ಕರ್ನಾಟಕ ಸರ್ಕಾರದ ವಿದ್ಯಾರ್ಥಿಗಳ ಫೇಸ್-ಬೇಸ್ಡ್ ಅಟೆಂಡೆನ್ಸ್ ಸಿಸ್ಟಮ್ ಆದ ‘ನಿರಂತರ’ ಆಪ್ ನಲ್ಲಿ ವಿದ್ಯಾರ್ಥಿಗಳ ನೋಂದಣಿ (Registration) ಮಾಡುವಾಗ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಅವುಗಳನ್ನು ಆಪ್ ಮೂಲಕವೇ ಪರಿಹರಿಸಿಕೊಳ್ಳುವ ಸುಲಭ ವಿಧಾನ ಇಲ್ಲಿದೆ.
ಮುಖ್ಯವಾಗಿ ಕಂಡುಬರುತ್ತಿರುವ 2 ಸಮಸ್ಯೆಗಳು ಮತ್ತು ಪರಿಹಾರ:
೧. ತರಗತಿ ಮತ್ತು ಸೆಕ್ಷನ್ ಆಯ್ಕೆ ಆಗದಿರುವುದು (Class & Section Freeze):
- ಸಮಸ್ಯೆ: ‘Register Student’ ಪುಟದಲ್ಲಿ ತರಗತಿ ಮತ್ತು ಸೆಕ್ಷನ್ ಆಯ್ಕೆ ಮಾಡಲು ಕ್ಲಿಕ್ ಮಾಡಿದರೆ ಅದು ಫ್ರೀಜ್ ಆಗಿ, ಯಾವುದೇ ಆಪ್ಷನ್ ತೋರಿಸುತ್ತಿಲ್ಲ.
- ಪರಿಹಾರ: ಆಪ್‌ನ ಹೋಮ್ ಪೇಜ್‌ನಲ್ಲಿರುವ Grievance ಆಪ್ಷನ್ ಕ್ಲಿಕ್ ಮಾಡಿ ➡️ ‘Select Issue Type’ ನಲ್ಲಿ Registration Issue ಆಯ್ಕೆ ಮಾಡಿ ➡️ ಡಿಸ್ಕ್ರಿಪ್ಷನ್‌ನಲ್ಲಿ “While registering the students, class and section tab is not working” ಎಂದು ಬರೆಯಿರಿ. ಶಾಲೆಯ ಹೆಸರು, ತಾಲೂಕು, ಜಿಲ್ಲೆ, ಮೊಬೈಲ್ ಸಂಖ್ಯೆ ನಮೂದಿಸಿ, ಆ ಪುಟದ ಸ್ಕ್ರೀನ್‌ಶಾಟ್ ಅಪ್‌ಲೋಡ್ ಮಾಡಿ ಸಬ್ಮಿಟ್ ಮಾಡಿ.
೨. ಕಳೆದ ವರ್ಷದ (ಹಳೆಯ) ವಿದ್ಯಾರ್ಥಿಗಳ ಪಟ್ಟಿ ತೋರಿಸುತ್ತಿರುವುದು:
- ಸಮಸ್ಯೆ: ತರಗತಿ ಸೆಲೆಕ್ಟ್ ಆದರೂ, ‘Get Student List’ ನೀಡಿದಾಗ ಪ್ರಸ್ತುತ ಸಾಲಿನ ಬದಲಾಗಿ ಕಳೆದ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪಟ್ಟಿ ಕಾಣಿಸುತ್ತಿದೆ.
- ಪರಿಹಾರ: ಇದಕ್ಕೂ ಸಹ Grievance ಗೆ ಹೋಗಿ ➡️ Registration Issue ಸೆಲೆಕ್ಟ್ ಮಾಡಿ ➡️ ಡಿಸ್ಕ್ರಿಪ್ಷನ್‌ನಲ್ಲಿ “ವಿದ್ಯಾರ್ಥಿಗಳ ನೊಂದಣಿ ಮಾಡುವಾಗ ಕಳೆದ ವರ್ಷದ ಪಟ್ಟಿ ಬರುತ್ತಿದ್ದು, ಪ್ರಸ್ತುತ ಸಾಲಿನ ವಿದ್ಯಾರ್ಥಿಗಳ ಪಟ್ಟಿಯನ್ನು ಅಪ್ಡೇಟ್ ಮಾಡಿ” ಎಂದು ಬರೆಯಿರಿ. ಶಾಲೆಯ ವಿವರ ಹಾಗೂ ಸ್ಕ್ರೀನ್‌ಶಾಟ್‌ನೊಂದಿಗೆ ದೂರನ್ನು ಸಬ್ಮಿಟ್ ಮಾಡಿ.
ಗಮನಿಸಿ:
ನೀವು ಸಲ್ಲಿಸಿದ ದೂರಿನ ಸ್ಟೇಟಸ್ ಅನ್ನು ‘Raised Grievance’ ನಲ್ಲಿ ನೋಡಬಹುದು. ಇಲಾಖೆಯಿಂದ ಸಮಸ್ಯೆ ಸರಿಪಡಿಸಿದ ತಕ್ಷಣ ಅಲ್ಲಿ ‘Problem Solved’ ಎಂದು ಅಪ್ಡೇಟ್ ಆಗುತ್ತದೆ.