ಪಡೆದು ಇದುವರೆಗೂ ಹಂಟ್ಯಾರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಸುಮಾರು 25 ವರ್ಷಗಳ ಕಾಲದ ವೃತ್ತಿ ಜೀವನದಿಂದ ನಿವೃತ್ತರಾಗುತ್ತಿರುವರು. ಅಪಾರ ಶಿಷ್ಯ ಬಳಗವನ್ನು ಹೊಂದಿರುವ ತಾವು ಅವರ ಬಾಳಿಗೆ ಬೆಳಕಾಗದವರು. ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ, ತಾಲೂಕು ಮಟ್ಟದ ಕ್ರೀಡೆಗಳಲ್ಲಿ ಬಹುಮಾನ ಪಡೆದ ಹೆಗ್ಗಳಿಕೆ ತಮ್ಮದು. ನೃತ್ಯ, ನಾಟಕಗಳಲ್ಲಿ ವಿಶೇಷ ಆಸಕ್ತಿ. ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಬಹುಮಾನ ಗಳಿಕೆ. ಹಿರಿಯ ಪುತ್ರ ಎಂ ಆರ್ ವಿಕ್ರಂ ಮತ್ತು ಸೊಸೆ ಕೆನಡಾ ದಿಲ್ಲಿ ಸಾಫ್ಟವೇರ್ ಇಂಜನಿಯರ್ ಆಗಿದ್ದಾರೆ.ಕಿರಿಯ ಪುತ್ರಿ ಎಂ ಆರ್ ಪೂಜಾರವರು ಇಟಲಿಯ ಮಿಲಾನ್ ನಲ್ಲಿ ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೊಸೆ ಮೊಮ್ಮಗಳೊಂದಿಗೆ ತಮ್ಮ ನಿವೃತ್ತ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ನಿರಂತರ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಗೌರವದ ಸ್ಥಾನ ಪಡೆದ ತಮ್ಮೆಲ್ಲರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.

WhatsApp Group Join Now
Telegram Group Join Now
Sharing Is Caring:

Leave a Comment