ವಿದ್ಯಾ ಪ್ರವೇಶ ಕಾರ್ಯಕ್ರಮದ ಅನುಷ್ಟಾನಾತ್ಮಕ ಕ್ರಮಗಳು

IMG 20230524 WA0583
WhatsApp Group Join Now
Telegram Group Join Now

ವಿದ್ಯಾ ಪ್ರವೇಶ ಕಾರ್ಯಕ್ರಮವು ಎನ್.ಇ.ಪಿ-2020ರ ಕೇಂದ್ರ ನಿರ್ದೇಶಿತ ಕಾರ್ಯಕ್ರಮವಾಗಿದ್ದು, 01ನೇ ತರಗತಿಗೆ ದಾಖಲಾಗುವ ಯಾವುದೇ ವಿದ್ಯಾರ್ಥಿಯು ಆರಂಭಿಕ ಶಾಲಾ ಸಿದ್ಧತಾ ಚಟುವಟಿಕೆಗಳಿಗೆ ಒಳಗಾಗುವುದು ಇದರ
ಪ್ರಮುಖ ಉದ್ದೇಶವಾಗಿದೆ. ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ವಿವಿಧ ಆಯಾಮಗಳಲ್ಲಿ ಮತ್ತು 08
ಅವಧಿಗಳ ಕಲಿಕೆಯಲ್ಲಿ ವಿದ್ಯಾರ್ಥಿಯನ್ನು ನಿರಂತರ ತೊಡಗಿಸುವುದರ ಮೂಲಕ ಬುನಾದಿ ಶಿಕ್ಷಣದ ಕಲಿಕೆಗೆ
ಮಾನಸಿಕವಾಗಿ ತರಬೇತುಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಸದರಿ ಕಾರ್ಯಕ್ರಮವು 90 ದಿನಗಳ/ 03 ತಿಂಗಳ ವ್ಯಾಪ್ತಿಯನ್ನು
ಒಳಗೊಂಡಿದ್ದು, 03 ಅಭಿವೃದ್ಧಿ ಗುರಿಗಳ ಅಡಿಯಲ್ಲಿ ವಿದ್ಯಾರ್ಥಿಯ ಬೆಳವಣಿಗೆಗೆ ವ್ಯಾಪಕ ಅವಕಾಶಗಳನ್ನು
ಒದಗಿಸುತ್ತದೆ. ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಇದರಂತೆ ಶಿಕ್ಷಕರು ತಮ್ಮ ದಿನಚರಿಯನ್ನು ರೂಪಿಸಿಕೊಳ್ಳಲು ಸಂಬಂಧಿಸಿದ
ಮೇಲುಸ್ತುವಾರಿ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಸೂಕ್ತ ಮಾರ್ಗದರ್ಶನ ನೀಡುವುದು.

ಅನುಸರಣೆಯ ಕ್ರಮಗಳು:

 1. ಶಾಲೆ ಆರಂಭವಾಗುವ ದಿನದಿಂದ ಲೆಕ್ಕಾಚಾರಗೊಳಿಸಿ, ವಿದ್ಯಾ ಪ್ರವೇಶ ಕಾರ್ಯಕ್ರಮಕ್ಕಾಗಿ ಒಂದನೇ ತರಗತಿಗೆ ಒಟ್ಟು 40 ದಿನಗಳನ್ನು ನಿಗದಿಪಡಿಸಲಾಗಿದೆ. ಜುಲೈ 18, 2023ರೊಳಗೆ ಸದರಿ ಕಾರ್ಯಕ್ರಮದ ಚಟುವಟಿಕೆಗಳು
  ಪೂರ್ಣಗೊಳ್ಳುವಂತೆ ಅಗತ್ಯ ಕ್ರಮವಹಿಸುವುದು.

ದಿನಗಳ ಮಿತಿಗೆ ಮುಖ್ಯ ಕಾರಣ:

ನಲಿಕಲಿ ಪಠ್ಯವಸ್ತುವಿನಲ್ಲಿ ಸಾಕಷ್ಟು ಪೂರ್ವಭಾವಿ ಸಿದ್ಧತಾ ಚಟುವಟಿಕೆಗಳಿದ್ದು, ಕಲಿಕಾ ಏಣಿಗಳಲ್ಲಿ ಅಳವಡಿಸಲಾಗಿದೆ. ವಿದ್ಯಾ ಪ್ರದೇಶ ಕಾರ್ಯಕ್ರಮದಲ್ಲಿನ ಕೆಲವು ಚಟುವಟಿಕೆಗಳು ದಿನವಾರು ಪು ನರಾವರ್ತನೆಗೆ ಒಳಗಾಗುತ್ತಿರುವುದನ್ನು ಶಿಕ್ಷಕರ
ಹಿಮ್ಮಾಹಿತಿಯಲ್ಲಿ ಅವಲೋಕಿಸಲಾಗಿದೆ. ನೂತನ ಪ್ರಾಯೋಗಿಕ ಪಠ್ಯಪುಸ್ತಕಗಳಲ್ಲಿ ಹಾಡು, ಕಥೆ, ಆಟ, ಪ್ರಯೋಗ, ಯೋಜನೆ,
ಮಾದರಿಗಳು, ಆಟಿಕೆಗಳು, ಹೊರಾಂಗಣ ಚಟುವಟಿಕೆಗಳು, ಮೌಖಿಕ ಸಂವಹನ, ಕರಕುಶಲತೆ ಇತ್ಯಾದಿ ಸೃಜನಾತ್ಮಕ
ಚಟುವಟಿಕೆಗಳನ್ನು ಮೈಲುಗಲ್ಲುವಾರು ಅಳವಡಿಸಲಾಗಿದ್ದು, ಮಕ್ಕಳ ಬೌದ್ಧಿಕ, ಭಾವನಾತ್ಮಕ, ದೈಹಿಕ, ಸಾಂಸ್ಕೃತಿಕ ಹಾಗೂ
ಬಹುಇಂದ್ರಿಯ ಆಯಾಮಗಳಿಗೆ ಅವಕಾಶಗಳು ಲಭ್ಯವಿರುವ ಕಾರಣ, ಒಟ್ಟು 40 ದಿನಗಳನ್ನು ಪ್ರಸಕ್ತ ಸಾಲಿನಲ್ಲಿ
ಪರಿಗಣಿಸಲಾಗಿದೆ. ಅನುಬಂಧದಂತೆ 40 ದಿನಗಳ ಚಟುವಟಿಕೆಗಳಿಗಾಗಿ ಶಿಕ್ಷಕರು ಅನುಷ್ಠಾನಗೊಳಿಸುವುದು.

 1. ನಿಗದಿಪಡಿಸಿದ ದಿನಗಳಂತೆ ಎಲ್ಲಾ ಮಾಧ್ಯಮಗಳ 01ನೇ ತರಗತಿಯಲ್ಲಿಯೂ ವಿದ್ಯಾ ಪ್ರವೇಶ ಚಟುವಟಿಕೆಗಳ
  ಅನುಷ್ಟಾನ ಮತ್ತು ಅನುಪಾಲನೆಗೆ ಸಂಬಂಧಿಸಿದ ಮೇಲಾಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭೇಟಿ
  ಮೂಲಕ ಖಾತ್ರಿಪಡಿಸಿಕೊಳ್ಳುವುದು.
 2. ನಲಿಕಲಿ ತರಗತಿಗಳ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ವಿದ್ಯಾ ಪ್ರವೇಶಕ್ಕೆ ಸಂಬಂಧಿಸಿದಂತೆ ಚಟುವಟಿಕೆ
  ಹಾಳೆಗಳನ್ನು ಅಳವಡಿಸಲಾಗಿದ್ದು, ಪ್ರತೀ ಶನಿವಾರದಂದು 03 ಗಂಟೆ, ಉಳಿದ ದಿನಗಳಲ್ಲಿ 05 ಗಂಟೆಗಳ ಕಲಿಕಾ
  ಅವಕಾಶದ ಸಮಯವು ಮಕ್ಕಳ ಕಲಿಕೆಗೆ ಲಭ್ಯವಾಗುವಂತೆ ಮಾರ್ಗದರ್ಶನ ನೀಡುವುದು
  .
 3. ಯಾವುದೇ ವಿದ್ಯಾರ್ಥಿಯು ನಿಗದಿತ 40 ದಿನಗಳಿಗಿಂತ ಮೊದಲು, ವಿದ್ಯಾ ಪ್ರವೇಶದ ಚಟುವಟಿಕೆಗಳನ್ನು
  ಪೂರ್ಣಗೊಳಿಸಿದ್ದಲ್ಲಿ, ಅಂತಹ ವಿದ್ಯಾರ್ಥಿಗೆ ಪ್ರಸಕ್ತ ಸಾಲಿನ ಕಲಿಕಾಂಶಗಳ ನಿರಂತರ ಕಲಿಕೆಗೆ ಅವಕಾಶವನ್ನು
  ಒದಗಿಸುವಂತೆ ಶಿಕ್ಷಕರಿಗೆ ಸೂಚಿಸುವುದು.
 4. 08 ಕಲಿಕಾ ಮೂಲೆಗಳ ಬದಲಿಗೆ 1. ಗಣಿತ ಮತ್ತು ವಿಜ್ಞಾನ/ಅನ್ವೇಷಣಾ ಕಲಿಕಾ ಸ್ಥಳ 2. ಗೊಂಬೆ ಮತ್ತು ಬಿಲ್ಡಿಂಗ್
  ಬ್ಲಾಕ್ಸ್ ಕಲಿಕಾ ಸ್ಥಳ 3. ಬರೆಯುವ ಮತ್ತು ಓದುವ ಕಲಿಕಾ ಸ್ಥಳ 4. ಆಟಿಕೆ/ಮಾಡಿಕಲಿ-ಕಲೆಗೊಂದು ನೆಲೆ/ಕರಕುಶಲ ಕಲಿಕಾ ಸ್ಥಳ ಎಂಬ ಹೆಸರಿನಲ್ಲಿ 04 ಕಲಿಕಾ ಮೂಲೆಗಳನ್ನು ಮಾರ್ಪಡಿಸಿಕೊಳ್ಳಲು ಶಿಕ್ಷಕರಿಗೆ ಸೂಚನೆ ನೀಡುವುದು.
 5. 40 ದಿನಗಳ ಅಂತ್ಯಕ್ಕೆ ಪ್ರತೀ ವಿದ್ಯಾರ್ಥಿವಾರು ಮೌಲ್ಯಾಂಕನ ದಾಖಲೆಯನ್ನು ಶಿಕ್ಷಕರ ಕೈಪಿಡಿಯಲ್ಲಿನ
  ಮಾದರಿಯಂತೆ ನಿಗದಿತ ನಮೂನೆಯಲ್ಲಿ ನಿರ್ವಹಿಸಿ, ಕೃತಿ ಸಂಪುಟದಲ್ಲಿ ದಾಖಲುಗೊಳಿಸುವುದು. (ಅನುಬಂಧ
  (ಎ) ಅನ್ನು ಅವಲೋಕಿಸಿ)
Useful for teachers2023
WhatsApp Group Join Now
Telegram Group Join Now
Sharing Is Caring:

Leave a Comment