1.Online ಅರ್ಜಿ ಸಲ್ಲಿಸಲು ಪ್ರಾರಂಭದ ಮತ್ತು ಕೊನೆಯ ದಿನಾಂಕ ಯಾವುದು?
ಉತ್ತರ: Online ಅರ್ಜಿ ಸಲ್ಲಿಸಲು 18-08-2026 ಪ್ರಾರಂಭದ ದಿನಾಂಕವಾಗಿದ್ದು, 15-09-2026 ಕೊನೆಯ ದಿನಾಂಕವಾಗಿದೆ.
2. ಅರ್ಜಿಯೊಂದಿಗೆ ಯಾವ ಯಾವ ದಾಖಲೆಗಳನ್ನು Upload ಮಾಡಬೇಕು?
ಉತ್ತರ: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, Non-Creamy Layer ಹಾಗೂ 371ಜೆ ಮೀಸಲಾತಿ ಪ್ರಮಾಣ ಪತ್ರಗಳನ್ನು ಹೊರತುಪಡಿಸಿ, ಉಳಿದ ಸಮತಲ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳನ್ನು Upload ಮಾಡಬೇಕು.
3. ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ “ವ್ಯಾಸಂಗಕ್ಕಾಗಿ” ಎಂದು ನಮೂದಿಸಿದ್ದರೆ ಅದನ್ನು ನೇಮಕಾತಿಗೆ ಸಲ್ಲಿಸಬಹುದೇ?
ಉತ್ತರ: ಸಲ್ಲಿಸಲಾಗುವುದಿಲ್ಲ. “ವ್ಯಾಸಂಗಕ್ಕಾಗಿ” ಎಂದು ನಮೂದಿಸಿರುವ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದಿಲ್ಲ. “ವ್ಯಾಸಂಗಕ್ಕಾಗಿ” ಅಥವಾ “ಉದ್ಯೋಗಕ್ಕಾಗಿ” ಎಂದು ನಮೂದಿಸದ ಪ್ರಮಾಣ ಪತ್ರ ಅಥವಾ “ಉದ್ಯೋಗಕ್ಕಾಗಿ” ಎಂದು ನಮೂದಿಸಿರುವ ಪ್ರಮಾಣ ಪತ್ರವನ್ನು ಸಲ್ಲಿಸಬಹುದು. ನೇಮಕಾತಿಯಾದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ .
4.ಜಾತಿ ಮತ್ತು ಆದಾಯ ಮೀಸಲಾತಿ ಕೋರಿದ್ದರೂ GM ವರ್ಗದಲ್ಲಿ ಆಯ್ಕೆಯಾದರೆ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸಬೇಕೇ?
ಉತ್ತರ: ಹೌದು. GM ವರ್ಗದಲ್ಲಿ ಆಯ್ಕೆಯಾದರೂ ಅಥವಾ ಪ್ರವರ್ಗದ ಮೀಸಲಾತಿಯಡಿ ಆಯ್ಕೆಯಾದರೂ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಸಿಂಧುತ್ವ ರದ್ದಾದರೆ ಉತ್ತಮ ಮೆರಿಟ್ ಇದ್ದರೂ ನೇಮಕಾತಿ ರದ್ದಾಗಬಹುದು.
5. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಯಾವ ರೀತಿಯ ಜಾತಿ ಪ್ರಮಾಣ ಪತ್ರ ಅಗತ್ಯ?
ಉತ್ತರ: ನಮೂನೆ-Dರಲ್ಲಿ ಪ್ರವರ್ಗ-A, ಪ್ರವರ್ಗ-B ಅಥವಾ ಪ್ರವರ್ಗ-C ಎಂದು ನಮೂದಿಸಿರುವ ಜಾತಿ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ.
6.ವ್ಯಾಸಂಗಕ್ಕಾಗಿ 2A ಮತ್ತು ಉದ್ಯೋಗಕ್ಕಾಗಿ 3A ಜಾತಿ ಮತ್ತು ಆದಾಯ ಪ್ರಮಾಣ ಪತ್ರವಿದ್ದರೆ ಯಾವುದನ್ನು ಸಲ್ಲಿಸಬೇಕು?
ಉತ್ತರ: ಉದ್ಯೋಗಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ನೀಡಿರುವ 3A ಪ್ರವರ್ಗದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನೇ ಸಲ್ಲಿಸಬೇಕು.
371ಜೆ ಮೀಸಲಾತಿ
7. 371ಜೆ ಪ್ರಮಾಣ ಪತ್ರದಲ್ಲಿ RD ನಂಬರ್ ಇಲ್ಲದಿದ್ದರೆ ಅದನ್ನು ಸಲ್ಲಿಸಬಹುದೇ?
ಉತ್ತರ: ಇಲ್ಲ. ಸಕ್ಷಮ ಪ್ರಾಧಿಕಾರದಿಂದ ನೀಡಿರುವ ಹಾಗೂ RD ನಂಬರ್ ಹೊಂದಿರುವ 371ಜೆ ಮೀಸಲಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ.
8. HK ಪ್ರಮಾಣ ಪತ್ರವಿದ್ದು, ವಿವಾಹದ ನಂತರ Non-HK ಜಿಲ್ಲೆಯ ನಿವಾಸಿಯಾಗಿದ್ದರೆ 371ಜೆ ಮೀಸಲಾತಿ ಪಡೆಯಬಹುದೇ?
ಉತ್ತರ: ಹೌದು. ಸಕ್ಷಮ ಪ್ರಾಧಿಕಾರದಿಂದ ಪಡೆದ RD ನಂಬರ್ ಹೊಂದಿರುವ 371ಜೆ ಮೀಸಲಾತಿ ಪ್ರಮಾಣ ಪತ್ರವಿದ್ದರೆ 371ಜೆ ಮೀಸಲಾತಿಯಡಿ ಅರ್ಜಿ ಸಲ್ಲಿಸಬಹುದು.
9. 371ಜೆ ಮೀಸಲಾತಿ ಹೊಂದಿರುವವರು Non-KK ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು, ಅರ್ಜಿ ಸಲ್ಲಿಸಬಹುದು.
10.371ಜೆ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶೇ.20ರಷ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು, ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.
11. 371ಜೆ ಅಭ್ಯರ್ಥಿಗಳು KK ಮತ್ತು Non-KK ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು. 371ಜೆ ಮೀಸಲಾತಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ನಿಯಮಾನುಸಾರ KK ಮತ್ತು Non-KK ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
12. 371ಜೆ ಅಭ್ಯರ್ಥಿಗಳು ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳ ಶೇ.8ರಷ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ನಿಗದಿತ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ರಾಜ್ಯದ ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
13. 371ಜೆ ಮೀಸಲಾತಿ ಹೊಂದಿರುವವರು PSTR, GPT ಮತ್ತು HSTR ಹುದ್ದೆಗಳಿಗೆ KK ಮತ್ತು Non-KK ಎರಡಕ್ಕೂ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು. ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.
14. 371ಜೆ ಪ್ರಮಾಣ ಪತ್ರದಲ್ಲಿ “ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ” ಎಂದು ನಮೂದಿಸಿದ್ದರೆ ಪರಿಗಣಿಸಲಾಗುತ್ತದೆಯೇ?
ಉತ್ತರ: ಹೌದು, ಅಂತಹ ಪ್ರಮಾಣ ಪತ್ರವನ್ನು 371ಜೆ ಮೀಸಲಾತಿಗೆ ಪರಿಗಣಿಸಲಾಗುತ್ತದೆ.
ಗ್ರಾಮೀಣ ಮೀಸಲಾತಿ
15. GM ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಹೆಚ್ಚಿದ್ದರೆ ಗ್ರಾಮೀಣ ಮೀಸಲಾತಿ ಪಡೆಯಬಹುದೇ?
ಉತ್ತರ: ಇಲ್ಲ. ಗ್ರಾಮೀಣ ಮೀಸಲಾತಿಗೆ Creamy Layer ನೀತಿ ಅನ್ವಯಿಸುವುದರಿಂದ ₹8 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ GM ಅಭ್ಯರ್ಥಿ ಗ್ರಾಮೀಣ ಮೀಸಲಾತಿ ಪಡೆಯಲು ಸಾಧ್ಯವಿಲ್ಲ.
16. GM ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆಯಿದ್ದರೆ ಗ್ರಾಮೀಣ ಮೀಸಲಾತಿ ಪಡೆಯಬಹುದೇ?
ಉತ್ತರ: ಹೌದು. ತಹಶೀಲ್ದಾರರಿಂದ RD ನಂಬರ್ ಹೊಂದಿರುವ ನಮೂನೆ-1ರ Non-Creamy Layer ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.
17. 2A, 2B, 3A ಅಥವಾ 3B ಅಭ್ಯರ್ಥಿಯ ಕುಟುಂಬದ ಆದಾಯ ₹8 ಲಕ್ಷಕ್ಕಿಂತ ಹೆಚ್ಚಿದ್ದರೆ ಗ್ರಾಮೀಣ ಮೀಸಲಾತಿ 17.ಪಡೆಯಬಹುದೇ?
ಉತ್ತರ: ಇಲ್ಲ. ಈ ಪ್ರವರ್ಗಗಳಿಗೂ ಗ್ರಾಮೀಣ ಮೀಸಲಾತಿಗೆ Creamy Layer ನೀತಿ ಅನ್ವಯಿಸುತ್ತದೆ.
18. SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ Creamy Layer ನೀತಿ ಅನ್ವಯಿಸುತ್ತದೆಯೇ?
ಉತ್ತರ: ಇಲ್ಲ. SC, ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗ್ರಾಮೀಣ ಮೀಸಲಾತಿಗೆ ಆದಾಯದ ಮಿತಿ ನಿಗದಿಪಡಿಸಿಲ್ಲ. ಆದ್ದರಿಂದ Creamy Layer ನೀತಿ ಅನ್ವಯಿಸುವುದಿಲ್ಲ.
19. ₹8 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ GM ಅಭ್ಯರ್ಥಿಯು ಗ್ರಾಮೀಣ ಮೀಸಲಾತಿ ಹೊರತುಪಡಿಸಿ ಇತರ ಸಮತಲ ಮೀಸಲಾತಿ ಪಡೆಯಬಹುದೇ?
ಉತ್ತರ: ಹೌದು. ಮಾಜಿ ಸೈನಿಕ, ಕನ್ನಡ ಮಾಧ್ಯಮ, ಅಂಗವೈಕಲ್ಯ, ಯೋಜನಾ ನಿರಾಶ್ರಿತ, ತೃತೀಯ ಲಿಂಗಿ ಮುಂತಾದ ಇತರ ಸಮತಲ ಮೀಸಲಾತಿಗಳನ್ನು ನಿಯಮಾನುಸಾರ ಪಡೆಯಬಹುದು.
ಶೈಕ್ಷಣಿಕ ಅರ್ಹತೆ
20. GPT ಹುದ್ದೆಗೆ ಪದವಿಯಲ್ಲಿ ಒಟ್ಟಾರೆ ಶೇ.50 ಅಂಕಗಳು ಬೇಕೇ?
ಉತ್ತರ: ಹೌದು. ಪದವಿಯಲ್ಲಿ ಒಟ್ಟಾರೆ ಸರಾಸರಿ ಶೇ.50 ಅಂಕಗಳನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು.
21. PST, GPT ಮತ್ತು ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗಳಿಗೆ ಅರ್ಹತೆ ಇದ್ದರೆ ಮೂರು ಹುದ್ದೆಗಳಿಗೆ ಒಂದೇ ಜಿಲ್ಲೆಯನ್ನು ಆಯ್ಕೆ ಮಾಡಬೇಕೇ?
ಉತ್ತರ: ಇಲ್ಲ. ಅಭ್ಯರ್ಥಿಯು ತನ್ನ ಇಚ್ಛೆಯಂತೆ ಬೇರೆ ಬೇರೆ ವೃಂದಗಳಿಗೆ ಬೇರೆ ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡಬಹುದು. ಆದರೆ ಒಂದು ವೃಂದಕ್ಕೆ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡಬೇಕು.
22. GPT ಕನ್ನಡ ಭಾಷಾ ಹುದ್ದೆಗೆ ಕನ್ನಡವನ್ನು ಪದವಿಯಲ್ಲಿ ಮೂರು ವರ್ಷ ಐಚ್ಛಿಕವಾಗಿ ಅಧ್ಯಯನ ಮಾಡಿರಬೇಕೇ?
ಉತ್ತರ: ಹೌದು. GPT ಕನ್ನಡ ಭಾಷಾ ವಿಷಯದ ಹುದ್ದೆಗೆ ಪದವಿಯಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕ ವಿಷಯವಾಗಿ ಮೂರು ವರ್ಷಗಳು ಅಧ್ಯಯನ ಮಾಡಿರುವುದು ಕಡ್ಡಾಯ.
22. ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದವರು ಇಂಗ್ಲಿಷ್ ವಿಷಯದ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ನಿಯಮಾನುಸಾರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಒಂದು ಭಾಷೆಯಾಗಿ ಅಥವಾ SSLCಯಲ್ಲಿ ಇಂಗ್ಲಿಷ್ ಅನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಅಥವಾ SSLC/ಪದವಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿರಬೇಕು ಅಥವಾ UGC ಮಾನ್ಯತೆಯ ವಿಶ್ವವಿದ್ಯಾಲಯದಿಂದ ಭಾಷಾ ಡಿಪ್ಲೊಮಾ ಅರ್ಹತೆ ಹೊಂದಿರಬೇಕು.
TET / CTET
23.PST (1ರಿಂದ 5ನೇ ತರಗತಿ) ಹುದ್ದೆಗೆ TET/CTET ಅಗತ್ಯವಿದೆಯೇ?
ಉತ್ತರ: ಹೌದು. TET/CTET Paper-I ಕಡ್ಡಾಯ.
24. PST ಹುದ್ದೆಗೆ TET/CTETನಲ್ಲಿ ಎಷ್ಟು ಅಂಕಗಳು ಅಗತ್ಯ?
ಉತ್ತರ: SC/ST/C-1/PH ಅಭ್ಯರ್ಥಿಗಳಿಗೆ 55% ಹಾಗೂ GM, 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 60% ಅಂಕಗಳು ಅಗತ್ಯ.
25.GPT (6ರಿಂದ 8ನೇ ತರಗತಿ) ಹುದ್ದೆಗೆ TET/CTET ಅಗತ್ಯವಿದೆಯೇ?
ಉತ್ತರ: ಹೌದು. TET/CTET Paper-II ಕಡ್ಡಾಯ.
26. GPT ಹುದ್ದೆಗೆ TET/CTETನಲ್ಲಿ ಎಷ್ಟು ಅಂಕಗಳು ಅಗತ್ಯ?
ಉತ್ತರ: SC/ST/C-1/PH ಅಭ್ಯರ್ಥಿಗಳಿಗೆ 55% ಹಾಗೂ GM, 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 60% ಅಂಕಗಳು ಅಗತ್ಯ.
27. PET-Grade-II, PET-Grade-I ಮತ್ತು ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗಳಿಗೆ TET/CTET ಅಗತ್ಯವಿದೆಯೇ?
ಉತ್ತರ: ಇಲ್ಲ. ಈ ಹುದ್ದೆಗಳಿಗೆ TET/CTET ಅಗತ್ಯವಿಲ್ಲ.
ಸೇವಾನಿರತ ಅಭ್ಯರ್ಥಿಗಳು
28. ಸೇವಾನಿರತ ಅಭ್ಯರ್ಥಿಗಳು ಅರ್ಜಿಯೊಂದಿಗೆ NOC ಸಲ್ಲಿಸಬೇಕೇ?
ಉತ್ತರ: ಅರ್ಜಿ ಸಲ್ಲಿಸುವಾಗ NOC ಕಡ್ಡಾಯವಿಲ್ಲ. 1:2 ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಆಯ್ಕೆಯಾದಲ್ಲಿ, ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ NOC ಸಲ್ಲಿಸಬೇಕು.
29. ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ GPT ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರು ಮತ್ತೆ GPT ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ಇಲ್ಲ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ GPT ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು 2026ರಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
30. ಈಗಾಗಲೇ GPT ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರು ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು. 2026ರಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
31. ಅನುದಾನಿತ ಶಾಲೆಯಲ್ಲಿ ಕೆಲಸ ಮಾಡುತ್ತಿರುವವರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು. ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
32. ಇತರ ಇಲಾಖೆಯಲ್ಲಿ ಸರ್ಕಾರಿ ಸೇವೆಯಲ್ಲಿರುವವರು NOC ಇಲ್ಲದೇ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು. NOC ಇಲ್ಲದೇ ಅರ್ಜಿ ಸಲ್ಲಿಸಬಹುದು. ಆದರೆ 1:2 ಮೂಲದಾಖಲೆಗಳ ಪರಿಶೀಲನೆಗೆ ಆಯ್ಕೆಯಾದಲ್ಲಿ ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ NOC ಅನ್ನು ನೇಮಕಾತಿ ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು.
ಯೋಜನಾ ನಿರಾಶ್ರಿತ ಅಭ್ಯರ್ಥಿಗಳು
33. ವಿವಾಹಿತ ಮಹಿಳೆ ತನ್ನ ತಂದೆಯ ಹೆಸರಿನಲ್ಲಿ ಪಡೆದಿರುವ ಯೋಜನಾ ನಿರಾಶ್ರಿತ ಪ್ರಮಾಣ ಪತ್ರವನ್ನು ಸಲ್ಲಿಸಬಹುದೇ?
ಉತ್ತರ: ಹೌದು, ಸಲ್ಲಿಸಬಹುದು. ಆದರೆ ಪ್ರಮಾಣ ಪತ್ರದ ನಮೂನೆಯಲ್ಲಿ ಅಭ್ಯರ್ಥಿಯ ಹೆಸರು ಸ್ಪಷ್ಟವಾಗಿ ನಮೂದಾಗಿರಬೇಕು.
ವಿಶೇಷ ಸೂಚನೆ: ಈ ಪ್ರಶ್ನೋತ್ತರಗಳು ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸುವ ಸುತ್ತೋಲೆ, ಆದೇಶ ಮತ್ತು ಅಧಿಸೂಚನೆಗಳಿಗೆ ಒಳಪಟ್ಟಿರುತ್ತವೆ. ಆದ್ದರಿಂದ ಅಭ್ಯರ್ಥಿಗಳು ಅಂತಿಮವಾಗಿ ಸಂಬಂಧಪಟ್ಟ ನೇಮಕಾತಿ ಅಧಿಸೂಚನೆಯಲ್ಲಿರುವ ನಿಯಮಗಳನ್ನೇ ಪರಿಗಣಿಸಬೇಕು.
“`0