---Advertisement---

ದ್ವಿಭಾಷಾ ಶಾಲೆಗಳಲ್ಲಿ transition ಮಾಡ್ಯೂಲ್ 4 ಮತ್ತು 5ನೇ ತರಗತಿಗಳಿಗಿರುವ ಸೇತುಬಂಧ ಉಪಕ್ರಮದ ಅನುಷ್ಠಾನ ಕಾರ್ಯತಂತ್ರಗಳು ಹಾಗೂ ಮಾರ್ಗಸೂಚಿಗಳು

By kspstadk.com

Published On:

Follow Us
Transition module class 4 and 5
---Advertisement---
WhatsApp Group Join Now
Telegram Group Join Now

4 ಮತ್ತು 5ನೇ ತರಗತಿಗಳಿಗಿರುವ ಸೇತುಬಂಧ ಉಪಕ್ರಮದ ಅನುಷ್ಠಾನ ಕಾರ್ಯತಂತ್ರಗಳು ಹಾಗೂ ಮಾರ್ಗಸೂಚಿಗಳು:

  1. 4 ಮತ್ತು 5ನೇ ತರಗತಿಗಳಿಗೆ ನೈದಾನಿಕ ಪರೀಕ್ಷೆ (Diagnostic Test) ಯನ್ನು ಏರ್ಪಡಿಸುವುದು.

2. ನೈದಾನಿಕ ಪರೀಕ್ಷೆಯ ಪ್ರಶ್ನೆಗಳು Transition Period ಮಾಡ್ಯೂಲ್‌ಗಳಲ್ಲಿ ತಿಳಿಸಿರುವ ಮಾದರಿಯಂತೆ ಅಪೇಕ್ಷಿತ ಕಲಿಕಾ ಫಲಗಳನ್ನಾಧರಿಸಿದ ಪ್ರಶ್ನೆಗಳನ್ನು ಒಳಗೊಂಡಿರಬೇಕು.

3. Monograde ದ್ವಿಭಾಷಾ ಶಾಲೆಗಳ 4 ಮತ್ತು 5ನೇ ತರಗತಿಗಳ ಅಪೇಕ್ಷಿತ ಕಲಿಕಾ ಫಲಗಳ ಪಟ್ಟಿಯನ್ನು ಇದರೊಂದಿಗೆ ಅನುಬಂಧಿಸಿದೆ. (ಅನುಬಂಧ-1)

4. ಲಗತ್ತಿಸಿರುವ ಅನುಬಂಧದಲ್ಲಿ ತರಗತಿ ಮತ್ತು ವಿಷಯವಾರು ಅಪೇಕ್ಷಿತ ಕಲಿಕಾ ಫಲಗಳನ್ನು ನೀಡಲಾಗಿದ್ದು, ಶಿಕ್ಷಕರು ತಮ್ಮ ತರಗತಿಯ ಪರಿಸರಕ್ಕೆ ಅನುಗುಣವಾಗಿ ಸೇತುಬಂಧ ಉಪಕ್ರಮವನ್ನು (ಪೂರ್ವ ಪರೀಕ್ಷೆ – ಪರಿಹಾರ ಬೋಧನೆ – ಸಾಫಲ್ಯ ಪರೀಕ್ಷೆ) ಆಯೋಜಿಸುವುದು.

5.ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಲು FLN ಗೆ ಸಂಬಂಧಿಸಿದ 04 ಪ್ರಶ್ನೆಗಳು ಮತ್ತು ಹಿಂದಿನ ತರಗತಿ ಮತ್ತು ವಿಷಯವಾರು ಅಪೇಕ್ಷಿತ ಕಲಿಕಾ ಫಲಗಳಿಗೆ ಸಂಬಂಧಿಸಿದ 06 ಪ್ರಶ್ನೆಗಳು, ಒಟ್ಟು 10 ಪ್ರಶ್ನೆಗಳನ್ನು ಸಿದ್ಧಪಡಿಸುವುದು.

6.ಕಲಿಕಾ ಫಲಗಳ ಸಾಮರ್ಥ್ಯ ಗಳಿಕೆಯನ್ನು ದೃಢೀಕರಿಸಲು ಹೆಚ್ಚಿನ ಪ್ರಶ್ನೆಗಳ ಅವಶ್ಯಕತೆಯಿದ್ದಲ್ಲಿ, ಪ್ರಶ್ನೆಗಳನ್ನು ಮೌಖಿಕವಾಗಿ ಕೇಳುವುದು.

7. ಪೂರ್ವ ಹಾಗೂ ಸಾಫಲ್ಯ ಪರೀಕ್ಷೆಯ ಉತ್ತರಗಳನ್ನು ಮೌಲ್ಯಮಾಪನ ಮಾಡುವಾಗ ಕೃತ್ಯವಾರು ಮೌಲ್ಯಮಾಪನ ಮಾಡುವುದು.

8. ಕನ್ನಡ ಮತ್ತು ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಪೂರ್ಣಪ್ರಮಾಣದಲ್ಲಿ ಉತ್ತರಿಸಿದ್ದಲ್ಲಿ ‘A’ ಎಂದು, ಅಪೂರ್ಣ/ಭಾಗಶಃ ಉತ್ತರಿಸಿದ್ದಲ್ಲಿ ‘B’ ಎಂದು ಗುರುತಿಸಿಕೊಳ್ಳುವುದು.

9. ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರಗಳನ್ನು English ನಲ್ಲಿ ಬರೆಸುವುದಕ್ಕೆ ಪ್ರೇರೇಪಿಸುವುದು ಹಾಗೂ ಪೂರ್ಣಪ್ರಮಾಣದಲ್ಲಿ English ನಲ್ಲಿ ಉತ್ತರಿಸಿದ್ದಲ್ಲಿ ‘A’ ಎಂದು, English/ಕನ್ನಡದಲ್ಲಿ ಅಪೂರ್ಣ, English/ಕನ್ನಡದಲ್ಲಿ ಭಾಗಶಃ ಮತ್ತು ತಪ್ಪು ಉತ್ತರವಿದ್ದಲ್ಲಿ ‘B’ ಎಂದು ಗುರುತಿಸಿಕೊಂಡು, ಪರಿಷ್ಕೃತ ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು.

10. 4 ಮತ್ತು 5ನೇ ತರಗತಿಯವರೆಗೆ ಪ್ರಶ್ನೆಪತ್ರಿಕೆಯ 1 ರಿಂದ 4ನೇ ಪ್ರಶ್ನೆಗಳಲ್ಲಿ ‘B’ Grade ಪಡೆದಿರುವ ವಿದ್ಯಾರ್ಥಿಗಳನ್ನು FLN ಸಾಧಿಸದೇ ಇರುವ ವಿದ್ಯಾರ್ಥಿಗಳೆಂದು ಗುರುತಿಸಿಕೊಳ್ಳುವುದು. ಪ್ರಶ್ನೆಪತ್ರಿಕೆಯ 5 ರಿಂದ 10ನೇ ಪ್ರಶ್ನೆಗಳಲ್ಲಿ ‘B’ Grade ಪಡೆದಿರುವ ವಿದ್ಯಾರ್ಥಿಗಳನ್ನು ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದೇ ಕಲಿಕಾ ಅಂತರ ಇರುವ ವಿದ್ಯಾರ್ಥಿಗಳೆಂದು ಗುರುತಿಸಿಕೊಳ್ಳುವುದು.

11. ಪರಿಣಾಮಕಾರಿ ಪರಿಹಾರ ಬೋಧನೆಯ ನಂತರ ನಿಗದಿಪಡಿಸಿದ ಕಲಿಕಾ ಫಲಗಳಿಗನುಗುಣವಾಗಿ ಸಾಫಲ್ಯ ಪರೀಕ್ಷೆಯನ್ನು ಕೈಗೊಂಡು, ಅದರ ಮೌಲ್ಯಮಾಪನವನ್ನು ಆಧರಿಸಿ ವಿದ್ಯಾರ್ಥಿಗಳ ಕಲಿಕೆಯನ್ನು ಪೂರ್ವ ಪರೀಕ್ಷೆಯಲ್ಲಿ ಗುರುತಿಸಿದಂತೆ ‘A’ ಮತ್ತು ‘B’ ಎಂದು ಗುರುತಿಸಿ SAP ನಮೂನೆ-4A ಮತ್ತು 4B ನಲ್ಲಿ ದಾಖಲಿಸುವುದು.

12.ಮಕ್ಕಳ ಎಲ್ಲಾ ದಾಖಲೆಗಳನ್ನು ವಿದ್ಯಾರ್ಥಿಗಳ ಕೃತಿ ಸಂಪುಟದಲ್ಲಿ ನಿರ್ವಹಿಸುವುದು.

13. ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಮತ್ತು ಮೌಖಿಕ ಪ್ರಶ್ನೋತ್ತರ, ಸರಳ ಯೋಜನೆಗಳು, ಸರಳ ಚಟುವಟಿಕೆಗಳು, ಸಂಭಾಷಣೆ, ಅಭ್ಯಾಸ ಹಾಳೆಗಳು, ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು.

14. Monograde ದ್ವಿಭಾಷಾ ಶಾಲೆಗಳ 1 ರಿಂದ 5 ನೇ ತರಗತಿಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನದ ಎಲ್ಲಾ ದಾಖಲೆಗಳನ್ನು ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸಲು 2026-27ನೇ ಸಾಲಿಗಿರುವ ಪರಿಷ್ಕೃತ ನಮೂನೆಗಳನ್ನು ಬಳಸುವುದು.

15. ಮೌಲ್ಯಮಾಪನವನ್ನು ಆಧರಿಸಿ ವಿದ್ಯಾರ್ಥಿಗಳ ಕಲಿಕೆಯನ್ನು FLN ಪ್ರಗತಿ ಮತ್ತು ಅಪೇಕ್ಷಿತ ಕಲಿಕಾ ಫಲಗಳ ಕಲಿಕೆಯನ್ನು SAP ನಮೂನೆ-4A ಮತ್ತು 4B ನಲ್ಲಿ ದಾಖಲಿಸುವುದು.

16 ‘ B’ Grade ಪಡೆದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು SAP ನಮೂನೆ-5A ಮತ್ತು 5B ನಲ್ಲಿ ದಾಖಲಿಸುವುದು.

17 ಹೀಗೆ ಗುರುತಿಸಿದ ವಿದ್ಯಾರ್ಥಿಗಳ FLN ಮತ್ತು ಅಪೇಕ್ಷಿತ ಕಲಿಕಾ ಫಲಗಳ ಗಳಿಕೆಯ ಮಾಹಿತಿಯನ್ನು SATS ನಲ್ಲಿ ಲಭ್ಯವಿರುವ ಪ್ರತ್ಯೇಕ ಮಾಡ್ಯೂಲ್‌ಗಳಲ್ಲಿ ದಾಖಲಿಸುವುದು.

18. FLN ಮತ್ತು ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದಿರುವ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ अनुपಾಲನೆ ಮಾಡುವುದು. FLN ಅನ್ನು ಪ್ರತಿ ತರಗತಿಗೆ ಪ್ರತ್ಯೇಕವಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ತಿಂಗಳು ಮೌಲ್ಯಾಂಕನ ಮಾಡಿ, ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು ಮತ್ತು SATS ನಲ್ಲಿ ಇಂದೀಕರಿಸುವುದು.

19.ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದೇ ಇರುವ ವಿದ್ಯಾರ್ಥಿಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಂಡು ಸೆಪ್ಟೆಂಬರ್ ಅಂತ್ಯ ಮತ್ತು ಡಿಸೆಂಬರ್ ಅಂತ್ಯಕ್ಕೆ ಮೌಲ್ಯಾಂಕನ ಮಾಡಿ, ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು ಮತ್ತು SATS ನಲ್ಲಿ ಇಂದೀಕರಿಸುವುದು.

20. ಪ್ರತಿ ವಿದ್ಯಾರ್ಥಿಗಳ ಪ್ರಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು (SAP) ಸಿದ್ಧಪಡಿಸಿ, ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ಮಾಡುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment