---Advertisement---

HRMS -2 ತಂತ್ರಾಂಶದಲ್ಲಿ ವೇತನ ಸೆಳೆಯುವ ನೌಕರರು ಹಬ್ಬದ ಮುಂಗಡ ಪಡೆಯಲು ಹಾಗೂ ಗಳಿಕೆ ರಜೆಯ ನಗ ಧಿೀಕರಣಕ್ಕಾಗಿ ESS ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವ ಬಗ್ಗೆ,

By kspstadk.com

Published On:

Follow Us
WhatsApp Group Join Now
Telegram Group Join Now

ರಾಜ್ಯದಲ್ಲಿರುವ ಎಲ್ಲಾ ಸಚಿವಾಲಯಗಳ ಇಲಾಖೆಗಳ ಪೈಕಿ ಹೆಚ್ ಆರ್ ಎಂ ಎಸ್ 2 ನಾ ತಂತ್ರಾಂಶವನ್ನು ಬಳೆಸಿ ಈಗಾಗಲೇ ವೇತನ ಸೆಳೆಯುತ್ತಿರುವ ನೌಕರರಿಗೆ ESS ( employment self service) ನ web portal https //hrms.karnataka.gov.in login ಅಥವಾ Android ನ ESS application ( APK name: gov.ka.ESS.app ) ನ ಬಳಸಿ ಸದರಿ ನೌಕರರ/ಅಧಿಕಾರಿಗಳ ಲಾಗಿನ್ ಮೂಲಕ ಈ ಕೆಳಕಂಡ ವಿವರಗಳನ್ನು ವೀಕ್ಷಿಸಬಹುದು.
1.ವೇತನ ಪಟ್ಟಿ

  1. ರಜಾ ವಿವರಗಳು
    a. ಗಳಿಕೆ ರಜೆ
    b. ಅರ್ಥವೇತನ ರಜೆ
    c. ಮುಂಬರುವ ಸಾರ್ವಜನಿಕ ರಜಾ ದಿನಗಳು
  2. ಸಾಲದ ವಿವರಗಳು
    a. ಸಕ್ರಿಯ ಸಾಲಗಳು
    b. ಮುಕ್ತಗೊಳಿಸಿದ ಸಾಲಗಳು
  3. ಮುಂಗಡ ವಿವರಗಳು
    a. ಸಕ್ರಿಯ ಮುಂಗಡಗಳು
    b. ಮುಚ್ಚಿದ ಮುಂಗಡಗಳು
    c. ಮುಂಗಡ ಅರ್ಜಿಗಳು
  4. ವಿಮೆ
    a. ಸಕ್ರಿಯ ವಿಮೆ
    b. ಒಟ್ಟು ಪ್ರೇಮಿಯಂ ಮೊತ್ತ
  5. ವಸೂಲಾತಿ .
    a. ಸಕ್ರಿಯ ವಸುಲಾತಿಗಳು
    b. ಸಕ್ರಿಯ ಸ್ಥಳೀಯ ವಸುಲಾತಿಗಳು
    c. ಮುಕ್ತಗೊಳಿಸಿದ ವಸುಲಾತಿಗಳು.
  6. ಡಿಜಿಲಾಕರ್
  7. ನೌಕರರ/ ಅಧಿಕಾರಿಗಳ ಪ್ರೊಫೈಲ್
    b. ನೌಕರರ /ಅಧಿಕಾರಿಯ ಮಾಹಿತಿ
    c. ಸಂಯೋಜನೆಗಳು
    d. ಸಹಾಯ ಮತ್ತು ಬೆಂಬಲ
  8. ಹಬ್ಬದ ಮುಂಗಡ
  9. ಗಳಿಕೆ ರಜೆ ನಗಧೀಕರಣ

ಮೇಲ್ಕಂಡ ವಿವರಗಳ ಕ್ರಮ ಸಂಖ್ಯೆ 1 ರಿಂದ 8 ರಲ್ಲಿರುವಂತೆ ESS ಲಾಗಿನ್ ಮೂಲಕ ಸದರಿ ನೌಕರರು ಅಧಿಕಾರಿಗಳು ಅವರ ವೇತನದ ವಿವರಗಳನ್ನು ವೀಕ್ಷಿಸಲು ಮಾತ್ರ ಅನುವು ಮಾಡಿಕೊಡಲಾಗಿದೆ. ಮುಂದುವರೆದು ಕ್ರಮ ಸಂಖ್ಯೆ 9 ಮತ್ತು 10 ರಲ್ಲಿರುವಂತೆ HRMS-2 ಕಾಲಕಾಲಕ್ಕೆ ಹೊಸ ಮಾಡ್ಯುಲ್ ಗಳ ಜೋಡಣೆಯಿಂದ ನವೀಕರಿಸುತ್ತಿರುವ ಹಿನ್ನೆಲೆಯಲ್ಲಿ HRMS- 2 ತಂತ್ರಾಂಶವನ್ನು ಬಳಸಿ ವೇತನವನ್ನು ಸೆಳೆಯುತ್ತಿರುವ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ(FA) ಪಡೆಯಲು ಅರ್ಜಿಯನ್ನು ಮತ್ತು ಗಳಿಕೆ ರಜೆಯ ನಗದೀಕರಣಕ್ಕಾಗಿ ಅರ್ಜಿಯನ್ನು ಅವರ ಲಾಗಿನ್ ಬಳಸಿ ESS ಅಪ್ಲಿಕೇಶನ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಕೋರಿದೆ.
ಇದರ ಬಗ್ಗೆ ತಮ್ಮ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಡಿಡಿಓಗಳಿಗೆ ಸೂಕ್ತ ಮಾರ್ಗಸೂಚಿಯನ್ನು /ನಿರ್ದೇಶನವನ್ನು ಕೋರಿದೆ. HRMS-2 ತಂತ್ರಾಂಶವನ್ನು ಬಳಸಿ ವೇತನ ಸೆಳೆಯುತ್ತಿರುವ ನೌಕರರ ಸಹಾಯಕ್ಕಾಗಿ ಹಬ್ಬದ ಮುಂಗಡ ಪಡೆಯಲು ಮತ್ತು ಗಳಿಕೆ ರಜೆ ನಗಧೀಕರಣಕ್ಕಾಗಿ ESS ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವ ವಿಧಾನದ ಕೈಪಿಡಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಈ ಕೈಪಿಡಿಯ ಸಾಫ್ಟ್ ಪ್ರತಿಯನ್ನು HRMS-2 ತಂತ್ರಾಂಶದ ಲಾಗಿನ್ ಪುಟದಲ್ಲಿರುವ help and tutorial ಮಾಡ್ಯುಲ್ ನಲ್ಲಿ ವೀಕ್ಷಿಸಲು ಹಾಗೂ ಡೌನ್ಲೋಡ್ ಮಾಡಲು ಅನು ಮಾಡಿಕೊಡಲಾಗಿದೆ.
ಇದರ ಸದುಪಯೋಗ ಪಡೆಯಲು ಸೂಚಿಸಿ ಇನ್ನು ಮುಂದೆ ಎಲ್ಲಾ ನೌಕರರ ಕ್ಲೇಮ್ ಗಳ ಕೋರಿಕೆ, ರಜೆಯ ಕೋರಿಕೆ ದೂರು ಪರಿಹಾರ ಪ್ರಕ್ರಿಯೆಗಳು ಕೂಡ ESS ಮುಖಾಂತರವೇ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಎಲ್ಲಾ ನೌಕರರು ತಮ್ಮ ಕೋರಿಕೆಯನ್ನು ಆನ್ಲೈನ್ನಲ್ಲಿ ESS ಮೂಲಕ ನೀಡಬೇಕಾಗಿರುವುದರಿಂದ ತಮ್ಮ ಹಬ್ಬದ ಮುಂಗಡ ಹಾಗೂ ಗಳಿಕೆ ರಜೆಯ ಗಧೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಪ್ರಾರಂಭವಾಗಿ ಬಿಡುಗಡೆ ಮಾಡಲಾಗಿದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment