ಯುವನಿಧಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

ರಾಜ್ಯ ಸರಕಾರದ ‘ಯುವನಿಧಿ‘ ಯೋಜನೆ ಮೂಲಕ ನಿರುದ್ಯೋಗ ಭತ್ಯೆ ಪಡೆಯಲು ಅರ್ಜಿ ಸಲ್ಲಿಸುವವರು ಕನಿಷ್ಠ ಆರು ವರ್ಷ ಕರ್ನಾಟಕದಲ್ಲಿ ವಾಸವಾಗಿದ್ದು, ರಾಜ್ಯದಲ್ಲಿ ಪದವಿ, ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು. ಯೋಜನೆಯ ನೋಂದಣಿ ಡಿ.26ರಿಂದ ಆರಂಭವಾಗಲಿದೆ. ನೋಂದಣಿ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ

IMG 20231227 WA0009

ಕರ್ನಾಟಕ ವಾಸಿ ಎಂದು ನಿರೂಪಿಸಲು ಸಲ್ಲಿಸಬೇಕಾದ ದಾಖಲೆ

ಪದವೀಧರ ಅಭ್ಯರ್ಥಿಗಳು

ಎಸ್ಸೆಸೆಲ್ಸಿ ಅಥವಾ ಪಿಯುಸಿ ಇಲ್ಲವೇ ಸಿಇಟಿ ಸಂಖ್ಯೆ ಅಥವಾ ಪಡಿತರ ಚೀಟಿ ಸಂಖ್ಯೆ.

ಡಿಪ್ಲೊಮಾ ಅಭ್ಯರ್ಥಿಗಳು

8, 9ನೇ ತರಗತಿ ಅಂಕಪಟ್ಟಿ (ಎಸ್ಸೆಸ್ಸೆಲ್ಸಿ ಮೂಲದಿಂದ ಡಿಪ್ಲೊಮಾ ಮಾಡಿದ್ದರೆ) ಅಥವಾ ಎಸ್ಸೆಸ್ಸೆಲ್ಸಿ ಇಲ್ಲವೇ ಪಿಯುಸಿ ಅಥವಾ ಪಡಿತರ ಚೀಟಿ ಸಂಖ್ಯೆ.

ಪದವೀಧರರು

ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ (ಪಿಡಿಸಿ)

ಡಿಪ್ಲೊಮಾ ಅಭ್ಯರ್ಥಿಗಳು

ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ.

  1. ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ.
  2. 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ
    ಲಾಭ ಸಿಗಲಿದೆ.
  3. ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
  4. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
  5. ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
  6. ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.
GBTcuOWXkAAhrBQ
  1. ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.
  2. ಯಾವುದೇ ಅಪ್ರೆಂಟೀಸ್ ವೇತನ ಪಡೆಯುತ್ತಿರುವವರು.
  3. ಸರಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
  4. ಸರಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇಲ್ಲ.
IMG 20231227 WA0010

ಅರ್ಹ ಅಭ್ಯರ್ಥಿಗಳು sevasindhugs.karnataka.gov.in ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪದವಿ/ ಡಿಪ್ಲೊಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರವನ್ನು ಎನ್‌ಎಡಿ ಪೋರ್ಟಲ್‌ನಲ್ಲಿ ಸಂಬಂಧಪಟ್ಟ ವಿವಿಗಳು/ಶೈಕ್ಷಣಿಕ ಸಂಸ್ಥೆಗಳು ಮಂಡಳಿಗಳು ಇಂಡೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಲು nad.karnataka.gov.in/#/YuvaNidhi ಜಾಲತಾಣದಲ್ಲಿ ಲಾಗಿನ್ ಆಗಬೇಕು. ತಮ್ಮ ಪದವಿ/ ಡಿಪ್ಲೊಮಾ ಪ್ರಮಾಣ ಪತ್ರದಲ್ಲಿ ನೀಡಿರುವ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಪರಿಶೀಲಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಸೇವಾಸಿಂಧು ಮುಖಪುಟದಲ್ಲಿ ಲಿಂಕ್ ನೀಡಲಾಗಿದೆ.

IMG 20231227 WA0008
  • ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮಒನ್ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಲಾಗಿನ್ ಮಾಡಿಕೊಂಡು ಯುವನಿಧಿಯೋಜನೆ ಸೇವೆ ಆಯ್ಕೆ ಮಾಡಿಕೊಳ್ಳಬೇಕು.
  • ಮುಖಪುಟದಲ್ಲಿ ಲಾಗ್‌ಆನ್ ನಂತರ ಅರ್ಜಿ ನಮೂನೆತೆರೆದುಕೊಳ್ಳಲಿದ್ದು ಮೊದಲಿಗೆ ಅಭ್ಯರ್ಥಿಗಳು ನಿಬಂಧನೆಗಳನ್ನು ಓದಿ ಮೊದಲ ಘೋಷಣೆ ಮಾಡಿಕೊಳ್ಳಬೇಕು.
  • ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.
  • ಆಧಾರ್ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೆವೈಸಿಮಾಹಿತಿ ಪಡೆಯಬೇಕು.
  • ವಿದ್ಯಾರ್ಹತೆ ಮಾಹಿತಿ ಸಂಬಂಧ ಪ್ರಮಾಣ ಪತ್ರದಲ್ಲಿರುವನೋಂದಣಿ ಸಂಖ್ಯೆ ನಮೂದಿಸಿದ ತಕ್ಷಣಸ್ವಯಂಚಾಲಿತವಾಗಿ ಎನ್‌ಎಡಿ ಪೋರ್ಟಲ್‌ನಿಂದಸಕ್ರಿಯಗೊಳಿಸುತ್ತದೆ.
  • ಜಾತಿ- ಪ್ರವರ್ಗ ಆಯ್ಕೆ ಮಾಡಿಕೊಳ್ಳಬೇಕು.
  • ಮೊಬೈಲ್ ಸಂಖ್ಯೆ ನೀಡಿ ಒಟಿಪಿ ಪಡೆಯಬೇಕು. ಇ-ಮೇಲ್ ವಿಳಾಸ ದಾಖಲಿಸಿ ಒಟಿಪಿ ಪಡೆದು ಮತ್ತೊಮ್ಮೆ ದಾಖಲಿಸಬೇಕು.
  • ಅಂತಿಮವಾಗಿ ಮತ್ತೊಮ್ಮೆ ಸ್ವಯಂ ಘೋಷಣೆಮಾಡಿ ನಂತರ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳಲಿದೆ.
  • ಅರ್ಜಿ ಸ್ವೀಕೃತಿ ಯಶಸ್ವಿಯಾಗಿರುವ ಬಗ್ಗೆಸಂದೇಶ ರವಾನೆಯಾಗುತ್ತದೆ. ನಂತರ ಸ್ವೀಕೃತಿಸೃಜನೆಯಾಗಲಿದ್ದು, ಅದನ್ನು ಡೌನ್‌ಲೋಡ್ಮಾಡಿಕೊಳ್ಳಬಹುದು.
  • ಅಭ್ಯರ್ಥಿಯು ಸೇವಾಸಿಂಧು ಪೋರ್ಟಲ್‌ನಲ್ಲಿನಿರುದ್ಯೋಗಿ ಸ್ಥಿತಿ ಬಗ್ಗೆ ಪ್ರತಿ ತಿಂಗಳ 25 ಅಥವಾ ಅದಕ್ಕಿಂತ ಮೊದಲು ಆಧಾರ್ ಒಟಿಪಿ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.
Sharing Is Caring:

Leave a Comment