ಶಿಕ್ಷಕರ ಕಲ್ಯಾಣ ನಿಧಿ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮತ್ತು ಪ್ರತಿಭಾನ್ವಿತ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

2022-23ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಮತ್ತುಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲುಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುವ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಆಜೀವ ಸದಸ್ಯತ್ವ ಪಡೆಯುವ ಹಾಗೂ ನವೀಕರಿಸಲು ಆನ್‌ಲೈನ್ ತಂತ್ರಾಂಶವನ್ನು ಬಳಸಲಾಗುತ್ತಿದ್ದು, ಹೊಸ ಆಜೀವಸದಸ್ಯತ್ವ ಕಾರ್ಡನ್ನು ಪಡೆದ ನಂತರವೇ 2022-23ನೇ ಸಾಲಿನ ಉನ್ನತ ವ್ಯಾಸಂಗ ಧನಸಹಾಯ ಮತ್ತು ಪ್ರತಿಭಾವಂತ ವಿದ್ಯಾರ್ಥಿ ವೇತನ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಕೆಲವೊಂದು ಶಿಕ್ಷಕರುಗಳು ಆಜೀವ ಸದಸ್ಯತ್ವಕ್ಕೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ಇದುವರೆವಿಗೂ ನವೀಕರಣಗೊಳ್ಳದೆ ಇರುವುದರಿಂದ ಶಿಕ್ಷಕರುಗಳ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯ ಹಾಗೂ ಪ್ರತಿಭಾ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ, ಆದುದರಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿರುವುದರಿಂದ, ಅಂತಹ ಶಿಕ್ಷಕರುಗಳ ಪಟ್ಟಿಯನ್ನು ಈ ಕಛೇರಿಗೆ ಸಲ್ಲಿಸಿದಲ್ಲಿ ಪ್ರಾಶಸ್ತ್ಯ ದ ಮೇಲೆ ಶಿಕ್ಷಕರ ಆಜೀವ ಸದಸ್ಯತ್ವ ಕಾರ್ಡನ್ನು ನವೀಕರಿಸಿ, ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.ಹಾಗೂ ಧನಸಹಾಯಕ್ಕೆ ಆನ್ ಲೈನ್ ಮೂಲಕ ಅರ್ಜಿಯನ್ನು ದಿನಾಂಕ: 15-03-2023ರ ವರೆಗೂ ಸ್ವೀಕರಿಸಲಾಗುವುದು ಎಂಬುದನ್ನು ತಮ್ಮ ಗಮನಕ್ಕೆ ತರಬಯಸಿದೆ. ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಿರುವ ಶಿಕ್ಷಕರ ಪಟ್ಟಿಯನ್ನು ಅರ್ಜಿ ಸಂಖ್ಯೆಯೊಂದಿಗೆ ಕೂಡಲೇ ಈ ಕಛೇರಿಯ ಇಮೇಲ್ ವಿಳಾಸkstbf63@gmail.com. ಗೆ ಸಲ್ಲಿಸುವುದು.

IMG 20230224 WA0025
Sharing Is Caring:

Leave a Comment