ಶಿಕ್ಷಕರ ಕಲ್ಯಾಣ ನಿಧಿ ಸಂಪೂರ್ಣ ಮಾಹಿತಿ ಇಲ್ಲಿದೆ

IMG 20230609 WA0166
IMG 20230607 WA0065

ಕಾಯದರ್ಶಿ / ಖಜಾಂಚಿಗಳು, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ
ಕ್ಷೇಮಾಭಿವೃದ್ಧಿ ನಿಧಿ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ (ಕರ್ನಾಟಕ ರಾಜ್ಯ ಘಟಕ), ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಂಗಳೂರು – 560002

ಸ್ಥಾಪನೆ ಮತ್ತು ಆಡಳಿತ:

  • 1963ನೇ ಸಾಲಿನಲ್ಲಿ ಸ್ಥಾಪಿತವಾಗಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ವಂತಿಕೆಯಿಂದ ನಡೆಯುತ್ತಿರುವ ದತ್ತಿ
    ಸಂಸ್ಥೆಯಾಗಿದೆ.
  • ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಅಧ್ಯಕ್ಷರು

●ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಕಾರ್ಯದರ್ಶಿ/ ಖಜಾಂಚಿಗಳು.

  • ನಿಧಿಯ ಕಛೇರಿಯಲ್ಲಿ ಒಬ್ಬರು ಉಪನಿರ್ದೇಶಕರು, ಇಬ್ಬರು ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಇತರೆ
    ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಧಿಗಳ ಆದಾಯದ ಮೂಲಗಳು :

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಶಿಕ್ಷಕರ ದಿನಾಚರಣೆ’ಯ ಬಾವುಟಗಳ ಮಾರಾಟದಿಂದ ಮತ್ತು
ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುವ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗಳ ಮತ್ತು ವಾರ್ಷಿಕ ಶುಲ್ಕದ ಹಣದಿಂದ ಹಾಗೂ ಶಿಕ್ಷಕರಿಂದ ಆಜೀವ ಸದಸ್ಯತ್ವ ಶುಲ್ಕದಿಂದ ಸಂಪನ್ಮೂಲವನ್ನು ಸಂಗ್ರಹಣೆ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಎಲ್ಲಾ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸಲು Center for smart Governance (CSG), ಬೆಂಗಳೂರು ಈ ಸಂಸ್ಥೆಯ ಮೂಲಕ ತಂತ್ರಾಂಶಗಳನ್ನು ಸಿದ್ಧಪಡಿಸಿಕೊಂಡು ಸೇವೆಯನ್ನು ಒದಗಿಸಲಾಗುತ್ತಿದೆ.

ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ kstbfonline.karnataka.gov.in_URL ಮೂಲಕ ಆಜೀವ
ಸದಸ್ಯತ್ವ ನೋಂದಣಿ ಪಡೆಯಬಹುದಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಒಟ್ಟು 08 ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸಲಾಗುತ್ತಿದೆ .

1.ಆಜೀವ ಸದಸ್ಯತ್ವ ಕಾರ್ಡ್ ವಿತರಣೆ (Life Membership Card)

2. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ
ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಶುಲ್ಕ ಸಂಗ್ರಹಣೆ ಮತ್ತು ಮರುಹೊಂದಾಣಿಕೆ ಹಾಗೂ ಬೇ-ಬಾಕಿ ಪತ್ರ ವಿತರಣೆ
(NFTW flag / KSSWF/KSTBF Fees Collection & Reconciliation)

3. ಶಿಕ್ಷಕರ ವೈದ್ಯಕೀಯ / ಅಪಘಾತ ಪರಿಹಾರ ಧನಸಹಾಯ (Medical Assistance/ Accidental
Death Assistance to Teachers)

4. ವಿದ್ಯಾರ್ಥಿಗಳ ವೈದ್ಯಕೀಯ / ಅಪಘಾತ ಪರಿಹಾರ ಧನಸಹಾಯ (Medical Assistance/
Accidental Death Assistance to Students)

5. ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗ ಧನಸಹಾಯ ಮತ್ತು ಪ್ರತಿಭಾ ಪುರಸ್ಕಾರ ಧನಸಹಾಯ(Financial Assistance for Higher Studies & Merit Scholarship to Teacher’sChildren)

6. ಶಿಕ್ಷಕರ ಸದನದ ಕಟ್ಟಡಗಳ ಮತ್ತು ಕೊಠಡಿಗಳು, ಸಭಾಂಗಣ ಮತ್ತು ಸಭಾ ಕೊಠಡಿಯ ಹಂಚಿಕೆ ಮತ್ತು ನಿರ್ವಹಣೆDF (Rooms & Buildings, Auditorium & Meeting halls allotment andmaintenance in Shikshakara Sadana)

7. ಮೃತ ಶಿಕ್ಷಕರ ಕುಟುಂಬದವರಿಗೆ ಕುಟುಂಬ ನಿರ್ವಹಣೆ ಧನಸಹಾಯ (FMT) ಮತ್ತು ಶಿಕ್ಷಕರಿಗೆಲ್ಯಾಪ್‌ಟಾಪ್/ಟ್ಯಾಬ್ ಖರೀದಿಗಾಗಿ ಬಡ್ಡಿ ರಹಿತ ಮುಂಗಡ ಧನಸಹಾಯ (Family maintenanceAssistance to dependants of Deceased teachers family, Interest free financialassistance towards purchase of Laptop / TAB by teachers)

8. ವೃತ್ತಿಪರ ಶಿಕ್ಷಣ ವಿದ್ಯಾರ್ಥಿ ವೇತನ (Professional Education Scholarship to students)

ಆಜೀವ ಸದಸ್ಯತ್ವ (Life Membership Card) ಪಡೆಯುವ ಶಿಕ್ಷಕರಿಗೆ ಕರ್ನಾಟಕರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳು

1. ಶಿಕ್ಷಕರು/ಉಪನ್ಯಾಸಕರು, ನಿವೃತ್ತ ಶಿಕ್ಷಕರು/ನಿವೃತ್ತ ಉಪನ್ಯಾಸಕರು ಹಾಗೂ ಅವರ ಅವಲ೦ಬಿತರಿಗೆಖಾಯಿಲೆಯ ತೀವ್ರತೆಯನ್ನು ಆಧರಿಸಿ, ವೈದ್ಯಕೀಯ ಧನಸಹಾಯ A-ರೂ.20,000/-ಗಳು,B-ರೂ.50,000/-ಗಳು,C-ರೂ.75,000/-ಗಳು,D-ರೂ.2,50,000/-ಗಳು.

2.ಶಿಕ್ಷಕರ ಅಪಘಾತ ಪರಿಹಾರ ಯೋಜನೆ ಅಡಿಯಲ್ಲಿ ಶಿಕ್ಷಕರಿಗೆ/ಉಪನ್ಯಾಸಕರಿಗೆ ಅಪಘಾತ, ನೈಸರ್ಗಿಕವಿಕೋಪ ಹಾಗೂ ವಿಷಜಂತು ಕಡಿತದಿಂದ ಮರಣಹೊಂದಿದ ಸಂದರ್ಭದಲ್ಲಿ ಮರಣ ಪರಿಹಾರಧನಸಹಾಯ ಹಾಗೂ ಸಹಜ ಮರಣ ಧನಸಹಾಯ ಸೌಲಭ್ಯ ರೂ.25,000/-ಗಳು ಅಥವಾರೂ.1,25,000/-ಗಳು

3. ಸೇವೆಯಲ್ಲಿರುವಾಗ/ನಿವೃತ್ತಿಯ ನಂತರ ಮೃತರಾದ ಶಿಕ್ಷಕರ/ಉಪನ್ಯಾಸಕರ ಅವಲಂಬಿತರಿಗೆ ಕುಟುಂಬಪಿಂಚಣಿ ಮಂಜೂರಾತಿ ಆಗುವುದಕ್ಕಿಂತ ಮೊದಲು ಮೃತ ಶಿಕ್ಷಕರ/ಉಪನ್ಯಾಸಕರ ಕುಟುಂಬದವರಿಗೆಕುಟುಂಬ ನಿರ್ವಹಣಾ ಧನಸಹಾಯ ರೂ.25,000/-ಗಳು.

4. ಶಿಕ್ಷಕರು/ಉಪನ್ಯಾಸಕರಿಗೆ ಅವರ ಮಕ್ಕಳ ಪದವಿ ಪೂರ್ವ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗಿನ ಶಿಕ್ಷಣಕ್ಕೆಉನ್ನತ ವ್ಯಾಸಂಗ ಧನಸಹಾಯ (ನಿವೃತ್ತ ಶಿಕ್ಷಕರಿಗೂ ಅನ್ವಯಿಸುತ್ತದೆ) ರೂ.2,000/-ಗಳು, ರೂ.3,000/-ಗಳು ಅಥವಾ ರೂ.5,000/-ಗಳು.ಧನಸಹಾಯ

5. ಶಿಕ್ಷಕರಿಗೆ/ಉಪನ್ಯಾಸಕರಿಗೆ ಲ್ಯಾಪ್‌ಟಾಪ್/ಟ್ಯಾಬ್ ಖರೀದಿಗಾಗಿ ಬಡ್ಡಿ ರಹಿತ ಮುಂಗಡಲ್ಯಾಪ್‌ಟಾಪ್ ಖರೀದಿಗೆ ರೂ.30,000/-ಗಳು ಅಥವಾ ಟ್ಯಾಬ್ ಖರೀದಿಗೆ ರೂ.10,000/-ಗಳು

6. ವೈದ್ಯಕೀಯ/ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಬ್ಯಾಂಕ್‌ನ ಶೈಕ್ಷಣಿಕ ಸಾಲದ ಬಡ್ಡಿ ಹಣ ಮರುಪಾವತಿ ಸೌಲಭ್ಯ ಗರಿಷ್ಠ ರೂ.50,000/-ಗಳು.

7. ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ ರೂ.2,000/-ಗಳು, ರೂ.3,000/-ಗಳು,ರೂ.4,000/-ಗಳು ಅಥವಾ ರೂ.6,000/-ಗಳು.

ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳು

1. ಸಾಹಸಿ ವಿದ್ಯಾರ್ಥಿಗಳಿಗೆ ಶೌರ್ಯ ಪ್ರಶಸ್ತಿಗಳು – ರೂ.10,000/-ಗಳು.

2. ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ – ವೈಯಕ್ತಿಕ ಆಟಗಳುಪ್ರಥಮ-ರೂ.3,000/-ಗಳು, ದ್ವಿತೀಯ- ರೂ.2,500/-ಗಳು, ತೃತೀಯ-ರೂ.2,000/-ಗಳು ಗುಂಪು ಆಟಗಳುಪ್ರಥಮ-ರೂ.2,000/-ಗಳು, ದ್ವಿತೀಯ-ರೂ.1500/-ಗಳು, ತೃತೀಯ- ರೂ.1,000/-ಗಳು

3. ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯ – ಖಾಯಿಲೆಯ ತೀವ್ರತೆಯನ್ನು ಆಧರಿಸಿ, A-ರೂ.20,000/-ಗಳು,B-ರೂ.50,000/-ಗಳು, C-ರೂ.75,000/-ಗಳು, D-ರೂ.2,50,000/-ಗಳು.

4. ವಿದ್ಯಾರ್ಥಿಗಳಿಗೆ ಅಪಘಾತ ಮತ್ತು ಮರಣ ಪರಿಹಾರ ಧನಸಹಾಯ-ರೂ.25,000/-ಗಳು ಅಥವಾರೂ.1,25,000/-ಗಳು.

5. 100% ಫಲಿತಾಂಶ ಪಡೆದ ಶಾಲಾ ಕಾಲೇಜುಗಳಿಗೆ ಪ್ರಶಸ್ತಿ ಪತ್ರ, ಸನ್ಮಾನ ಮತ್ತು ನಗದು ಪುರಸ್ಕಾರ ರೂ.25,000/-

6. ಎಸ್.ಎಸ್.ಎಲ್.ಸಿ / ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದವಿದ್ಯಾರ್ಥಿಗಳಿಗೆ ಜಿಲ್ಲಾವಾರು 10 ವಿದ್ಯಾರ್ಥಿಗಳಿಗೆ ರೂ.5,000/-ಗಳಂತೆ ನಗದು ಪ್ರಶಸ್ತಿಗಳು

7. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟ, ವಿಭಾಗಮಟ್ಟ ಮತ್ತು ರಾಜ್ಯಮಟ್ಟದ ಸಹ-ಪಠ್ಯಚಟುವಟಿಕೆಗಳಿಗೆ ರೂ.47,87,800/-ಗಳ ಧನಸಹಾಯ.

8. NTSE ವಿದ್ಯಾರ್ಥಿ ವೇತನ : NTSE ರಾಜ್ಯಮಟ್ಟದ ಪರೀಕ್ಷೆಯಲ್ಲಿ ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗದಮೊದಲ 120 ವಿದ್ಯಾರ್ಥಿಗಳಿಗೆ 02 ವರ್ಷಗಳಿಗೆ ರೂ.5,000/-ಗಳಂತೆ ವಿದ್ಯಾರ್ಥಿ ವೇತನ.

9. ಶಾಲಾ/ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪ್ರೌಢಶಾಲಾ ವಿಭಾಗದಲ್ಲಿ 50% ಮತ್ತು ಕಾಲೇಜುವಿಭಾಗದಲ್ಲಿ 60% KSSWF ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕವನ್ನು ಉಳಿಸಿಕೊಂಡು ವಿದ್ಯಾರ್ಥಿಗಳ ಕಲ್ಯಾಣಕಾರ್ಯಕ್ರಮಗಳಿಗೆ ವಿನಿಯೋಗಿಸುವುದು.

10. ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಶಿಷ್ಯವೇತನ- MBBS- 30,000/-ಗಳು 25 ವಿದ್ಯಾರ್ಥಿಗಳು, BE20,000/-ಗಳು 25 ವಿದ್ಯಾರ್ಥಿಗಳು, Bsc Agri- 10,000/-ಗಳು 10 ವಿದ್ಯಾರ್ಥಿಗಳು, BVSC- 10,000/- ಗಳು10 ವಿದ್ಯಾರ್ಥಿಗಳು

11. ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಧನಸಹಾಯ – ಪ್ರತಿ ಕ್ಲಸ್ಟರ್‌ಗೆ ರೂ.6,000/-

ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ನಿಧಿಯ ವತಿಯಿಂದ ಶಿಕ್ಷಕರಿಗೆ ನೀಡುತ್ತಿರುವ ಸೌಲಭ್ಯಗಳು:

1. ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಧನಸಹಾಯ – ಖಾಯಿಲೆಯ ತೀವ್ರತೆಯನ್ನು ಆಧರಿಸಿA-ರೂ.20,000/-ಗಳು, B-ರೂ.50,000/-ಗಳು, C-ರೂ.75,000/-ಗಳು, D-ರೂ.2,50,000/-ಗಳು.

2. ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಧನ ಸಹಾಯ (ನಿವೃತ್ತ ಶಿಕ್ಷಕರಿಗೂ ಅನ್ವಯಿಸುತ್ತದೆ) ರೂ.2,000/-ಗಳು, ರೂ.3,000/-ಗಳು ಅಥವಾ ರೂ.5,000/-ಗಳು.

3. ಗುರುಭವನಗಳ ನಿರ್ಮಾಣಕ್ಕೆ ಅನುದಾನ – ತಾಲ್ಲೂಕು ಹಂತದ ಗುರುಭವನ ನಿರ್ಮಾಣಕ್ಕೆ – ರೂ.50,00,000/-ಮತ್ತು ಜಿಲ್ಲಾ ಹಂತದ ಗುರುಭವನ ನಿರ್ಮಾಣಕ್ಕೆ – ರೂ.1,00,00,000/-

2022-23ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ರೂಪಿಸಿರುವ ಹೊಸ ಕಾರ್ಯಕ್ರಮಗಳು

1. ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪನ್ಮೂಲ ಸಾಹಿತ್ಯದ ನಿರ್ವಹಣೆ :200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮತ್ತು ಸರ್ಕಾರಿ ಪದವಿ ಪೂರ್ವಕಾಲೇಜುಗಳಲ್ಲಿ ಗ್ರಂಥಾಲಯ ಸ್ಥಾಪನೆ ಮಾಡುವುದು.

2. ಮಾದರಿ ಶಾಲೆಗಳು ಮತ್ತು ಮಾದರಿ ಕಾಲೇಜುಗಳಿಗೆ ಮಕ್ಕಳ ಪ್ರತಿಭೆಯನ್ನು ಹೆಚ್ಚಿಸಲು ಸ್ಪೂರ್ತಿ ಮತ್ತುಪ್ರೇರಣೆಗಾಗಿ ಅತ್ಯುತ್ತಮ ಸಂಸ್ಥೆಗಳಿಗೆ ಭೇಟಿ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸುವುದು ಪ್ರತಿ ತಾಲ್ಲೂಕಿನಿಂದ ಹೆಚ್ಚು ವಿದ್ಯಾರ್ಥಿಗಳಿರುವ ಸಂಖ್ಯೆಯ ಆದ್ಯತೆ ಮೇರೆಗೆ 05 ಸರ್ಕಾರಿ ಪ್ರೌಢಶಾಲೆಗಳನ್ನುಆಯ್ಕೆ ಮಾಡಿ ಪ್ರತಿಯೊಂದು ಶಾಲೆಯಿಂದ 50 ವಿದ್ಯಾರ್ಥಿಗಳು, ಒಟ್ಟು ತಾಲ್ಲೂಕಿನಿಂದ 250 ವಿದ್ಯಾರ್ಥಿಗಳನ್ನುಆಯ್ಕೆ ಮಾಡುವುದು.

3. 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಶೇಷ ಅಗತ್ಯವುಳ್ಳ (CWSN)ವಿದ್ಯಾರ್ಥಿಗಳಿಗೆ ತಲಾ ರೂ.5000/-ಗಳಂತೆ ನಗದು ಪುರಸ್ಕಾರ.

4. 2021-22ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಶೇಷ ಅಗತ್ಯವುಳ್ಳ (CWSN)ವಿದ್ಯಾರ್ಥಿಗಳಿಗೆ ತಲಾ ರೂ.5000/-ಗಳಂತೆ ನಗದು ಪುರಸ್ಕಾರ.

5. NTSE ಮತ್ತು NMMS ಪರೀಕ್ಷೆಗೆ GMAT ಮತ್ತು SAT ಪೂರಕ ಸಾಹಿತ್ಯಗಳನ್ನು ವಿತರಿಸುವ ಬಗ್ಗೆ ತರಗತಿಯ ಎಲ್ಲಾ ಮಕ್ಕಳಿಗೆ ಉಪಯೋಗವಾಗಲು ಪ್ರತಿ ಶಾಲೆಗೆ 05 ಹೆಚ್ಚುವರಿ ಪುಸ್ತಕಗಳನ್ನು ಕರ್ನಾಟಕರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ನೀಡುವುದು.

6. ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿಪರೀಕ್ಷೆಯಲ್ಲಿ ತಾಲ್ಲೂಕುವಾರು ಅತಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ತಲಾ ರೂ.5,000/-ಗಳಂತೆನಗದು ಪುರಸ್ಕಾರ.

7. ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿ.ಯು.ಸಿಪರೀಕ್ಷೆಯಲ್ಲಿ ಜಿಲ್ಲಾವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ ರೂ.5,000/-ಗಳಂತೆ ನಗದುಪುರಸ್ಕಾರ, (ಕಲಾ, ವಾಣಿಜ್ಯ, ವಿಜ್ಞಾನ-ತಲಾ 10 ರಂತೆ)

8. ರಾಜ್ಯದ ಎಲ್ಲಾ ಸರ್ಕಾರಿ/ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮತ್ತು ಅಗತ್ಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಧನಸಹಾಯ ನೀಡುವುದು.

9. ರಾಜ್ಯ ಮಟ್ಟದಿಂದ ವಿಜೇತರಾಗಿ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸ್ಯೂಟ್ ಮತ್ತು ಶೂ ನೀಡುವುದು.

ವಿಶೇಷ ಸೂಚನೆಗಳು

I. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆ / ಕಾಲೇಜುಗಳಿಗೆ ಶಿಕ್ಷಕರಕಲ್ಯಾಣ ನಿಧಿಯಿಂದ ಶಾಲಾ ಸಂಕೇತ ಪಡೆದು, ನೋಂದಾಯಿಸಿಕೊಳ್ಳಲು ಶಾಲಾ ಮುಖ್ಯಸ್ಥರು/ಕಾಲೇಜುಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರು ಕಡ್ಡಾಯವಾಗಿ ಕ್ರಮವಹಿಸುವುದು.

2. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ/ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ಆಜೀವ ಸದಸ್ಯತ್ವ ಕಾರ್ಡ್‌ಗಳನ್ನು ಹೊಂದಿದ್ದರೂ ಕೂಡ ಹೊಸದಾಗಿ Online ಮೂಲಕ ಆಜೀವ ಸದಸ್ಯತ್ವಕಾರ್ಡ್‌ಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

3. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ/ಕಾಲೇಜುಗಳ ಮುಖ್ಯಸ್ಥರು ಮತ್ತುಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಕಲ್ಯಾಣ ನಿಧಿಗೆ ತಮ್ಮಿಂದ ಬಾಕಿ ಇರುವ ಬಾವುಟ ಮತ್ತು ವಂತಿಗೆ ಹಣವನ್ನುತಪ್ಪದೇ ಶಿಕ್ಷಕರ ಕಲ್ಯಾಣ ನಿಧಿಯ ಚಲನ್ ಸಂಖ್ಯೆ KSSWF-54051197824, KSTBF-54051197813ಮತ್ತು NETW-54051197835 ಗಳ ಖಾತೆಗೆ ಚಲನ್ ಮೂಲಕ ಅಥವಾ Online ಮೂಲಕಪಾವತಿಸುವುದು.

4. ಶಿಕ್ಷಕರು ಮತ್ತು ಉಪನ್ಯಾಸಕರು ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲುದಿನಾಂಕ: 01-04-2023 ರಿಂದ Online ಮೂಲಕವೇ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದೆ. ಹೆಚ್ಚಿನಮಾಹಿತಿಗಾಗಿ ಶ್ರೀಮತಿ, ಗೀತಾ.ಎನ್, ಕಂಪ್ಯೂಟರ್ ಪ್ರೋಗ್ರಾಮರ್, ಮೊಬೈಲ್ ಸಂಖ್ಯೆ : 9945684542 ಗೆಸಂಪರ್ಕಿಸುವುದು.

ಶಿಕ್ಷಕರು ಮತ್ತು ಉಪನ್ಯಾಸಕರು ಶಿಕ್ಷಕರ ಕಲ್ಯಾಣ ನಿಧಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080-22483434e-mail ID:kstbf63@gmail.com. Online ಮೂಲಕ ಅರ್ಜಿ ಸಲ್ಲಿಸಲು ಇಲಾಖಾ ವೆಬ್ ಸೈಟ್www.schooleducation.kar.nic.in

Sharing Is Caring:

Leave a Comment