ಜೇಷ್ಠತೆ ಆಧಾರದಲ್ಲಿ ಶಿಕ್ಷಕರ ಹಾಜರಿ ಪುಸ್ತಕದಲ್ಲಿ ಹೆಸರುಗಳನ್ನು ನಮೂದಿಸುವ ಬಗ್ಗೆ.

ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳ ವಿವರಗಳನ್ನು ಶಾಲೆಯ ಮಾಹಿತಿ ಫಲಕದಲ್ಲಿ
ಹಾಗೂ ಹಾಜರಾತಿ ವಹಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಹಾಗೂ
ಮುಂದಿನ ವೃಂದ ಮತ್ತು ನೇಮಕಾತಿ ನಿಯಮಗಳು ತಿದ್ದುಪಡಿಯಾಗುವವರೆವಿಗೂ
ಸೇವಾ ಹಿರಿತನದ ಆಧಾರದ ಕೆಳಗಿನಂತೆ ಸಿದ್ಧಪಡಿಸಿದ ತಃಖ್ತೆಯಂತೆ ಕ್ರಮವಹಿಸಲು
ಉಪನಿರ್ದೆಶಕರು(ಆಡಳಿತ) ಇವರುಗಳಿಗೆ ತಿಳಿಸಲಾಗಿರುತ್ತದೆ ಹಾಗೂ
ಸುತ್ತೋಲೆಯಂತೆ ಯಾವುದೇ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಶಿಕ್ಷಕರುಗಳು ಆಕ್ಷೇಪಣೆಗಳನ್ನು ಸಲ್ಲಿಸಿರುವುದಿಲ್ಲ ಎಂದು
ನಿರ್ದೇಶಕರು(ಪ್ರಾಥಮಿಕ) ರವರು ಅಭಿಪ್ರಾಯಿಸಿರುತ್ತಾರೆ.

   ಕ್ರ.ಸಂ               ಹುದ್ದೆಗಳು
  1. 1ನೇ ವೃಂದ – ಹಿರಿಯ ಮುಖ್ಯ ಶಿಕ್ಷಕರು / ಮುಖ್ಯ ಶಿಕ್ಷಕರು
  2. 2ನೇ ವೃಂದ – ಸಹ ಶಿಕ್ಷಕರುಗಳು (ಸೇವಾ ಜೇಷ್ಠತೆಯನ್ನು ಆಧರಿಸಿ) (1 ರಿಂದ
    5ನೇ ತರಗತಿ)
  3. 3ನೇ ವೃಂದ – ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6 ರಿಂದ 8ನೇ ತರಗತಿ)
  4. 4ನೇ ವೃಂದ – ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-2
  5. 5ನೇ ವೃಂದ – ಸಂಗೀತ, ಚಿತ್ರಕಲಾ ಶಿಕ್ಷಕರು (ಶಿಕ್ಷಕರಿದ್ದಲ್ಲಿ ಮಾತ್ರ)
  6. 6ನೇ ವೃಂದ – ನರ್ಸರಿ ಶಾಲಾ ಶಿಕ್ಷಕರು (ಎನ್.ಎಸ್.ಟಿ)
Sharing Is Caring:

Leave a Comment