ಮೌಲ್ಯಾಂಕನ ದ ಕುರಿತು ಸಂಪೂರ್ಣ ಮಾಹಿತಿ

ಮೌಲ್ಯಾಂಕನ ಪ್ರಶ್ನೆ ಪತ್ರಿಕೆ ಸ್ವರೂಪ

*5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುವುದು.

* ನವೆಂಬರ್ 2022 ರ ಮಾಹೆಯಿಂದ ಮಾರ್ಚ್ 2023 ರ ಮಾಹೆಯ ಮೊದಲನೆ ವಾರದವರೆಗಿನ ಕಲಿಕಾ ಚೇತರಿಕೆಯಕಲಿಕಾ ಫಲಗಳನ್ನು ಮತ್ತು ಪಠ್ಯಪುಸ್ತಕವನ್ನು ಆಧರಿಸಿ ಪ್ರಶೋತ್ತರ ಪತ್ರಿಕೆಗಳನ್ನು ರಚಿಸಲಾಗಿರುತ್ತದೆ.

* 40 ಅಂಕಗಳ ಲಿಖಿತ ಪರೀಕ್ಷೆಗೆ ರಾಜ್ಯ ಹಂತದಿಂದ ಪ್ರತ್ರೋತ್ತರ ಪತ್ರಿಕೆಗಳನ್ನು ನೀಡಲಾಗುವುದು.

* 10 ಅಂಕಗಳ ಮೌಖಿಕ ಪರೀಕ್ಷೆಯನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸುವುದು

* ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಸಿದ್ಧಗೊಳಿಸಲು ಕಲಿಕಾ ಫಲಗಳು ಮತ್ತು ಮಾದರಿ ಪ್ರಶೋತ್ತರ ಪತ್ರಿಕೆಗಳನ್ನುಮಂಡಲಿಯ ವೆಬ್‌ಸೈಟ್‌ನಲ್ಲಿ ಈಗಾಗಲೇ ನೀಡಲಾಗಿದ್ದು, ಅದರಂತೆ ಅಭ್ಯಸಿಸುವುದು.

* ಪ್ರತಿ ವಿಷಯದ ಪರೀಕ್ಷೆಗೆ 2 ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ.

ತರಗತಿವಾರು ಪ್ರತಿ ವಿಷಯಕ್ಕೆ 40 ಅಂಕಗಳ 28 ಪ್ರಶ್ನೆಗಳನ್ನೊಳಗೊಂಡ ಪ್ರತ್ಯೇಕ ಪ್ರಶೋತ್ತರ ಪತ್ರಿಕೆಗಳನ್ನುನೀಡಲಾಗುತ್ತದೆ.

ಮೌಲ್ಯಾಂಕನದ ದಿನ:

* ಎಲ್ಲಾ ಶಾಲೆ/ಪರೀಕ್ಷಾ ಕೇಂದ್ರಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷಾ ಕಾರ್ಯನಿರ್ವಹಿಸುವುದು.

* ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಮೌಲ್ಯಾಂಕನವನ್ನು ನಡೆಸುವ ಬಗ್ಗೆ ಕ್ರಮವಹಿಸುವುದು ಹಾಗೂ ಯಶಸ್ವಿಯಾಗಿ ಮೌಲ್ಯಾಂಕನವು ನಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

* ರಚಿಸಿಕೊಂಡಿರುವ ಪರೀಕ್ಷಾ ಕೇಂದ್ರದ ಮಾರ್ಗಗಳಂತೆ ಪ್ರತಿ ದಿನ ಪ್ರಶೋತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರ / ಶಾಲಾಹಂತಕ್ಕೆ ಸುರಕ್ಷಿತವಾಗಿ ಸರಬರಾಜು ಮಾಡಲು ಅಗತ್ಯ ಕ್ರಮವಹಿಸುವುದು.

* ಪ್ರತಿದಿನದ ಪರೀಕ್ಷಾ ಕಾರ್ಯ ಪೂರ್ಣಗೊಂಡ ನಂತರ ಉತ್ತರಿಸಿದ ಪ್ರಶೋತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಸರಿಯಾಗಿಬಂಡಲ್ ಮಾಡಿ ಸಂರಕ್ಷಿಸಿಟ್ಟು ಅಂತಿಮ ದಿನದ ಪರೀಕ್ಷೆ ಮುಕ್ತಾಯವಾದ ನಂತರ ಎಲ್ಲಾ ದಿನದ ಬಂಡಲ್‌ಗಳನ್ನುಶಾಲೆಗಳಿಂದ ಸ್ವೀಕರಿಸುವುದು ಮತ್ತು ಈಗಾಗಲೇ ಗುರುತಿಸಲಾಗಿರುವ ಮೌಲ್ಯಮಾಪನ ಕೇಂದ್ರಕ್ಕೆ ರವಾನೆ ಮಾಡುವುದು.

* ಗೌಪ್ಯತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಮೌಲ್ಯಾಂಕನವನ್ನು ನಡೆಸುವುದು.

IMG 20230303 WA0073
IMG 20230303 WA0070
IMG 20230303 WA0072
IMG 20230303 WA0069
IMG 20230303 WA0071
IMG 20230303 WA0068
IMG 20230303 WA0065
IMG 20230303 WA0066
IMG 20230303 WA0067
IMG 20230303 WA0064
Sharing Is Caring:

Leave a Comment