---Advertisement---

ಕುಟುಂಬ ಯೋಜನಾ ಕ್ರಮ (SFN) ಮಂಜೂರು ಮಾಡುವಾಗ ಪರಿಷ್ಕೃತ ರಾಜ್ಯವೇತನ ಶ್ರೇಣಿಗಳನ್ವಯ ಮಂಜೂರಾತಿಗಾಗಿ ಸ್ಪಷ್ಟೀಕರಣ….

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

ಏಳನೇ ರಾಜ್ಯವೇತನ ಆಯೋಗದ ಶಿಫಾರಸ್ಸಿನಂತೆ ಜಾರಿಗೆ ಬಂದಿರುವ ಪರಿಷ್ಕೃತ ರಾಜ್ಯವೇತನ ಶ್ರೇಣಿಗಳ ಆರ್ಥಿಕ ಸೌಲಭ್ಯವು ದಿನಾಂಕ 01.08.2022ರಿಂದ ಲಭ್ಯವಾಗುತ್ತದೆ. ಈ ವೇತನ ಶ್ರೇಣಿಗಳಲ್ಲಿ ವೇತನ ನಿಗಧೀಕರಣವನ್ನು ದಿನಾಂಕ 01.07.2022ರಿಂದ ಮಾಡಲು ಅವಕಾಶವಿರುವುದಾಗಿದೆ. ಅಲ್ಲದೆ ದಿನಾಂಕ 1.7.2022 ರಿಂದ 31.7.2024ರ ವರೆಗಿನ ಅವಧಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ವೇತನ ನಿಗಧಿಯಿಂದಾಗಿ ಅಥವಾ ಪುನರ್ ನಿಗಧಿಯಿಂದಾಗಿ ವೇತನ ಮತ್ತು ಭತ್ಯೆಗಳನ್ನು ಮತ್ತು ನಿವೃತ್ತಿ ವೇತನದ ಹೆಚ್ಚಳಕ್ಕೆ ಯಾವುದೇ ಸರ್ಕಾರಿ ನೌಕರನು ಅರ್ಹನಾಗಿತುವುದಿಲ್ಲ.
ಈ ಹಿನ್ನೆಲೆಯಲ್ಲಿ 01/07/2022 ರಿಂದ 31/7/2024ರ ಅವಧಿಯಲ್ಲಿ ಮಿತ ಕುಟುಂಬ ಯೋಜನಾ ಕ್ರಮವನ್ನು ಅಳವಡಿಸಿಕೊಂಡ ಪ್ರಕರಣಗಳಲ್ಲಿ ವೈಯಕ್ತಿಕ ವೇತನ ರೂಪದಲ್ಲಿ ನೀಡಲಾಗುವ ವಿಶೇಷ ವೇತನ ಬಡ್ತಿಯನ್ನು 2024 ರಾಜ್ಯ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಲಭ್ಯವಾಗುವ ವಾರ್ಷಿಕ ವೇತನದ ಬಡ್ತಿಯ ದರದಲ್ಲಿ ದಿನಾಂಕ 01/07/2022ರಿಂದ ಜಾರಿಗೆ ಬರುವಂತೆ ಕಾಲ್ಪನಿಕವಾಗಿ ನೀಡತಕ್ಕದಾಗಿರುತ್ತದೆ. ದಿನಾಂಕ 1.7.2022 ರಿಂದ 31.7.2024ರವರೆಗಿನ ಅವಧಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ವಿಶೇಷ ವೇತನ ಭಡ್ತಿ ಮಂಜೂರಾತಿಯಿಂದ ಉಂಟಾದ ಆರ್ಥಿಕ ಹೆಚ್ಚಳಕ್ಕೆ ಸರ್ಕಾರಿ ನೌಕರರು ಅರ್ಹನಾಗಿರುವುದಿಲ್ಲ. ಈ ಅವಧಿಯಲ್ಲಿ ಪರಿಷ್ಕರಣೆಯ ಪೂರ್ವದ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿದ ವೇತನ ಬಡ್ತಿಯಂತೆ ಆರ್ಥಿಕ ಲಾಭವನ್ನು ಪಡೆಯಲು ಸರ್ಕಾರಿ ನೌಕರರು ಅರ್ಹರಿರುತ್ತಾರೆ. ಆದರೆ ಈ ಯೋಜನೆಯಲ್ಲಿ ಮಂಜೂರು ಮಾಡುವ ವೈಯಕ್ತಿಕ ವೇತನ ಬಡ್ತಿ ದರದ ಆರ್ಥಿಕ ಸೌಲಭ್ಯವು 01.08.2024ರಿಂದ ಲಭ್ಯವಾಗುತ್ತದೆ. ಉಳಿದಂತೆ ಈ ಸೌಲಭ್ಯ ಪಡೆಯುವ ನೌಕರರು ದಿನಾಂಕ 01.10.1985ರ ಆದೇಶ ಸಂಖ್ಯೆ: ಆಇ 27 ಎಸ್ ಆರ್ ಎಸ್ 1985 ಹಾಗೂ ಈ ಸಂಬಂಧ ಕಾಲಕಾಲಕ್ಕೆ ಹೊರಡಿಸಿರುವ ಆದೇಶ ಸುತ್ತೋಲೆ ಸೇರ್ಪಡೆ ಆದೇಶ ಮುಂತಾದವುಗಳಲ್ಲಿ ನಿಗದಿಪಡಿಸಿರುವ ಎಲ್ಲಾ ಷರತ್ತು ಮಾರ್ಗಸೂಚಿಗಳನ್ನು ಪೂರೈಸಿರಬೇಕೆಂಬುದನ್ನು ಈ ಮೂಲಕ ಸ್ಪಷ್ಟ ಪಡಿಸಿದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment