ನಲಿಕಲಿ ಅಭ್ಯಾಸ ಸಹಿತ ಪಠ್ಯ ಪುಸ್ತಕಗಳ ಅನುಷ್ಟಾನ ಮತ್ತು ಅನುಪಾಲನೆಗೆ ಕ್ರಮಗಳು

IMG 20230524 WA0583
WhatsApp Group Join Now
Telegram Group Join Now

ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ನಲಿಕಲಿ ಅಭ್ಯಾಸ ಸಹಿತ ಪಠ್ಯಪುಸ್ತಕಗಳ ರಚನೆಗೆ ಕ್ರಮವಹಿಸಲಾಗಿದ್ದು,
ಈ ಎಲ್ಲಾ ಪಠ್ಯಪುಸ್ತಕಗಳು ಎಫ್.ಎಸ್-ಎನ್.ಸಿ.ಎಫ್- 2022ರ ಶಿಫಾರಸ್ಸಿನಂತೆ ಕಲಿಕೆಯ ಫಲಗಳನ್ನು
ಆಧರಿಸಿವೆ.

  • ಈ ಅಭ್ಯಾಸ ಸಹಿತ ಪಠ್ಯಪಸ್ತಕಗಳಲ್ಲಿನ ಎಲ್ಲಾ ವಿಧದ ಕಲಿಕಾ ಚಟುವಟಿಕೆಗಳನ್ನು ಮಕ್ಕಳು ನಿರ್ವಹಿಸುವುದು
    ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಒಂದಲ್ಲ ಎರಡು ಬಾರಿ ಪಠ್ಯ ಪುಸ್ತಕಗಳನ್ನು ಅವಲೋಕಿಸಿ,
    ಅರ್ಥೈಸಿಕೊಳ್ಳುವುದು ಮತ್ತು ಕಲಿಕಾ ಚಟುವಟಿಕೆಗಳಿಗೆ ಬೇಕಿರುವ ಕಲಿಕೋಪಕರಣಗಳನ್ನು ತರಗತಿ
    ನಿರ್ವಹಣೆಯ ಪೂರ್ವದಲ್ಲಿ ಸಿದ್ಧಪಡಿಸಿಕೊಳ್ಳುವುದು.

ಪ್ರತೀ ಚಟುವಟಿಕೆಗಳಿಗೆ ನೀಡಲಾಗಿರುವ ಸೂಚನೆಗಳನ್ನು ಶಿಕ್ಷಕರು ಗ್ರಹಿಸಿ, ನಂತರದಲ್ಲಿ ಮಕ್ಕಳಿಗೆ ಆ ಸೂಚನೆಗಳನ್ನು ಸರಿಯಾಗಿ ಅರ್ಥಮಾಡಿಸುವುದು.

  • ಶಾಲೆಗಳಿಗೆ ಭೇಟಿ ನೀಡುವ ಯಾವುದೇ ಅಧಿಕಾರಿಗಳಾಗಲಿ, ಕ್ಷೇತ್ರ ಹಾಗೂ ಕ್ಲಸ್ಟರ್ ಹಂತದ ಸಂಪನ್ಮೂಲ
    ವ್ಯಕ್ತಿಗಳಾಗಲಿ, ಹೊಸ ಪಠ್ಯಪುಸ್ತಕಗಳಲ್ಲಿನ ಚಟುವಟಿಕೆ/ಅಭ್ಯಾಸದ ಹಾಳೆಗಳನ್ನು ಪ್ರತೀ ವಿದ್ಯಾರ್ಥಿಯು
    ನಿರ್ವಹಿಸಿರುವ ಕುರಿತು ಪರಿಶೀಲಿಸಿ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು.
  • ಹೊಸ ಪಠ್ಯಪುಸ್ತಕಗಳಲ್ಲಿ ಎರಡು ರೀತಿಯ ಗುಂಪುಗಳಿಗೆ ಚಟುವಟಿಕೆಯ ಹಾಳೆಗಳನ್ನು ಸೇರ್ಪಡೆಗೊಳಿಸಿದ್ದು,
    ಕೆಲವು ಚಟುವಟಿಕೆಗಳು 02ನೇ ಗುಂಪಿನಲ್ಲಿ ಅಂದರೆ ಅಭ್ಯಾಸ/ಬಳಕೆಯ ಭಾಗವಾಗಿರುತ್ತವೆ. ಕೆಲವುಚಟುವಟಿಕೆಗಳು 03ನೇ ಗುಂಪಿನಲ್ಲಿ ಅಂದರೆ, ಮೌಲ್ಯಮಾಪನದ ಭಾಗವಾಗಿರುತ್ತವೆ.

2023-24ನೇ ಸಾಲಿನಲ್ಲಿ ನಲಿಕಲಿ ತರಗತಿಗಳಲ್ಲಿ ಸಾಮೂಹಿಕ ಗುಂಪಿನ ಜೊತೆಗೆ 1. ಕಲಿಕಾಂಶದ ಗುಂಪು 2.
ಅಭ್ಯಾಸ/ಬಳಕೆಯ ಗುಂಪು ಮತ್ತು 3 ಮೌಲ್ಯಮಾಪನದ ಗುಂಪುಗಳ ಅಳವಡಿಕೆಯನ್ನು ಸೂಚಿಸಿದ್ದು, ಪ್ರತೀ
ಅವಧಿಯು 80 ನಿಮಿಷಗಳನ್ನು ಒಳಗೊಂಡಿರುತ್ತದೆ.

  • ಹೊಸ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ಎಲ್ಲಾ ವಿಷಯಗಳಿಗೂ ಒಟ್ಟು 10 ಮೈಲುಗಲ್ಲುಗಳ ಕಲಿಕೆಯನ್ನು
    ನಿಗದಿಪಡಿಸಲಾಗಿದೆ.
    ಚಟುವಟಿಕೆಗಳಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕರು/ಪೋಷಕರು/ಹಿರಿಯರು/ಇತರೆ
    ಸಹವರ್ತಿಗಳ ಮಾರ್ಗದರ್ಶಿತ ಕಲಿಕೆಗೆ ಸೂಚನೆಗಳನ್ನು ಅಳವಡಿಸಿದೆ.
  • ಭಾಷೆ ಮತ್ತು ಸಂಖ್ಯೆಗಳ ಅರಿವಿನ ಸಾಕ್ಷರತೆಗಾಗಿ ಪ್ರತೀ ಮೈಲುಗಲ್ಲುಗಳಲ್ಲಿ ಸಂವಹನ ಕೌಶಲವನ್ನು ವೃದ್ಧಿಸಲು
    ವಿದ್ಯಾರ್ಥಿಯ ಸ್ವತಂತ್ರ ಮುಕ್ತ ಸಂಭಾಷಣೆ ಮುಕ್ತ ಮಾತುಗಾರಿಕೆಯ ಚಟುವಟಿಕೆಗಳನ್ನು ಹಾಗೂ ಬುನಾದಿ
    ಅಕ್ಷರ ಮತ್ತು ಸಂಖ್ಯಾ ಜ್ಞಾನದ ಕಲಿಕೆಗೆ ಪೂರಕವಾಗಿ ನಿರ್ದಿಷ್ಟ ಕಲಿಕಾಂಶ/ಪರಿಕಲ್ಪನೆಗಳನ್ನು ಅಳವಡಿಸಲಾಗಿದ್ದು
    ಶಿಕ್ಷಕರು ಈ ವ್ಯತ್ಯಾಸದ ಬಗ್ಗೆ ಗಮನಹರಿಸಲು ತಿಳಿಸಿದೆ.
    01 ಮತ್ತು 02ನೇ ತರಗತಿಯಲ್ಲಿ ಪರಿಸರ ಅಧ್ಯಯನ’ ವಿಷಯದ ಬದಲಿಗೆ ‘ಆರೋಗ್ಯ ಮತ್ತು ಪರಿಸರ’ ಎಂಬ
    ಶೀರ್ಷಿಕೆಯಲ್ಲಿ ಪಠ್ಯಪುಸ್ತಕವನ್ನು ಹೊರತರಲಾಗಿದೆ. ಈ ಪಠ್ಯಪುಸ್ತಕವು ವಿದ್ಯಾರ್ಥಿಗಳ ಬಳಕೆಗೆ ಸಂಕ್ಷಿಪ್ತ
    ಮಾರ್ಗದರ್ಶಿಯಂತೆ ರಚಿತವಾಗಿದ್ದು, ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಆರೋಗ್ಯಕರ ಅಭ್ಯಾಸಗಳ
    ಬಗ್ಗೆ ಹಾಗೂ ಸುತ್ತಲಿನ ಪರಿಸರದ ಪ್ರಾಥಮಿಕ ತಿಳುವಳಿಕೆ ಮತ್ತು ಅನುಸರಣೆಯ ಕ್ರಮಗಳಿಗೆ ಅವಕಾಶ
    ಕಲ್ಪಿಸುತ್ತದೆ.
  • 03ನೇ ತರಗತಿಯ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ಪಠ್ಯಾಂಶಗಳ ಜೋಡಣೆಯು ‘ನಿಮುಣ್ ಭಾರತ್’ ಪ್ರಸ್ತುತ
    ಪಡಿಸಿರುವ ಕಲಿಕೆಯ ಫಲಗಳನ್ನು ಆಧರಿಸಿವೆ. ಹಿಂದಿನ ಅಭ್ಯಾಸ ಪುಸ್ತಕಗಳಿಗೂ ಮತ್ತು ಈಗಿನ
    ಪಠ್ಯಪುಸ್ತಕಗಳಿಗೂ ಸಾಕಷ್ಟು ವ್ಯತ್ಯಾಸವಿರುವುದನ್ನು ಗಮನಿಸುವುದು.
  • ಗಣಿತ ವಿಷಯದಲ್ಲಿ ಪರಿಕಲ್ಪನೆಗಳನ್ನು ನಿತ್ಯ ಜೀವನದ ಸಾಂದರ್ಭಿಕ ಸನ್ನಿವೇಶಕ್ಕೆ ಪೂರಕವಾಗಿರುವಂತೆ ವಿವಿಧ
    ದೃಷ್ಟಾಂತ/ಪ್ರಾಣಿ ಪಕ್ಷಿ ಪಾತ್ರಗಳ ಮೂಲಕ ಹೆಣೆಯಲಾಗಿದ್ದು, ಈ ತೆರನಾದ ಕಲಿಕಾ ಪ್ರಯೋಗಗಳಿಗೆ ಶಿಕ್ಷಕರು
    ಸಿದ್ಧತೆ ಅಗತ್ಯವಾಗಿದೆ.
  • ಮೂರನೇ ತರಗತಿಯಿಂದ ‘ಪರಿಸರ ಅಧ್ಯಯನ’ ಶೀರ್ಷಿಕೆಯ ಅಡಿಯಲ್ಲಿ ವಿಷಯದ ನಿರ್ದಿಷ್ಟ ಕಲಿಕೆಯು
    ಆರಂಭವಾಗುತ್ತದೆ.
Useful for teachers2023
WhatsApp Group Join Now
Telegram Group Join Now
Sharing Is Caring:

Leave a Comment