VIDYAVAHINI ಯಲ್ಲಿ ಸಮವಸ್ತ್ರ ಮಾಹಿತಿ UPLOAD ಮಾಡುವ ಲಿಂಕ್ ಮತ್ತು ವಿಧಾನ ಇಲ್ಲಿದೆ

ಮಾಹಿತಿ upload ಮಾಡುವ ಮೊದಲು ಕಡ್ಡಾಯವಾಗಿ ಓದಿಕೊಳ್ಳಿ

ಘನ ಉಚ್ಛ ನ್ಯಾಯಾಲಕ್ಕೆ ರಾಜ್ಯದ ಪ್ರತಿಯೊಂದು ಶಾಲೆಯಿಂದ ಮಾಹಿತಿಯನ್ನುಒದಗಿಸಬೇಕಾಗಿದ್ದು ಅವುಗಳನ್ನು ಮುದ್ರಿತ ಪ್ರತಿಗಳಲ್ಲಿ ಸಂಗ್ರಹಿಸಿದಲ್ಲಿ ಅತೀ ಹೆಚ್ಚು ಗಾತ್ರವಾಗಬಹುದೆಂದು ಇಲಾಖೆಯ ವಿದ್ಯಾವಾಹಿನಿ ಪೋರ್ಟಲ್‌ನಲ್ಲಿ ಪ್ರತಿಯೊಂದು ಶಾಲೆಯು ಮಾಹಿತಿಯನ್ನುಇಂದೀಕರಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಮಾಹಿತಿಯನ್ನು ಇಂದೀಕರಿಸಲು4 ಕ್ರಮಗಳನ್ನುಅಳವಡಿಸಲಾಗಿದೆ.

1. ಪ್ರತಿಯೊಂದು ಶಾಲೆಯಿಂದ ಮುಖ್ಯ ಶಿಕ್ಷಕರು

2. ಕ್ಲಸ್ಟರ್ ಹಂತದಲ್ಲಿ – ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು

3. ತಾಲ್ಲೂಕು ಹಂತದಲ್ಲಿ – ಬಿ.ಆರ್.ಪಿ./ ಬಿ.ಆರ್.ಸಿ.ಕೇಂದ್ರದಿಂದ

4.ಜಿಲ್ಲಾ ಹಂತದಲ್ಲಿ ಡಿ.ವೈ.ಪಿ.ಸಿ.ಗಳಿಂದ

ವಿದ್ಯಾವಾಹಿನಿಯಲ್ಲಿ 4 ಭಾಗಗಳಿವೆ.

1. ಪ್ರತಿಯೊಂದು ಶಾಲೆಯು ಭರ್ತಿ ಮಾಡಿ ಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರಸಹಿಯೊಂದಿಗೆ ಸ್ಕ್ಯಾನ್ ಮಾಡಿ ಸಲ್ಲಿಸಬೇಕಾದ ವರ್ಷವಾರು ಕ್ರೋಡಿಕೃತ ನಮೂನೆ(Abstract format). (ಇದನ್ನು ಅಪ್‌ಲೋಡ್ ಮಾಡುವುದು.)

2. ಸಮವಸ್ತ್ರ ಮತ್ತು ಶೂ-ಸಾಕ್ಸ್ ಖರೀದಿಗೆ ಸಂಬಂಧಿಸಿದ ಪೂರ್ವಭಾವಿ ಸಭೆ ನಡವಳಿ(ಪಿ.ಡಿ.ಎಫ್. ಮಾಡಿದ ಪ್ರತಿಯನ್ನು ಅಪ್ ಲೋಡ್ ಮಾಡುವುದು.3. ಸಮವಸ್ತ್ರ ಮತ್ತು ಶೂ-ಸಾಕ್ಸ್ ಖರೀದಿ ನಂತರ ವಿತರಣೆಗೆ ಸಂಬಂಧಿಸಿದ ಸಭೆಯನಡವಳಿಯ ಪ್ರತಿ (ಪಿ.ಡಿ.ಎಫ್.ಮಾಡಿದ ಪ್ರತಿ) ಯನ್ನು ಅಪ್ ಲೋಡ್ ಮಾಡುವುದು.

4. ಶಾಲಾವಾರು ಮತ್ತು ತರಗತಿವಾರು ಸಮವಸ್ತ್ರ ಹಾಗೂ ಶೂ ಸಾಕ್ಸ್ ಪಡೆದ ಫಲಾನುಭವಿಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯನ್ನು ವಿದ್ಯಾವಾಹಿನಿಯಲ್ಲಿ ಒದಗಿಸಿರುವಕಾಲಂನಲ್ಲಿ ಭರ್ತಿ ಮಾಡುವುದು.ಎಲ್ಲಾ ಮಾಹಿತಿಗಳನ್ನು ಮೇಲೆ ನಮೂದಿಸಿರುವ ಅಂಗವಾಗಿರು ವಿಭಾಗಗಳಲ್ಲಿಯೇ ಇಂದೀಕರಿಸುವುದು.

ಕ್ರೋಡಿಕೃತ ನಮೂನೆ (Abstract format) ಯನ್ನು ಭರ್ತಿ ಮಡುವಾಗ ಗಮನಿಸಬೇಕಾದಅಂಶಗಳು:

1. ಘನ ಉಚ್ಛ ನ್ಯಾಯಾಲಯದ ಆದೇಶದಂತೆ 2019-20, 2020-21, 2021-22 ಮತ್ತು 2022-23ನೇ ಸಾಲಿನ 2 ಜೋತೆ ಸಮವಸ್ತ್ರ ಹಾಗೂ ಶೂ-ಸಾಕ್ಸ್ ವಿತರಣೆ ಮಾಹಿತಿಯನ್ನುವರ್ಷವಾರು ನಮೂನೆಯಲ್ಲಿ ಭರ್ತಿ ಮಾಡಬೇಕು.

2. 2ನೇ ಸೆಟ್ ಸಮವಸ್ತ್ರಕ್ಕೆ ಅನುದಾನ ಬಿಡುಗಡೆಯಾದ ದಿನಾಂಕವನ್ನು ಸ್ಪಷ್ಟವಾಗಿ ನಮೂನೆಯಲ್ಲಿಸಂಬಂಧಿಸಿದ ಅಂಕಣದಲ್ಲಿ ನಮೂದಿಸುವುದು.

3. ಶೂ-ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆಯಾದ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸುವುದು.

4. ಕೋವಿಡ್ ಕಾರಣದಿಂದ ಕೆಲವು ಜಿಲ್ಲೆಗಳಲ್ಲಿ 2019-20ನೇ ಸಾಲಿನ 2ನೇ ಸೆಟ್ ಸಮವಸ್ತ್ರವನ್ನು2021ರಲ್ಲಿ ಶಾಲೆ ಪ್ರಾರಂಭವಾದಾಗ ವಿತರಿಸಲು ಆದೇಶಿಸಲಾಗಿದೆ. ಅದರಂತೆ ಯಾವ ದಿನಾಂಕದಂದು ವಿತರಿಸಲಾಗಿದೆಯೇ ಅದೇ ದಿನಾಂಕವನ್ನು 2019-20ರ ಕ್ರೋಡಿಕೃತ ನಮೂನೆ(Abstract format) ಗಳಲ್ಲಿನ ಕಾಲಂನಲ್ಲಿ ನಮೂದಿಸುವುದು.

5. 2020-21 ಮತ್ತು 2021-22ರಲ್ಲಿ ಶೂ-ಸಾಕ್ಸ್ ಅನುದಾನ ಬಿಡುಗಡೆಯಾಗಿರುವುದಿಲ್ಲ. ಆದ್ದರಿಂದಸದರಿ ವರ್ಷದ ಕ್ರೋಡಿಕೃತ ನಮೂನೆ (Abstract format) ಗಳಲ್ಲಿ “ವಿಡ್ ಕಾರಣದಿಂದಶಾಲೆಗಳು ಪೂರ್ಣ ಪ್ರಮಾಣದಲ್ಲಿ ನಡೆಯದ ಕಾರಣ ಅನುದಾನ ಬಿಡುಗಡೆಯಾಗಿರುವುದಿಲ್ಲ”ಎಂದು ನಮೂದಿಸುವುದು.

6. 2020-21ರಲ್ಲಿ ಎರಡನೇ ಸೆಟ್ ಸಮವಸ್ತ್ರಕ್ಕಾಗಿ ಅನುದಾನ ಬಿಡುಗಡೆಯಾಗಿರುವುದಿಲ್ಲ ಆದ್ದರಿಂದ“ಕೋವಿಟ್-19 ಕಾರಣದಿಂದ ಶಾಲೆಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗದ ಕಾರಣ2020-21ನೇ ಸಾಲಿನ 2ನೇ ಸೆಟ್ ಸಮವಸ್ತ್ರದ ಅನುದಾನ ಬಿಡುಗಡೆಯಾಗಿರುವುದಿಲ್ಲ” ಎಂದುನಮೂದಿಸುವುದು.

7. 2021-22ನೇ ಸಾಲಿನಲ್ಲಿ ಮೊದಲ ಜೊತೆ ಸಮವಸ್ತ್ರವನ್ನು ಶಾಲಾ ಪ್ರಾರಂಭದಲ್ಲಿಯೇವಿತರಿಸಲಾಗಿದೆ. ಇದೇ ಸಾಲಿನ ಎರಡನೇಜೊತೆ ಸಮವಸ್ತ್ರವನ್ನು ಮಾನ್ಯ ಆಯುಕ್ತರ ಕಛೇರಿಯಿಂದಲೇ 2022ರ ಜೂನ್ ಮಾಹೆಯಲ್ಲಿ ಶಾಲೆಗಳಿಗೆ ವಿತರಣೆ ಮಾಡಲಾಗಿದೆ.

ಆದ್ದರಿಂದ 2021-22ನೇ ಸಾಲಿನ ಕ್ರೋಡಿಕೃತ ನಮೂನೆ (Abstract format) ಯಲ್ಲಿಅನುದಾನ ಬಿಡುಗಡೆ S.D.M.Cಸಭೆ ನಡವಳಿ ಬದಲಾಗಿ 2ನೇ ಜೊತೆ ಸಮವಸ್ತ್ರದ ಬಟ್ಟೆಬಂದಿದ್ದು ಅದನ್ನು ಹೊಲೆಸಿ ವಿದ್ಯಾರ್ಥಿಗಳಿಗೆ ಒದಗಿಸಿದ್ದಲ್ಲಿ ಅದರ ಸಭಾ ನಡವಳಿಯನ್ನುಸ್ಕಾನ್ ಮಾಡಿ ಆಪ್‌ಲೋಡ್ ಮಾಡುವುದು ಹಾಗೂ ಅದೇ ವಿವರವನ್ನು 2021-22ನೇ ಸಾಲಿನ ಕ್ರೋಡಿಕೃತ ನಮೂನೆ (Abstract format) ಯಲ್ಲಿ ನಮೂದಿಸುವುದು.

8. 2022-23ನೇ ಸಾಲಿನಲ್ಲಿ ಈಗಾಗಲೇ ಒಂದುಜೊತೆ ಸಮವಸ್ತ್ರವನ್ನು ಆಯುಕ್ತರ ಕಛೇರಿಯಿಂದಒದಗಿಸಲಾಗಿದ್ದು, ಶೂ-ಸಾಕ್ಸ್ ಅನುದಾನವನ್ನು ಆಯುಕ್ತರ ಕಛೇರಿಯಿಂದಲೇ ಬಿಡುಗಡೆಮಾಡಲಾಗಿದ್ದು, ಅದರ ವಿವರಗಳನ್ನು ನಮೂದಿಸುವುದು.

9. 2ನೇ ಸೆಟ್ ಸಮವಸ್ತ್ರದ ಕಾಲಂನಲ್ಲಿ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿದೆ ಎಂದು 2022-2ನೇಸಾಲಿನ ನಮೂನೆಯಲ್ಲಿ ನಮೂದಿಸುವುದು.

10. ಪ್ರತಿ ವರ್ಷದ ಕ್ರೋಡಿಕೃತ ನಮೂನೆ (Abstract format) ಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕರು ಹಾಗೂ ಹಾಲಿಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಲಭ್ಯವಿರುವ ಸದಸ್ಯರುಗಳ ಸಹಿ ಮಾಡಿಸಿ ಸೀಲು ಹಾಕಿ ಕ್ರೋಡಿಕೃತ ನಮೂನೆ (Abstractformat) ಅನ್ನು ಅಪ್‌ಲೋಡ್ ಮಾಡುವುದು.

11. ಈ ನಮೂನೆಗಳನ್ನು ಪಿ.ಡಿ.ಎಫ್. ಮಾಡಿ ವಿದ್ಯಾವಾಹಿನಿ ಪೋರ್ಟಲ್ ನಲ್ಲಿ ವರ್ಷವಾರುಅಳವಡಿಸುವುದು.

ಎಸ್.ಡಿ.ಎಂ.ಸಿ. ನಡವಳಿಗಳನ್ನು ಅಪ್ ಲೋಡ್ ಮಾಡಬೇಕಾದ ಗಮನಿಸಬೇಕಾದ ಅಂಶಗಳು:

1. 2ನೇ ಸೆಟ್ ಸಮವಸ್ತ್ರ ಹಾಗೂ ಶೂ ಸಾಕ್ಸ್ ಖರೀದಿ ಸಂಬಂಧ ನಡೆದ ಪೂರ್ವಭಾವಿ ಸಭೆಯ ನಡವಳಿಯ ಪ್ರತಿಯನ್ನು ಪಿ.ಡಿ.ಎಫ್. ಮಾಡಬೇಕು. ಎರಡೂ ವಿಷಯಗಳಿಗೆ ಪ್ರತ್ಯೇಕವಾಗಿಸಭೆಯನ್ನು ನಡೆಸಿದ್ದಲ್ಲಿ ಎರಡು ಸಭಾ ನಡವಳಿ ಇದ್ದಲ್ಲಿ ಎರಡನ್ನೂ ಸೇರಿಸಿ ಒಂದೇಪಿ.ಡಿ.ಎಫ್. ಪ್ರತಿಯನ್ನು ಮಾಡಿ ಅಪ್ ಲೋಡ್ ಮಾಡುವುದು.

2. 2ನೇ ಸೆಟ್ ಸಮವಸ್ತ್ರ ಹಾಗೂ ಶೂ ಸಾಕ್ಸ್ ಖರೀದಿ ನಂತರ ವಿತರಣೆ ಕುರಿತಂತೆ ಎಸ್.ಡಿ.ಎಂ.ಸಿ.ಸಭೆ ನಡೆದಿದ್ದಲ್ಲಿ ಅದರ ಸಭಾ ನಡವಳಿಯನ್ನು ಸಹಾ ಪಿ.ಡಿ.ಎಫ್. ಮಾಡಿ ಅಪ್ ಲೋಡ್ ಮಾಡುವುದು.

3. ತಾಲ್ಲೂಕಿನಲ್ಲಿ ಮುಚ್ಚಿದ ಶಾಲೆಗಳಿದ್ದಲ್ಲಿ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಯಾವ ಶಾಲೆಗಳಿಗೆ ಕೊಡಲಾಗಿದೆಯೋ ಆ ಶಾಲೆಯ ಮುಖ್ಯ ಶಿಕ್ಷಕರಿಂದಲೇ ಮುಚ್ಚಿದ ಶಾಲೆಯಮಾಹಿತಿಯನ್ನು ಸಿದ್ಧಪಡಿಸಿ ಅಪ್ ಲೋಡ್ ಮಾಡಿಸುವುದು

4. ಯಾವುದಾದರೂ ಶಾಲೆಗಳು 1 ರಿಂದ 10ನೇ ತರಗತಿಯವರೆಗೆ ಒಂದೇ ಡೈಸ್ ಕೋಡಿನಲ್ಲಿನಡೆಯುತ್ತಿದ್ದು, ಬೇರೆ ಬೇರೆ ಎಸ್.ಡಿ.ಎಂ.ಸಿ. ಸಮಿತಿಗಳಿದ್ದಲ್ಲಿ ಎಲ್ಲಾ ಎಸ್.ಡಿ.ಎಂ.ಸಿ.ಗಳನಡವಳಿಗಳನ್ನು ಒಟ್ಟಾಗಿ ಒಂದೇ ಪಿ.ಡಿ.ಎಫ್.ನಲ್ಲಿ ಮಾಡಿ ಸಂಬಂಧಿಸಿದ ಕಾಲಂನಲ್ಲಿ ಅಪ್ಲೋಡ್ ಮಾಡುವುದು

5. ಯಾವುದಾದರೂ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ.ಗಳಿಲ್ಲದೆ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಹಂತದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಲ್ಲಿ ಅದರ ಪ್ರತಿಯನ್ನೇ ಪಿ.ಡಿ.ಎಫ್ ಮಾಡಿ ಅಪ್ ಲೋಡ್ ಮಾಡುವುದು.ಪ್ರತಿಯೊಂದು ಮಾಹಿತಿಯನ್ನು ಘನ ಉಚ್ಛ ನ್ಯಾಯಾಲಯವು ಅತೀ ಸೂಕ್ಷ್ಮವಾಗಿಗಮನಿಸುವುದರಿಂದ ಯಾವುದೇ ಮಾಹಿತಿಯನ್ನು ಪಿ.ಡಿ.ಎಫ್. ಮಾಡುವಾಗ ಮತ್ತು ಆಪ್ಲೋಡ್ ಮಾಡುವಾಗ ಜಾಗರೂಕತೆ ವಹಿಸುವುದು.

ಏನೇ ವ್ಯತ್ಯಾಸವಾದಲ್ಲಿ ನ್ಯಾಯಾಲಯಕ್ಕೆತಪ್ಪು ಮಾಹಿತಿ ಹಾಗೂ ಅನಗತ್ಯ ಮಾಹಿತಿಯನ್ನು ಕೊಟ್ಟ ಕಾರಣಕ್ಕಾಗಿ ಸಂಬಂಧಿಸಿದವರ ಮೇಲೆಶಿಸ್ತು ಕ್ರಮವನ್ನು ಜರುಗಿಸಲಾಗುವುದು. ಆದುದರಿಂದ ಪ್ರತಿಯೊಂದು ಮಾಹಿತಿಯನ್ನು ಎರಡುಬಾರಿ ಪರಿಶೀಲಿಸಿ ನಂತರ ಮಾತ್ರವೇ ಪಿ.ಡಿ.ಎಫ್ ಮಾಡಿ ಅಪ್ಲೋಡ್ ಮಾಡುವುದು. ಪ್ರತಿಶಾಲೆಯಿಂದ ಮಾಹಿತಿಯನ್ನು ಅಪ್ ಲೋಡ್ ಮಾಡಲು ದಿನಾಂಕ 11.2.2023 ಕೊನೆಯ ದಿನಾಂಕವಾಗಿರುತ್ತದೆ. ಘನ ಉಚ್ಛ ನ್ಯಾಯಾಲಯಕ್ಕೆ ಮಾಹಿತಿಯನ್ನು ತುರ್ತಾಗಿ ಒದಗಿಸ ಬೇಕಾದ ಕಾರಣ ವಿಳಂಬ ಮಾಡದೆ ಮಾಹಿತಿಯನ್ನು ವಿದ್ಯಾವಾಹಿನಿಯಲ್ಲಿ ಇಂದೀಕರಿಸುವುದು.

Uniform updated circular (09/02/23)

ಪ್ರೋತ್ಸಾಹಕಗಳು ವಿತರಣೆ Incentives Distribution

2019-20 ರಿಂದ ಪ್ರಸಕ್ತ ಸಾಲಿನವರೆಗೆ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2 ಜೊತೆ ಸಮವಸ್ತ್ರ ಹಾಗೂ ಶೂ ಮತ್ತು 2 ಜೊತೆ ಸಾಕ್ಸ್ ವಿತರಿಸಿರುವ ಕುರಿತು ಮಾಹಿತಿ upload ಮಾಡಲು ಅಗತ್ಯ ನಮೂನೆ

ಶೂ ಸಾಕ್ಸ್ ವಿತರಿಸಿರುವ ಮಾಹಿತಿ upload ಮಾಡುವ ಕುರಿತು ವೀಡಿಯೋ ಮಾಹಿತಿ

Sharing Is Caring:

Leave a Comment