ಮೌಲ್ಯಾಂಕನ ಪ್ರಶ್ನೆ ಪತ್ರಿಕೆ ಸ್ವರೂಪ
*5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುವುದು.
* ನವೆಂಬರ್ 2022 ರ ಮಾಹೆಯಿಂದ ಮಾರ್ಚ್ 2023 ರ ಮಾಹೆಯ ಮೊದಲನೆ ವಾರದವರೆಗಿನ ಕಲಿಕಾ ಚೇತರಿಕೆಯಕಲಿಕಾ ಫಲಗಳನ್ನು ಮತ್ತು ಪಠ್ಯಪುಸ್ತಕವನ್ನು ಆಧರಿಸಿ ಪ್ರಶೋತ್ತರ ಪತ್ರಿಕೆಗಳನ್ನು ರಚಿಸಲಾಗಿರುತ್ತದೆ.
ಮೌಲ್ಯಾಂಕನದ ದಿನ:
* ಎಲ್ಲಾ ಶಾಲೆ/ಪರೀಕ್ಷಾ ಕೇಂದ್ರಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷಾ ಕಾರ್ಯನಿರ್ವಹಿಸುವುದು.
* ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಮೌಲ್ಯಾಂಕನವನ್ನು ನಡೆಸುವ ಬಗ್ಗೆ ಕ್ರಮವಹಿಸುವುದು ಹಾಗೂ ಯಶಸ್ವಿಯಾಗಿ ಮೌಲ್ಯಾಂಕನವು ನಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
* ರಚಿಸಿಕೊಂಡಿರುವ ಪರೀಕ್ಷಾ ಕೇಂದ್ರದ ಮಾರ್ಗಗಳಂತೆ ಪ್ರತಿ ದಿನ ಪ್ರಶೋತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರ / ಶಾಲಾಹಂತಕ್ಕೆ ಸುರಕ್ಷಿತವಾಗಿ ಸರಬರಾಜು ಮಾಡಲು ಅಗತ್ಯ ಕ್ರಮವಹಿಸುವುದು.
* ಪ್ರತಿದಿನದ ಪರೀಕ್ಷಾ ಕಾರ್ಯ ಪೂರ್ಣಗೊಂಡ ನಂತರ ಉತ್ತರಿಸಿದ ಪ್ರಶೋತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಸರಿಯಾಗಿಬಂಡಲ್ ಮಾಡಿ ಸಂರಕ್ಷಿಸಿಟ್ಟು ಅಂತಿಮ ದಿನದ ಪರೀಕ್ಷೆ ಮುಕ್ತಾಯವಾದ ನಂತರ ಎಲ್ಲಾ ದಿನದ ಬಂಡಲ್‌ಗಳನ್ನುಶಾಲೆಗಳಿಂದ ಸ್ವೀಕರಿಸುವುದು ಮತ್ತು ಈಗಾಗಲೇ ಗುರುತಿಸಲಾಗಿರುವ ಮೌಲ್ಯಮಾಪನ ಕೇಂದ್ರಕ್ಕೆ ರವಾನೆ ಮಾಡುವುದು.
* ಗೌಪ್ಯತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಮೌಲ್ಯಾಂಕನವನ್ನು ನಡೆಸುವುದು.