ನಗದು ರಹಿತ ಚಿಕಿತ್ಸಾ ಯೋಜನೆಯ ಅನುಷ್ಠಾನಕ್ಕಾಗಿ ಕಡ್ಡಾಯವಾಗಿ ಎಲ್ಲಾ ಸರಕಾರಿ ನೌಕರರು ಮಾಹಿತಿ ನೀಡಿ
ಮಾಹಿತಿ ನೀಡಲು ಕೊನೆಯ ದಿನಾಂಕ 30/9/2021
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ನಗದು ರಹಿತ ಚಿಕಿತ್ಸಾ ಯೋಜನೆಗೆ ಮಾಹಿತಿ update ಮಾಡುವ ಕುರಿತು
ಮಾನ್ಯ ರಾಜ್ಯ ಸರಕಾರಿ ನೌಕರ ಬಂಧುಗಳೇ
ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಹಾಗೂ ಅವಲಂಬಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರ ಉದ್ದೇಶಿಸಿದ್ದು ಇದರ ಸಮಗ್ರ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ರಾಜ್ಯ ಸರಕಾರಿ ನೌಕರರು ಅಧಿಕಾರಿಗಳ ನಿಖರ ಮಾಹಿತಿಯನ್ನು “ONLINE” ಮೂಲಕ ಕ್ರೂಢೀಕರಿಸಿ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗುವದು. ಆದ್ದರಿಂದ ದಿನಾಂಕ 30-09-2021 ರೊಳಗೆ ಈ ಕೆಳಗಿನ ಲಿಂಕ್ ಬಳಸಿ ತಮ್ಮ ಮಾಹಿತಿ ನೀಡಿ
ಸೂಚನೆಗಳು:
1.ಕಡ್ಡಾಯವಾಗಿ ಕೆಜಿಐಡಿ ನಂಬರ್ ಹೊಂದಿರಬೇಕು
2.ಈಗಾಗಲೇ ಪೋಲಿಸ್ ಇಲಾಖೆಯಲ್ಲಿ ಯೋಜನೆ ಜಾರಿಯಲ್ಲಿರುವುದರಿಂದ ಪೋಲಿಸ್ ಇಲಾಖೆಯ ನೌಕರರು/ಅಧಿಕಾರಿಗಳು ಮಾಹಿತಿ ಸಲ್ಲಿಸಲು ಅವಕಾಶವಿರುವುದಿಲ್ಲ
3.ಅನುದಾನಿತ ಸಂಸ್ಥೆ, ನಿಗಮ,ಮಂಡಳಿ,ಪ್ರಾಧಿಕಾರ, ವಿಶ್ವವಿದ್ಯಾಲಯ,ಸ್ಥಳೀಯ ಸಂಸ್ಥೆಗಳ ನೌಕರರು/ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಲು ಅವಕಾಶವಿರುವುದಿಲ್ಲ