ಶಿಕ್ಷಕರ ಹೆಚ್ಚುವರಿ ಮತ್ತು ವರ್ಗಾವಣೆಯ ಕುರಿತು ನೌಕರ ಸಂಘದ ಮನವಿ ಹೆಚ್ಚಿನ ಮಾಹಿತಿ ಇಲ್ಲಿದೆ

IMG 20230130 WA0013

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ, ವರ್ಗಾವಣೆ ಹಾಗೂ
ಮುಂಬಡ್ತಿ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸುವಂತೆ ಶಿಕ್ಷಣ ಸಚಿವರಿಗೆ ಸರಕಾರಿ ನೌಕರರ ಸಂಘವೂ ಮನವಿ ಮಾಡಿದೆ

ಮನವಿಯಲ್ಲಿ ಜನಪ್ರತಿನಿಧಿಗಳು ಸಂಘಟನೆಗಳ ಕೋರಿಕೆಯ ಮೇರೆಗೆ
ಅವೈಜ್ಞಾನಿಕ-ತಾಂತ್ರಿಕ ಕಾರಣಗಳಿಗಾಗಿ ಈಗಾಗಲೇ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗಳನ್ನು ನಿಲ್ಲಿಸಿ, ಮುಂದಿನ
ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿರುತ್ತೀರಿ. ಆದರಂತೆ ರಾಜ್ಯದ ಸಮಸ್ತ
ಶಿಕ್ಷಕರುಗಳ ಕೋರಿಕೆ ಹಾಗೂ ಶಾಲೆಗಳ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಅಗತ್ಯ ಕ್ರಮ ಕೈಗೊಳ್ಳಲು
ಕೋರಿದೆ.

  1. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಎಲ್ಲಾ ವಿಷಯಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗಳನ್ನು
    ಯಾವುದೇ ಶಿಕ್ಷಕರಿರಲಿ ಅವರನ್ನು ಆಯಾ ತಾಲ್ಲೂಕಿನ ಒಳಗಡೆ ಮಾತ್ರ ಸ್ಥಳ ನಿಯುಕ್ತಿಗೊಳಿಸುವುದು. ಈ
    ಪ್ರಕ್ರಿಯೆಯಲ್ಲಿ ಶಿಕ್ಷಕರುಗಳು ಇಚ್ಚಿಸಿದ್ದಲ್ಲಿ ಮಾತ್ರ ಹೊರ ತಾಲ್ಲೂಕು-ಜಿಲ್ಲೆಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು
    ಅವಕಾಶ ಮಾಡಿಕೊಡುವುದು.
  2. ಹೆಚ್ಚುವರಿ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ವರ್ಗಾವಣೆ ಪ್ರಕ್ರಿಯೆಯನ್ನು ನಿಗದಿತ
    ವೇಳಾಪಟ್ಟಿಯಂತೆ ಪ್ರಾರಂಭಿಸುವುದು.
  3. ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರಿಗೆ ಒಂದು ವರ್ಷದಿಂದ ಮುಂಬಡ್ತಿಯನ್ನು ನೀಡಿರುವುದಿಲ್ಲ.
    ಈಗಾಗಲೇ ಸಾವಿರಾರು ಶಿಕ್ಷಕರು ಮುಂಬಡ್ತಿ ಪಡೆಯದೆ ನಿವೃತ್ತರಾಗಿರುತ್ತಾರೆ. ಹಾಗಾಗಿ ಮುಂಬಡ್ತಿಗಳನ್ನು
    ನೀಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವುದು.
  4. ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳಿಗೆ ವಿನಾಯಿತಿ ನೀಡುವುದು.

ಈ ವಿಷಯಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳ
ಅಧ್ಯಕ್ಷರುಗಳನ್ನು ಆಹ್ವಾನಿಸಬೇಕಾಗಿ ಸಚಿವರಿಗೆ ಮನವಿ ಸಲ್ಲಿಸಿದೆ

Sharing Is Caring:

Leave a Comment