01.07.2023ರಿಂದ ಪ್ರಾರಂಭ
ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ.15 ಪಠ್ಯ ವಸ್ತು ಬೊಧನೆ
ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ 1 ರಿಂದ 10ನೇ ತರಗತಿಗಳಿಗೆ ಶೇ. 15 ರಷ್ಟು ಪಠ್ಯ ವಸ್ತು ಬೊಧನೆಯನ್ನು ನಿರ್ವಹಿಸುವುದು.
04.07.2023 ರಿಂದ 08.07.2023
ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ(ಕೌನ್ಸಿಲಿಂಗ್)ನಿರ್ವಹಿಸುವುದು.
ವಿದ್ಯಾರ್ಥಿಗಳಿಗೆ ತರಗತಿವಾರು ಆಪ್ರ ಸಮಾಲೋಚನಾ (ಕೌನ್ಸಿಲಿಂಗ್)ವೇಳಾಪಟ್ಟಿ ನಿಗದಿಪಡಿಸಿ ತಮ್ಮ ದೈನಂದಿನ ವ್ಯಾಸಂಗಕ್ಕೆ ಪೂರಕಸಾಮಗ್ರಿಗಳಾದ ಪಠ್ಯಪುಸ್ತಕ, ನೋಟ್ಸ್, ಮನೆಗೆಲಸ (ಹೋಂವರ್ಕ್), ಇತರೆಸಾಮಗ್ರಿಗಳನ್ನು ತರಗತಿ/ವಿಷಯ ಶಿಕ್ಷಕರಿಗೆ ತೋರಿಸುವುದು. ತರಗತಿ/ವಿಷಯಶಿಕ್ಷಕರು ಪರಿಶೀಲಿಸಿ, ಅವರ ದೈನಂದಿನ ಸ್ಟಡಿಟೈಂ-ಟೇಬಲ್,ಮನೆಗೆಲಸ (ಹೋಂವರ್ಕ್) ಬಗ್ಗೆ ಚರ್ಚಿಸಿ ಮಾರ್ಗದರ್ಶನ ನೀಡುವುದು(ವಿವರವನ್ನು ಚೆಕ್‌ಲಿಸ್ಟ್‌ನಂತೆ ಪ್ರತ್ಯೇಕವಾಗಿ ದಾಖಲಿಸಿಕೊಳ್ಳುವುದು).
11.07.2023ರಿಂದ13.07.2023
ಹೋಬಳಿ ಮಟ್ಟದ ಕ್ರೀಡಾಕೂಟ
ಶಾಲೆ/ಕ್ಲಸ್ಟರ್ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವುದು
ಹಾಗೂ ಪಾಲ್ಗೊಳ್ಳುವುದು.
11.07.2023
ವಿಶ್ವ ಜನಸಂಖ್ಯಾ ದಿನ
ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ವಿಶ್ವ ಜನಸಂಖ್ಯಾ ದಿನದ
ಮಹತ್ವ ತಿಳಿಸುವುದು.
14.07.2023 ರಿಂದ 15.07.2023
ಅನುಭವ ಹಂಚಿಕೆ ಕಾರ್ಯಗಾರ Experience Sharing programme
ಮುಖ್ಯ ಶಿಕ್ಷಕರುಗಳು ತಮ್ಮ ಸಮೀಪದ
ಸಂಪನ್ಮೂಲ ಶಿಕ್ಷಕರನ್ನು ಪರಸ್ಪರ ಶಾಲೆಗೆ ಆಹ್ವಾನಿಸಿಕೊಂಡು ಹೊಸದಾಗಿ
ನೇಮಿಸಿಕೊಂಡ ಅನನುಭವಿ ಶಿಕ್ಷಕರೊಂದಿಗೆ ಪರಸ್ಪರ ಅನುಭವ ಹಂಚಿಕೆ
ಕ್ಲಿಷ್ಟ ಬೋಧನಾಂಶಗಳ ಕುರಿತು ಮಾರ್ಗದರ್ಶನ
ಮಾಡಿಕೊಂಡು
ಪಡೆಯುವುದು.
18.07.2023 ರಿಂದ 20.07.2023
ಮೊದಲನೆಯ ರೂಪಣಾತ್ಮಕ ಮೌಲ್ಯಾಂಕನ (ಎಫ್.ಎ-1)
ಸದರಿ ಮೌಲ್ಯಾಂಕನದ ವಿಶಿಷ್ಟತೆಯನ್ನು ಅರ್ಥೈಸಿಕೊಂಡು ಆಯಾ ವಿಷಯದ ಬೋಧನಾ ಅವಧಿಯಲ್ಲಿ ಸದರಿ FA-1 ಮೌಲ್ಯಾಂಕನ ಹಮ್ಮಿಕೊಳ್ಳುವುದು.
(ನಿಗದಿತ ಅವಧಿಯಲ್ಲಿ ಈ ಮೌಲ್ಯಾಂಕನ ಪೂರ್ಣಗೊಳಿಸುವುದು) ನಂತರ ದೈನಂದಿನ ಪಾಠಗಳು
ಮುಂದುವರೆಯುತ್ತದೆ. (15.06.2023ರಿಂದ 15.07.2023ರ ವರೆಗೆ ನಿರ್ವಹಿಸಿದ ಪಾಠಬೋಧನೆಗಳನ್ನಾಧರಿಸಿದಂತೆ FA-1
ನಿರ್ವಹಣೆ
26.07.2023
ಪೋಷಕರ/ ತಾಯಂದಿರ ಸಭೆ Open House
OPEN
HOUSE ಪೋಷಕರ/ ತಾಯಂದಿರ ಸಭೆ ಕರೆದು ವಿದ್ಯಾರ್ಥಿಗಳ
ಎಫ್.ಎ-1 ಆಧರಿಸಿ ಕಲಿಕಾ ಪ್ರಗತಿ ಮತ್ತು ಆಪ್ತ ಸಮಾಲೋಚನಾಂಶಗಳನ್ನು
ಚರ್ಚಿಸುವುದು ಹಾಗೂ ಉತ್ತರ ಪತ್ರಿಕೆಗಳನ್ನು ಪ್ರಾಜೆಕ್ಟ್ ವರ್ಕ್ಸ್‌ಗಳನ್ನು
ಸಿ.ಸಿ.ಇ. ಅಡಿ ನಿರ್ವಹಿಸಿದ ಚಟುವಟಿಕೆಗಳ ಪ್ರಗತಿಯನ್ನು ವಿದ್ಯಾರ್ಥಿಗಳಿಗೆ
ಪೋಷಕರ ಸಮ್ಮುಖದಲ್ಲಿ ನೀಡಿ ಚರ್ಚಿಸುವುದು ಹಾಗೂ ಮಾದರಿ ಉತ್ತರ
ಪತ್ರಿಕೆಗಳನ್ನು / ಚಟುವಟಿಕೆಗಳನ್ನು ಪ್ರದರ್ಶಿಸಿ ಪ್ರೇರೇಪಿಸುವುದು.
28.07.2023 ರಿಂದ 31.07.2023
ಸಿ.ಸಿ.ಇ ಚಟುವಟಿಕೆ-2 ನಿರ್ವಹಿಸುವುದು.
ಸಿ.ಸಿ.ಇ
ಅಡಿ ವಿದ್ಯಾರ್ಥಿಗಳಿಗೆ ಆಯಾ ಮಾಹೆಯಲ್ಲಿ ಮುಕ್ತಾಯವಾದ
ಪಠ್ಯಾಧಾರಿತ ಚಟುವಟಿಕೆಯನ್ನು ಸಂಘಟಿಸಿ (ಚಟುವಟಿಕೆ ಬ್ಯಾಂಕ್‌ನ್ನು
ಅನುಬಂಧಿಸಿದೆ) ತರಗತಿವಾರು/ವಿಷಯವಾರು ನಿರ್ವಹಿಸುವುದು.ಸದರಿ
ಚಟುವಟಿಕೆಯನ್ನು ಸಿ.ಸಿ.ಇ ಅಡಿ ಕಲಿಕಾ ಪ್ರಗತಿಯನ್ನು ಪ್ರತ್ಯೇಕವಾಗಿ
ದಾಖಲಿಸುವುದು. ಇದರಿಂದಾಗಿ ಆಯಾ ಮಾಹೆಯ ಬೋಧನಾಂಶಗಳ ಕಲಿಕಾ ಪ್ರಗತಿಯನ್ನು ಪುನಾರವರ್ತನೆಯೊಂದಿಗೆ ವಿಶ್ಲೇಷಿಸಿದಂತಾಗುತ್ತದೆ.
ಸಹಪಠ್ಯ ಚಟುವಟಿಕೆಗಳು
ಶಾಲಾ/ ಕ್ಲಸ್ಟರ್/ ಹೋಬಳಿ ಮಟ್ಟದ ಕ್ರೀಡಾಕೂಟ/ ಚಿತ್ರಕಲಾ ಸ್ಪರ್ಧೆ, ವೃತ್ತಿಶಿಕ್ಷಣ ಕಲಿಕೋತ್ಸವ, ವಿಜ್ಞಾನಗೋಷ್ಠಿ, ವಿಜ್ಞಾನ ನಾಟಕ ತಾಯಂದಿರ ಸಭೆಹಾಗೂ ವಿದ್ಯಾರ್ಥಿಗಳ ಆಪ್ತಸಮಾಲೋಚನಾ ಸಭೆಗಳ ನಿರ್ವಹಣೆ