---Advertisement---

UDISE+ Student Module ನಲ್ಲಿ ಬೇರೆ ಶಾಲೆಯ/ಬೇರೆ ರಾಜ್ಯದ ವಿದ್ಯಾರ್ಥಿಗಳನ್ನು Import ಮಾಡಿಕೊಳ್ಳುವ ಸಂಪೂರ್ಣ ವಿವರ ಇಲ್ಲಿದೆ

By kspstadk.com

Published On:

Follow Us
UDISE+ Student Module import
---Advertisement---
WhatsApp Group Join Now
Telegram Group Join Now

ಇದನ್ನು ಬಳಸುವುದು ಅದೇ ಕರ್ನಾಟಕ ರಾಜ್ಯದ ಇನ್ನೊಂದು ಶಾಲೆಯಿಂದ ಮಗು ನಿಮ್ಮ ಶಾಲೆಗೆ ಬಂದಾಗ.

Step-by-Step ಪ್ರಕ್ರಿಯೆ:

  1. ಲಾಗಿನ್: https://sdms.udiseplus.gov.in ಗೆ ಹೋಗಿ ನಿಮ್ಮ ಶಾಲೆಯ User ID, Password ಮತ್ತು Captcha ಹಾಕಿ Student Module ಗೆ ಲಾಗಿನ್ ಆಗಿ.
  2. ಮೆನುಗೆ ಹೋಗಿ: ಎಡಭಾಗದ ಮೆನುವಿನಲ್ಲಿ Student Movement and Progression ಕ್ಲಿಕ್ ಮಾಡಿ. ನಂತರ Import Module ಸೆಲೆಕ್ಟ್ ಮಾಡಿ.
  3. Within State ಆಯ್ಕೆ: Import Within State ಎಂಬ ಟ್ಯಾಬ್‌ನ ಕೆಳಗೆ ಇರುವ Go ಬಟನ್ ಒತ್ತಿ.
  4. ವಿದ್ಯಾರ್ಥಿ ಹುಡುಕಿ: ಇಲ್ಲಿ ಮಗುವಿನ PEN - Permanent Education Number ಮತ್ತು DOB - Date of Birth ನಿಖರವಾಗಿ ನಮೂದಿಸಿ Go ಕ್ಲಿಕ್ ಮಾಡಿ.
    Note: PEN 12 ಅಂಕಿ ಸಂಖ್ಯೆ. ಇದು SATS ID ಆಗಿದೆ.
  5. ವಿವರ ಪರಿಶೀಲಿಸಿ: PEN + DOB ಸರಿಯಾಗಿದ್ದರೆ ಮಗುವಿನ ಹೆಸರು, ತಂದೆ/ತಾಯಿ ಹೆಸರು, ಹಳೆಯ ಶಾಲೆ, ಹಿಂದಿನ ತರಗತಿ ಇತ್ಯಾದಿ ವಿವರಗಳು ಬರುತ್ತವೆ.
  6. ನಿಮ್ಮ ಶಾಲೆಯ ವಿವರ ಸೇರಿಸಿ:
  • Class: ಈ ಸಾಲಿನಲ್ಲಿ ಮಗು ಯಾವ ತರಗತಿಗೆ ಸೇರುತ್ತಿದೆ
  • Section: A, B, C ಇತ್ಯಾದಿ
  • Admission Date: ನಿಮ್ಮ ಶಾಲೆಗೆ ದಾಖಲಾದ ದಿನಾಂಕ
    ಇವೆಲ್ಲಾ ಭರ್ತಿ ಮಾಡಿ Import ಕ್ಲಿಕ್ ಮಾಡಿ.
  1. Confirm: ಮತ್ತೆ ಬರುವ ಪಾಪ್-ಅಪ್‌ನಲ್ಲಿ Confirm ಒತ್ತಿದರೆ Import ಯಶಸ್ವಿಯಾಗುತ್ತದೆ. ಮಗು ನಿಮ್ಮ ಶಾಲೆಯ Student List ನಲ್ಲಿ ಕಾಣಿಸುತ್ತದೆ.


PEN/DOB mismatch ನೀವು ಹಾಕಿದ PEN ಅಥವಾ DOB ತಪ್ಪು. ಅಥವಾ ಮಗುವಿನ SATS ನಲ್ಲಿ DOB ಬೇರೆ ಇದೆ. ಹಳೆಯ ಶಾಲೆಯ TC/Transfer Certificate ಅಥವಾ SATS Report ನೋಡಿ PEN ಮತ್ತು DOB ಮತ್ತೆ Cross Check ಮಾಡಿ.
Import is not allowed ಮಗುವಿನ ಹಳೆಯ ಶಾಲೆಯಿಂದ TC Out ಆಗಿಲ್ಲ. Current Schooling Details ನಲ್ಲಿ ಹಳೆಯ ಶಾಲೆಯ ಹೆಸರು, UDISE Code, ಹೆಡ್ ಮಾಸ್ಟರ್ ನಂಬರ್ ಸಿಗುತ್ತದೆ. School Contact and Location Details ಮೆನುಗೆ ಹೋಗಿ ಅವರ ನಂಬರ್ ತೆಗೆದು ಕರೆ ಮಾಡಿ. UDISE ನಲ್ಲಿ TC Out ಮಾಡಲು ಕೇಳಿ.
Child is already active in another school ಮಗು ಇನ್ನೂ ಹಳೆಯ ಶಾಲೆಯಲ್ಲಿ Active ಆಗಿದೆ. ಮೇಲಿನಂತೆ ಹಳೆಯ ಶಾಲೆಯವರನ್ನು ಸಂಪರ್ಕಿಸಿ.
Important: TC Out ಮಾಡಿದ 24 ಗಂಟೆಗಳ ನಂತರ ಮಾತ್ರ Import ಆಗುತ್ತದೆ. ಆದ್ದರಿಂದ ತಕ್ಷಣ ಆಗದಿದ್ದರೆ ಸ್ವಲ್ಪ ಕಾಯಿರಿ.

ಮಹಾರಾಷ್ಟ್ರ, ಕೇರಳ, ತಮಿಳುನಾಡು ಇತ್ಯಾದಿ ರಾಜ್ಯಗಳಿಂದ ಮಗು ಬಂದರೆ ಇದನ್ನು ಬಳಸಿ.

Step-by-Step ಪ್ರಕ್ರಿಯೆ:

  1. Import Module ಒಳಗೆ Import Outside State ಟ್ಯಾಬ್‌ನ Go ಬಟನ್ ಕ್ಲಿಕ್ ಮಾಡಿ.
  2. State Dropdown ನಿಂದ ಮಗು ಬಂದಿರುವ ರಾಜ್ಯವನ್ನು ಆಯ್ಕೆ ಮಾಡಿ. ಉದಾ: Maharashtra, Kerala.
  3. ಆ ರಾಜ್ಯದ PEN ಮತ್ತು DOB ನಮೂದಿಸಿ Go ಕ್ಲಿಕ್ ಮಾಡಿ.
  4. ವಿವರ ಬಂದರೆ Class, Section, Admission Date ಭರ್ತಿ ಮಾಡಿ Import ➡️ Confirm ಮಾಡಿ.

ಗಮನಿಸಬೇಕಾದ ಅಂಶಗಳು:

  1. ಸಮಯದ ಮಿತಿ: Outside State Import ಗೆ UDISE+ ಪೋರ್ಟಲ್ ಪ್ರತಿ ಸಾಲಿನಲ್ಲಿ ಕೆಲವು ತಿಂಗಳು ಮಾತ್ರ ಅವಕಾಶ ನೀಡುತ್ತದೆ. ಸಾಮಾನ್ಯವಾಗಿ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ. ಈ ವಿಂಡೋ ಮುಗಿದರೆ ರಾಜ್ಯ UDISE Cell ಗೆ ಮೇಲ್ ಮಾಡಬೇಕು.
  2. PEN ಬೇಕು: ಬೇರೆ ರಾಜ್ಯದ PEN ಇಲ್ಲದೆ Import ಆಗುವುದಿಲ್ಲ. ಹಳೆಯ ಶಾಲೆಯ TC ಯಲ್ಲಿ PEN ಇರುತ್ತದೆ.
  3. Aadhaar Link: ಬೇರೆ ರಾಜ್ಯದ Aadhaar ನಿಮ್ಮ ರಾಜ್ಯದಲ್ಲಿ Link ಆಗಿಲ್ಲದಿದ್ದರೆ, Import ಆದ ನಂತರ ನಿಮ್ಮ ಶಾಲೆಯಿಂದ ಮತ್ತೆ Link ಮಾಡಿಸಬೇಕು.
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment