2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ಅರ್ಜಿಗಳ ಅಂಗೀಕಾರ ಹಾಗೂ ಪರಿಶೀಲನೆಗಾಗಿ ಸ್ಪಷ್ಟೀಕರಣ

WhatsApp Group Join Now
Telegram Group Join Now

2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸಂಬಂದಿಸಿದಂತೆ
ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣಾ ನಿಯಂತ್ರಣ) ಕಾಯಿದೆ 2020 ಹಾಗೂ 2022ರ ತಿದ್ದುಪಡಿ
ಕಾಯ್ದೆ ಹಾಗೂ ನಿಯಮಗಳನುಸಾರ ಈ ಕೆಳಗಿನಂತೆ ಮಾನ್ಯ ಆಯುಕ್ತರು ಸೃಷ್ಟಿಕರಣ ನೀಡಿರುತ್ತಾರೆ.

 1. ಪರಸ್ಪರ ವರ್ಗಾವಣೆ ಜೇಷ್ಠತಾ ಘಟಕ/ ವಿಭಾಗದ ಹೊರಗೆ ಪರಸ್ಪರ ವರ್ಗಾವಣೆಗೆ ಒಟ್ಟು ಸೇವಾವಧಿಯಲ್ಲಿ ಆ ವೃಂದದಲ್ಲಿ ಕನಿಷ್ಕ 5 ವರ್ಷಗಳ ಸೇವೆ ಪೂರ್ಣಗೊಂಡಿರಬೇಕು ಹಾಗೂ
  ಕರ್ತವ್ಯನಿರತ ಸ್ಥಳದಲ್ಲಿ ಕನಿಷ್ಕ 3 ವರ್ಷಗಳ ಸೇವೆ ಪೂರ್ಣಗೊಂಡಿರುವ ಪ್ರಕರಣಗಳನ್ನು
  ಮಾತ್ರ ಪರಿಗಣಿಸುವುದು.
 2. ಆಧ್ಯತೆಗಳು, ಸೇವಾವಧಿಯಲ್ಲಿ ಒಮ್ಮೆ ಮಾತ್ರ ಆಧ್ಯತೆಯನ್ನು ಕ್ಷೇಮ್ ಮಾಡಲು ಅವಕಾಶವಿದೆ
  ಎಂದು ಇರುತ್ತದೆ. ಇದನ್ನು ವರ್ಗಾವಣೆ ಕಾಯ್ದೆ-2020 ಜಾರಿಗೆ ಬಂದ ನಂತರ ಮಾತ್ರ
  ಅನ್ವಯವಾಗುವಂತೆ ಪರಿಗಣಿಸತಕ್ಕದ್ದು.ಇದು ಕೋರಿಕೆ ವರ್ಗಾವಣೆಗೆ
  ಮಾತ್ರ ಅನ್ವಯವಾಗುತ್ತದೆ. ಆದರೆ ಹೆಚ್ಚುವರಿ ವರ್ಗಾವಣೆಗೆ ಅನ್ವಯವಾಗುವುದಿಲ್ಲ.
 3. ಪತಿ-ಪತ್ನಿ ಪ್ರಕರಣ ಹೆಚ್ಚುವರಿ ವರ್ಗಾವಣೆಯಲ್ಲಿ ಪತಿ-ಪತ್ನಿ ಇವರಲ್ಲಿ ಒಬ್ಬರು ಜಿಲ್ಲೆಯಿಂದ ಹೊರಗೆ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಆಧ್ಯತೆಗೆ ಪರಿಗಣಿಸಲು ಅವಕಾಶವಿರುವುದಿಲ್ಲ. ಆದರೆ
  ಪತಿ-ಪತ್ನಿ ಇಬ್ಬರೂ ಒಂದೇ ತಾಲ್ಲೂಕಿನಲ್ಲಿ ಒಂದೇ ಜಿಲ್ಲೆಯ ಬೇರೆ ಬೇರೆ ತಾಲೂಕಿನಲ್ಲಿ
  ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹವರಿಗೆ ಹೆಚ್ಚುವರಿಯಲ್ಲಿ ಆಧ್ಯತೆಗೆ ಪರಿಗಣಿಸುವುದು.

4.ಜಿ.ಪಿ.ಟಿ ಹಾಗೂ ಪಿ.ಎಸ್.ಟಿ ಶಿಕ್ಷಕರಿಗೆ ಅವರ ನೇಮಕಾತಿ ಆದೇಶದಲ್ಲಿ 5 ವರ್ಷ ಅಥವಾ 10 ವರ್ಷ ಅದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಷರತ್ತು ವಿಧಿಸಿದ್ದಲ್ಲಿ ನೇಮಕಾತಿ
ಆದೇಶದಲ್ಲಿರುವ ಷರತ್ತಿನ ನ್ವಯ ಪರಿಗಣಿಸಬೇಕು.

 1. ಸೇವಾ ಹಿರಿತನ ಶಿಕ್ಷಕರು ಒಂದೇ ದಿನ ಪೂರ್ವಾಹ್ನ ಅಥವಾ ಅಪರಾಹ್ನ ಕರ್ತವ್ಯಕ್ಕೆ
  ಹಾಜರಾಗಿದ್ದಲ್ಲಿ ಪೂರ್ವಾಹ್ನ, ಅಥವಾ ಅಪರಾಹ್ನ ಎಂಬುದನ್ನು ಪರಿಗಣಿಸದೇ, ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನು ಮಾತ್ರ ಪರಿಗಣಿಸುವುದು, ಒಂದು ವೇಳೆ ಕರ್ತವ್ಯಕ್ಕೆ ಹಾಜರಾದ
  ದಿನಾಂಕ ಒಂದೇ ಆಗಿದ್ದಲ್ಲಿ ಅವರ ಜನ್ಮ ದಿನಾಂಕವನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕರನ್ನು
  ಗುರುತಿಸಲು ಕ್ರಮವಹಿಸುವುದು.
  ಉಳಿದಂತೆ ಈಗಾಗಲೇ ನೀಡಿರುವ ಅಧಿಸೂಚನೆ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ವರ್ಗಾವಣಾ
  ಕಾಯ್ದೆ/ ನಿಯಮಗಳನ್ನು ಗಮನಿಸಿ ಅದರಂತೆ ಕ್ರಮವಹಿಸಲು ಸೂಚಿಸಿದೆ.
WhatsApp Group Join Now
Telegram Group Join Now
Sharing Is Caring:

Leave a Comment