ನವದೆಹಲಿ: ಪರಿಸರ ಸಂರಕ್ಷಣೆ ಮತ್ತು Mission LiFE ಅಭಿಯಾನದ ಅಂಗವಾಗಿ ದೇಶಾದ್ಯಂತ ಶಾಲೆಗಳಲ್ಲಿ ಆಯೋಜಿಸಲಾಗುತ್ತಿರುವ ‘ಏಕ್ ಪೇಡ್ ಮಾ ಕೆ ನಾಮ್ 3.0’ (Ek Ped Maa Ke Naam 3.0) ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲೆಗಳು ತಮ್ಮ ಕಾರ್ಯಕ್ರಮದ ಮಾಹಿತಿಯನ್ನು Eco Clubs for Mission LiFE ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿ, ಆನ್‌ಲೈನ್ ಮೂಲಕ ಅಧಿಕೃತ ಪ್ರಮಾಣಪತ್ರವನ್ನು (Certificate) ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ಪ್ರಕ್ರಿಯೆಯು ಮುಖ್ಯವಾಗಿ ಶಾಲಾ ಮುಖ್ಯ ಶಿಕ್ಷಕರು (HM), ಶಿಕ್ಷಕರು ಹಾಗೂ ಶಾಲಾ ಆಡಳಿತ ಬಳಸುವಂತೆ ರೂಪಿಸಲಾಗಿದೆ.
ಮಾಹಿತಿ ಅಪ್‌ಡೇಟ್ ಮಾಡುವ ವಿಧಾನ
- ಪೋರ್ಟಲ್ಗೆ ಲಾಗಿನ್
- ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ Eco Clubs for Mission LiFE ಪೋರ್ಟಲ್ ತೆರೆಯಿರಿ.
- School Login ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಶಾಲೆಯ UDISE Code ನಮೂದಿಸಿ ಲಾಗಿನ್ ಆಗಿ.
- ಪಾಸ್‌ವರ್ಡ್ ಮರೆತಿದ್ದರೆ Forgot Password ಆಯ್ಕೆಯ ಮೂಲಕ HM ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಬಳಸಿ ಹೊಸ ಪಾಸ್‌ವರ್ಡ್ ರಚಿಸಬಹುದು.
- ಕಾರ್ಯಕ್ರಮದ ವಿವರಗಳನ್ನು ನಮೂದಿಸಿ
- Ek Ped Maa Ke Naam 3.0 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ Yes ಆಯ್ಕೆಮಾಡಿ.
- ನೆಡಲಾದ ಸಸಿಗಳ ಸಂಖ್ಯೆಯನ್ನು (Number of Trees Planted) ನಮೂದಿಸಿ.
- ಕಾರ್ಯಕ್ರಮದ ಕುರಿತು 50 ಪದಗಳೊಳಗಿನ ಸಂಕ್ಷಿಪ್ತ ವಿವರಣೆ ಬರೆಯಿರಿ.
- ಕಾರ್ಯಕ್ರಮ ನಡೆದ ದಿನಾಂಕ ಹಾಗೂ ಸಮಯವನ್ನು ದಾಖಲಿಸಿ.
- ವಿವಿಧ ವಯೋಮಾನದ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅಥವಾ ಸದಸ್ಯರ ಸಂಖ್ಯೆಯನ್ನು ಸಂಬಂಧಿತ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ.
- ಫೋಟೋಗಳನ್ನು ಅಪ್‌ಲೋಡ್ ಮಾಡಿ
- ಕಾರ್ಯಕ್ರಮದ GPS/Geo-tag ಹೊಂದಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿ.
- ಗರಿಷ್ಠ 10 ಫೋಟೋಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿದೆ.
- ನಂತರ Submit ಬಟನ್ ಕ್ಲಿಕ್ ಮಾಡಿ ಮಾಹಿತಿಯನ್ನು ಸಲ್ಲಿಸಿ.
ಪ್ರಮಾಣಪತ್ರ ಡೌನ್‌ಲೋಡ್ ಮಾಡುವ ವಿಧಾನ
ಮಾಹಿತಿ ಯಶಸ್ವಿಯಾಗಿ ಸಲ್ಲಿಕೆಯಾದ ಬಳಿಕ “Ek Ped Maa Ke Naam 3.0 Certificate” ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿದರೆ ಶಾಲೆಯ ಹೆಸರಿನೊಂದಿಗೆ ಲಭ್ಯವಾಗುವ ಅಧಿಕೃತ ಪ್ರಮಾಣಪತ್ರವನ್ನು ಚಿತ್ರ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರಿಗೆ ಸೂಚನೆ
- ಮಾಹಿತಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ.
- Geo-tag ಹೊಂದಿರುವ ಸ್ಪಷ್ಟ ಫೋಟೋಗಳನ್ನು ಮಾತ್ರ ಅಪ್‌ಲೋಡ್ ಮಾಡಿ.
- ಸಸಿಗಳ ಸಂಖ್ಯೆ ಹಾಗೂ ದಾಖಲಿಸಿ.
- ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಶಾಲೆಯ ದಾಖಲೆಗಾಗಿ ಸುರಕ್ಷಿತವಾಗಿ ಸಂರಕ್ಷಿಸಿ.