📢 Transition ಮಾಡ್ಯೂಲ್‌ಗಳ ಸೇತುಬಂಧ ಉಪಕ್ರಮದ ಅನುಷ್ಠಾನ ಕಾರ್ಯತಂತ್ರಗಳು
- 2026-27ನೇ ಶೈಕ್ಷಣಿಕ ಸಾಲಿಗೆ Monograde ದ್ವಿಭಾಷಾ ಶಾಲೆಗಳ 1ನೇ ತರಗತಿಗೆ ವಿದ್ಯಾ ಚೇತನ ಆಗಿರುವುದರಿಂದ ವಿದ್ಯಾ ಪ್ರವೇಶದ ಸಾಹಿತ್ಯದಲ್ಲಿರುವಂತೆ ಸೇತುಬಂಧ ಚಟುವಟಿಕೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
2.Monograde ದ್ವಿಭಾಷಾ ಶಾಲೆಗಳ 1 ರಿಂದ 5ನೇ ತರಗತಿಗಳಿಗೆ ಪ್ರಾರಂಭದ ಮೊದಲ 30 ದಿನಗಳ Transition Period ಮಾಡ್ಯೂಲ್‌ಗಳ ಸೇತುಬಂಧ ಚಟುವಟಿಕೆಗಳ ಉಪಕ್ರಮವನ್ನು ಅನುಷ್ಠಾನ ಮಾಡಲು ನಿಗದಿಪಡಿಸಲಾಗಿದ್ದು ಈ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆ ಹಾಗೂ ವೇಳಾಪಟ್ಟಿಯಂತೆ ಕ್ರಮವಹಿಸುವುದು.
📌 2 ಮತ್ತು 3 ನೇ ತರಗತಿಗಳಿಗಿರುವ ಸೇತುಬಂಧ ಉಪಕ್ರಮದ ಅನುಷ್ಠಾನ ಕಾರ್ಯತಂತ್ರಗಳು;
3. Monograde ದ್ವಿಭಾಷಾ ಶಾಲೆಗಳ 2 ಮತ್ತು 3ನೇ ತರಗತಿಗಳ ಅಪೇಕ್ಷಿತ ಕಲಿಕಾ ಫಲಗಳ ಪಟ್ಟಿಯನ್ನು ಇದರೊಂದಿಗೆ ಅನುಬಂಧಿಸಿದೆ (ಅನುಬಂಧ-1).
4. ಲಗತ್ತಿಸಿರುವ ಅನುಬಂಧದಲ್ಲಿ, ತರಗತಿ ಮತ್ತು ವಿಷಯವಾರು ಅಪೇಕ್ಷಿತ ಕಲಿಕಾ ಫಲಗಳನ್ನು ನೀಡಲಾಗಿದ್ದು, ಶಿಕ್ಷಕರು ತಮ್ಮ ತರಗತಿಯ ಪರಿಸರಕ್ಕೆ ಅನುಗುಣವಾಗಿ ಸೇತುಬಂಧ ಉಪಕ್ರಮವನ್ನು ಆಯೋಜಿಸುವುದು.
5. Monograde ದ್ವಿಭಾಷಾ ಶಾಲೆಗಳ 2 ಮತ್ತು 3ನೇ ತರಗತಿಗಳಿಗೆ ನೈದಾನಿಕ ಪರೀಕ್ಷೆ (Diagnostic Test) ಇರುವುದಿಲ್ಲ.
6. ಪೂರ್ವ ಪರೀಕ್ಷೆ ಬದಲಾಗಿ Transition Period ಮಾಡ್ಯೂಲ್‌ನಲ್ಲಿ ಸೂಚಿಸಿರುವ ಪರಿವರ್ತನಾ ಅವಧಿಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
7. ಸಾರ್ಥಲ್ಯ ಪರೀಕ್ಷೆ ಬದಲಾಗಿ Transition Period ಮಾಡ್ಯೂಲ್‌ನಲ್ಲಿ ನೀಡಲಾಗಿರುವ Observation & Assessment format ನಲ್ಲಿಯಂತೆ ಮೌಲ್ಯಮಾಪನ ಕೈಗೊಳ್ಳುವುದು.
8. ಕನ್ನಡ ಮತ್ತು ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಪೂರ್ಣಪ್ರಮಾಣದಲ್ಲಿ ಉತ್ತರಿಸಿದರೆ, ‘A’ ಎಂದು, ಅಪೂರ್ಣ/ಭಾಗಶಃ ಉತ್ತರಿಸಿದರೆ ‘B’ ಎಂದು ಗುರುತಿಸಿಕೊಳ್ಳುವುದು.
9. ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರಗಳನ್ನು English ನಲ್ಲಿ ಬರೆಸುವುದಕ್ಕೆ ಪ್ರೇರೇಪಿಸುವುದು ಹಾಗೂ ಪೂರ್ಣಪ್ರಮಾಣದಲ್ಲಿ, English ನಲ್ಲಿ ಉತ್ತರಿಸಿದರೆ, ‘A’ ಎಂದು, English/ಕನ್ನಡದಲ್ಲಿ ಅಪೂರ್ಣ, English/ಕನ್ನಡದಲ್ಲಿ भागशಃ ಮತ್ತು ತಪ್ಪು ಉತ್ತರವಿದ್ದಲ್ಲಿ ‘B’ ಎಂದು ಗುರುತಿಸಿಕೊಂಡು, ಪರಿಷ್ಕೃತ ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು.
10. ಮಕ್ಕಳ ಎಲ್ಲಾ ದಾಖಲೆಗಳನ್ನು ವಿದ್ಯಾರ್ಥಿಗಳ ಕೃತಿ ಸಂಪುಟದಲ್ಲಿ ನಿರ್ವಹಿಸುವುದು.
11. ಕಲಿಕಾ ಫಲಗಳ ಸಾಮರ್ಥ್ಯ ಗಳಿಕೆಯನ್ನು ದೃಢೀಕರಿಸಲು ಹೆಚ್ಚಿನ ಪ್ರಶ್ನೆಗಳ ಅವಶ್ಯಕತೆಯಿದ್ದಲ್ಲಿ ಪ್ರಶ್ನೆಗಳನ್ನು ಮೌಖಿಕವಾಗಿ ಕೇಳುವುದು.
12. ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಮತ್ತು ಮೌಖಿಕ ಪ್ರಶ್ನೋತ್ತರ, ಸರಳ ಯೋಜನೆಗಳು, ಸರಳ ಚಟುವಟಿಕೆಗಳು, ಸಂಭಾಷಣೆ, ಅಭ್ಯಾಸ ಹಾಳೆಗಳು, ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಆದೇಶವನ್ನು ಪರಿಶೀಲಿಸಿ