ಶಿಕ್ಷಕರ ಕಲ್ಯಾಣ ನಿಧಿ ಪರಿಸ್ಕೃತ ಆದೇಶ ಮತ್ತು ಲಾಗಿನ್ ಬಗ್ಗೆ ಮಾಹಿತಿ

ಆಜೀವ ಸದಸ್ಯತ್ವ (Life Membership Card) ಪಡೆಯುವ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಶಿಕ್ಷಕರ
ಕಲ್ಯಾಣ ನಿಧಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳು :

 1. ಶಿಕ್ಷಕರು/ಉಪನ್ಯಾಸಕರು ನಿವೃತ್ತ ಶಿಕ್ಷಕರು, ನಿವೃತ್ತ ಉಪನ್ಯಾಸಕರು ಹಾಗೂ ಅವರ ಅವಲಂಬಿತರಿಗೆ
  ಖಾಯಲೆಯ ತೀವ್ರತೆಯನ್ನು ಆಧರಿಸಿ, ವೈದ್ಯಕೀಯ ಧನಸಹಾಯ (ಕನಿಷ್ಠ ರೂ.10,000/- ದಿಂದ
  ಗರಿಷ್ಠ ರೂ.1,00,000/-).
 2. ಶಿಕ್ಷಕರ ಅಪಘಾತ ಪರಿಹಾರ ಯೋಜನೆ ಅಡಿಯಲ್ಲಿ ಶಿಕ್ಷಕರಿಗೆ/ಉಪನ್ಯಾಸಕರಿಗೆ ಅಪಘಾತ,
  ನೈಸರ್ಗಿಕ ವಿಕೋಪ, ವಿಷಜಂತು ಕಡಿತದಿಂದ ಮರಣಹೊಂದಿದ ಸಂದರ್ಭದಲ್ಲಿ ಮರಣ
  ಪರಿಹಾರ ಧನಸಹಾಯ ಹಾಗೂ ಸಹಜ ಮರಣ ಧನಸಹಾಯ ಸೌಲಭ್ಯ (ರೂ.25,000/-
  ಅಥವಾ ರೂ.1,25,000/-).
 3. ಸೇವೆಯಲ್ಲಿರುವಾಗ/ನಿವೃತ್ತಿಯ ನಂತರ ಮೃತರಾದ ಶಿಕ್ಷಕರ/ಉಪನ್ಯಾಸಕರ ಅವಲಂಬಿತರಿಗೆ
  ಕುಟುಂಬ ಪಿಂಚಣಿ ಮಂಜೂರಾತಿ ಆಗುವುದಕ್ಕಿಂತ ಮೊದಲು ಮೃತ ಶಿಕ್ಷಕರ/ಉಪನ್ಯಾಸಕರ
  ಕುಟುಂಬದವರಿಗೆ ಕುಟುಂಬ ನಿರ್ವಹಣಾ ಧನಸಹಾಯ. (ರೂ.25,000/-)
 4. ಶಿಕ್ಷಕರು/ಉಪನ್ಯಾಸಕರಿಗೆ ಅವರ ಮಕ್ಕಳ ಪದವಿ ಪೂರ್ವ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗಿನ
  ಶಿಕ್ಷಣಕ್ಕೆ ಉನ್ನತ ವ್ಯಾಸಂಗ ಧನಸಹಾಯ (ನಿವೃತ್ತ ಶಿಕ್ಷಕರಿಗೂ ಅನ್ವಯಿಸುತ್ತದೆ) (ರೂ.2,000/-,
  ರೂ.3,000/- ಅಥವಾ ರೂ.5,000/-)
 5. ಶಿಕ್ಷಕರಿಗೆ/ಉಪನ್ಯಾಸಕರಿಗೆ ಲ್ಯಾಪ್‌ಟಾಪ್/ಟ್ಯಾಬ್ ಖರೀದಿಗಾಗಿ ಬಡ್ಡಿ ರಹಿತ ಮುಂಗಡ
  ಧನಸಹಾಯ. (ರೂ.30,000/-ಗಳ ಅಥವಾ ರೂ.10,000/-)
 6. ವೈದ್ಯಕೀಯ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳ ಬ್ಯಾಂಕ್‌ನ ಶೈಕ್ಷಣಿಕ
  ಸಾಲದ ಬಡ್ಡಿ ಹಣ ಮರುಪಾವತಿ ಸೌಲಭ್ಯ. (ಗರಿಷ್ಠ ರೂ.50,000/-)
 7. ಎಸ್.ಎಸ್.ಎಲ್.ಸಿ. ಪಿ.ಯು.ಸಿ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಅಂಕ
  ಪಡೆದ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ. (ರೂ.2,000/-,
  ರೂ.5,000 , ರೂ.4.000/- ಅಥವಾ ರೂ.6,000/-ಗಳು)

ಮೇಲ್ಕಂಡ ಧನಸಹಾಯಗಳನ್ನು ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಒದಗಿಸುವ ಮೂಲಕ ಕರ್ನಾಟಕ
ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯು ನೆರವಾಗುತ್ತಿದೆ. ಆಜೀವ ಸದಸ್ಯತ್ವದ ಕಾರ್ಡ್ ವಿತರಣೆಯನ್ನು
ಆನ್‌ಲೈನ್ ಸೇವೆಯ ಮೂಲಕ ಒದಗಿಸುವುದರಿಂದ ಸದಸ್ಯತ್ವವನ್ನು ಪಡೆದ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ
ಮಾತ್ರ ನಿಧಿ ಕಛೇರಿಯಿಂದ ನೀಡಲಾಗುವ ಎಲ್ಲಾ ಸೇವೆಗಳನ್ನು ಸಕಾಲದಲ್ಲಿ ಒದಗಿಸಲು ಸಹಕಾರಿಯಾಗಿದೆ.

ಶಿಕ್ಷಕರ ಕಲ್ಯಾಣ ನಿಧಿ ಉಪನಿರ್ದೇಶಕರಾದ ಶ್ರೀ ಹನುಮಂತ ರಾಯ ಇವರಿಂದ ಶಿಕ್ಷಕರಿಗೆ ಸಿಗುವ ಸೌಲಭ್ಯದ ಕುರಿತು ನೀಡಿರುವ ಮಾಹಿತಿ

Sharing Is Caring:

Leave a Comment