ಶಿಕ್ಷಕರ ವರ್ಗಾವಣೆ (OTS) ಬಗ್ಗೆ ಮಾಹಿತಿ
ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿ ಈಗಿರುವ ನಿರ್ಭಂಧಗಳನ್ನು ಸಡಿಲಿಸಿ ಸೇವಾವಧಿಯಲ್ಲಿ ಒಮ್ಮೆ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಿಕೊಡುವುದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸೆಲ್ವಕುಮಾರ್ IAS., ಅವರನ್ನು ರಾಜ್ಯಾಧ್ಯಕ್ಷರಾದ ಷಡಾಕ್ಷರಿರವರು ಭೇಟಿ ಮಾಡಿ ಚರ್ಚಿಸಿದರು. ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಪರಸ್ಪರ ವರ್ಗಾವಣೆ ಮುಕ್ತ ಅವಕಾಶ ಮಾಡಿಕೊಡಲು ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ಸಮ್ಮತಿಸುವುದರ ಜೊತೆಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರ ಸಂಘದ ವತಿಯಿಂದ ಸಂಗ್ರಹಿಸಿರುವ ಮಾಹಿತಿಗಳನ್ನು ಆಯಾ ಜಿಲ್ಲಾ ಉಪನಿರ್ದೇಶಕರ ಕಚೇರಿಗಳಿಂದ ವರ್ಗಾವಣೆ ಬಯಸುವ ಶಿಕ್ಷಕರ ಮಾಹಿತಿಗಳನ್ನು ಪಡೆಯುವುದಾಗಿ ಹಾಗೂ ಅವುಗಳನ್ನು ಕ್ರೂಢೀಕರಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.