---Advertisement---

SATS ನಲ್ಲಿ ಸೇತುಬಂಧ ನಿರ್ವಹಣೆ ಸಂಪೂರ್ಣ ಮಾಹಿತಿ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಜಾರಿಯಲ್ಲಿರುವ ‘ಸೇತುಬಂಧ’ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ನಿರ್ದೇಶನ ಹೊರಡಿಸಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ ಸೇತುಬಂಧ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಪೂರ್ವಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳ ಫಲಿತಾಂಶಗಳನ್ನು SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸಮರ್ಪಕವಾಗಿ ದಾಖಲಿಸಿ ಮೇಲ್ವಿಚಾರಣೆ ನಡೆಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರು ತಮ್ಮ ವೈಯಕ್ತಿಕ ಲಾಗಿನ್ ಬಳಸಿ ಸಂಬಂಧಿತ ಮಾಡ್ಯೂಲ್‌ನಲ್ಲಿ ವಿದ್ಯಾರ್ಥಿಗಳ ಶ್ರೇಣಿಗಳನ್ನು ದಾಖಲಿಸಬೇಕಾಗಿದೆ. ಶಾಲಾ ಮಟ್ಟದಲ್ಲಿ ವರದಿಗಳನ್ನು ಸಿದ್ಧಪಡಿಸಿ ನೇರವಾಗಿ SATS ತಂತ್ರಾಂಶಕ್ಕೆ ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತ್ಯೇಕ ಭೌತಿಕ ದಾಖಲೆಗಳನ್ನು ನಿರ್ವಹಿಸುವ ಅವಶ್ಯಕತೆ ಕಡಿಮೆಯಾಗಲಿದೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET) ಪ್ರಾಂಶುಪಾಲರು, ನೋಡಲ್ ಅಧಿಕಾರಿಗಳು, ತಾಲೂಕು ಶಿಕ್ಷಣಾಧಿಕಾರಿಗಳು, ಬಿಆರ್‌ಪಿ ಹಾಗೂ ಸಿಆರ್‌ಪಿಗಳು ಜೂನ್ 25, 2026ರೊಳಗೆ ಎಲ್ಲಾ ಶಾಲೆಗಳ ಮಾಹಿತಿಯನ್ನು ಸಂಗ್ರಹಿಸಿ ದಾಖಲಾತಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಇದೇ ವೇಳೆ, ಸೇತುಬಂಧ ಕಾರ್ಯಕ್ರಮದ ಮೌಲ್ಯಮಾಪನದಲ್ಲಿ ‘ಬಿ’ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರಾತ್ಮಕ ಬೋಧನೆ (Remedial Teaching) ನೀಡಬೇಕು.

ಅಂತಹ ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸಲು ಸೆಪ್ಟೆಂಬರ್ ಹಾಗೂ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಮರುಮೌಲ್ಯಮಾಪನ ನಡೆಸುವಂತೆ ಇಲಾಖೆಯು ತಿಳಿಸಿದೆ.

SATS ನಲ್ಲಿ ಸೇತುಬಂಧ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆ ಗ್ರೇಡ್ ನಮೂದು ಮಾಡುವಂತೆ ಆದೇಶ.

⏩ ಶಿಕ್ಷಕರು ತಮ್ಮ LBA ಲಾಗಿನ್ ಬಳಸಿ ಗ್ರೇಡ್ ನಮೂದು ಮಾಡುವುದು.
⏩ ಮುಖ್ಯ ಶಿಕ್ಷಕರ ಲಾಗಿನ್ ನಲ್ಲಿ ವರದಿ ಲಭ್ಯವಾಗಲಿದ್ದು, SAP ನಮೂನೆ ಬದಲಾಗಿ ಅದನ್ನೇ ಮುದ್ರಿಸಿ ಇಡಬಹುದು. ಆದರೆ ಎಲ್ಲಾ ಗ್ರೇಡ್ ನಮೂದು ಮಾಡಿರಬೇಕು.
⏩ ಎಲ್ಲಾ ಮಕ್ಕಳ ಹೆಸರು SATS ನಲ್ಲಿ ಇರಬೇಕು ಮತ್ತು Language group ಸರಿಯಾಗಿ ನಮೂದು ಆಗಿರಬೇಕು.
⏩ LBA ಲಾಗಿನ್ ಲಿಂಕ್ : Sign In https://sts.karnataka.gov.in/LBA/#/auth/sign-in

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment