ವರ್ಗಾವಣೆ ಅದ್ಯತೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ
ವರ್ಗಾವಣೆಗಾಗಿ ಅರ್ಜಿ ಸಲ್ಲಿಸುತ್ತಿರುವ ಶಿಕ್ಷಕರಿಗಾಗಿ ಪ್ರಮುಖ ಮಾಹಿತಿ
ಆತ್ಮೀಯರೇ ಶಿಕ್ಷಕರ ವರ್ಗಾವಣೆಗಾಗಿ ಅರ್ಜಿ ಸಲ್ಲಿಸುವ ದಿನಾಂಕ ಈ ಹಿಂದೆ ಹೊರಡಿಸಿರುವ ವೇಳಾಪಟ್ಟಿಯಂತೆ ನಾಳೆ ಮುಕ್ತಾಯಗೊಳ್ಳಲಿದೆ. ಆದಾಗ್ಯೂ ಕೂಡ ನಾವು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿದಂತೆ, ಇನ್ನೂ ಕೂಡ ಅರ್ಜಿ ಸಲ್ಲಿಸಲು Software Open ಇದ್ದು, ತಾವು ನಿರಾತಂಕವಾಗಿ ಅರ್ಜಿಗಳನ್ನು ನಿರಂತರವಾಗಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ. ಅವಧಿ ವಿಸ್ತರಣೆಯಾಗುತ್ತಿದೆಯಾ? ಆದೇಶ ಆಗುತ್ತಿದೆಯಾ? ಎಂಬ ಪ್ರಶ್ನೆಗಳು ಬೇಡ. ಖಂಡಿತವಾಗಿಯೂ ವರ್ಗಾವಣೆ ಅರ್ಜಿ ಸಲ್ಲಿಸಲು software open ಇರುತ್ತದೆಯೆಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಇನ್ನುಳಿದಂತೆ ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶದಂತೆ Software update ಮಾಡಲು ಆದೇಶಕ್ಕಾಗಿ ಸರ್ಕಾರದ ಹಂತಕ್ಕೆ ಪತ್ರ ರವಾನೆಯಾಗಿದ್ದು ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ಆ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶಗಳು Software ನಲ್ಲಿ ಲಭ್ಯವಾಗುತ್ತದೆ ಎಂಬ ಅಂಶವನ್ನೂ ಕೂಡಾ ಹೈದರಾಬಾದ್ ಕರ್ನಾಟಕದಿಂದ ವರ್ಗಾವಣೆ ಬಯಸುತ್ತಿರುವ ಶಿಕ್ಷಕರ ಗಮನಕ್ಕೆ ತರಬಯಸುತ್ತೇವೆ.