8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ RBI ಆರ್ಥಿಕ ಸಾಕ್ಷರತೆ ರಸಪ್ರಶ್ನೆ ಸ್ಪರ್ಧೆ RBI FINANCIAL LITERACY QUIZ COMPETITION

IMG 20230805 WA0002 1

IMG 20230805 WA0004

ರಸಪ್ರಶ್ನೆ ಸ್ಪರ್ಧೆ:
ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಲಾ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಿದ್ದು,, ಪ್ರಸ್ತುತ ಸಾಲಿನಲ್ಲಿ ಶಾಲಾ ಮಕ್ಕಳಲ್ಲಿ ಆರ್ಥಿಕ ಶಿಕ್ಷಣದ ಪರಿಕಲ್ಪನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ (Quiz Competition) ಸ್ಪರ್ಧೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹವಾಮಾನ ವೈಪರೀತ್ಯ, ಬ್ಯಾಂಕಿನ ವ್ಯವಸ್ಥೆ ಹಾಗೂ ದೇಶದ ಅರ್ಥವ್ಯವಸ್ಥೆಯ ಬಗ್ಗೆ ಹೆಚ್ಚಿನ ಜ್ಞಾನ ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಈ ಕಾರ್ಯಕ್ರಮವು ಪೂರಕವಾಗಿದೆ.

ಉದ್ದೇಶಗಳು:
• ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆ ಯ ಬಗ್ಗೆ ಅರಿವು ಮೂಡಿಸುವುದು.
• ವಿದ್ಯಾರ್ಥಿಗಳಲ್ಲಿ ಚಿಂತಿಸುವ, ವಿಶ್ಲೇಷಿಸುವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು.
• ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು
• ವಿದ್ಯಾರ್ಥಿಗಳಲ್ಲಿ ಸಹಕಾರ ಮನೋಭಾವನೆ, ಗುಂಪು ಚರ್ಚೆ, ತೀಕ್ಷ್ಣ ನಿರ್ಧಾರ ತೆಗೆದು ಕೊಳ್ಳುವ, ಸ್ಪರ್ಧಾ ಪ್ರವೃತ್ತಿಯನ್ನು ಬೆಳೆಸುವುದು.
• ವಿದ್ಯಾರ್ಥಿಗಳಲ್ಲಿ ಭಾರತ ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವುದು.

ಅರ್ಹತೆ :
ಸರ್ಕಾರಿ, ಕಾರ್ಪೊರೇಷನ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು

ಶಾಲಾ ಹಂತ:

  • ಶಾಲಾ ಹಂತದಲ್ಲಿ ಶಿಕ್ಷಕರು 8 ರಿಂದ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ನೀಡಿರುವ ಪಠ್ಯ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಿಸ್ಪರ್ಧೆಯನ್ನು ಹಮ್ಮಿಕೊಳ್ಳುವುದು.
  • ಶಾಲಾ ಹಂತದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಇಬ್ಬರು ವಿದ್ಯಾರ್ಥಿಗಳವಿವರಗಳನ್ನು ಮೊಬೈಲ್/ಲ್ಯಾಪ್ ಟಾಪ್/ಕಂಪ್ಯೂಟರ್ ಬಳಸಿ ವಿದ್ಯಾರ್ಥಿಗಳ ಸ್ಯಾಟ್ ಐಡಿ,ಮೊಬೈಲ್ ಸಂಖ್ಯೆ, ಭಾವಚಿತ್ರದೊಂದಿಗೆ ವಿದ್ಯಾವಾಹಿನಿ ಪೋರ್ಟಲ್ ನಲ್ಲಿ ದಿನಾಂಕ :19.06.2023 ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡುವುದು. ವಿದ್ಯಾವಾಹಿನಿ ಲಿಂಕ್ -www.vidyavahini.karnataka.gov.in or http://164.100.133.7
  • ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಸಂಬಂಧ ಅವರವರ ವೈಯಕ್ತಿಕಖಾತೆಗೆ ನೇರವಾಗಿ ಹಣ ಜಮಾ ಮಾಡಲಿದ್ದು, ಈ ಪ್ರಯುಕ್ತ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಸಂಖ್ಯೆ ಬ್ಯಾಂಕ್ ಹೆಸರು, ಶಾಖೆಯ ಹೆಸರು, ಐ.ಎಫ್.ಎಸ್.ಸಿ ಕೋಡ್, ಇತ್ಯಾದಿವಿವರಗಳನ್ನು ನೋಂದಣಿ ಸಮಯದಲ್ಲಿ ಮುಖ್ಯಶಿಕ್ಷಕರು ಭರ್ತಿ ಮಾಡುವುದು.(ಚಾಲನೆಯಲ್ಲಿರುವ ಬ್ಯಾಂಕ್ ಖಾತೆಯಾಗಿರುವುದು )ಶಾಲಾ ಹಂತದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಕರುವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಸ್ಪರ್ಧೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದು.

ಬ್ಲ್ಯಾಕ್ ಹಂತ : (ಆಯಾ ಶಾಲೆಗಳಲ್ಲಿ)

  • ಶಾಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಸ್ಪರ್ಧೆಗೆ ಅರ್ಹರಾಗಲಿದ್ದು, ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರ ಉಪಸ್ತಿತಿಯಲ್ಲಿ ತಾಲ್ಲೂಕು ಮಟ್ಟದ ಸ್ಪರ್ಧೆಯನ್ನು ಆನ್ ಲೈನ್ ಮೂಲಕ ದಿನಾಂಕ: 20.06.2023 ರಿಂದ 23.06.2023ರವರೆಗೆನಡೆಸಲಾಗುವುದು. ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲುhttp://164.100.133.7:82 ಲಿಂಕ್ ನ್ನು ಬಳಸುವುದು.
  • ಸ್ಪರ್ಧೆ ನಡೆಯುವ ದಿನಾಂಕದಂದು ಇಲಾಖೆಯ / ಆರ್ ಬಿ ಐ ಸಿಬ್ಬಂದಿಗಳು ಭೇಟಿ ನೀಡುವಸಂಭವವಿರುತ್ತದೆ.
  • ಪ್ರತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಒಂದು ತಂಡದಲ್ಲಿ ಸ್ಪರ್ಧಿಸುತ್ತಾರೆ. ಈವಿದ್ಯಾರ್ಥಿಗಳು ಆಯಾ ಶಾಲೆಯನ್ನು ಪ್ರತಿನಿಧಿಸುವ ಸ್ಪರ್ಧಿಗಳಾಗಿರುತ್ತಾರೆ
  • ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರತಿ ತಂಡಕ್ಕೆ 20 ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಿ 15ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಪ್ರಶ್ನೆಗಳಿಗೆಸರಿಯಾದ ಉತ್ತರವನ್ನು ಸಲ್ಲಿಸಿದ ತಂಡವನ್ನು ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಮಾಡಲಾಗುವುದು
  • ರಸಪ್ರಶ್ನೆ ಸ್ಪರ್ಧೆಯ ಸಂದರ್ಭದಲ್ಲಿ ತಾಂತ್ರಿಕ ದೋಷ ಸಂಭವಿಸಿದಲ್ಲಿ ವಿದ್ಯಾರ್ಥಿಯು ಪುನ: ಸ್ಪರ್ಧೆಯಲ್ಲಿ ಭಾಗವಹಿಸಬಹುದು.*
  • ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವಾಗ ತಂಡವು ಪರದೆಯನ್ನು ಬಿಡಬಾರದು ಅಥವಾಕಿಟಕಿಯನ್ನು ಮುಚ್ಚಬಾರದು ಮತ್ತು ಯಾರ ಸಹಾಯವನ್ನೂ ಪಡೆಯಬಾರದು.
  • ಒಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಪತ್ರಿಕೆಯನ್ನು ಪ್ರದರ್ಶನಮಾಡಲಾಗುವುದು. ಈ ಇಬ್ಬರು ವಿದ್ಯಾರ್ಥಿಗಳು ಸೇರಿ ಯೋಚಿಸಿ, ಚರ್ಚಿಸಿ ಪ್ರಶ್ನೆಗಳಿಗೆ ಉತ್ತರಿಸುವುದು.

ರಸಪ್ರಶ್ನೆಗಾಗಿ ಅಧ್ಯಯನ ಸಾಮಗ್ರಿ ಈ ಕೆಳಗಿನಂತಿದೆ:

https://www.g20.org/en/ https://pib.gov.in/PressReleaseIframePage.aspx?PRID=1882356 For general Financial Literacy: https://www.rbi.org.in/Scripts/AboutusDisplay.aspx https://www.rbi.org.in/Scripts/FAQDisplay.aspx https://www.ncfe.org.in/resources/downloads Relevant headings for Study Materials • Financial Education Handbook • Financial Literacy booklets • All You Need to Know About Digital Payments • Insurance, Equity, Pension • Target Group Booklets-school children

ii. ವಿದ್ಯಾರ್ಥಿಯು ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ವಿಜೇತರನ್ನು ಪರಿಶೀಲಿಸಬೇಕು. ಇಲಾಖೆ ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ಯಾವುದೇ ಪ್ರತ್ಯೇಕ ಸಂವಹನವನ್ನು ಕಳುಹಿಸಬಾರದು.
iii.ಶಾಲಾ ಮಟ್ಟದ ವಿಜೇತ ತಂಡಗಳು ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಮತ್ತು ಶಾಖೆ, ಐಎಫ್ಎಸ್ಸಿ ಮುಂತಾದ ಬ್ಯಾಂಕ್ ವಿವರಗಳನ್ನು ನವೀಕರಿಸಬೇಕು.ಒಂದು ವೇಳೆ ತಂಡವು ಬ್ಲಾಕ್ ಮಟ್ಟದಲ್ಲಿ ಮತ್ತು ನಂತರದ ಯಾವುದೇ ಮಟ್ಟದ ರಸಪ್ರಶ್ನೆಯಲ್ಲಿ ಗೆದ್ದರೆ, ಬಹುಮಾನದ ಮೊತ್ತವನ್ನು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರ್ಗಾಯಿಸುತ್ತದೆ. ಬಹುಮಾನದ ಹಣವನ್ನು ತಂಡದ ಭಾಗವಹಿಸುವ ಇಬ್ಬರು ವಿದ್ಯಾರ್ಥಿಗಳ ನಡುವೆ ಸಮಾನವಾಗಿ ವಿತರಿಸಲಾಗುವುದು
iv. ಇಡೀ ಕ್ವಿಜ್ ಸೈಟ್ ನ ಯಾವುದೇ ಅಸಮರ್ಪಕ ಕಾರ್ಯನಿರ್ವಹಣೆಗೆ ಅಥವಾ ಯಾವುದೇ ವಿಳಂಬ, ಕಳೆದುಹೋದ, ಹಾನಿಗೊಳಗಾದ, ತಪ್ಪಾಗಿ ನಿರ್ದೇಶಿಸಲ್ಪಟ್ಟ, ಅಪೂರ್ಣ, ಅಸ್ಪಷ್ಟ, ತಲುಪಿಸಲಾಗದ, ಸಿಸ್ಟಮ್ ದೋಷಗಳಿಂದಾಗಿ ಉತ್ತರಗಳು, ವಿಫಲವಾದ, ಅಪೂರ್ಣ ಅಥವಾ ಇತರ ದೂರಸಂಪರ್ಕ ಪ್ರಸರಣ ಅಸಮರ್ಪಕತೆಗಳು, ನೆಟ್ವರ್ಕ್ ಸಂಪರ್ಕ ಸಮಸ್ಯೆಗಳು, ಹಾರ್ಡ್ ವೇರ್ ಅಥವಾ ಸಾಫ್ಟ್ ವೇರ್ ವೈಫಲ್ಯಗಳಿಗೆ ಇಲಾಖೆ ಮತ್ತು ಆರ್ ಬಿಐ ಎರಡೂ ಜವಾಬ್ದಾರರಾಗಿರುವುದಿಲ್ಲ.
v. ಕಂಪ್ಯೂಟರ್ ವೈರಸ್ ಸೋಂಕು, ದೋಷಗಳು, ತಿರುಚುವಿಕೆ, ಅನಧಿಕೃತ ಹಸ್ತಕ್ಷೇಪ, ವಂಚನೆ, ತಾಂತ್ರಿಕ ವೈಫಲ್ಯಗಳು, ಅಥವಾ ಆಡಳಿತ, ಭದ್ರತೆ, ನ್ಯಾಯಸಮ್ಮತತೆ, ಸಮಗ್ರತೆ ಅಥವಾ ರಸಪ್ರಶ್ನೆಯ ಸರಿಯಾದ ನಡವಳಿಕೆಯನ್ನು ಭ್ರಷ್ಟಗೊಳಿಸುವ ಅಥವಾ ಪರಿಣಾಮ ಬೀರುವ ಇತರ ಯಾವುದೇ ಕಾರಣಗಳು ಸೇರಿದಂತೆ ಯಾವುದೇ ಕಾರಣಕ್ಕಾಗಿ ರಸಪ್ರಶ್ನೆ ಯೋಜಿಸಿದಂತೆ ನಡೆಯಲು ಸಾಧ್ಯವಾಗದಿದ್ದರೆ, ಬೆಂಗಳೂರಿನ ರಿಸರ್ವ್ ಬ್ಯಾಂಕ್ ರಸಪ್ರಶ್ನೆಯನ್ನು ರದ್ದುಗೊಳಿಸುವ, ಕೊನೆಗೊಳಿಸುವ, ಮಾರ್ಪಡಿಸುವ ಅಥವಾ ಅಮಾನತುಗೊಳಿಸುವ ಹಕ್ಕನ್ನು ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿದೆ. ಕ್ವಿಜ್ ಅಥವಾ ಕ್ವಿಜ್ ಸೈಟ್ನ ಸಲ್ಲಿಕೆ ಪ್ರಕ್ರಿಯೆ ಅಥವಾ ಇತರ ಯಾವುದೇ ಭಾಗವನ್ನು ಹಾಳುಮಾಡುವ ಯಾವುದೇ ತಂಡವನ್ನು ಅನರ್ಹಗೊಳಿಸುವ ಹಕ್ಕನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ಕಾಯ್ದಿರಿಸಿದೆ.
vi. ಪೂರ್ವ ಜಿಲ್ಲಾ ಮಟ್ಟದ ಎಲಿಮಿನೇಷನ್ ರೌಂಡ್, ಶೈಕ್ಷಣಿಕ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಸಪ್ರಶ್ನೆಗಾಗಿ ಎಲ್ಲಾ ರಸಪ್ರಶ್ನೆ ಸಂಬಂಧಿತ ವಿಷಯಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ನಿರ್ಧಾರವು ಅಂತಿಮವಾಗಿರುತ್ತದೆ.

IMG 20230805 WA0002
IMG 20230805 WA0000
IMG 20230805 WA0003
20230528 194100 0000 min
20230525 093259 0000 min
Sharing Is Caring:

Leave a Comment