2026-27ನೇ ಸಾಲಿನ ಮೆಟ್ರಿಕ್ ಪೂರ್ವ (1 ರಿಂದ 10ನೇ ತರಗತಿ) SSP ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಕೆ ಹಾಗೂ ನವೀಕರಣ (Renewal) ಪ್ರಕ್ರಿಯೆ ಆರಂಭವಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಕೆಳಗಿನ ಮಾಹಿತಿಯನ್ನು ಅನುಸರಿಸಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
- ಮೊದಲ ಬಾರಿ SSP ಖಾತೆ ಸೃಷ್ಟಿಸುವುದು
- ಗೂಗಲ್ನಲ್ಲಿ SSP Karnataka ಎಂದು ಹುಡುಕಿ ಅಧಿಕೃತ SSP ವೆಬ್ಸೈಟ್ಗೆ ಭೇಟಿ ನೀಡಿ.
- “ಹೊಸ ಖಾತೆಯನ್ನು ಸೂಚಿಸಲು ಇಲ್ಲಿ ಕ್ಲಿಕ್ ಮಾಡಿ” ಎಂಬ ಆಯ್ಕೆಯನ್ನು ಆಯ್ಕೆಮಾಡಿ.
- ವಿದ್ಯಾರ್ಥಿಯ ಆಧಾರ್ ಸಂಖ್ಯೆ ನಮೂದಿಸಿ Click to Proceed ಕ್ಲಿಕ್ ಮಾಡಿ.
- ನಿಮ್ಮ SSP ID ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಕಾಣಿಸುತ್ತದೆ. SSP ID ಅನ್ನು ಸುರಕ್ಷಿತವಾಗಿ ದಾಖಲಿಸಿಕೊಳ್ಳಿ.
- ಹೊಸ ಪಾಸ್ವರ್ಡ್ ರಚಿಸುವುದು
- 2026-27 ಮೆಟ್ರಿಕ್ ಪೂರ್ವ (1 ರಿಂದ 10ನೇ ತರಗತಿ) ಲಿಂಕ್ ಆಯ್ಕೆಮಾಡಿ.
- Forgot Password ಆಯ್ಕೆಯ ಮೂಲಕ SSP ID ನಮೂದಿಸಿ ಹೊಸ ಪಾಸ್ವರ್ಡ್ ರಚಿಸಿ.
- ನೋಂದಾಯಿತ ಮೊಬೈಲ್ಗೆ ಬಂದ OTP ನಮೂದಿಸಿ ಪಾಸ್ವರ್ಡ್ ದೃಢೀಕರಿಸಿ.
- ಕಳೆದ ವರ್ಷ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ (Renewal)
- ಕಳೆದ ವರ್ಷ SSP ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಿದ್ದರೆ, ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
- ಅರ್ಜಿ ಸ್ವಯಂಚಾಲಿತವಾಗಿ (Auto Renewal) ನವೀಕರಣವಾಗುತ್ತದೆ.
- ವಿದ್ಯಾರ್ಥಿ ಲಾಗಿನ್ ಮಾಡಿ KYC Status ಪರಿಶೀಲಿಸಿ.
- Print Acknowledgment ಡೌನ್ಲೋಡ್ ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳಿ.
- ಹೊಸದಾಗಿ ಅರ್ಜಿ ಸಲ್ಲಿಸುವ ವಿಧಾನ (Fresh Application)
ಹಿಂದಿನ ವರ್ಷ SSP ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಈ ಕ್ರಮ ಅನುಸರಿಸಿ:
ಹಂತ 1: ಶಾಲೆಯಿಂದ ಪಡೆದ SATS ID ನಮೂದಿಸಿ ವಿವರಗಳನ್ನು Fetch ಮಾಡಿ ಪರಿಶೀಲಿಸಿ.
ಹಂತ 2: ಪೋಷಕರ ಶಿಕ್ಷಣ, ಅನಕ್ಷರತೆ ಹಾಗೂ ವೃತ್ತಿ ವಿವರಗಳನ್ನು ಭರ್ತಿ ಮಾಡಿ.
ಹಂತ 3: ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD Number ನಮೂದಿಸಿ ವಿವರಗಳನ್ನು Fetch ಮಾಡಿ.
ಹಂತ 4: ಅಗತ್ಯವಿದ್ದರೆ ವಿಕಲಚೇತನರ ಮಾಹಿತಿ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸಿ.
ಹಂತ 5: ಮನೆಯಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು Day Scholar (D.S. Scholar) ಆಯ್ಕೆ ಮಾಡಿ.
ಹಂತ 6: ಎಲ್ಲಾ ಮಾಹಿತಿಯನ್ನು Preview ಮೂಲಕ ಪರಿಶೀಲಿಸಿ Final Submit ಮಾಡಿ.
ಹಂತ 7: ಅರ್ಜಿ ಸಲ್ಲಿಸಿದ ನಂತರ Acknowledgment ಪ್ರತಿಯನ್ನು ಡೌನ್ಲೋಡ್ ಅಥವಾ ಪ್ರಿಂಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ವಿದ್ಯಾರ್ಥಿಗಳಿಗೆ ಮುಖ್ಯ ಸೂಚನೆಗಳು
- ಆಧಾರ್ ಸಂಖ್ಯೆ, SATS ID ಮತ್ತು RD Number ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
- ನೋಂದಾಯಿತ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು.
- ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
- Acknowledgment ಪ್ರತಿಯನ್ನು ಭವಿಷ್ಯದ ಬಳಕೆಗೆ ಉಳಿಸಿಕೊಳ್ಳಿ.
- 👉 1. ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ (Rural Candidate Certificate) ಆನ್ಲೈನ್ನಲ್ಲಿ ಭರ್ತಿ ಮಾಡಿ ಪ್ರಿಂಟ್ ಪಡೆಯಿರಿ!
- 👉 2. ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ (Kannada Medium Certificate) ಪಡೆಯುವ ವಿಧಾನ
- 👉 3. SATS ನಲ್ಲಿ Miss ಆದ Original Transfer Certificate (TC) ಪಡೆದುಕೊಳ್ಳುವುದು ಹೇಗೆ?
- 👉 4. ಅಕ್ಷರ ದಾಸೋಹ ಯೋಜನೆ ಕುರಿತು ಸಂಪೂರ್ಣ ಮಾಹಿತಿ (ಶಿಕ್ಷಕರು ಮತ್ತು ಪೋಷಕರಿಗೆ)
- 👉 5. ಕನ್ನಡ ಕೃತಿ ಪರಿಚಯ ಮತ್ತು ಲೇಖಕರ ಸಂಪೂರ್ಣ ವಿವರಗಳು (Kruti Parichaya)