ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ, ವರ್ಗಾವಣೆ ಹಾಗೂ
ಮುಂಬಡ್ತಿ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸುವಂತೆ ಶಿಕ್ಷಣ ಸಚಿವರಿಗೆ ಸರಕಾರಿ ನೌಕರರ ಸಂಘವೂ ಮನವಿ ಮಾಡಿದೆ
ಮನವಿಯಲ್ಲಿ ಜನಪ್ರತಿನಿಧಿಗಳು ಸಂಘಟನೆಗಳ ಕೋರಿಕೆಯ ಮೇರೆಗೆ
ಅವೈಜ್ಞಾನಿಕ-ತಾಂತ್ರಿಕ ಕಾರಣಗಳಿಗಾಗಿ ಈಗಾಗಲೇ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗಳನ್ನು ನಿಲ್ಲಿಸಿ, ಮುಂದಿನ
ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿರುತ್ತೀರಿ. ಆದರಂತೆ ರಾಜ್ಯದ ಸಮಸ್ತ
ಶಿಕ್ಷಕರುಗಳ ಕೋರಿಕೆ ಹಾಗೂ ಶಾಲೆಗಳ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಅಗತ್ಯ ಕ್ರಮ ಕೈಗೊಳ್ಳಲು
ಕೋರಿದೆ.
- ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಎಲ್ಲಾ ವಿಷಯಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗಳನ್ನು
ಯಾವುದೇ ಶಿಕ್ಷಕರಿರಲಿ ಅವರನ್ನು ಆಯಾ ತಾಲ್ಲೂಕಿನ ಒಳಗಡೆ ಮಾತ್ರ ಸ್ಥಳ ನಿಯುಕ್ತಿಗೊಳಿಸುವುದು. ಈ
ಪ್ರಕ್ರಿಯೆಯಲ್ಲಿ ಶಿಕ್ಷಕರುಗಳು ಇಚ್ಚಿಸಿದ್ದಲ್ಲಿ ಮಾತ್ರ ಹೊರ ತಾಲ್ಲೂಕು-ಜಿಲ್ಲೆಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು
ಅವಕಾಶ ಮಾಡಿಕೊಡುವುದು. - ಹೆಚ್ಚುವರಿ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ವರ್ಗಾವಣೆ ಪ್ರಕ್ರಿಯೆಯನ್ನು ನಿಗದಿತ
ವೇಳಾಪಟ್ಟಿಯಂತೆ ಪ್ರಾರಂಭಿಸುವುದು. - ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರಿಗೆ ಒಂದು ವರ್ಷದಿಂದ ಮುಂಬಡ್ತಿಯನ್ನು ನೀಡಿರುವುದಿಲ್ಲ.
ಈಗಾಗಲೇ ಸಾವಿರಾರು ಶಿಕ್ಷಕರು ಮುಂಬಡ್ತಿ ಪಡೆಯದೆ ನಿವೃತ್ತರಾಗಿರುತ್ತಾರೆ. ಹಾಗಾಗಿ ಮುಂಬಡ್ತಿಗಳನ್ನು
ನೀಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವುದು. - ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಗಳ ಪದಾಧಿಕಾರಿಗಳಿಗೆ ವಿನಾಯಿತಿ ನೀಡುವುದು.
ಈ ವಿಷಯಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳ
ಅಧ್ಯಕ್ಷರುಗಳನ್ನು ಆಹ್ವಾನಿಸಬೇಕಾಗಿ ಸಚಿವರಿಗೆ ಮನವಿ ಸಲ್ಲಿಸಿದೆ