ಇಲಾಖೆಯಿಂದ ಆನ್‌ಲೈನ್ ಗೆ ಒಳಪಡಿಸಲಾಗಿರುವ ಸೇವೆಗಳು ಈ ಕೆಳಕಂಡಂತಿವೆ.
1) ರಜಾ ಮಂಜೂರಾತಿ
2) ನಿಯಮ-32 ಮತ್ತು ನಿಯಮ-68ರ ಅಡಿಯಲ್ಲಿ ಪ್ರಭಾರ ಭತ್ಯೆ
3) ನಿವೇಶನ ಖರೀದಿ ಕಟ್ಟಡ ನಿರ್ಮಾಣ, ವಾಹನಗಳ/ಇತರೆ ವಸ್ತುಗಳ ಖರೀದಿಗೆ ಇಲಾಖಾ ಅನುಮತಿ
4) ಹೊಸ ಪಾಸ್ ಪೋರ್ಟ್/ ಪಾಸ್ ಪೋರ್ಟ್ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವಿಕೆ.
5) ವೈಯಕ್ತಿಕ ವಿದೇಶ ಪ್ರವಾಸ ಕೈಗೊಳ್ಳಲು ನಿರಾಕ್ಷೇಪಣಾ ಪತ್ರ ನೀಡುವಿಕೆ.
6) ಹೆಚ್ಚುವರಿ ಅರ್ಹತಾದಾಯಕ ಸೇವೆ ಸೇರ್ಪಡೆ.
7) ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುಮತಿ ನೀಡುವಿಕೆ.
8) ಎಲ್.ಟಿ.ಸಿ/ಹೆಚ್.ಟಿ.ಸಿ ಗಳ ಸೌಲಭ್ಯಗಳ ಮಂಜೂರಾತಿ
9) ಜಿ.ಪಿ.ಎಫ್ ಮುಂಗಡ/ಭಾಗಶಃ ವಾಪಸಾತಿ,
10) ಹಬ್ಬದ ಮುಂಗಡ ಮಂಜೂರಾತಿ
11) ಸಣ್ಣ ಕುಂಟುಂಬ ಯೋಜನೆಯಡಿ ವಿಶೇಷ ಭತ್ಯೆ ಮಂಜೂರಾತಿ
12) ಅಂಗವಿಕಲರ ಭತ್ಯೆ ಮಂಜೂರಾತಿ
13) ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಮತ್ತು ಪ್ರವಾಸ ದಿನಚರಿ ಅನುಮೋದನೆ.
14) ಪ್ರಥಮ ವೇತನ ಪ್ರಮಾಣ ಪತ್ರ
15) ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖಾ ಅನುಮತಿ ಪತ್ರ
16) 10/15/20/25 ವರ್ಷಗಳ ಕಾಲಮಿತಿ/ಸ್ವಯಂ ಚಾಲಿತ ವೇತನ ಬಡ್ತಿ/ವಿಶೇಷ ವೇತನ ಬಡ್ತಿ ಮಂಜೂರಾತಿ
17) ಖಾಯಂ ಪೂರ್ವ ಅವಧಿ ಘೋಷಣೆ ಪ್ರಸ್ತಾವನೆ.