ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಡಿಡಿಪಿಐ ಗೆ ಮನವಿ – ದಕ್ಷಿಣ ಕನ್ನಡ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿಜಿಸ್ಟರ್ಡ್ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಪ ನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ ಇವರಿಗೆ ದಿನಾಂಕ 09/04/21ರಂದು ಮಂಗಳೂರು ಡಯಟ್ ಇಲ್ಲಿ

1) 2005ರಲ್ಲಿ ಅಧಿಸೂಚನೆ ಯಾಗಿ 2007 ರಲ್ಲಿ ನೇಮಕಾತಿಯನ್ನು ಹೊಂದಿರುವ ಜಿಲ್ಲೆಯ ಶಿಕ್ಷಕರಿಗೆ ನ್ಯಾಯಾಲಯದ ಆದೇಶದ ಅನ್ವಯ ನೂತನ ಪಿಂಚಣಿಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿಯನ್ನು ಜಾರಿಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ

2) 2008ನೇ ಸಾಲಿನ ಶಿಕ್ಷಕರ ವೇತನ ದಲ್ಲಿ ಇರುವ ತಾರತಮ್ಯವನ್ನು ಸರಿಪಡಿಸುವಂತೆ
3)ನಿಷ್ಠ ತರಬೇತಿಗೆ ನೀಡುವ ಗೌರವ ಧನವನ್ನು CRP ಅವರಿಗೆ ವಿಸ್ತರಿಸುವಂತೆ
ಮನವಿಯನ್ನು ಸಲ್ಲಿಸಲಾಯಿತು.

4)ಜ್ಯೋತಿ ಸಂಜೀವಿನಿ ಕಾರ್ಡನ್ನು ಶಿಕ್ಷಕರಿಗೆ ಉಚಿತವಾಗಿ ಮಾಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ವಿಮಲ್ ನೆಲ್ಯಾಡಿ ಉಪಾಧ್ಯಕ್ಷರಾದ ಶ್ರೀ ನವೀನ್ ಶ್ರೀಮತಿ ರೀನಾ,ಜಿಲ್ಲಾ ಜೊತೆ ಕಾರ್ಯದರ್ಶಿ ಅಮಿತಾನಂದ ಹೆಗ್ಡೆ ,ಶ್ರೀಮತಿ ಪ್ರಮೀಳಾ ಡೇ ಸಾ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಟಿ, ಶ್ರೀಮತಿ ಗಂಗಾವತಿ ,ಸರಕಾರಿ ನೌಕರರ ಸಂಘ ಬಂಟ್ವಾಳ ಇದರ ಅಧ್ಯಕ್ಷರಾದ ಶ್ರೀ ಉಮಾನಾಥ ರೈ,ಕಾರ್ಯದರ್ಶಿ ಸಂತೋಷ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಶ್ರೀ ಜಯರಾಮ ,ಕಾರ್ಯದರ್ಶಿ ಶ್ರೀ ಯತೀಶ್ ,ಪುತ್ತೂರು ಕಾರ್ಯದರ್ಶಿ ಶ್ರೀಮತಿ ವೇದಾವತಿ,ಕಡಬದ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಹಾಗೂ 2007 ರ ಜನವರಿಯಲ್ಲಿ ನೇಮಕಾತಿ ಹೊಂದಿದ ಶಿಕ್ಷಕರು ಹಾಗೂ ತಾಲೂಕು ಮತ್ತು ಜಿಲ್ಲೆಯ ವಿವಿಧ ಪದಾಧಿಕಾರಿಗಳು ಹಾಜರಿದ್ದರು.

ಮುಂದಿನ ದಿನಗಳಲ್ಲಿ nps ರದ್ದತಿಯ ಹೋರಾಟದ ಸಂದರ್ಭದಲ್ಲಿ ಜಿಲ್ಲಾ ಸಂಘವು ಸಂಪೂರ್ಣ ಜೊತೆಗೆ ಇರುವ ಬಗ್ಗೆ ಜಿಲ್ಲಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಸಭೆಗೆ ಆಶ್ವಾಸನೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಡಿಡಿಪಿಐ ಶ್ರೀ ಮಲ್ಲೇಸ್ವಾಮಿ ಶಿಕ್ಷಕರ ಬೇಡಿಕೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

Sharing Is Caring:

Leave a Comment