23.02.2024 ರಂದು ನಡೆದ ರಾಜ್ಯ ಕಾರ್ಯ ಕಾರಿಣಿ ಸಭೆಯ ಸರ್ವಾನುಮತದ ತೀರ್ಮಾನಗಳು

WhatsApp Group Join Now
Telegram Group Join Now

IMG 20240224 WA0203

ದಿನಾಂಕ: 23-02-2024ರ ಮಹತ್ವದ ರಾಜ್ಯ ಕಾರ್ಯಕಾರಿ
ಸಮಿತಿ ಸಭೆಯ ಚರ್ಚೆ ಹಾಗೂ ತೀರ್ಮಾನಗಳು

2016 C&R ನಿಯಮಗಳನ್ನು ಪೂರ್ವಾನ್ವಯಗೊಳಿಸಬಾರದು

ಬೇಡಿಕೆ ಈಡೇರದೇ ಇದ್ದರೆ ಹೋರಾಟಕ್ಕೆ ಸಿದ್ಧತೆ ಮತ್ತು
ಹೋರಾಟಕ್ಕೆ ಸೂಕ್ತ ದಿನಾಂಕ ಪ್ರಕಟ ಮಾತ್ರ ಬಾಕಿ ಇರುವಂತೆ
ಒಮ್ಮತವಾದ ತೀರ್ಮಾನ ಕೈಗೊಳ್ಳಲಾಯಿತು
”.

ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಜರುಗಿ ಪ್ರಾಥಮಿಕ ಶಾಲಾ ಶಿಕ್ಷಕರ ಪದನ್ನೋತಿ
ಹಾಗೂ ಇನ್ನಿತರ ಸೇವಾ ಸೌಲಭ್ಯಗಳ ವಿಷಯವಾಗಿ ಕೆಲವು GPT ಶಿಕ್ಷಕರು ನ್ಯಾಯಾಲಯಗಳ
ಮುಖಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿಗೆ ಅಡೆತಡೆ ಮಾಡಿರುವ ಬಗ್ಗೆ ಕೂಲಂಕಷವಾಗಿ
ಚರ್ಚಿಸಲಾಯಿತು.

GPT ಶಿಕ್ಷಕರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಯಾವುದೇ ಬೇಧ-ಭಾವ ಮಾಡಿರುವುದಿಲ್ಲ,
ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುವ ನಾವೆಲ್ಲರೂ ಒಂದೇ ಎಂಬ ಮನೋಭಾವ ಇದ್ದರೆ ಮಾತ್ರ ಎಲ್ಲರ ಬೇಡಿಕೆಗಳು ಈಡೇರಲು ಸಾಧ್ಯ.

ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ಮಾಡುವ ಶಿಕ್ಷಕರೆಲ್ಲರೂ ಎಲ್ಲಾ ವರ್ಗಗಳ ಬೋಧನೆ
ಮಾಡಬೇಕಾಗುತ್ತದೆ, ಪ್ರಾಥಮಿಕ ಶಾಲಾ
ಶಿಕ್ಷಕರು ಕಡಿಮೆ
ವೇತನ ಪಡೆದರೂ ಸಹ
1 ರಿಂದ 8ನೇಯ ವರ್ಗದವರೆಗೆ ಬೋಧನೆ ಮಾಡುತ್ತಾರೆ. ಇಂತಹ ಕರ್ತವ್ಯ ನಿಷ್ಠೆಯುಳ್ಳ ಶಿಕ್ಷಕರಿಗೆ ಬಡ್ತಿಗೆ ತೊಂದರೆ ಕೊಟ್ಟಿದ್ದು ಸಂಘರ್ಷಕ್ಕೆ ದಾರಿಮಾಡಿ ಕೊಟ್ಟಿದೆ.

ಸರ್ಕಾರ ತಕ್ಷಣ ಈ ಕುರಿತು ಕ್ರಮ ಕೈಗೊಂಡು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ಮಾಡುವ ಎಲ್ಲ ಸೇವಾನಿರತ ಪದವೀಧರ ಶಿಕ್ಷಕರುಗಳನ್ನು “ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು” ಹೊಸ 2016
C&R ನಿಯಮಗಳನ್ನು ಪೂರ್ವಾನ್ವಯಗೊಳಿಸಬಾರದು, ಇದರಿಂದ ಸೇವಾ ಜೇಷ್ಠತೆಗೆ ಹಾಗೂ ಅನುಭವಕ್ಕೆ ಬೆಲೆ ಸಿಗುತ್ತದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೋರಾಟದ ಫಲವಾಗಿ
ಮುಖ್ಯೋಪಾಧ್ಯಯರ ಹುದ್ದೆಗಳು ಸೃಷ್ಟಿಯಾಗಿವೆ. ಮುಖ್ಯೋಪಾಧ್ಯಾಯರ ಹುದ್ದೆಗೆ ಸೇವಾ ಜೇಷ್ಠತೆ
ಒಂದೇ ಮಾನದಂಡ ಬೇರೆ ಯಾವ ಮಾನದಂಡವಿರುವುದಿಲ್ಲ.

ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಕ್ಷಣ ಮುಖ್ಯೋಪಾದ್ಯಾಯರ ಹುದ್ದೆಗೆ ಬಡ್ತಿ ನೀಡಬೇಕು,
ಈ ಮೇಲ್ಕಂಡ ಗಂಭೀರವಾದ ವಿಷಯಗಳ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ
ರಾಜ್ಯಾದ್ಯಂತ ಬೋಧನಾ ಸ್ಥಗಿತ, ಅಸಹಕಾರ ಚಳವಳಿಯನ್ನು ಕೈಗೊಳ್ಳಲು ರಾಜ್ಯ ಕಾರ್ಯಕಾರಿ
ಸಮಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.

ಮೇಲ್ಕಂಡ ನಿರ್ಣಯದ ಜೊತೆ ಈ ಕೆಳಗಿನ ತೀರ್ಮಾನ ಕೈಗೊಳ್ಳಲಾಯಿತು.

ದಿನಾಂಕ: 23-02-2024 ರಂದು ನಡೆದ ರಾಜ್ಯ ಕಾರ್ಯಕಾರಿಣಿ ಸಮಿತಿಯ
ಸರ್ವಾನುಮತದ ಪ್ರಮುಖ ನಿರ್ಣಯಗಳು.

  • ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು
    ನೇಮಕಾತಿಯಾದವರಿಗೆ
    ಪೂರ್ವಾನ್ವಯಗೊಳಿಸಬಾರದೆಂಬ@one point Agenda
    ಹಾಗೂ ಉಳಿದಂತೆ ಹಿಂದಿನಂತೆ ಎಲ್ಲಾ ಸೌಲಭ್ಯಗಳನ್ನು ಮುಂದುವರೆಸಲು ನಿರ್ಣಯ
    ಅಂಗೀಕರಿಸಲಾಯಿತು.
  • ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯ ಗುರುಗಳ ಬಡ್ತಿ ಪ್ರಕ್ರಿಯೆಗಳನ್ನು ತಕ್ಷಣ
    ಪೂರ್ಣಗೊಳಿಸುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.
  • ಈ ಕುರಿತು ಮಾನ್ಯ ಶಿಕ್ಷಣ ಸಚಿವರೊಂದಿಗೆ ಸಮಾಲೋಚಿಸಿ, ಚರ್ಚಿಸಿ ಶೀಘ್ರ ಮಾನ್ಯ
    ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ಆಯೋಜಿಸುವ ವ್ಯವಸ್ಥೆಯನ್ನು ಮಾಡಲು
    ನಿರ್ಣಯಿಸಲಾಗಿದೆ.
  • ಬೇಡಿಕೆಗಳು ಈಡೇರದೇ ಹೋದರೆ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ
    ರೂಪಿಸಲಾಗುವುದು ಹಾಗೂ ಸೂಕ್ತ ದಿನಾಂಕವನ್ನು ಪ್ರಕಟಿಸಲಾಗುವುದು.

ಮುಂದಿನ ಹೋರಾಟದ ರೂಪರೇಷೆಗಳನ್ನು ಹಾಗೂ ದಿನಾಂಕವನ್ನು ಮುಖ್ಯಮಂತ್ರಿಗಳ ಸಭೆಯ
ನಂತರ ತಿಳಿಸಲಾಗುವುದು.

ಪ್ರಾಥಮಿಕ ಶಾಲಾ ಶಿಕ್ಷಕರ ತಾಳ್ಮೆಗೂ ಮಿತಿ ಇದೆ, ಈಗ ಸಹನೆ ಮಿತಿ ಮೀರಿದೆ, ಶಿಕ್ಷಕರ
ತಾಳ್ಮೆಯನ್ನು ದೌರ್ಬಲ್ಯ ಎಂದು ಇಲಾಖೆ ಭಾವಿಸಬಾರದು, ಶಿಕ್ಷಕರ ಹಕ್ಕು ಬಾಧ್ಯತೆಗಾಗಿ ಉಗ್ರ ಹೋರಾಟ ಮಾಡಲು ಕಾರ್ಯಕ್ರಮ ರೂಪಿಸಲು ಸಭೆ ನಿರ್ಣಯಿಸಿದೆ.

WhatsApp Group Join Now
Telegram Group Join Now
Sharing Is Caring:

Leave a Comment