ಸರಕಾರದ ಸಭೆ ಸಮಾರಂಭಗಳಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಕುರಿತು ಮಾಹಿತಿ ಇಲ್ಲಿದೆ

ಸರ್ಕಾರದ ಸಭೆ ಸಮಾರಂಭಗಳ ಆಯೋಜನೆಯಲ್ಲಿ ಪಾಲಿಸಬೇಕಾದ ಶಿಷ್ಠಾಚಾರ ಕುರಿತು

ಸರ್ಕಾರಿ ಸಭೆ ಮತ್ತು ಸಮಾರಂಭಗಳಿಗೆ ಜನ ಪ್ರತಿನಿಧಿಗಳನ್ನು ಆಹ್ವಾನಿಸುವಲ್ಲಿ ಅನುಸರಿಸಬೇಕಾದ
ಶಿಷ್ಟಾಚಾರದ ಕುರಿತು ಈಗಾಗಲೇ ಸಮಗ್ರವಾದ ಸುತ್ತೋಲೆ ಸಂಖ್ಯೆ: ಸಿಆಸುಇ 34 ಹೆಚ್‌ಪಿಎ 2018 (1)
ದಿನಾಂಕ: 06.03.2019ರಡಿ ಹೊರಡಿಸಲಾಗಿದೆ. ಸದರಿ ಸುತ್ತೋಲೆಗೆ ಕೆಲವೊಂದು ಅಂಶಗಳನ್ನು
ಸೇರಿಸಬೇಕಾಗಿರುವುದರಿಂದ, ಈ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದೆ. ಹೊಸದಾಗಿ ಸೇರಿಸಿದ
ಅಂಶಗಳನ್ನು ಅನುಕ್ರಮ ಸಂಖ್ಯೆ 11ರ ಕೆಳಗಡೆ ದಪ್ಪ ಅಕ್ಷರಗಳಿಂದ ನಮೂದಿಸಿದೆ.

ಸಾಮಾನ್ಯ ಸೂಚನೆಗಳು

 1. ಈ ಸೂಚನೆಗಳು ರಾಜ್ಯ ಸರ್ಕಾರದ ವತಿಯಿಂದ ನಡೆಸುವ ರಾಜ್ಯ | ಜಿಲ್ಲಾ / ತಾಲ್ಲೂಕು
  ಮಟ್ಟದ ಸಮಾರಂಭಗಳಿಗೆ ಮತ್ತು ರಾಜ್ಯದ ಧನ ಸಹಾಯದಿಂದ ಸ್ಥಾಪಿಸಲ್ಪಟ್ಟ ರಾಜ್ಯ ಮಟ್ಟದ
  ಸಹಕಾರಿ ಸಂಘಗಳು ಹಾಗೂ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು, ನಡೆಸುವ
  ಕಾರ್ಯಕ್ರಮಗಳಿಗೆ ಅನ್ವಯಿಸುತ್ತವೆ.
 2. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಒಳಗೊಂಡಂತೆ ಸರ್ಕಾರದ ಆ ಇಲಾಖೆಯ
  ಅಧಿಕೃತ ಕಾರ್ಯಕ್ರಮಗಳಿಗೆ, ಸಂಬಂಧಪಟ್ಟ ಇಲಾಖೆಯ ಸಚಿವರ ಸಮಾಲೋಚನೆಯೊಂದಿಗೆ
  ನಿಗದಿಪಡಿಸಿ ಕಾರ್ಯಕ್ರಮವನ್ನು ಏರ್ಪಡಿಸತಕ್ಕದ್ದು.
 3. ಸರ್ಕಾರಿ ಕಾರ್ಯಾಕ್ರಮವನ್ನು ನಡೆಸಲು ಕನಿಷ್ಟ ಪಕ್ಷ 7 ದಿವಸಗಳ ಸಮಯಾವಕಾಶವನ್ನು
  ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೋರುವುದು.
 4. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬದಲಾಗಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೇ
  ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಸರ್ಕಾರಿ ಸಮಾರಂಭಗಳನ್ನು ಏರ್ಪಡಿಸಬಾರದು.
 5. ಯಾವುದೇ ಸರ್ಕಾರಿ ಸಭೆ ಅಥವಾ ಕಾರ್ಯಕ್ರಮವನ್ನು ಖಾಸಗಿ ನಿವಾಸದಲ್ಲಿ ಏರ್ಪಡಿಸುವಂತಿಲ್ಲ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವ ಬಗ್ಗೆ

6.ಸರ್ಕಾರದ ಯಾವುದೇ ಕಾರ್ಯಕ್ರಮವಾಗಿದ್ದರೂ ಸಾಮಾನ್ಯವಾಗಿ ಕಾರ್ಯಕ್ರಮ ನಡೆಯುವ
ಸ್ಥಳದ ವ್ಯಾಪ್ತಿಗೊಳಪಡುವ ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿಯೇ
ಕಾರ್ಯಕ್ರಮ ನಡೆಸುವುದು.
ಆದರೆ ಕೆಲವೊಂದು ಸಂದರ್ಭದಲ್ಲಿ ಒಂದು ವಿಧಾನಸಭಾ
‘ಕ್ಷೇತ್ರದ ಸ್ಥಳೀಯ ಕಾರ್ಯಕ್ರಮವನ್ನು – ಸದರಿ ವಿಧಾನಸಭಾ ಕ್ಷೇತ್ರದ ಹೋಬಳಿ
ಪ್ರದೇಶವಿರುವ ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ಆಯೋಜಿಸಿದಾಗ, ಸದರಿ ತಾಲ್ಲೂಕು ಕೇಂದ್ರ
ಸ್ಥಾನವು ಇನ್ನೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೂ ಸಹ ಅಂತಹ
ಕಾರ್ಯಕ್ರಮಗಳಲ್ಲಿ, ಕಾರ್ಯಕ್ರಮವು ಯಾವ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟರುತ್ತದೆಯೋ
ಆ ಸಂಬಂಧಪಟ್ಟ ಶಾಸಕರು ಅಧ್ಯಕ್ಷತೆಯನ್ನು ವಹಿಸುವುದು.

 1. ಕೆಲವೊಮ್ಮೆ ಕಾರಣಾಂತರಗಳಿಂದ ವಿಧಾನಸಭಾ ಸದಸ್ಯರ ಸ್ಥಾನವು ತೆರವಾದ ಸಂದರ್ಭದಲ್ಲಿ
  ಸರ್ಕಾರಿ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಕೆಳಕಂಡಂತೆ ವಹಿಸುವುದು.

i ಸರ್ಕಾರಿ ಕಾರ್ಯಕ್ರಮಗಳನ್ನು ಮಾನ್ಯ ಮುಖ್ಯ ಮಂತ್ರಿಯವರು ಉದ್ಘಾಟಿಸಿದಾಗ,
ಜಿಲ್ಲಾ ಸಚಿವರು ಅಧ್ಯಕ್ಷತೆಯನ್ನು ವಹಿಸುವುದು

ii. – ಸಂಬಂಧಪಟ್ಟ ಜಿಲ್ಲಾ ಸಚಿವರು ಉದ್ಘಾಟಸಿದಾಗ, ಇಲಾಖಾ ಸಚಿವರು
ಅಧ್ಯಕ್ಷತೆಯನ್ನು ವಹಿಸುವುದು.

III. ಜಿಲ್ಲಾ ಸಚಿವರು ಸರ್ಕಾರಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದಾಗ, ಇಲಾಖಾ ಸಚಿವರು
ಹಾಜರಾಗದೇ ಇರುವ ಸಂದರ್ಭಗಳಲ್ಲಿ, ಜಿಲ್ಲಾ ಸಚಿವರೇ
ಅಧ್ಯಕ್ಷತೆಯನ್ನು ಸಹ ವಹಿಸುವುದು.

ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆ

8.ಕಾರ್ಯಕ್ರಮಕ್ಕನುಗುಣವಾಗಿ ಈ ಕೆಳಕಂಡಂತೆ ಜನಪ್ರತಿನಿಧಿಗಳನ್ನು ಕಡ್ಡಾಯವಾಗಿ
ಆಹ್ವಾನಿಸಬೇಕೆಂದು ಸೂಚಿಸಿದೆ.

ತಾಲೂಕು ಮಟ್ಟದ ಕಾರ್ಯಕ್ರಮ:

 • ಜಿಲ್ಲಾ ಉಸ್ತುವಾರಿ ಸಚಿವರುಗಳು
 • ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖಾ ಸಚಿವರು.
 • ಸಂಬಂಧಪಟ್ಟ ಕ್ಷೇತ್ರದ ವಿಧಾನ ಸಭಾ ಕ್ಷೇತ್ರದ ಶಾಸಕರು (ಅಧ್ಯಕ್ಷತೆ)
 • ತಾಲ್ಲೂಕನ್ನು ಪ್ರತಿನಿಧಿಸುವ ಸಂಸದರು (ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವ
  ರಾಜ್ಯಸಭಾ ಸದಸ್ಯರು ಸೇರಿದಂತೆ)
 • ತಾಲೂಕನ್ನು ಪ್ರತಿನಿಧಿಸುವ ಪದವೀದರ ಕ್ಷೇತ್ರ. ಶಿಕ್ಷಕರ ಕ್ಷೇತ್ರ ಮತ್ತು ಸ್ಥಳೀಯ
  ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ತಿನ ಎಲ್ಲಾ ಶಾಸಕರುಗಳು ಮತ್ತು ನೋಡಲ್
  ತಾಲೂಕಾಗಿ ಆಯ್ಕೆ ಮಾಡಿಕೊಂಡಿರುವ ನಾಮ ನಿರ್ದೇಶಿತ ಹಾಗೂ ವಿಧಾನಸಭೆಯಿಂದ
  ಆಯ್ಕೆಯಾದ ವಿಧಾನ ಪರಿಷತ್ತಿನ ಶಾಸಕರುಗಳು.
 • ನಿಗಮ ಮತ್ತು ಮಂಡಳಿಗಳ ಕಾರ್ಯಕ್ರಮಗಳಗೆ ಆಯಾ ನಿಗಮ ಮತ್ತು ಮಂಡಳಿಯ
  ಅಧ್ಯಕ್ಷರುಗಳನ್ನು ಆಹ್ವಾನಿಸುವುದು. ಜೊತೆಗೆ ಇತರೇ ಕಾರ್ಯಕ್ರಮಗಳಿಗೆ ಆಯಾ
  ತಾಲ್ಲೂಕುಗಳಿಂದ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರುಗಳಾಗಿರುವವರನ್ನು ಸಹ ಆಹ್ವಾನಿಸುವುದು.
 • ಜಿಲ್ಲಾ ಪಂಚಾಯತ್ ಅಧ್ಯಕ್ಷರು
 • ತಾಲ್ಲೂಕು ಪಂಚಾಯತ್ ಅಧ್ಯಕ್ಷರು
 • ಕಾರ್ಯಕ್ರಮ ನಡೆಯುವ ಸ್ಥಳದ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು/ ಮಹಾಪೌರರು
  ಅಥವಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರು

ಜಿಲ್ಲಾ ಮಟ್ಟದ ಕಾರ್ಯಕ್ರಮಗಳು:

 • ಜಿಲ್ಲಾ ಉಸ್ತುವಾರಿ ಸಚಿವರುಗಳು
 • ಜಿಲ್ಲೆಯ ಇತರೆ ಸಚಿವರುಗಳು.
 • ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖಾ ಸಚಿವರು.
 • ಜಿಲ್ಲೆಯ ಎಲ್ಲಾ ವಿಧಾನ ಸಭಾ ಸದಸ್ಯರುಗಳು (ಕಾರ್ಯಕ್ರಮ ನಡೆಯುವ ಸ್ಥಳದ
  ವ್ಯಾಪ್ತಿಯ ಶಾಸಕರ ಅಧ್ಯಕ್ಷತೆ.
 • ಜಿಲ್ಲೆಯ ಎಲ್ಲಾ ಸಂಸದರು (ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ಕೆ
  ಮಾಡಿಕೊಂಡಿರುವ ರಾಜ್ಯ ಸಭಾ ಸದಸ್ಯರು ಸೇರಿದಂತೆ)
 • ಜಿಲ್ಲೆಯನ್ನು ಪ್ರತಿನಿಧಿಸುವ ಪದವೀದರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಮತ್ತು ಸ್ಥಳೀಯ
  ಸಂಸ್ಥೆಗಳ ಕ್ಷೇತ್ರಗಳಿಂದ ಚುನಾಯಿತರಾಗಿರುವ ವಿಧಾನ ಪರಿಷತ್ತಿನ ಎಲ್ಲಾ
  ಶಾಸಕರುಗಳು ಮತ್ತು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡಿರುವ ನಾಮ
  ನಿರ್ದೇಶಿತ ಹಾಗೂ ವಿಧಾನಸಭೆಯಿಂದ ಆಯ್ಕೆಯಾದ ವಿಧಾನ ಪರಿಷತ್ತಿನ
  ಶಾಸಕರುಗಳು
 • ನಿಗಮ ಮತ್ತು ಮಂಡಳಿಗಳ ಕಾರ್ಯಕ್ರಮಗಳಿಗೆ ಆಯಾ ನಿಗಮ ಮತ್ತು ಮಂಡಳಿಯ
  ಅಧ್ಯಕ್ಷರುಗಳನ್ನು ಆಹ್ವಾನಿಸುವುದು. ಜೊತೆಗೆ ಇತರೇ ಕಾರ್ಯಕ್ರಮಗಳಿಗೆ ಆಯಾ
  ಜಿಲ್ಲೆಗಳಿಂದ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರುಗಳಾಗಿರುವವರನ್ನು ಸಹ
  ಆಹ್ವಾನಿಸುವುದು
 • ಜಿಲ್ಲಾ ಪಂಚಾಯತ್ ಅಧ್ಯಕ್ಷರು
 • ಕಾರ್ಯಕ್ರಮ ನಡೆಯುವ ಸ್ಥಳದ ತಾಲ್ಲೂಕು ಪಂಚಾಯತ್ ಅಧ್ಯಕ್ಷರು
 • ಕಾರ್ಯಕ್ರಮ ನಡೆಯುವ ಸ್ಥಳದ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು/ ಮಹಾಪೌರರು
  ಅಥವಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರು.

ರಾಜ್ಯ ಮಟ್ಟದ ಕಾರ್ಯಕ್ರಮ:

ಆ ಕಾರ್ಯಕ್ರಮ ನಡೆಯುವ ಸ್ಥಳದ ಜಿಲ್ಲೆಯ ಇತರೆ ಸಚಿವರು
ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖಾ ಸಚಿವರು,

 • ಮಾನ್ಯ ಮುಖ್ಯಮಂತ್ರಿಗಳು
 • ಉಪ ಮುಖ್ಯಮಂತ್ರಿಗಳು
 • ಕಾರ್ಯಕ್ರಮ ನಡೆಯುವ ಸ್ಥಳದ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು.
 • ಕಾರ್ಯಕ್ರಮ ನಡೆಯುವ ಸ್ಥಳದ ಜಿಲ್ಲೆಯ ಇತರೆ ಸಚಿವರು
 • ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖಾ ಸಚಿವರು
 • ವಿರೋಧ ಪಕ್ಷದ ನಾಯಕರು
 • ಕಾರ್ಯಕ್ರಮ ನಡೆಯುವ ಜಿಲ್ಲೆಯ ಸಂಸದರು (ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ
  ಆಯ್ಕೆ ಮಾಡಿಕೊಂಡಿರುವ ರಾಜ್ಯ ಸಭಾ ಸದಸ್ಯರು ಸೇರಿದಂತೆ)
 • ಕಾರ್ಯಕ್ರಮ ಜರುಗುವ ಜಿಲ್ಲೆಯಲ್ಲಿನ ಎಲ್ಲಾ ಶಾಸಕರು (ಕಾರ್ಯಕ್ರಮ ನಡೆಯುವ
  ಸ್ಥಳದ ವ್ಯಾಪ್ತಿಯ ಶಾಸಕರ ಅಧ್ಯಕ್ಷತೆ).
 • ಕಾರ್ಯಕ್ರಮದ ನಡೆಯುವ ಜಿಲ್ಲೆಯ ಪ್ರತಿನಿಧಿಸುವ ಪದವೀದರ ಕ್ಷೇತ್ರ, ಶಿಕ್ಷಕರ ಕ್ಷೇತ್ರ
  ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಚುನಾಯಿತರಾಗಿರುವ ವಿಧಾನ ಪರಿಷತ್ತಿನ
  ಎಲ್ಲಾ ಶಾಸಕರುಗಳು ಮತ್ತು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡಿರುವ ನಾಮ
  ನಿರ್ದೇಶಿತ ಹಾಗೂ ವಿಧಾನಸಭೆಯಿಂದ ಆಯ್ಕೆಯಾದ ವಿಧಾನ ಪರಿಷತ್ತಿನ
  ಶಾಸಕರುಗಳು.

ನಿಗಮ ಮತ್ತು ಮಂಡಳಿಗಳ ಕಾರ್ಯಕ್ರಮಗಳಿಗೆ ಆಯಾ ನಿಗಮ ಮತ್ತು ಮಂಡಳಿಯ
ಅಧ್ಯಕ್ಷರುಗಳನ್ನು ಆಹ್ವಾನಿಸುವುದು. ಜೊತೆಗೆ ಇತರೇ ಕಾರ್ಯಕ್ರಮಗಳಿಗೆ ಆಯಾ
ಜಿಲ್ಲೆಗಳಿಂದ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರುಗಳಾಗಿರುವವರನ್ನು ಸಹ
ಆಹ್ವಾನಿಸುವುದು.
ಆ ಕಾರ್ಯಕ್ರಮ ನಡೆಯುವ ಸ್ಥಳದ ಜಿಲ್ಲಾ ಪಂಚಾಯತ್ ಅಧ್ಯಕ್ಷರು.

 • ಕಾರ್ಯಕ್ರಮ ನಡೆಯುವ ಸ್ಥಳದ ತಾಲ್ಲೂಕು ಪಂಚಾಯತ್ ಅಧ್ಯಕ್ಷರು
 • ಕಾರ್ಯಕ್ರಮ ನಡೆಯುವ ಸ್ಥಳದ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು/ ಮಹಾಪೌರರು
  ಅಥವಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರು.
 1. ಕಂಡಿಕೆ 8ರಲ್ಲಿ ನಮೂದಿಸಿದ ಜನಪ್ರತಿನಿಧಿ/ ಗಣ್ಯ ವ್ಯಕ್ತಿಗಳೊಂದಿಗೆ ಜಿಲ್ಲಾ ಪಂಚಾಯತ್
  ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ
  ಸಂದರ್ಭಗನುಗುಣವಾಗಿ ಈ ಕೆಳಕಂಡ ಜನಪ್ರತಿನಿಧಿಗಳನ್ನು ಸಹ ಆಹ್ವಾನಿಸತಕ್ಕದ್ದು.

(ಎ) ಜಿಲ್ಲಾ ಪಂಚಾಯತ್‌ಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯತ್‌ನ
ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರುಗಳನ್ನು ಆಹ್ವಾನಿಸುವುದು.

(ಬಿ) ಅದರಂತೆ ತಾಲ್ಲೂಕು ಪಂಚಾಯತ್‌ಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ ತಾಲ್ಲೂಕು
ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ತಾಲ್ಲೂಕು ಪಂಚಾಯತ್ ಸದಸ್ಯರುಗಳನ್ನು
ಆಹ್ವಾನಿಸುವುದು.

(ಸಿ) ಅದರಂತೆ ಗ್ರಾಮ ಪಂಚಾಯತ್‌ಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ ಗ್ರಾಮ
ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳನ್ನು
ಆಹ್ವಾನಿಸುವುದು.

(ಡಿ) ಅದರಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ
ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಗರ ಸ್ಥಳೀಯ
ಸಂಸ್ಥೆಯ ಸದಸ್ಯರುಗಳನ್ನು ಆಹ್ವಾನಿಸುವುದು.

ಟಿಪ್ಪಣಿ:

ಮೇಲ್ಕಂಡ ಕಾರ್ಯಕ್ರಮಗಳಗೆ ಕಡ್ಡಾಯವಾಗಿ ಆಹ್ವಾನಿಸಬೇಕಾಗಿರುವ ಜನಪ್ರತಿನಿಧಿಗಳನ್ನು
ಹೊರತುಪಡಿಸಿ, ಇತರ ಸಚಿವರು/ ಜನಪ್ರತಿನಿಧಿಗಳು/ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲು
ಕಾರ್ಯಕ್ರಮದ ಸಂದರ್ಭಕ್ಕನುಗುಣವಾಗಿ ಆಯೋಜಕರು ತೀರ್ಮಾನ ತೆಗೆದುಕೊಳ್ಳತಕ್ಕದ್ದು.

ಆಹ್ವಾನ ಪತ್ರಿಕೆ ಮುದ್ರಿಸುವ ಬಗ್ಗೆ :

 1. ಸಮಾರಂಭದಲ್ಲಿ ಪಾಲ್ಗೊಳ್ಳುವಂತಹ ಸಂದರ್ಭ, ರಾಜ್ಯ ಆದ್ಯತಾ ಸೂಚಿ ಪಟ್ಟಿ ಮತ್ತು ಇತರೆ
  ಸನ್ನಿವೇಶಗಳನ್ನು ಆದರಿಸಿ ಕೇಂದ್ರ ಸಚಿವರುಗಳು, ರಾಜ್ಯ ಸಂಪುಟ ದರ್ಜೆ ಸಚಿವರುಗಳು,
  ರಾಜ್ಯ ಸಚಿವರು, ಸಂಸತ್ ಮತ್ತು ರಾಜ್ಯ ವಿಧಾನ ಮಂಡಲಗಳ ಸದಸ್ಯರುಗಳಿಗೆ, ಘನ
  ಉಪಸ್ಥಿತಿ, ಉದ್ಘಾಟನೆ/ ಶಂಕುಸ್ಥಾಪನೆ/ಲೋಕಾರ್ಪಣಿ. ಅಧ್ಯಕ್ಷರು. ಮುಖ್ಯ ಅತಿಥಿಗಳು, ವಿಶೇಷ
  ಆಹ್ವಾನಿತರು ಹೀಗೆ ಸ್ಥಾನಗಳನ್ನು ನೀಡಬೇಕು. ಇದೇ ಅನುಕ್ರಮದಲ್ಲಿ ಆಹ್ವಾನ ಪತ್ರಿಕೆಯನ್ನು
  ಮುದ್ರಿಸತಕ್ಕದ್ದು.
 2. ಸರ್ಕಾರದ ಕಾರ್ಯಕ್ರಮದ ಎಲ್ಲಾ ಆಹ್ವಾನ ಪತ್ರಿಕೆಗಳಲ್ಲಿ ಆಹ್ವಾನಿತರ ಹೆಸರುಗಳನ್ನು ರಾಜ್ಯ
  ಆದ್ಯತಾ ಸೂಚಿಪಟ್ಟಿಗೆ ಅನುಗುಣವಾಗಿಯೇ ಮುದ್ರಿಸಬೇಕು. ಈ ಆದ್ಯತಾಸೂಚಿ ಪಟ್ಟಿಯನ್ನು
  ಜನಪ್ರತಿನಿಧಿಗಳು ಹೊಂದಿರುವ ಸ್ಥಾನಮಾನವನ್ನು ಪರಿಗಣನೆಗೆ
  ತೆಗೆದುಕೊಳ್ಳಬೇಕು. ಆದರೆ, ರಾಜ್ಯ ಆದ್ಯತಾ ಸೂಚಿ ಪಟ್ಟಿಯ ಟಿಪ್ಪಣಿ 6(ಎ) ರಲ್ಲಿ ತಿಳಿಸಿರುವಂತೆ
  ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಆಹ್ವಾನ ಪತ್ರಿಕೆಯಲ್ಲಿ ಘನ ಉಪಸ್ಥಿತಿ, ಉದ್ಘಾಟನೆ/
  ಶಂಕುಸ್ಥಾಪನೆ/ಲೋಕಾರ್ಪಣೆಯ ನಂತರ ನಮೂದಿಸುವುದು. ಟಿಪ್ಪಣಿ

ಅ) ಸರ್ಕಾರದ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅಹ್ವಾನಿಸಬೇಕಾದ ಮತ್ತು ಕರ್ನಾಟಕ ರಾಜ್ಯದ
ಆದ್ಯತಾ ಸೂಚಿ
ಪಟ್ಟಿಯಲ್ಲಿ ಯಾವುದೇ ಸ್ಥಾನಮಾನವನ್ನು ಹೊಂದದೇ
ಜನಪ್ರತಿನಿಧಿಗಳನ್ನು/ಗಣ್ಯ ವ್ಯಕ್ತಿಗಳನ್ನು ಆಹ್ವಾನ ಪತ್ರಿಕೆಯಲ್ಲಿ ಕೊನೆಯ ಶಾಸಕರ ನಂತರ ಈ
ಕೆಳಗಿನ ಆಧ್ಯತೆಯಂತೆ ನಮೂದಿಸಲು ಕ್ರಮಕೈಗೊಳ್ಳತಕ್ಕದ್ದು.

i. ಶಾಸಕರಲ್ಲದ ಮತ್ತು ಸಚಿವ ಸ್ಥಾನಮಾನ ಹೊಂದದೇ ಇರುವ ರಾಜ್ಯ ಮಟ್ಟದ ಇತರ ನಿಗಮ
ಮತ್ತು ಮಂಡಳಿಗಳ ಅಧ್ಯಕ್ಷರುಗಳು.

 1. ಒಂದಕ್ಕಿಂತ ಹೆಚ್ಚಿಗೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರುಗಳು ಇದ್ದಲ್ಲಿ, ಆಯಾ
  ಅಧ್ಯಕ್ಷರುಗಳು ಆ ಹುದ್ದೆಗೆ ಸೇರಿದ ದಿನಾಂಕವನ್ನು ಪರಿಗಣನೆಗೆ ತೆಗೆದುಕೊಂಡು
  ಪರಸ್ಪರ ಆಧ್ಯತೆ ನಿಗದಿಪಡಿಸುವುದು.

ii. ಕಾರ್ಯಕ್ರಮ ನಡೆಯುವ ಸ್ಥಳದ ಮಹಾನಗರಪಾಲಿಕೆಯ ಮಹಾಪೌರರು.

iii. ಕಾರ್ಯಕ್ರಮ ನಡೆಯುವ ಸ್ಥಳದ ತಾಲ್ಲೂಕ್ ಪಂಚಾಯತ್ ಅಧ್ಯಕ್ಷರು.

iv. ಕಾರ್ಯಕ್ರಮ ನಡೆಯುವ ಸ್ಥಳದ ನಗರ ಸ್ಥಳೀಯ ಸಂಸ್ಥೆಯ/ಗ್ರಾಮ ಪಂಚಾಯತಿನ
ಅಧ್ಯಕ್ಷರು.

ಆ) ಸರ್ಕಾರದ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅಹ್ವಾನಿಸಬೇಕಾದ ಜನಪ್ರತಿನಿಧಿಗಳನ್ನು
ಹೊರತುಪಡಿಸಿ ಇತರ ಜನಪ್ರತಿನಿಧಿಗಳನ್ನು ಮತ್ತು ಗಣ್ಯವ್ಯಕ್ತಿಗಳನ್ನು ಅಹ್ವಾನಿಸಿದಾಗ

ಈಗಾಗಲೇ ಅವರಿಗೆ ಕರ್ನಾಟಕ ರಾಜ್ಯದ ಆಧ್ಯತಾ ಸೂಚಿಪಟ್ಟಿಯಲ್ಲಿ ಸ್ಥಾನಮಾನ ನೀಡಿದ್ದರೆ
ಅವರ ಹೆಸರುಗಳನ್ನು ಆ ಪ್ರಕಾರ ಆಹ್ವಾನ ಪತ್ರಿಕೆಗಳಲ್ಲಿ ನಮೂದಿಸಿವುದು.

ii ಅವರಿಗೆ ಯಾವುದೇ ಸ್ಥಾನಮಾನವಿಲ್ಲದಿದ್ದಾಗ ಅವರ ಹೆಸರುಗಳನ್ನು ಕಡ್ಡಾಯವಾಗಿ
ಆಹ್ವಾನಿಸಬೇಕಾದ ಎಲ್ಲಾ ಜನಪ್ರತಿನಿಧಿಗಳ ನಂತರ ಅವರ ಹೆಸರುಗಳನ್ನು ನಮೂದಿಸುವುದು.

 1. 2018 ರ ಆದ್ಯತಾ ಸೂಚಿಪಟ್ಟಿಯ ಪ್ರಕಾರ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ
  ಸದಸ್ಯರು ಕ್ರಮ ಸಂಖ್ಯೆ:21 ಅನುಚ್ಛೇದದಲ್ಲಿ ಹಾಗೂ ವಿಧಾನಸಭಾ ಸದಸ್ಯರು ಮತ್ತು ವಿಧಾನ
  ಪರಿಷತ್ ಸದಸ್ಯರುಗಳು ಕ್ರಮ ಸಂಖ್ಯೆ21 (ಎ) ಅನುಚ್ಛೇದದಲ್ಲಿ ಸ್ಥಾನವನ್ನು ಪಡೆಯುತ್ತಾರೆ.
  ಭಾರತ ಸರ್ಕಾರದ ಗೃಹ ಮಂತ್ರಾಲಯವು “as per the practice the person who has
  served more than one term continuously are placed higher in the Table of
  Precedence (ToP)” ಎಂದು ಅಭಿಪ್ರಾಯಿಸಿರುವ ಹಿನ್ನೆಲೆಯಲ್ಲಿ ಆದ್ಯತಾಸೂಚಿ ಪಟ್ಟಿಯಲ್ಲಿ
  ಒಂದೇ ಅನುಚ್ಛೇದದಲ್ಲಿರುವ ಹುದ್ದೆಗಳ ನಡುವೆ ಆದ್ಯತೆ ನೀಡುವಾಗ ಲೋಕಸಭಾ ಸದಸ್ಯರ
  ನಂತರ ರಾಜ್ಯಸಭಾ ಸದಸ್ಯರು ಹಾಗೂ ವಿಧಾನ ಸಭಾ ಸದಸ್ಯರ ಸಂತರ ವಿಧಾನ ಪರಿಷತ್ತು
  ಸದಸ್ಯರು ಎಂಬ ಎರಡು ವಿಂಗಡನೆಗಳಾಗಿ ಮಾಡಿಕೊಳ್ಳದೇ ಯಾವ ವ್ಯಕ್ತಿಗಳು ಒಂದಕ್ಕಿಂತ
  ಹೆಚ್ಚು ಅವಧಿಗೆ ಸತತವಾಗಿ ಅದೇ ಸ್ಥಾನದಲ್ಲಿ ಮುಂದುವರೆದಿರುತ್ತಾರೋ ಅಂತಹವರಿಗೆ ಪರಸ್ಪರ
  ಆದ್ಯತೆಯನ್ನು ನಿಗದಿಪಡಿಸುವಾಗ ಮೇಲಿನ ಸ್ಥಾನವನ್ನು ನಿಗದಿಪಡಿಸುವುದು. ಟಿಪ್ಪಣಿ

ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ, ಕಾರ್ಯಕ್ರಮ
ನಡೆಯುವ ಸ್ಥಳದ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರನ್ನು ಮೊದಲಿಗೆ
ಹಾಕುವುದು. ತದನಂತರ ಉಳಿದ ಸಂಸದರುಗಳನ್ನು (ಲೋಕಸಭಾ ಮತ್ತು ರಾಜ್ಯ ಸಭಾ
ಸಂಸದರನ್ನೊಳಗೊಂಡಂತೆ) ಆದ್ಯತಾ ಪಟ್ಟಿಯ ಪ್ರಕಾರ ನಮೂದು ಮಾಡುವುದು.

13 . ಸರ್ಕಾರದ ಸಮಾರಂಭಗಳ ಆಮಂತ್ರಣ ಪತ್ರಿಕೆಯಲ್ಲಿ ವಿಧಾನ ಪರಿಷತ್ತು ಮತ್ತು ವಿಧಾನ ಸಭೆಯ
ಸದಸ್ಯರ ಹೆಸರುಗಳನ್ನು ನಮೂದು ಮಾಡುವ ಸಂದರ್ಭಗಳಲ್ಲಿ “ಶಾಸಕರು (ವಿಧಾನ ಪರಿಷತ್ತು)
ಮತ್ತು ಶಾಸಕರು (ವಿಧಾನ ಸಭೆ) ಎಂದು ಹಾಗೂ ಲೋಕಸಭಾ ಸದಸ್ಯರ ಮತ್ತು ರಾಜ್ಯಸಭಾ
ಸದಸ್ಯರ ಹೆಸರುಗಳನ್ನು ನಮೂದು ಮಾಡುವ ಸಂದರ್ಭಗಳಲ್ಲಿ ಸಂಸದರು ( ಲೋಕಸಭೆ)
ಮತ್ತು ಸಂಸದರು (ರಾಜ್ಯಸಭೆ) ಎಂದು ನಮೂದು ಮಾಡುವುದು

 1. ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಸಮಾರಂಭ ಏರ್ಪಡಿಸುವ ಮುನ್ನ ಆಹ್ವಾನ ಪತ್ರಿಕೆಗೆ ಆಯಾ
  ಜಿಲ್ಲಾಧಿಕಾರಿಗಳ / ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆಯಬೇಕು
  ಸರ್ಕಾರದ ಸಮಾರಂಭವನ್ನು ಏರ್ಪಡಿಸುವ ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು
  ಜಿಲ್ಲಾಧಿಕಾರಿಗಳು ಸಂಸತ್ತಿನ ಹಾಗೂ ರಾಜ್ಯ ವಿಧಾನ ಮಂಡಲದ ಸದಸ್ಯರುಗಳಿಗೆ ತಪ್ಪದೇ
  ಆಹ್ವಾನ ಪತ್ರಿಕೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡತಕ್ಕದ್ದಲ್ಲದೇ ಇಲಾಖೆಯ ಹಿರಿಯ
  ಅಧಿಕಾರಿಗಳ ಮುಖಾಂತರ ಅವರುಗಳಿಗೆ ಆಹ್ವಾನ ಪತ್ರಿಕೆಗಳನ್ನು ಖುದ್ದಾಗಿ ತಲುಪಿಸಲು
  ಏರ್ಪಾಡು ಮಾಡಬೇಕು.
 2. ಆಹ್ವಾನ ಪತ್ರಿಕೆಗಳನ್ನು ಮುದ್ರಿಸದಿದ್ದ ಪಕ್ಷದಲ್ಲಿ ಕನಿಷ್ಠ ಪಕ್ಷ ಪತ್ರದ ಮುಖೇನ ಅನೌಪಚಾರಿಕವಾಗಿ
  ಜವಾಬ್ದಾರಿಯುತ ಅಧಿಕಾರಿಗಳ ಮುಖಾಂತರ ಸಂಸತ್ ಸದಸ್ಯರುಗಳನ್ನು ರಾಜ್ಯ ವಿಧಾನ
  ಮಂಡಲದ ಸದಸ್ಯರನ್ನು ಹಾಗೂ ಇತರರನ್ನು ಸಮಾರಂಭಕ್ಕೆ ಆಹ್ವಾನಿಸಬೇಕು.
 3. ಶಂಕುಸ್ಥಾಪನೆ ಉದ್ಘಾಟನೆ ಇತ್ಯಾದಿಗಳಿಗೆ ಸಂಬಂಧಪಟ್ಟ ಶಿಲೆಗಳಲ್ಲೂ ಸಹ ಆಹ್ವಾನ
  ಪತ್ರಿಕೆಯಲ್ಲಿರುವ ಹೆಸರುಗಳನ್ನು ಅದೇ ಆದ್ಯತೆಯಲ್ಲಿ ನಮೂದಿಸಬೇಕು. ಆಸನ ವ್ಯವಸ್ಥೆ
 4. ಆಸನ ವ್ಯವಸ್ಥೆ ಮಾಡುವಾಗಲೂ ರಾಜ್ಯ ಆದ್ಯತಾ ಪಟ್ಟಿಯ ಪ್ರಕಾರವೇ ಗಣ್ಯರಿಗೆ ಸಲ್ಲಬೇಕಾದ
  ಸ್ಥಾನಮಾನಗಳನ್ನು ಆಯಾ ವರಿಷ್ಠರಿಗೆ ತಪ್ಪದೇ ಸಲ್ಲಿಸಬೇಕು. ಆದ್ದರಿಂದ ಆಹ್ವಾನ ಪತ್ರಿಕೆಯನ್ನು
  ಆದ್ಯತಾ ಪಟ್ಟಿಯ ಮೇರೆಗೆ ಮುದ್ರಿಸುವುದರಿಂದ ಆಸನ ವ್ಯವಸ್ಥೆಯನ್ನು ಆಹ್ವಾನ ಪತ್ರಿಕೆಯ
  ಅನುಗುಣವಾಗಿ ಮಾಡುವುದು.
 5. ಸಾಮಾನ್ಯವಾಗಿ ಶಿಷ್ಠಾಚಾರದಂತೆ ಅನುಸರಿಸಬೇಕಾದ ಆಸನ ವ್ಯವಸ್ಥೆಯನ್ನು ಕೆಳಕಂಡಂತೆ
  ನೀಡಲಾಗಿದೆ.

10 8 6 4 2 1 3 5 7 9 11

ಮೇಲ್ಕಂಡಂತೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಪ್ರಕಾರ ಮೊದಲಿಗರೋ ಯಾರೋ
ಅವರನ್ನು ಮಧ್ಯದಲ್ಲಿ (ಆಸನ ಸಂಖ್ಯೆ: 1) ಕೂರಿಸಬೇಕು ಅವರ ನಂತರ ಆಹ್ವಾನ ಪತ್ರಿಕೆಯ
ಅನುಗುಣವಾಗಿ ಉಳಿದ ಗಣ್ಯರನ್ನು ಬಲ ಮತ್ತು ಎಡ ಭಾಗದಲ್ಲಿ ಮೇಲ್ಕಂಡಂತೆ ಆಸನ
ವ್ಯವಸ್ಥೆಯನ್ನು ಮಾಡಬೇಕು.

 1. ಕಾರ್ಯಕ್ರಮಗಳಿಗೆ ತಡವಾಗಿ ಬರುವ ಸಂಸತ್ ಹಾಗೂ ರಾಜ್ಯ ವಿಧಾನ ಮಂಡಲದ ಸದಸ್ಯರಿಗೆ
  ಆಗುವ ಅನಾನುಕೂಲತೆಗಳನ್ನು ನಿವಾರಿಸುವ ಸಲುವಾಗಿ ಅವರಿಗಾಗಿ ಪ್ರತ್ಯೇಕವಾಗಿರಿಸಿದ
  ಆಸನಗಳನ್ನು ಸಮಾರಂಭ ಮುಗಿಯುವವರೆಗೂ ಕಾದಿರಿಸತಕ್ಕದ್ದು. ಹಾಗೂ ಆ ಆಸನಗಳು
  ಖಾಲಿಯಿದ್ದಾಗ್ಯೂ ಅವುಗಳನ್ನು ಇತರರು ಉಪಯೋಗಿಸಿಕೊಳ್ಳತಕ್ಕದಲ್ಲ.
 2. ಸರ್ಕಾರಿ ಅಧಿಕಾರಿಗಳು ಸಾಮಾನ್ಯವಾಗಿ ಯಾವುದೇ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು
  ವಹಿಸುವುದು ಮತ್ತು ಉದ್ಘಾಟಿಸುವುದನ್ನು ನಿಷೇಧಿಸಿದೆ. ಆದರೆ, ಅನಿವಾರ್ಯ ಸಂದರ್ಭಗಳಲ್ಲಿ
  ಅಂದರೆ ಹೊರತುಪಡಿಸಿ, ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು
  ಕಾರ್ಯಕ್ರಮಗಳಾದ ಜಯಂತಿ/ ಉತ್ಸವ/ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಆಹ್ವಾನ
  ಪತ್ರಿಕೆಯಲ್ಲಿ ನಮೂದಿಸಿದ ಯಾವುದೇ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಹಾಜರಾಗದೇ ಇದ್ದ
  ಸಂದರ್ಭದಲ್ಲಿ ಮಾತ್ರ ಅಧ್ಯಕ್ಷತೆ ವಹಿಸಬಹುದು ಮತ್ತು ಉದ್ಘಾಟನೆ ಮಾಡಬಹುದು ಮತ್ತು
  ಅವಶ್ಯಕತೆಗೆ ಅನುಗುಣವಾಗಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಕ್ರಮದ ವೇದಿಕೆ ಮೇಲೆ
  ಉಪಸ್ಥಿತರಿರಬಹುದು.

ವಿಶೇಷ ಸೂಚನೆಗಳು

22. ನ್ಯಾಯಾಲಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಕುರಿತಾಗಿ ಮಾನ್ಯ ಉಚ್ಛ
ನ್ಯಾಯಾಲಯದ ನಿರ್ದೇಶನದನ್ವಯ ಕ್ರಮವನ್ನು ಕೈಗೊಳ್ಳುವುದು.

23.ಮಾನ್ಯ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳು ಭಾಗವಹಿಸುವ
ಕಾರ್ಯಕ್ರಮಗಳನ್ನು ಮಾನ್ಯ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳ
ಕಾರ್ಯಾಲಯದ ಅನುಮೋದನೆಯಂತೆ ನಡೆಸುವುದು

24.ಕೇಂದ್ರ ಸರ್ಕಾರದ ಸಮಾರಂಭಗಳಿಗೆ ಸಂಸತ್ತು ಸದಸ್ಯರನ್ನು ಆಹ್ವಾನಿಸುವ ರೀತಿಯಲ್ಲಿಯೇ
ಸ್ಥಳೀಯ ಚುನಾಯಿತ ಪ್ರತಿನಿಧಿಗಳಾದ ವಿಧಾನಮಂಡಲದ ಸದಸ್ಯರುಗಳನ್ನು ಶಿಷ್ಠಾಚಾರದನ್ವಯ
ತಪ್ಪದೇ ಆಹ್ವಾನಿಸುವುದು.

25 ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ ದಿನಾಚರಣೆ ದಿನಗಳಂದು ಯಾರು ಧ್ವಜರೋಹಣ
ಮಾಡಬೇಕು ಎನ್ನುವ ಬಗ್ಗೆ ಭಾರತ ಸರ್ಕಾರ ಹೊರಡಿಸಿದ ಸುತ್ತೋಲೆಗಳಲ್ಲಿ ನೀಡಲಾದ
ನಿರ್ದೇಶನವನ್ನು ಮುಂದುವರೆಸಿಕೊಂಡು ಹೋಗುವುದು.

 1. ಸರ್ಕಾರಿ ಆದೇಶಗಳಲ್ಲಿ ಶಾಸಕರು ಅಥವಾ ಖಾಸಗಿ ಪ್ರಮುಖರ ಅಧ್ಯಕ್ಷತೆಯಲ್ಲಿ ಹಲವು
  ಸಮಿತಿಗಳನ್ನು ನೇಮಕ ಮಾಡಲಾಗಿದೆ. ಆಯಾ ಸಮಿತಿಯ ಕಾರ್ಯವ್ಯಾಪ್ತಿಗೆ ಒಳಪಟ್ಟು
  ಸಮೀಕ್ಷಣಾ ಸಭೆಗಳನ್ನು ನಡೆಸಬಹುದು. ಇದನ್ನು ಹೊರತುಪಡಿಸಿ ಶಾಸಕರೇ ಆಗಲಿ ಇತರೇ
  ಖಾಸಗಿ ಪ್ರಮುಖರೇ ಆಗಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮೀಕ್ಷಣಾ ಸಭೆಗಳನ್ನು
  ನಡೆಸುವಂತಿಲ್ಲ. ವಿರೋಧ ಪಕ್ಷದ ನಾಯಕರಿಗೂ ಸಹ ಅಧಿಕಾರಿಗಳ ಸಭೆ ಕರೆಯಲು
  ಅವಕಾಶವಿರುವುದಿಲ್ಲ. ಆದರೆ ಅಗತ್ಯ ಮಾಹಿತಿಯನ್ನು ಸೂಕ್ತವಾಗಿ ಒದಗಿಸಬಹುದಾಗಿದೆ.
  ಅಂತಹ ಸಭೆಗಳನ್ನು ನಡೆಸಲು ಮಾನ್ಯ ಸಚಿವರು ಮತ್ತು ಅಧಿಕಾರಿಗಳಿಗೆ ಮಾತ್ರ
  ಅವಕಾಶವಿರುತ್ತದೆ.

27.ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಹಂತದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಶಿಷ್ಠಾಚಾರದ ಬಗ್ಗೆ ಪೂರ್ಣವಾಗಿ ತರಬೇತಿ
ನೀಡುವುದು. ಶಿಷ್ಠಾಚಾರ ಲೋಪವಾದ ಪ್ರಕರಣಗಳಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತಿನ ಕ್ರಮ
ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟವರಿಗೆಲ್ಲ ತಿಳಿಸತಕ್ಕದ್ದು ಸಂಬಂಧಪಟ್ಟ
ಅಧಿಕಾರಿಗಳಲ್ಲದೇ, ಶಿಷ್ಟಾಚಾರ ಪಾಲಿಸುವುದರಲ್ಲಿ ವಿಫಲರಾದ ಹಿರಿಯ ಅಧಿಕಾರಿಗಳನ್ನು
ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಈ ಮೂಲಕ ಸೂಚಿಸಿದೆ.

Sharing Is Caring:

Leave a Comment