ಮುಖ್ಯ ಗುರುಗಳ ಬಡ್ತಿಗಾಗಿ ನಿನ್ನೆ ನಡೆದ ಜೂಮ್ ಮೀಟಿಂಗ್ ನಲ್ಲಿ ಮಾನ್ಯ ನಿರ್ದೇಶಕರು ನೀಡಿರುವ ನಿರ್ದೇಶನಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯಂತೆ, ನಿನ್ನೆ ನಡೆದ ರಾಜ್ಯದ ಎಲ್ಲಾ ಉಪನಿರ್ದೇಶಕರ ಜೂಮ್ ಸಭೆಯಲ್ಲಿ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ದೇಶಕರಾದ ಸನ್ಮಾನ್ಯ ಶ್ರೀ ಪ್ರಸನ್ನಕುಮಾರ್ ಸಾಹೇಬರು ಈ ಕೆಳಗಿನ ನಿರ್ದೇಶನಗಳನ್ನು ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ನೀಡಿದ್ದಾರೆ ಎಂಬ ಅಂಶವನ್ನು ರಾಜ್ಯದ ಎಲ್ಲಾ ಜಿಲ್ಲೆಯಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳ ಗಮನಕ್ಕೆ ತಂದು ಸದರಿ ಅಂಶಗಳನ್ನು ನಿಮ್ಮ ಜಿಲ್ಲೆಯಲ್ಲಿ ಜಾರಿಗೊಳಿಸಲು ಉಪನಿರ್ದೇಶಕರಲ್ಲಿ ತಾವೆಲ್ಲ ವಿನಂತಿಸಲು ಈ ಮೂಲಕ ಕೋರಲಾಗಿದೆ.
- ಕೌನ್ಸಲಿಂಗ್ ಪ್ರಾಧಿಕಾರ ಜಿಲ್ಲಾ ಮಟ್ಟ
2) 26/2/2024 ಕಡ್ಡಾಯವಾಗಿ ಕೌನ್ಸಿಲಿಂಗ್ ಮುಕ್ತಾಯಗೊಳಿಸಬೇಕು ವಿಳಂಬಕ್ಕೆ ಅವಕಾಶ ಇಲ್ಲ.
3) PH ಶಿಕ್ಷಕರಿಗೆ ಸ್ಥಳ ಆಯ್ಕೆಯಲ್ಲಿ ಮೊದಲ ಆದ್ಯತೆ
4) ಕೌನ್ಸಿಲಿಂಗ್ ಆದ್ಯತಾ ಪಟ್ಟಿ 1:2 ಅನುಪಾತದಲ್ಲಿ ತಯಾರಿಸಿ
ಪಟ್ಟಿಬಿಡುಗಡೆ ಮಾಡುವುದು.
5) ಕೌನ್ಸಲಿಂಗ್ ಮೊದಲು 1:1 ರಂತೆ ಮಾಡುವುದು.
6) ಅಭ್ಯರ್ಥಿಗಳ ಅನುಪಸ್ಥಿತಿಯನ್ನು ಗೈರ ಎಂದು
ಪರಿಗಣಿಸುವುದು. ಲಿಖಿತ ರೂಪದ ಕಾರಣವನ್ನು
ಪಡೆಯುವುದು.
7) ಅಭ್ಯರ್ಥಿಗಳು ನಿಗದಿತ ಸಂಖ್ಯೆಯಲ್ಲಿಯೇ ಕೌನ್ಸಿಲಿಂಗ್ ಪಡೆಯುವುದು ವಿಳಂಬವನ್ನು ಗೈರೆ ಎಂದು ಪರಿಗಣಿಸುವುದು.
8) ಕೌನ್ಸಲಿಂಗ್ ನಿರಾಕರಿಸಿದವರು ಮುಂದಿನ ಒಂದು ವರ್ಷದ ಅವಧಿಯ ಕೌನ್ಸಿಲಿಂಗ್ ಗೆ ಅರ್ಹರಾಗಿರುವುದಿಲ್ಲ.