Eco Club Mission Life Portal ನಲ್ಲಿ ಈವೆಂಟ್ ಕ್ರಿಯೇಟ್ ಮಾಡುವ ಮತ್ತು ಫೋಟೋ ಅಪ್ಲೋಡ್ ಮಾಡುವ ವಿಧಾನ:
1. ಈವೆಂಟ್ ಕ್ರಿಯೇಟ್ ಮಾಡುವುದು (Create Event):⤵️
ಪೋರ್ಟಲ್‌ಗೆ ಲಾಗಿನ್ ಆಗಿ, ಸೈಡ್ ಮೆನುವಿನಲ್ಲಿರುವ ‘Create Event’ ಮೇಲೆ ಕ್ಲಿಕ್ ಮಾಡಿ.
Name of the Event: ಕಾರ್ಯಕ್ರಮದ ಹೆಸರು (ಉದಾ: World Environment Day) ಟೈಪ್ ಮಾಡಿ.
Brief Description: ಕಾರ್ಯಕ್ರಮದ ಬಗ್ಗೆ ಚಿಕ್ಕದಾಗಿ ವಿವರಣೆ ಬರೆಯಿರಿ.
Theme & Sub Theme: ಸೂಕ್ತವಾದ ಥೀಮ್ (ಉದಾ: Adopt Healthy Lifestyles) ಮತ್ತು ಸಬ್-ಥೀಮ್ (ಉದಾ: Plantation Drive) ಆಯ್ಕೆ ಮಾಡಿ.
Mode & Type: Mode ನಲ್ಲಿ ‘Physical’ ಮತ್ತು Type ನಲ್ಲಿ ‘Action and Awareness Both’ ಆರಿಸಿ.
ದಿನಾಂಕ ಮತ್ತು ಸ್ಥಳ: ಕ್ಯಾಲೆಂಡರ್‌ನಿಂದ ದಿನಾಂಕ, ಸಮಯವನ್ನು ಸೆಲೆಕ್ಟ್ ಮಾಡಿ, ನಿಮ್ಮ ರಾಜ್ಯ, ಜಿಲ್ಲೆ ಹಾಗೂ ಶಾಲೆಯಿರುವ ಊರಿನ ಹೆಸರು ನಮೂದಿಸಿ ‘Submit’ ಕೊಡಿ.
2. ಫೋಟೋ ಅಪ್ಲೋಡ್ ಮಾಡುವುದು:⤵️
ಸೈಡ್ ಮೆನುವಿನ ‘Event Management’ ಗೆ ಹೋಗಿ, ‘List of Events’ ನಿಂದ ನೀವು ಕ್ರಿಯೇಟ್ ಮಾಡಿದ ಇವೆಂಟ್ ಸೆಲೆಕ್ಟ್ ಮಾಡಿ.
ಭಾಗವಹಿಸಿದವರ ವಯೋಮಿತಿಗೆ ಅನುಗುಣವಾಗಿ ಸಂಖ್ಯೆಯನ್ನು ನಮೂದಿಸಿ.
’Choose File’ ಕ್ಲಿಕ್ ಮಾಡಿ ಗರಿಷ್ಠ 5 ಜಿಯೋ-ಟ್ಯಾಗ್ ಫೋಟೋಗಳನ್ನು (Geo-tagged photos) ಮತ್ತು ಫೋಟೋ ಕ್ಯಾಪ್ಷನ್ ಅಪ್ಲೋಡ್ ಮಾಡಿ. (5MB ಒಳಗಿನ 3 ವಿಡಿಯೋಗಳನ್ನೂ ಅಪ್ಲೋಡ್ ಮಾಡಬಹುದು).
ನೆಟ್ಟ ಗಿಡಗಳ ಸಂಖ್ಯೆಯನ್ನು (Number of Trees Planted) ನಮೂದಿಸಿ ಕೆಳಗಡೆ ಇರುವ ‘Update’ ಬಟನ್ ಒತ್ತಿ.
3. ಅಪ್ರೂವಲ್ (Approve):⤵️
ಕೊನೆಯದಾಗಿ ಕೆಳಭಾಗದಲ್ಲಿ ಕಾಣಿಸುವ ಆಯ್ಕೆಗಳಲ್ಲಿ ‘Approve’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಇವೆಂಟ್ ಯಶಸ್ವಿಯಾಗಿ ಸಲ್ಲಿಕೆಯಾಗುತ್ತದೆ.
Eco Clubs for Mission LiFE Portal ಅಧಿಕೃತ ಲಾಗಿನ್ ಲಿಂಕ್‌ಗಳು ಈ ಕೆಳಗಿನಂತಿವೆ:
ಮುಖ್ಯ ಪೋರ್ಟಲ್ ಲಿಂಕ್: https://ecoclubs.education.gov.in/
ಡೈರೆಕ್ಟ್ ಲಾಗಿನ್ ಪೇಜ್ ಲಿಂಕ್: https://ecoclubs.education.gov.in/admin/login
ಗಮನಿಸಿ: ಲಾಗಿನ್ ಮಾಡಲು ತಮ್ಮ ಶಾಲೆಯ UDISE ID ಮತ್ತು ನೋಂದಾಯಿತ ಮೊಬೈಲ್/ಇಮೇಲ್ ಐಡಿಗೆ ಬರುವ OTP ಅನ್ನು ಬಳಸಬೇಕಾಗುತ್ತದೆ. ಶಾಲಾ ಮುಖ್ಯಸ್ಥರು (Principal/Head of institution) ಲಾಗಿನ್ ಆದ ಬಳಿಕ ಶಿಕ್ಷಕರನ್ನು (Faculty) ಸೇರಿಸಿ ಇವೆಂಟ್‌ಗಳನ್ನು ನಿರ್ವಹಿಸಲು ಅನುಮತಿ ನೀಡಬಹುದು.