ನವೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಬೇಕಾದ ಶೈಕ್ಷಣಿಕ ಚಟುಟಿಕೆಗಳ ವಿವರ

01.11.2023

ಕನ್ನಡ ರಾಜ್ಯೋತ್ಸವ

ಅರ್ಥಪೂರ್ಣವಾಗಿ ಮತ್ತು ಕಡ್ಡಾಯವಾಗಿ ಆಚರಿಸುವುದು.

02.11.2023 ರಿಂದ ಪ್ರಾರಂಭ

ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ
ನಿಗಧಿಪಡಿಸಿದಂತೆ ಶೇ 15
(1 -9) ಮತ್ತು ಶೇ 20
(5,8,10) ಪಠ್ಯ ಬೋಧನೆ

ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ 1-9 ನೇ
ತರಗತಿಗಳಿಗೆ ಶೇ. 15 ರಷ್ಟು ಹಾಗೂ 5, 8 ಮತ್ತು 10ನೇ ತರಗತಿಗಳಿಗೆ
ಶೇ. 20 ರಷ್ಟು ಪಠ್ಯ ವಸ್ತು ಬೋಧನೆ ಕೈಗೊಳ್ಳುವುದು.

04.11.2023
ರಿ೦ದ
06.11.2023
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಶಾಲೆ/ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸುವುದು
ಮತ್ತು ಪಾಲ್ಗೊಳ್ಳುವುದು.

10.11.2023


ರಾಜ್ಯಮಟ್ಟದ
ಕ್ರೀಡಾಕೂಟ

ಸದರಿ ದಿನಾಂಕದ ಒಳಗೆ ಈ ಚಟುವಟಿಕೆಗಳನ್ನು ಇಲಾಖಾ
ಮಾರ್ಗಸೂಚಿಯಂತೆ ಪೂರ್ಣಗೊಳಿಸುವುದು.

13.11.2023

ರಾಷ್ಟ್ರೀಯ ಶಿಕ್ಷಣ ದಿನ

ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ಮೌಲಾನಾ ಅಬುಲ್ ಕಲಾಂಆಜಾದ್ ಜಯಂತಿ / ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ ತಿಳಿಸುವುದು.


14.11.2023

ಮಕ್ಕಳ ದಿನಾಚರಣೆ

ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಮಕ್ಕಳ ಅಭಿವ್ಯಕ್ತಿ ಹಾಗೂ ಭಾಗವಹಿಸುವಿಕೆಗೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

19.11.2023
ರಿಂದ
25.11.2023

ರಾಷ್ಟ್ರೀಯ ಭಾವೈಕ್ಯತಾ ಕಾರ್ಯಕ್ರಮ / ರಾಷ್ಟ್ರೀಯ ಐಕ್ಯತಾ ಸಪ್ತಾಹ

ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ರಾಷ್ಟ್ರೀಯ ಭಾವೈಕ್ಯತಾ
ಕಾರ್ಯಕ್ರಮ / ರಾಷ್ಟ್ರೀಯ ಐಕ್ಯತಾ ಸಪ್ತಾಹದ ಮಹತ್ವ ತಿಳಿಸುವುದು.


20.11.2023
ರಿಂದ
30.11.2023
ರವರೆಗೆ

ಸ್ಪಂದನಾ ಕಾರ್ಯಕ್ರಮ

ಕ್ಲಸ್ಟರ್ / ತಾಲ್ಲೂಕು/ ಜಿಲ್ಲಾವಾರು ಖಾಸಗಿ ಶಾಲೆಗಳ ಸಂಖ್ಯೆಗೆ
ಅನುಗುಣವಾಗಿ ಸಭೆಗಳನ್ನು ಆಯೋಜಿಸಿ, ಖಾಸಗಿ ಶಾಲೆಗಳ ಆಡಳಿತಾತ್ಮಕ
ಸೇವೆಗಳ ಅದಾಲತ್ ಏರ್ಪಡಿಸಿ, ಬಾಕಿ ಕಡತಗಳನ್ನು ಸ್ಥಳದಲ್ಲೇ
ಇತ್ಯರ್ಥಪಡಿಸಿ ಆದೇಶಿಸುವ ಕಾರ್ಯಕ್ರಮವಾಗಿದ್ದು, ಪರಿಣಾಮಕಾರಿಯಾಗಿ
ಮತ್ತು ಪಾರದರ್ಶಕವಾಗಿ ಆಯೋಜಿಸಿ ನಿರ್ವಹಿಸುವುದು.

26.11.2023

ಸಂವಿಧಾನ ದಿನಾಚರಣೆ

ಸಂವಿಧಾನದ ಪ್ರಾಮುಖ್ಯತೆ, ನಾಗರೀಕರ ಹಕ್ಕುಗಳು ಮತ್ತು ಜವಾಬ್ದಾರಿಗಳ
ಬಗ್ಗೆ ಹಾಗೂ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್‌ರವರ ಕುರಿತು.
ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.


28.11.2023

ತಾಲ್ಲೂಕು ಮಟ್ಟದ
ಪ್ರತಿಭಾ ಕಾರಂಜಿ
ಕಾರ್ಯಕ್ರಮ

ತಾಲ್ಲೂಕು ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸುವುದು
ಮತ್ತು ಪಾಲ್ಗೊಳ್ಳುವುದು.

29.11.2023

ಸಿ.ಸಿ.ಇ ಚಟುವಟಿಕೆ -5 ನಿರ್ವಹಿಸುವುದು

ಸಿ.ಸಿ.ಇ. ಅಡಿ ವಿದ್ಯಾರ್ಥಿಗಳಿಗೆ ಆಯಾ ಮಾಹೆಯಲ್ಲಿ ಮುಕ್ತಾಯವಾದ ಪಠ್ಯಾಧಾರಿತ ಚಟುವಟಿಕೆಯನ್ನು ಸಂಘಟಿಸಿ (ಚಟುವಟಿಕೆ ಬ್ಯಾಂಕ್‌ನ್ನು ಅನುಬ೦ಧಿಸಿದೆ) ತರಗತಿವಾರು/ವಿಷಯವಾರು ನಿರ್ವಹಿಸುವುದು. ಸದರಿ ಚಟುವಟಿಕೆಯನ್ನು ಸಿ.ಸಿ.ಇ ಅಡಿ ಕಲಿಕಾ ಪ್ರಗತಿಯನ್ನು ಪ್ರತ್ಯೇಕವಾಗಿ ದಾಖಲಿಸುವುದು. ಇದರಿಂದಾಗಿ ಆಯಾ ಮಾಹೆಯ ಬೋಧನಾಂಶಗಳ ಕಲಿಕಾ ಪ್ರಗತಿಯನ್ನು ಪುನಾರವರ್ತನೆಯೊಂದಿಗೆ ವಿಶ್ಲೇಷಿಸಿದಂತಾಗುತ್ತದೆ.30.11.2023

ಕನಕದಾಸ ಜಯಂತಿ

ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ಕನಕದಾಸ ಜಯಂತಿಯ ಮಹತ್ವ ತಿಳಿಸುವುದು

ಸಹಪಠ್ಯ ಚಟುವಟಿಕೆ

ವಿಭಾಗ/ರಾಜ್ಯ ಮಟ್ಟದ ಸಹಪಠ್ಯ ಚಟುವಟಿಕೆ ಕ್ರೀಡಾಕೂಟ/ ಚಿತ್ರಕಲಾಸ್ಪರ್ಧೆ, ವೃತ್ತಿ ಶಿಕ್ಷಣ ಕಲಿಕೋತ್ಸವ,ವಿಚಾರಗೋಷ್ಠಿ, ಶಾಲೆ/ಕ್ಲಸ್ಟರ್ ಹಾಗೂ ತಾಲ್ಲೂ ಕು ಮಟ್ಟದ ಪ್ರತಿಭಾ ಕಾರಂಜಿ ಯುವಸಂಸತ್ ಕಾರ್ಯಕ್ರಮ


ಸಹಪಠ್ಯ ಚಟುವಟಿಕೆ

Sharing Is Caring:

Leave a Comment