SHe-Box (ಶೀ-ಬಾಕ್ಸ್) ಪೋರ್ಟಲ್ ನೋಂದಣಿ ಮಾರ್ಗದರ್ಶಿ
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ‘SHe-Box’ ಪೋರ್ಟಲ್ ಅನ್ನು ಆರಂಭಿಸಿದೆ. ವಿವಿಧ ಸಂಸ್ಥೆಗಳು ಇದರಲ್ಲಿ ನೋಂದಾಯಿಸಿಕೊಳ್ಳುವ ವಿಧಾನ ಇಲ್ಲಿದೆ:
1. ಖಾಸಗಿ ಸಂಸ್ಥೆಗಳ ನೋಂದಣಿ ಪ್ರಕ್ರಿಯೆ (Private Organisation)
↪️ ಹಂತ 1: ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: shebox.wcd.gov.in
↪️ ಹಂತ 2: ಹೋಮ್ ಪೇಜ್‌ನಲ್ಲಿ “Private Head Office Registration” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
↪️ ಹಂತ 3: ತೆರೆದುಕೊಳ್ಳುವ ಫಾರ್ಮ್‌ನಲ್ಲಿ ಸಂಸ್ಥೆಯ ಹೆಸರು, ರಾಜ್ಯ, ಜಿಲ್ಲೆ, ವಿಳಾಸ ಮುಂತಾದ ಮೂಲಭೂತ ↪️ ವಿವರಗಳನ್ನು ಭರ್ತಿ ಮಾಡಿ.
↪️ ಹಂತ 4: ಸಂಸ್ಥೆಯ ನೋಡಲ್ ಅಧಿಕಾರಿಯ (Nodal Officer) ವಿವರಗಳು ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್‌ಗೆ ಬರುವ OTP ಯನ್ನು ಹಾಕಿ ದೃಢೀಕರಿಸಿ.
↪️ ಹಂತ 5: ಸಂಸ್ಥೆಯ ಗುರುತಿನ ಪುರಾವೆಯಾಗಿ ಪ್ಯಾನ್ ಕಾರ್ಡ್ (PAN Card) ಅಥವಾ ಜಿಎಸ್‌ಟಿ (GST) ದಾಖಲೆಯನ್ನು PDF ಅಥವಾ JPG ರೂಪದಲ್ಲಿ ಅಪ್‌ಲೋಡ್ ಮಾಡಿ.
↪️ ಹಂತ 6: ಕೊನೆಯದಾಗಿ ಕ್ಯಾಪ್ಚಾ ಕೋಡ್ ಹಾಕಿ Submit ಮಾಡಿ.
📝 ಗಮನಿಸಿ: ಸಬ್ಮಿಟ್ ಮಾಡಿದ ನಂತರ ನಿಮ್ಮ ವಿನಂತಿಯು ಜಿಲ್ಲಾ ನೋಡಲ್ ಅಧಿಕಾರಿಗೆ (District Nodal Officer) ಹೋಗುತ್ತದೆ. ಅವರು ಪರಿಶೀಲಿಸಿ ಅಂಗೀಕರಿಸಿದ (Approve) ಬಳಿಕ, ಸಂಸ್ಥೆಯ ಅಧಿಕೃತ ಇಮೇಲ್ ಐಡಿಗೆ Password ಬರಲಿದೆ.
2. ಸರ್ಕಾರಿ ಸಂಸ್ಥೆಗಳ ನೋಂದಣಿ ಪ್ರಕ್ರಿಯೆ (Government Organisation)
ಸರ್ಕಾರಿ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಫಾರ್ಮ್ ಭರ್ತಿ ಮಾಡುವ ಅಗತ್ಯವಿರುವುದಿಲ್ಲ.
ಬದಲಿಗೆ, ಅವರು ತಮ್ಮ ಜಿಲ್ಲಾ ನೋಡಲ್ ಅಧಿಕಾರಿಗೆ (District Nodal Officer) ಕೆಳಗಿನ ವಿವರಗಳನ್ನು ಕಳುಹಿಸಿಕೊಡಬೇಕು:
ಸಂಸ್ಥೆಯ ಹೆಸರು
ಜವಾಬ್ದಾರಿಯುತ ಅಧಿಕಾರಿಯ ಹೆಸರು
ಮೊಬೈಲ್ ಸಂಖ್ಯೆ
ಸಂಸ್ಥೆಯ ಅಧಿಕೃತ ಇಮೇಲ್ ಐಡಿ
ಈ ವಿವರಗಳನ್ನು ಆಧರಿಸಿ, ಜಿಲ್ಲಾ ಅಧಿಕಾರಿಗಳೇ ನಿಮ್ಮನ್ನು ನೋಂದಾಯಿಸುತ್ತಾರೆ ಮತ್ತು ನಿಮ್ಮ ಇಮೇಲ್‌ಗೆ ನೇರವಾಗಿ Password ಬರಲಿದೆ.
3. ಲಾಗಿನ್ ಮತ್ತು ಆಂತರಿಕ ಸಮಿತಿ (IC) ವಿವರಗಳ ಸಲ್ಲಿಕೆ
ಇಮೇಲ್‌ಗೆ ಬಂದ ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಆದ ನಂತರ ಖಾಸಗಿ ಮತ್ತು ಸರ್ಕಾರಿ ಎರಡೂ ಸಂಸ್ಥೆಗಳು ಈ ಕೆಳಗಿನ ಕೆಲಸವನ್ನು ಮಾಡಬೇಕಾಗುತ್ತದೆ:
ಪೋರ್ಟಲ್‌ನಲ್ಲಿ ‘Workplace & IC Details’ ವಿಭಾಗಕ್ಕೆ ಹೋಗಿ.
ನಿಮ್ಮ ಸಂಸ್ಥೆಯಲ್ಲಿ ರಚಿಸಲಾಗಿರುವ ಆಂತರಿಕ ದೂರು ಸಮಿತಿಯ (Internal Committee – IC) ಮುಖ್ಯಸ್ಥರು (In-charge) ಹಾಗೂ ಇತರ ಸದಸ್ಯರ ಹೆಸರು, ಇಮೇಲ್ ಮತ್ತು ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಒನ್ ಬೈ ಒನ್ ಸೇರಿಸಬೇಕು (Add New).