ಜ್ಯೋತಿ ಸಂಜೀವಿನಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಿ ನೌಕರರಿಗಾಗಿ ಉಚಿತ ಚಿಕಿತ್ಸೆಯನ್ನುನೀಡಲು ಜ್ಯೋತಿ ಸಂಜೀವಿನಿ ಎಂಬಯೋಜನೆಯನ್ನು ಜಾರಿಗೆ ತಂದಿದೆ. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಒಂದು ರೂಪಾಯಿ ಕೂಡ ಖರ್ಚು ಆಗದು, ಇದು ಸಂಪೂರ್ಣ ಉಚಿತ. ಈ ಯೋಜನೆ ರಾಜ್ಯ ಸರ್ಕಾರದ ಅತ್ಯುತ್ತಮವಾದ ಯೋಜನೆಗಳಲ್ಲಿ ಒಂದು. ಗಂಭೀರ ಹಾಗೂ ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾದ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ನೆರವನ್ನು ಒದಗಿಸುವುದು ಜ್ಯೋತಿ ಸಂಜೀವಿನಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಎಲ್ಲ ಸಮುದಾಯ ಆರೋಗ ಕೇಂದ್ರಗಳು,ತಾಲ್ಲೂಕಿ ಸಾರ್ವಜನಿಕ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಹಾಗೂ ನೋಂದಾಯಿತ ಸೂಪರ್
ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ (ನೆಟ್ ವರ್ಕ್ ಆಸ್ಪತ್ರೆಗಳು) ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಆರೋಗ್ಯ ಮಿತ್ರರು ಕಾರ್ಯ ನಿರ್ವಹಿಸಿ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಭಿತ ಸದಸ್ಯರಿಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗುವಂತೆ ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ನೀಡುತ್ತಿದ್ದಾರೆ.

ಜ್ಯೋತಿ ಸಂಜೀವಿನಿ ಯೋಜನೆಯ ವಿಡಿಯೋ ಮಾಹಿತಿ.

ವಿಡಿಯೋ ವಿವರಣೆಗಳು

ಆತ್ಮೀಯರೇ, ಸರಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಗಳಾದ ” ಆಯುಷ್ಮಾನ್ ಭಾರತಆರೋಗ್ಯ ಕರ್ನಾಟಕ” ಮತ್ತು ಸರಕಾರಿ ನೌಕರರ ” ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯ” ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿ” : ದಿ:20/01/2021 ರಲ್ಲಿದ್ದಂತೆ ಲೇಟೆಸ್ಟ್ ಅಪ್ಡೇಟ್ಸ್

ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ : ದಿ:20/01/2021 ರಲ್ಲಿದ್ದಂತೆ

ಜ್ಯೋತಿ ಸಂಜೀವಿನಿಯ ಸಂಪೂರ್ಣ ಮಾಹಿತಿ.

ಜ್ಯೋತಿ ಸಂಜೀವಿನಿ ಆದೇಶ

ಜ್ಯೋತಿ ಸಂಜೀವಿನಿ ಪ್ಯಾಕೇಜ್

Sharing Is Caring:

18 thoughts on “ಜ್ಯೋತಿ ಸಂಜೀವಿನಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ”

  1. It’s very happy to see success of teachers association as soon as possible to solve the teachers family members problems vt out any mental stress it’s an excellent job keep doing the same always andi am very proud of the work ????????

    Reply
  2. ಕೋವಿಡ್ ಆಗಿ ಪ್ರೈವೇಟ್ ಆಸ್ಪತ್ರೆಗೆ ಕೋವಿಡ್ ಚಿಕಿತ್ಸೆ ಪಡೆದ ಹಲವಾರು ನೌಕರರು ಮೆಡಿಕಲ್ ಬಿಲ್ ಗಾಗಿ ಸುವರ್ಣ ಆರೋಗ್ಯ ಟ್ರಸ್ಟ್ ಅನೇಕರು ನೌಕರರು ಕಳಿಸಿದ್ದಾರೆ ಯಾವುದೆ ಮೆಡಿಕಲ್ ಬಿಲ್ ಗಳು ಕೊಟ್ಟಿರುವದಿಲ್ಲಾ .ದಯಮಾಡಿ‌ ಸಂಘದವರು ಇದರ ಪರಿಹಾರವನ್ನು ಮಾಡಬೇಕಾಗಿ ವಿನಂತಿ

    Reply
  3. ಸರ್ ಜ್ಯೋತಿ ಸಂಜೀವಿನಿ ಸ್ಕೀಂ ನಲ್ಲಿ hrms ನಲ್ಲಿ ಆಧಾರ್ ಕಾರ್ಡ್ upload ಆಗ್ತಾ ಇಲ್ಲ ಅಂತಿದ್ದಾರೆ ಹೆಸರು upload ಆಗಿದೆ ನಡೆಯುತ್ತಾ. ಹಾಸ್ಪಿಟಲ್ನಲ್ಲಿ ಅಪ್ರೋ ವ್ ಆಗೋವರೆಗೂ treatment illa ಅಂತಿದ್ದಾರೆ ಸರ್ ಎನ್ಮಾಡಬೇಕು ಸರ್

    Reply
  4. ಕಣ್ಣಿನ ಪೊರೆ ತೆಗೆದು ಲೆನ್ಸ್ ಹಾಕಲು ಜ್ಯೊತಿ ಸಂಜಿವಿನಿ ಯೊಜನೆಯಲ್ಲಿ ಅವಕಾಶ ಇದ್ದೂ ದಾವಣಗೆರೆಯಲ್ಲಿ ಕಣ್ಣಿನ ಆಸ್ಪತ್ರೆಗಳು ಸಿದ್ದರಿಲ್ಲ ಏನು ಮಾಡುವುದು ದಯವಿಟ್ಟು ತಿಳಿಸಿ

    Reply
  5. ನಿಜಕ್ಕೂ ಇದು ಬಹಳ ಉತ್ತಮವಾದ ಕೆಲಸ. ನೌಕರಿಗೆ ಮಾನಸಿಕ ಒತ್ತಡ ಕಡಿಮೆ ಆಯಿತು.ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
    ನನಗೆ ಈಗ ಆರೋಗ್ಯ ಸಮಸ್ಯೆ ಇದೆ ಒಂದು ಸರ್ಜರಿ ಆಗಬೇಕಿದೆ ಜ್ಯೋತಿ ಸಂಜೀವಿನಿ ಯಡಿಯಲ್ಲಿ ಚಿಕಿತ್ಸೆ ಪಡೆಯುವುದು ಹೇಗೆ ದಯಮಾಡಿ ತಿಳಿಸಿ.

    Reply
  6. GOOD MORNING SIR, FOR SURGERY THEY ASK HRMS COPY FROM BEO OFFICE, BUT NOW HRMS IS NOT OPEN WHAT AM I DO mobile 9844586400

    Reply

Leave a Comment